Eye Operation: ನಿರಂತರವಾಗಿ 107 ಕಣ್ಣುಗಳ ಶಸ್ತ್ರಚಿಕಿತ್ಸೆ ಮಾಡಿ ದಾಖಲೆ ಬರೆದ ನೇತ್ರತಜ್ಞ

107 ಕಣ್ಣುಗಳ ಆಪರೇಷನ್ ನ್ನು ಕೇವಲ ಹದಿನಾರುವರೆ ಗಂಟೆಯೊಳಗೆ ಮಾಡಿ ಎಲ್ಲವನ್ನೂ ಯಶಸ್ವಿಗೊಳಿಸುವ ಮೂಲಕ ದಾಖಲೆ ಬರೆದಿದ್ದಾರೆ ಉತ್ತರ ಪ್ರದೇಶ ಪ್ರಯಾಗ್ರಾಜ್ ವೈದ್ಯ ಡಾ. ಎಸ್.ಪಿ. ಸಿಂಗ್.

ನೇತ್ರತಜ್ಞ ಎಸ್ ಪಿ ಸಿಂಗ್

ನೇತ್ರತಜ್ಞ ಎಸ್ ಪಿ ಸಿಂಗ್

 • Share this:
  ಪ್ರಯಾಗ್‌ರಾಜ್: ಪ್ರಾದೇಶಿಕ ನೇತ್ರವಿಜ್ಞಾನ ಸಂಸ್ಥೆಯ (Regional Ophthalmology Institute) ನಿರ್ದೇಶಕ ಮತ್ತು ಎಂಎಲ್‌ಎನ್ ಮೆಡಿಕಲ್ ಕಾಲೇಜ್ (ಎಂಎಲ್‌ಎನ್‌ಎಂಸಿ) ಪ್ರಾಂಶುಪಾಲರಾದ ಪ್ರಯಾಗ್‌ರಾಜ್,  ನೇತ್ರತಜ್ಞ ಎಸ್‌ಪಿ ಸಿಂಗ್ (Eye Surgeon SP Singh) ಹೊಸ ವಿಶ್ವ ದಾಖಲೆ (Record) ನಿರ್ಮಿಸಿದ್ದಾರೆ. ಡಾ. ಸಿಂಗ್ ಅವರು ಹದಿನಾರುವರೆ ಗಂಟೆಗಳ ಅವಧಿಯಲ್ಲಿ ಇಂಟ್ರಾಕ್ಯುಲರ್ ಲೆನ್ಸ್ (IOL) ಇಂಪ್ಲಾಂಟ್‌ನೊಂದಿಗೆ 107 ಫಾಕೊಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಿದ್ದಾರೆ. ಫೆಬ್ರವರಿ 25 ರಂದು ನಡೆಸಿದ ಶಸ್ತ್ರಚಿಕಿತ್ಸೆಯ ನಂತರ, ಎಲ್ಲಾ ರೋಗಿಗಳು ಈಗ ಚೇತರಿಸಿಕೊಂಡಿದ್ದಾರೆ. 107 ಕಣ್ಣುಗಳ ಆಪರೇಷನ್ ನ್ನು ಕೇವಲ ಹದಿನಾರುವರೆ ಗಂಟೆಯೊಳಗೆ ಮಾಡಿ ಎಲ್ಲವನ್ನೂ ಯಶಸ್ವಿಗೊಳಿಸುವ (Successful) ಮೂಲಕ ದಾಖಲೆ ಬರೆದಿದ್ದಾರೆ ಉತ್ತರ ಪ್ರದೇಶ ಪ್ರಯಾಗ್​ರಾಜ್​ದ ವೈದ್ಯ ಡಾ. ಎಸ್.ಪಿ. ಸಿಂಗ್.

  ಹದಿನಾರುವರೆ ಗಂಟೆ ಶಸ್ತ್ರಚಿಕಿತ್ಸೆ ಯಶಸ್ವಿ

  ಫೆಬ್ರವರಿ 25ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30ರವರೆಗೆ ನಿರಂತರವಾಗಿ 16 ಗಂಟೆ 30 ನಿಮಿಷಗಳ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಂಎಲ್‌ಎನ್ ವೈದ್ಯಕೀಯ ಕಾಲೇಜಿನ (ಎಂಎಲ್‌ಎನ್‌ಎಂಸಿ) ಪ್ರಾಂಶುಪಾಲರಾಗಿರುವ ಡಾ. ಎಸ್.ಪಿ. ಸಿಂಗ್ ಅವರು ನಡೆಸಿದ್ದಾರೆ. ಇಂಟ್ರಾಕ್ಯುಲರ್ ಲೆನ್ಸ್ (ಐಒಎಲ್) ಇಂಪ್ಲಾಂಟ್‌ನೊಂದಿಗೆ 107 ಫಾಕೊ ಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ಡಾ. ಸಿಂಗ್ ಮಾಡಿದ್ದಾರೆ. ಶಸ್ತ್ರ ಚಿಕಿತ್ಸೆಯ ಬಳಿಕ ಶಸ್ತ್ರಚಿಕತ್ಸೆಗೆ ಒಳಗಾದವರನ್ನು ಒಂದು ವಾರಗಳ ಕಾಲ ಅಬ್ಸರ್ವೇಷನ್​ನಲ್ಲಿ ಇಡಲಾಗಿತ್ತು.

  ಇದನ್ನೂ ಓದಿ: ದಿನಕಳೆದಂತೆಲ್ಲಾ ಕಲ್ಲಾಗುತ್ತಿದೆ 5 ತಿಂಗಳ ಮಗುವಿನ ದೇಹ, ಇದೆಂಥಾ ಖಾಯಿಲೆ ?

  ಫೆಬ್ರವರಿ 25, 2022 ರಂದು ಹದಿನಾರುವರೆ ಗಂಟೆಗಳ ಕಾಲ ನಿರಂತರವಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಬೆಳಿಗ್ಗೆ 6 ರಿಂದ ರಾತ್ರಿ 10.30 ರವರೆಗೆ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು. ಎಲ್ಲಾ ರೋಗಿಗಳು ಒಂದು ವಾರದಲ್ಲಿ ಚೇತರಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದಾರೆ. 107 ಕಣ್ಣಿನ ಆಪರೇಷನ್ ಯಶಸ್ವಿಯಾಗಿದೆ ಎಂದು ಡಾ. ಸಿಂಗ್ ತಿಳಿಸಿದ್ದಾರೆ.

  ಸಂತಸ ಹಂಚಿಕೊಂಡ ಡಾ.ಸಿಂಗ್

  "ಒಂದೇ ಬಾರಿಗೆ ಹಲವಾರು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ. ಮತ್ತು ಇದು ಶ್ರೇಷ್ಠ ಮನೋಭಾವ ಮೂಡಿಸಿದೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಇಂತಹ ಕೆಲಸ ಮಾಡಲು ಹೆಚ್ಚಿನ ಕಿರಿಯ ಶಸ್ತ್ರಚಿಕಿತ್ಸಕರಿಗೆ ಇದು ದೊಡ್ಡ ಪ್ರೇರಣೆ ಆಗಲಿದೆ ಎಂದು ಭಾವಿಸುತ್ತೇನೆ" ಎಂದು ಡಾ ಎಸ್ಪಿ ಸಿಂಗ್ ಹೇಳಿದ್ದಾರೆ.

  ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ ನಲ್ಲಿ ಸ್ಥಾನ

  "ನಾನು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಅಗತ್ಯವಿರುವ ಪುರಾವೆಗಳೊಂದಿಗೆ ಸಾಧನೆಯ ಬಗ್ಗೆ ತಿಳಿಸಿದ್ದೇನೆ" ಎಂದು ಸಿಂಗ್ ಹೇಳಿದ್ದಾರೆ. ಇದಕ್ಕೂ ಮೊದಲು, ನವ ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯ ಬ್ರಿಗೇಡಿಯರ್ (ಡಾ) ಜೆಕೆಎಸ್ ಪರಿಹಾರ್ ಅವರು ಅಕ್ಟೋಬರ್ 2011 ರಲ್ಲಿ ಪೂರ್ವ ಲಡಾಖ್‌ನಲ್ಲಿ 34 ಫಾಕೊಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಗಳನ್ನು ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಗಳಿಸಿದ್ದರು.

  ಮಾರ್ಚ್ 5, 2001 ರಲ್ಲಿ ಸಾಧನೆ

  ಮಾರ್ಚ್ 5, 2001 ರಲ್ಲಿ, ಸಿಂಗ್ ಅವರು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ 81 ಕಾರ್ಯಾಚರಣೆಗಳನ್ನು - ಇಂಟ್ರಾ ಆಕ್ಯುಲರ್ ಲೆನ್ಸ್ (IOL) - 11 ಗಂಟೆಗಳಲ್ಲಿ ಒಂದೇ ಬಾರಿಗೆ ನಿರ್ವಹಿಸುವ ಮೂಲಕ ದಾಖಲೆ ಮಾಡಿದ್ದರು. ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ನೇತ್ರವಿಜ್ಞಾನ, ಪ್ರಯಾಗ್‌ರಾಜ್‌ನಲ್ಲಿರುವ ರಾಜ್ಯ ಸರ್ಕಾರದ ಅಧೀನದ ಕಣ್ಣಿನ ಆಸ್ಪತ್ರೆ, ದೇಶದ ಆಯ್ದ ಸಂಸ್ಥೆಗಳಲ್ಲಿ ಒಂದಾಗಿದೆ. ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಲ್ಲಿ ನೇತ್ರ ಶಸ್ತ್ರಚಿಕಿತ್ಸಕರಿಗೆ ತರಬೇತಿ ನೀಡುವ ಕೆಲವೇ ಕೆಲವು ಸಂಸ್ಥೆಗಳು ರಾಜ್ಯದಲ್ಲಿ ಇವೆ.

  ಇದನ್ನೂ ಓದಿ: ಮರೆವಿನ ಖಾಯಿಲೆಗೆ ಹೊಸಾ ಔಷಧ, ಇದನ್ನು ಒಪ್ಪಲು ಅಮೇರಿಕಾ 20 ವರ್ಷ ತೆಗೆದುಕೊಂಡಿದೆ !

  2001 ರ ನಂತರ, ಅವರು 2002 ರಲ್ಲಿ 90 ಕಾರ್ಯಾಚರಣೆಗಳನ್ನು ನಡೆಸುವ ಮೂಲಕ ತಮ್ಮದೇ ದಾಖಲೆಗಳನ್ನು ಮುರಿದಿದ್ದರು. ಜನವರಿ 2003 ರಲ್ಲಿ 102, ಫೆಬ್ರವರಿ 2003 ರಲ್ಲಿ 120, 2005 ರಲ್ಲಿ 130 ಮತ್ತು 2006 ರಲ್ಲಿ 150. 2016 ರಲ್ಲಿ ಸಹ ದಾಖಲೆ ಮಾಡಿದ್ದರು. ಈಗ, ಡಾ. ಸಿಂಗ್  107 ಯಶಸ್ವಿ ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆ ಮಾಡಿದ್ಉ, ದಾಖಲೆ ಬರೆದಿದ್ದಾರೆ.
  Published by:renukadariyannavar
  First published: