Uttar Pradesh Election: ಅಕ್ಟೋಬರ್ 20ರಿಂದ ಪ್ರತಿಜ್ಞಾ ಯಾತ್ರೆ ಕೈಗೊಳ್ಳಲಿರುವ ಕಾಂಗ್ರೆಸ್

ಅಕ್ಟೋಬರ್ 19ರಂದೇ ಲಕ್ನೋಗೆ ತೆರಳಲಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿ ಸುದ್ದಿಗೋಷ್ಠಿ ನಡೆಸಿ ಯಾತ್ರೆಯ ವಿವರ ನೀಡಲಿದ್ದಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ನವದೆಹಲಿ: ಮುಂದಿನ‌ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections)  ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿದ್ದು ಕಾಂಗ್ರೆಸ್ (Congress) ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗುತ್ತಿದೆ.‌ ಕಾಂಗ್ರೆಸ್ ಈ ಬಾರಿ ತನ್ನ ಪ್ರಣಾಳಿಕೆಯಲ್ಲಿ (Manifesto) ವಿಶಿಷ್ಟವಾದ ಘೋಷಣೆ ಮಾಡಲು ಮುಂದಾಗಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ (BJP), ಸಮಾಜವಾದಿ ಪಕ್ಷ (Samajavadi Party) ಹಾಗೂ ಬಹುಜನ‌ ಸಮಾಜ ಪಕ್ಷ (Bahujana Samaj Party)ಗಳಿಗಿಂತ ಮೊದಲು ಕಾಂಗ್ರೆಸ್ (Congress) ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಇದಲ್ಲದೆ ಕಾಂಗ್ರೆಸ್ ಪರವಾದ ಅಲೆ ಸೃಷ್ಟಿ ಮಾಡಲು ಉತ್ತರ ಪ್ರದೇಶದಾದ್ಯಂತ ಅಕ್ಟೋಬರ್ 20ರಿಂದ 'ಪ್ರತಿಜ್ಞಾ ಯಾತ್ರೆ' (Congress Pratijna Yatra) ಹಮ್ಮಿಕೊಂಡಿದೆ.

ಅಕ್ಟೋಬರ್ ‌ 20ರಿಂದ ಯಾತ್ರೆ

ಅಕ್ಟೋಬರ್ 19ರಂದೇ ಲಕ್ನೋಗೆ (Luknow) ತೆರಳಲಿರುವ ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು (Uttar Pradesh Congress In Charge and AICC General Secretary Priyanka Gandhi Vadra) ಅಲ್ಲಿ ಮಧ್ಯಾಹ್ನ 1 ಗಂಟೆಗೆ ಸುದ್ದಿಗೋಷ್ಠಿ (Press Meet) ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪ್ರತಿಜ್ಞಾ ಯಾತ್ರೆಯ ರೂಪು ರೇಖೆಗಳನ್ನು ತಿಳಿಸಲಿದ್ದಾರೆ. ಬಳಿಕ‌ ಅಕ್ಟೋಬರ್ 20ರಿಂದ ಪ್ರಿಯಾಂಕಾ ಗಾಂಧಿ ಅವರು ಪ್ರತಿಜ್ಞಾ ಯಾತ್ರೆಗೆ ಹೊರಡಲಿದ್ದಾರೆ. ಈ ಮೊದಲು ಅಕ್ಟೋಬರ್ ‌17ರಿಂದಲೇ ಪ್ರತಿಜ್ಞಾ ಯಾತ್ರೆ ಹೊರಡಲು ಸಿದ್ದತೆ ನಡೆದಿತ್ತು. ಲಖೀಂಪುರ್ ಖೇರಿ ಹಿಂಸಾಚಾರ (Lakhimpur Kheri Violence) ಮತ್ತು ಕಾಂಗ್ರೆಸ್ ಕಾರ್ಯಕಾರಿಣಿ ಸಭೆ (Congress Working Committee Meeting) ಕಾರಣಗಳಿಂದ ಈಗ ಅಕ್ಟೋಬರ್ ‌ 20ರಿಂದ ಯಾತ್ರೆ ನಡೆಯಲಿದೆ.

ಜನಾಂದೋಲನಕ್ಕಾಗಿ‌ ಪ್ರತಿಜ್ಞಾ ಯಾತ್ರೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಸರ್ಕಾರದ ‌ದುರಾಡಳಿತವನ್ನು ಜನರಿಗೆ ತಿಳಿಸುವುದು ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆಯ ಪ್ರಮುಖ ಉದ್ದೇಶ. ಇತ್ತೀಚೆಗೆ ಲಖೀಂಪುರ್ ಖೇರಿಯಲ್ಲಿ ನಾಲ್ವರು ರೈತರನ್ನು ಹತ್ಯೆಗೈದ ಉತ್ತರ ಪ್ರದೇಶ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು (BJP Governments) ರೈತ ವಿರೋಧಿಯಾಗಿವೆ. ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ದಲಿತ ವಿರೋಧಿಯಾಗಿದೆ.‌ ಕಾನೂನು‌ ಸುವ್ಯವಸ್ಥೆ ಇಲ್ಲದಂತಾಗಿದೆ. ಕೊರೋನಾ ಮಹಾಮಾರಿ (Corona Pandemic) ಅನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂಬುದನ್ನು ಜನರಿಗೆ ತಿಳಿಸಲು ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆಯನ್ನು ಹಮ್ಮಿಕೊಂಡಿದೆ.
ಆಗಲೇ ಅಭ್ಯರ್ಥಿಗಳ ಆಯ್ಕೆ ತಯಾರಿ ಕೂಡ ಆರಂಭವಾಗಿದೆ .

ಇದನ್ನೂ ಓದಿ:  West Bengal: ಬಂಗಾಳ ಉಪ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡ ಮಮತಾ ಬ್ಯಾನರ್ಜಿ

:

ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷ ನಾಮಪತ್ರ ಸಲ್ಲಿಸಲು (Nomination Filing) ಕಡೆ ದಿನ‌ ಬರುವವರೆಗೂ ಕಾದು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುತ್ತಿತ್ತು. ಆದರೆ ಈಗ ಆಶ್ಚರ್ಯಕರ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಇನ್ನೂ ನಾಲ್ಕೈದು ತಿಂಗಳಿರುವಾಗಲೇ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಮುಂದಾಗಿದೆ.‌ ಎಲ್ಲಾ ರಾಜಕೀಯ ಪಕ್ಷಗಳಿಗಿಂತ‌ ಮೊದಲೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮುಂದಿನ ವಾರ ಮಹತ್ವದ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅಭ್ಯರ್ಥಿಗಳ‌ ಆಯ್ಕೆ ಬಗ್ಗೆ ಚರ್ಚೆ ಮಾಡಲಾಗುವುದು ಬಳಿಕ ಕಾಂಗ್ರೆಸ್ ಚುನಾವಣಾ ಸಮಿತಿಗೆ (Congress Election Committee) ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಎಂದು ತಿಳಿದುಬಂದಿದೆ.

ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ

ನಿಯಮಾವಳಿ ಪ್ರಕಾರ ಕಾಂಗ್ರೆಸ್ ಚುನಾವಣಾ ಸಮಿತಿಯು ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಸ್ಥೆಯಾಗಿದ್ದು ಮುಂದಿನ ವಾರ ಸಮಿತಿಯ ಸಭೆಯನ್ನೂ ಕರೆಯಲಾಗಿದೆ. ಮೊದಲ ಹಂತದಲ್ಲಿ 35 ರಿಂದ 40 ಅಭ್ಯರ್ಥಿಗಳ ಹೆಸರಿಗೆ ಅಂತಿಮ‌ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು‌ ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

ಪ್ರಣಾಳಿಕೆ ತಯಾರಿ ಭರ್ಜರಿ , ಇನ್ನೊಂದೆಡೆ ದೇಶದ ದೊಡ್ಡ ರಾಜ್ಯವಾ ಉತ್ತರ ಪ್ರದೇಶದಲ್ಲಿ ತನ್ನ ನೆಲೆ ವಿಸ್ತರಿಸಿಕೊಳ್ಳಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ 2022ರ ವಿಧಾನಸಭಾ ಚುನಾವಣೆಗೆ ವಿಭಿನ್ನ ಪ್ರಣಾಳಿಕೆ ನೀಡಲು‌ ನಿರ್ಧರಿಸಿದ್ದು ಅದರ ಕಾರ್ಯ‌ ಭರದಿಂದ ಸಾಗಿದೆ ಎಂದು ತಿಳಿದುಬಂದಿದೆ. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರಗಳನ್ನು (Training Center For Competitive Exams) ತೆರೆಯುವ ಘೋಷಣೆ ಮಾಡಲಿದೆ‌. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಘೋಷಣೆ ಮಾಡಿದಂತೆ ಉಚಿತ ವಿದ್ಯುತ್ (Free Electricity) ಅನ್ನೂ ಘೊಷಿಸಲಿದೆ. ಇದೇ ರೀತಿ ಇನ್ನೂ ಹತ್ತು ಹಲವು ನವ ನವೀನವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ‌.

ಇದನ್ನೂ ಓದಿ:  Death Note Mystery: ನೇಣಿಗೆ ಶರಣಾದ ಪ್ರಿಯತಮೆ; 11ನೇ ದಿನ ಸಿಕ್ಕ ಡೆತ್​ನೋಟ್​​ನಿಂದ ಪ್ರಕರಣಕ್ಕೆ ಟ್ವಿಸ್ಟ್

2022 ರ ಚುನಾವಣಾ ಪ್ರಣಾಳಿಕೆಗೆ ಒಳಹರಿವುಗಳನ್ನು ಸಂಗ್ರಹಿಸಲು ರಾಜ್ಯದಾದ್ಯಂತ ಸಾರ್ವಜನಿಕ ಅಭಿಯಾನವನ್ನು ನಡೆಸುತ್ತಿದೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು (Social Media) ಮತ್ತು ಇತರ ಡಿಜಿಟಲ್ ಮಾಧ್ಯಮಗಳ (Digital Media) ಮೂಲಕ ಜನರ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಅಲ್ಲದೆ ರಾಜ್ಯದಾದ್ಯಂತ ಬೌದ್ಧಿಕ ವರ್ಗ ಮತ್ತು ಸಮೂಹ ಸಂಸ್ಥೆಗಳಿಂದ ಲಿಖಿತ ಸಲಹೆಯನ್ನು ಪಡೆಯುತ್ತಿದೆ.

ಸಾಮಾನ್ಯ ಜನರಿಂದ ಸಲಹೆ, ಶಿಫಾರಸು

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಪ್ರಣಾಳಿಕೆ ರೂಪಿಸುವ ಹಿನ್ನಲೆಯಲ್ಲಿ ಆರು ತಿಂಗಳಿಂದ ರಾಜ್ಯದ ಪರಿಚಿತ, ಬೌದ್ಧಿಕ ಮತ್ತು ಸಾಮಾನ್ಯ ಜನರಿಂದ ಸಲಹೆ, ಶಿಫಾರಸುಗಳನ್ನು ಪಡೆಯುತ್ತಿದೆ. ಪದೇ ಪದೇ ಕೇಂದ್ರ ಸರ್ಕಾರದ (Union Government) ಕೆಟ್ಟ ನಿಲುವುಗಳಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹೇಳುವ ಕಾಂಗ್ರೆಸ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿದೆ.

 ವಕೀಲರು ಮತ್ತು ರೈತರ ಬಳಿ ತೆರಳಿ ಚರ್ಚೆ

ಇದರ ಹೊರತಾಗಿ ಪ್ರತಿ ಜಿಲ್ಲೆಯಲ್ಲಿ ವಕೀಲರು ಮತ್ತು ರೈತರ ಬಳಿ ತೆರಳಿ ಚರ್ಚೆ ಮಾಡುತ್ತಿದೆ. ರಾಜ್ಯದ ಅಭಿವೃದ್ಧಿ, ರೈತರ ಮೇಲಿನ ಸಾಲಗಳು ಮತ್ತು ಸಂಭವನೀಯ ಸಾಲ ಮನ್ನಾ, ಉದ್ಯೋಗ, ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಅವರನ್ನು ಹೇಗೆ ಸ್ವಾವಲಂಬಿಗಳನ್ನಾಗಿ ಮಾಡುವುದು ಎಂಬ ಪ್ರಮುಖ ಅಂಶಗಳ ಮೇಲೆ ಗಮನಹರಿಸಿದೆ. ಪ್ರಣಾಳಿಕೆಯ ಸಮಿತಿಯ ಮುಖ್ಯಸ್ಥ ಸಲ್ಮಾನ್ ಖುರ್ಷೀದ್ ಎರಡು ದಿನಗಳ ಕನಿಷ್ಠ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮತ್ತು ಜನರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಒದಗಿಸುವ ಮತ್ತು ಮುಂದಿನ 200 ಯೂನಿಟ್‌ಗಳಿಗೆ ದರಗಳನ್ನು 50% ಕಡಿತಗೊಳಿಸುವ ಬಗ್ಗೆಯೂ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ ಇತ್ತೀಚೆಗೆ ಪ್ರಣಾಳಿಕೆ ಸಮಿತಿಯ ಪ್ರಮುಖ ಸಭೆಯನ್ನು ನಡೆಸಿದ್ದರು. ಅದರಲ್ಲಿ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಸಲ್ಮಾನ್ ಖುರ್ಷೀದ್, ರಾಜ್ಯಸಭಾ ಸಂಸದ ಪಿಎಲ್ ಪುನಿಯಾ, ಸುಪ್ರಿಯಾ ಶ್ರೀನೇಟ್, ವಿವೇಕ್ ಬನ್ಸಾಲ್, ಅಮಿತಾಬ್ ದುಬೆ, ಅಜಯ್ ಕುಮಾರ್ ಲಲ್ಲು ಮತ್ತು ಶಾಸಕರ ನಾಯಕ ಆರಾಧನಾ ಮಿಶ್ರಾ ಮೋನಾ ಉಪಸ್ಥಿತರಿದ್ದರು.

ಪ್ರಣಾಳಿಕೆಯ ಕೆಲಸ ಅಂತಿಮ ಹಂತದಲ್ಲಿ

ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ (Uttar Pradesh Congress President) ಅಜಯ್ ಕುಮಾರ್ ಲಲ್ಲು (Ajay Lallu) ಅವರು ಪ್ರಣಾಳಿಕೆಯ ಕೆಲಸ ಅಂತಿಮ ಹಂತದಲ್ಲಿದೆ. ದತ್ತಾಂಶ ಸಂಗ್ರಹಣೆ ಮತ್ತು ಭರವಸೆಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಣಾಳಿಕೆಯ ಅಂತಿಮ ಕರಡನ್ನು ಶೀಘ್ರದಲ್ಲೇ ಸಂಕಲಿಸಲಾಗುವುದು. ಪ್ರಾಯೋಗಿಕವಾಗಿ ಸಾಧ್ಯವಾಗದ ಯಾವುದನ್ನೂ ನಾವು ಘೋಷಿಸಲು ಬಯಸುವುದಿಲ್ಲ" ಎಂದು ಇತ್ತೀಚೆಗೆ ತಿಳಿಸಿದ್ದರು.
Published by:Mahmadrafik K
First published: