Population Control Bill: ಉತ್ತರ ಪ್ರದೇಶ ಜನಸಂಖ್ಯೆ ನಿಯಂತ್ರಣ ಮಸೂದೆಯಲ್ಲಿ ಏನೇನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸುಮಾರು 99.5 ರಷ್ಟು ಜನರು ಜನಸಂಖ್ಯಾ ನಿಯಂತ್ರಣ ಕಾನೂನಿಗೆ ಒಲವು ತೋರಿದ್ದಾರೆ ಎಂದು ಕಾನೂನು ಆಯೋಗದ ಕಾರ್ಯದರ್ಶಿ ಸಪ್ನಾ ತ್ರಿಪಾಠಿ ಅವರು ಹೇಳಿದ್ದಾರೆ.

ಯುಪಿ ಸಿಎಂ ಯೋಗಿ

ಯುಪಿ ಸಿಎಂ ಯೋಗಿ

  • Share this:
ಲಕ್ನೋ, ಆ. 17: ಉತ್ತರ ಪ್ರದೇಶ ಕಾನೂನು ಆಯೋಗವು ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಕರಡು ಮಸೂದೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಗೆ ಸಲ್ಲಿಸಿ ಇದನ್ನು ಪರಿಗಣಿಸಿ ಮತ್ತು ಮುಂದಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಈ ಮಸೂದೆಯು ರಾಜ್ಯದಲ್ಲಿ ಒಟ್ಟು ಜನಸಂಖ್ಯಾ ಬೆಳವಣಿಗೆ ದರವನ್ನು ತಗ್ಗಿಸುವ ಗುರಿಯನ್ನು ಹೊಂದಿದ್ದು, ಪ್ರತಿ ದಂಪತಿಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದನ್ನು ತಡೆಯುವುದು ಪ್ರಮುಖ ಅಂಶವಾಗಿದೆ. ಅಲ್ಲದೆ ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದ ದಂಪತಿಗಳಿಗೆ ಹಾಗೂ ಮಕ್ಕಳಿಗೆ ಏನು ಮಾಡಬೇಕು ಎಂಬ ಅಂಶಗಳನ್ನೂ ಒಳಗೊಂಡಿದೆ‌.

ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಕರಡು ಮಸೂದೆಯು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಸರ್ಕಾರದ ಪ್ರಯೋಜನಗಳನ್ನು ನಿರಾಕರಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ನಿರಾಕರಿಸಿದೆ. ಸರ್ಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ನಿರಾಕರಿಸಿದೆ ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿಯನ್ನು ಪಡೆಯಲು ದಂಪತಿಗಳು ಅನರ್ಹರಾಗುತ್ತಾರೆ ಎಂಬ ಅಂಶಗಳನ್ನು ಹೊಂದಿದೆ.

ನ್ಯಾಯಮೂರ್ತಿ ಆದಿತ್ಯ ನಾಥ್ ಮಿತ್ತಲ್ ನೇತೃತ್ವದ ಉತ್ತರ ಪ್ರದೇಶ ಕಾನೂನು ಆಯೋಗದ ಸಮಿತಿಯು ಸೋಮವಾರ ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರತೆ ಮತ್ತು ಕಲ್ಯಾಣ) ಮಸೂದೆ, 2021ರ ಕರಡು ಮಸೂದೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದೆ. ಕರಡು ಮಸೂದೆಯ ಆರಂಭಿಕ ಆವೃತ್ತಿಯನ್ನು 2021ರ ಜುಲೈ 9ರಂದು ಕಾನೂನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಇದಾದ ಮೇಲೆ ಜುಲೈ 19ರವರೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈಗ ಸಾರ್ವಜನಿಕರ ಸಲಹೆಗಳನ್ನು ಪರಿಗಣಿಸಿ ಪರಿಷ್ಕೃತ ಕರಡನ್ನು ತಯಾರಿಸಿ ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸಲಾಗಿದೆ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಮತ್ತು ವಕೀಲರು ಸೇರಿದಂತೆ 8,500 ಸಲಹೆಗಳನ್ನು ನೀಡಿದ್ದಾರೆ. ಸುಮಾರು 99.5 ರಷ್ಟು ಜನರು ಜನಸಂಖ್ಯಾ ನಿಯಂತ್ರಣ ಕಾನೂನಿಗೆ ಒಲವು ತೋರಿದ್ದಾರೆ ಎಂದು ಕಾನೂನು ಆಯೋಗದ ಕಾರ್ಯದರ್ಶಿ ಸಪ್ನಾ ತ್ರಿಪಾಠಿ ಅವರು ಹೇಳಿದ್ದಾರೆ.

"ಪ್ರತಿ ರಾಷ್ಟ್ರೀಯವಾದಿಗೂ ಹೆಚ್ಚುತ್ತಿರುವ ಜನಸಂಖ್ಯೆಯು ಕಳವಳಕಾರಿ ಸಂಗತಿಯಾಗಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಸ್ವತಂತ್ರ ಕಾನೂನು ಇರಬೇಕು ಮತ್ತು ಎರಡು ಮಕ್ಕಳ ಕುಟುಂಬ ನೀತಿಯನ್ನು ಅನುಸರಿಸುವವರನ್ನು ಪ್ರೋತ್ಸಾಹಿಸಬೇಕು ಮತ್ತು ಅದನ್ನು ಉಲ್ಲಂಘಿಸುವವರನ್ನು ರಾಜ್ಯದ ಕಲ್ಯಾಣ ಯೋಜನೆಗಳಿಂದ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು" ಎಂದು ಆಯೋಗವು ಅಭಿಪ್ರಾಯ ಹೊಂದಿದೆ. ಆದಾಗ್ಯೂ "ಪ್ರಸ್ತಾವಿತ ಮಸೂದೆ ಈಗಾಗಲೇ ಎರಡು ಮಕ್ಕಳಿಗಿಂತ ಹೆಚ್ಚು ಹೊಂದಿರುವ ಜನರಿಗೆ ಅನ್ವಯಿಸುವುದಿಲ್ಲ.‌ ಸರ್ಕಾರವು ಅಧಿಸೂಚಿ ಹೊರಡಿಸಿದ ದಿನಾಂಕದಿಂದ ಈ ನೀತಿಯು ಜಾರಿಗೆ ಬರುತ್ತದೆ, ಆದ್ದರಿಂದ ಈಗಾಗಲೇ ಎರಡು ಮಕ್ಕಳನ್ನು ಹೊಂದಿರುವವರಿಗೆ ಅನ್ವಯ ಆಗುವುದಿಲ್ಲ" ಎಂದು ಹೇಳಿದೆ.

ಒಬ್ಬ ವ್ಯಕ್ತಿಯು ಅವರು ಅಥವಾ ಅವರ ಸಂಗಾತಿಯು ಸ್ವಯಂಪ್ರೇರಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಥವಾ ಹೆಂಡತಿಗೆ 45 ವರ್ಷ ಮತ್ತು ಅವರ ಕಿರಿಯ ಮಗುವಿಗೆ 10 ವರ್ಷವಾಗಿದ್ದರೆ ಪಾಲಿಸಿಗೆ ಅನುಸಾರವಾಗಿ ಪರಿಗಣಿಸಲಾಗುತ್ತದೆ ಎಂದು ಮಸೂದೆ ಅಭಿಪ್ರಾಯಪಟ್ಟಿದೆ.

ಎರಡು ಮಕ್ಕಳ ಪಾಲಿಸಿಯನ್ನು ಅಳವಡಿಸಿಕೊಳ್ಳುವ ವ್ಯಕ್ತಿಗೆ ವಸತಿ ಮಂಡಳಿ ಅಥವಾ ಅಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಅಥವಾ ಮನೆ ನಿವೇಶನ ಖರೀದಿಯಲ್ಲಿ ಸರ್ಕಾರದ ಸಬ್ಸಿಡಿ ಪ್ರಯೋಜನಗಳನ್ನು ಪಡೆಯುತ್ತದೆ. ನಾಮಮಾತ್ರದ ಬಡ್ಡಿ ದರದಲ್ಲಿ ಮನೆ ನಿರ್ಮಿಸಲು ಅಥವಾ ಖರೀದಿಸಲು ಅವರು ಮೃದು ಸಾಲಕ್ಕೆ ಅರ್ಹರಾಗಿರುತ್ತಾರೆ. ನೀರು ಮತ್ತು ವಿದ್ಯುತ್ ಶುಲ್ಕಗಳು, ಮನೆ ತೆರಿಗೆ ಮತ್ತು ಒಳಚರಂಡಿ ಶುಲ್ಕಗಳ ಮೇಲೆ ರಿಯಾಯಿತಿಗಳು ಸಿಗುತ್ತವೆ. ಸಂಗಾತಿಗೆ ಉಚಿತ ಆರೋಗ್ಯ ರಕ್ಷಣೆ ಮತ್ತು ವಿಮಾ ರಕ್ಷಣೆ ಸಿಗಲಿದೆ.

ಇದನ್ನೂ ಓದಿ:ತನ್ನ ಮಗುವನ್ನೇ ಮದುವೆಯಾಗಲು ಕೋರ್ಟ್​​ಗೆ ಕಾನೂನು ಬದ್ಧ ಮನವಿ ಸಲ್ಲಿಸಿದ ಪೋಷಕರು

ಒಂದು ಮಗುವಿನ ಪಾಲಿಸಿಯನ್ನು ಅನುಸರಿಸುವ ವ್ಯಕ್ತಿಗೆ 21 ವರ್ಷ ವಯಸ್ಸಿನವರೆಗೆ ಉಚಿತ ಆರೋಗ್ಯ ಸೌಲಭ್ಯ ಮತ್ತು ವಿಮಾ ರಕ್ಷಣೆಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸಲಾಗುವುದು ಎಂದು ಮಸೂದೆಯು ಹೇಳುತ್ತದೆ. ಎಲ್ಲಾ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶದಲ್ಲಿ ಒಂಟಿ ಮಗುವಿಗೆ ಆದ್ಯತೆ ನೀಡಲಾಗುತ್ತದೆ. ನಿಗದಿತ ರೀತಿಯಲ್ಲಿ ಪದವಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಹೆಣ್ಣು ಮಗುವಿನ ವಿಷಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆಯಾ ವರ್ಗಗಳಲ್ಲಿ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಒಂಟಿ ಮಗುವಿಗೆ ಆದ್ಯತೆ ಒದಗಿಸಲಾಗುತ್ತದೆ.

ಕರಡು ಮಸೂದೆಯು ಕೆಲವು ವಿನಾಯಿತಿಗಳನ್ನು ಹೊಂದಿದೆ ಎಂದು ವರದಿ ಸೇರಿಸಿದೆ. ನಿಗದಿತ ದಿನಾಂಕದ ನಂತರ ಒಂದೇ ಮಗುವಿನ ಗರ್ಭಧಾರಣೆಯ ಮೂಲಕ ಒಂದು ಮಗು ಹೊಂದಿರುವ ವ್ಯಕ್ತಿಯು ಎರಡು ಅಥವಾ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ ನಂತರದ ಗರ್ಭಾವಸ್ಥೆಯ ಮಕ್ಕಳನ್ನು ಒಂದೇ ಮಗು ಎಂದು ಪರಿಗಣಿಸಲಾಗುತ್ತದೆ ಎಂದು ಅದು ಹೇಳುತ್ತದೆ. ಹುಟ್ಟಿನಿಂದ ಅಂಗವೈಕಲ್ಯದಿಂದ ಬಳಲುತ್ತಿರುವ ಮಗುವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
Published by:Latha CG
First published: