ಲಕ್ನೋ: ಉತ್ತರ ಪ್ರದೇಶದ (Uttar Pradesh) ಕನೌಜ್ನ (Kannauj) ಪ್ರಾಥಮಿಕ ಶಾಲೆಯೊಂದರಲ್ಲಿ (School) ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕನೋರ್ವ ಅಪ್ರಾಪ್ತ ಬಾಲಕಿಗೆ (Girl) ಲವ್ ಲೆಟರ್ (Love Letter) ನೀಡಿದ್ದಾನೆ. ಅಪ್ರಾಪ್ತ ವಿದ್ಯಾರ್ಥಿನಿಯನ್ನು (Student) ಅತಿಯಾಗಿ ಪ್ರೀತಿಸುತ್ತಿದ್ದ ಶಿಕ್ಷಕ, ಇದೇ ಹುಚ್ಚು ಪ್ರೀತಿಯಲ್ಲಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದಿದ್ದಾರೆ. ಈ ವಿಚಾರವನ್ನು ವಿದ್ಯಾರ್ಥಿನಿಯು ತನ್ನ ಕುಟುಂಬಸ್ಥರಿಗೆ (Family) ತಿಳಿಸಿದಾಗ, ಶಿಕ್ಷಕನೊಂದಿಗೆ ಆತನ ಕುಟುಂಬಸ್ಥರು ರಾದ್ಧಾಂತ ನಡೆಸಿದ್ದಾರೆ. ಅಲ್ಲದೇ ಬಾಲಕಿ ತಂದೆ (Father) ನ್ಯಾಯಕ್ಕಾಗಿ ಕೊತ್ವಾಲಿಯಲ್ಲಿರುವ ಪೊಲೀಸ್ ಠಾಣೆ (Kotwali Police Station) ಮೆಟ್ಟಿಲೇರಿದ್ದಾರೆ. ಈ ಘಟನೆಯು ಕನ್ನೌಜ್ ಸದರ್ ಕೊಟ್ವಾಲಿ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.
ಓದಿಸುವ ನೆಪದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ
ಕಿರಿಯ ಪ್ರೌಢಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೀತಿಸುತ್ತಿದ್ದ. ಅಲ್ಲದೇ ಓದಿಸುವ ನೆಪದಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ.
ಶಾಲಾ ರಜೆಗೂ ಮುನ್ನ ತನ್ನ ಪ್ರೇಮ ನಿವೇದನೆಯನ್ನು ಪತ್ರದ ಮೂಲಕ ವಿದ್ಯಾರ್ಥಿನಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಯನ್ನು ಭೇಟಿಯಾಗಲು ಕರೆದಿದ್ದಾನೆ. ಶಿಕ್ಷಕನ ಈ ಕೃತ್ಯವನ್ನು ವಿದ್ಯಾರ್ಥಿನಿ ತನ್ನ ಪೋಷಕರಿಗೆ ಪತ್ರ ಬರೆದು ವಿಚಾರ ತಿಳಿಸಿದ್ದಾಳೆ.
ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿ ತಂದೆಯಿಂದ ದೂರು
ನಂತರ ಈ ಬಗ್ಗೆ ಕ್ಷಮೆಯಾಚಿಸುವಂತೆ ಪೋಷಕರು ಶಿಕ್ಷಕನೊಂದಿಗೆ ಜಗಳಕ್ಕೆ ಬಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ. ಇನ್ನೂ ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಮೊದಲ ಬಾರಿಗೆ ಶಿಕ್ಷಕನೊಬ್ಬನ ಮೇಲೆ ದೂರು ನೀಡುತ್ತಿರುವುದಾಗಿ ಬಾಲಕಿಯ ತಂದೆ ತಿಳಿಸಿದ್ದು, ಈ ಮುನ್ನ ಯಾವುದೇ ದೂರು ನೀಡಿರಲಿಲ್ಲ ಎಂದು ಹೇಳಿದ್ದಾರೆ.
ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ
ಪತ್ರದಲ್ಲಿ ಶಿಕ್ಷಕ 'ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ರಜಾದಿನಗಳಲ್ಲಿ ನಿನ್ನನ್ನು ತುಂಬಾ ಕಳೆದುಕೊಂಡಿದ್ದೇನೆ. ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನಗೆ ಫೋನ್ ಸಿಕ್ಕಿದರೆ, ಫೋನ್ ಮಾಡಬೇಕೆನಿಸಿದರೆ ಮಾಡು. ನಿನಗೆ ಪ್ರೀತಿ ಇದ್ದರೆ ಖಂಡಿತವಾಗಿಯೂ ಮಾಡ್ತೀಯಾ.
ನಿನ್ನ ಜೊತೆ ಮಾತನಾಡಲು ಬಹಳಷ್ಟು ಇದೆ
ನಾನು ನಿನ್ನನ್ನು 8 ಗಂಟೆಗೆ ಬರಬೇಕು ಎಂದು ಫೋನ್ ಮಾಡಿ ತಿಳಿಸಿದರೆ, ನೀನು ಬೇಗ ಶಾಲೆಗೆ ಬರಬಹುದು. ನಿನಗೆ ಬರಲು ಸಾಧ್ಯವಾದರೆ ತಿಳಿಸು, ನಿನ್ನ ಜೊತೆ ಮಾತನಾಡಲು ಬಹಳಷ್ಟು ಇದೆ. ಪಕ್ಕದಲ್ಲಿ ಕುಳಿತು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋಣ. ನನ್ನ ಈ ಜೀವನದಲ್ಲಿ ನೀನಿರಲು ಬಯಸುತ್ತೇನೆ. ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಪತ್ರ ಓದಿದ ನಂತರ ಹರಿದು ಹಾಕು, ಯಾರಿಗೂ ತೋರಿಸಬೇಡ ಎಂದು ಶಿಕ್ಷಕ ಪತ್ರದಲ್ಲಿ ತಿಳಿಸಿದ್ದಾನೆ.
ಬಿಹಾರದಲ್ಲಿ 20 ವರ್ಷದ ವಿದ್ಯಾರ್ಥಿನಿಯನ್ನು ಮದುವೆಯಾಗಿದ್ದ 42ರ ಶಿಕ್ಷಕ
ಇತ್ತೀಚೆಗಷ್ಟೇ ಬಿಹಾರದ 42 ವರ್ಷದ ಶಿಕ್ಷಕನೋರ್ವ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನು ಪ್ರೀತಿಸಿ ದೇಗುಲದಲ್ಲಿ ವಿವಾಹವಾಗಿದ್ದನು. ಶಿಕ್ಷಕ ಸಂಗೀತಾ ಕುಮಾರ್ ಅವರು ಸಮಸ್ಟಿಪುರದ ರೊಸ್ದ ಬಜಾರ್ ಎಂಬಲ್ಲಿ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಅನ್ನು ನಡೆಸುತ್ತಿದ್ದರು.
न उम्र की सीमा हो! बिहार के समस्तीपुर में 42 साल के टीचर को 20 साल की स्टूडेंट से प्रेम हो गया..दोनों ने राजी खुशी विवाह रचाया..वीडियो खूब वायरल हो रहा..लोग मटुकनाथ और जूली की प्रेम गाथा को याद कर रहे..वीडियो-श्री राजपूत..Edited By- @Sinhamegha8 pic.twitter.com/dVp0KfoJGW
— Prakash Kumar (@kumarprakash4u) December 10, 2022
ಅಲ್ಲಿಗೆ 20 ವರ್ಷದ ವಿದ್ಯಾರ್ಥಿನಿ ಶ್ವೇತಕುಮಾರಿ ಇಂಗ್ಲೀಷ್ ಕೋಚಿಂಗ್ಗಾಗಿ ಆಗಮಿಸುತ್ತಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರೂ ಮದ್ವೆಯಾಗಲೂ ನಿರ್ಧರಿಸಿದರು. ನಂತರ ಸಮೀಪದ ದೇವಸ್ಥಾನಕ್ಕೆ ತೆರಳಿ ಇಬ್ಬರೂ ಸಪ್ತಪದಿ ತುಳಿದಿದ್ದರು. ಇಬ್ಬರು ದೇಗುಲವೊಂದರಲ್ಲಿ ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಈ ಶಿಕ್ಷಕನ ಪತ್ನಿ ಹಲವು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ