ಕೆಲವು ತಿಂಗಳುಗಳಿಂದ ಎಲಾನ್ ಮಸ್ಕ್ (Elon Musk) ಅವರು ತುಂಬಾನೇ ಸುದ್ದಿಯಲ್ಲಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಟ್ವಿಟ್ಟರ್ ನ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಎಲಾನ್ ಮಸ್ಕ್ ಅವರು ತುಂಬಾನೇ ಸುದ್ದಿಯಲ್ಲಿದ್ದದ್ದು, ಅವರು ಟ್ವಿಟ್ಟರ್ ನಲ್ಲಿರುವ (Twitter) ಸಾವಿರಾರು ಉದ್ಯೋಗಿಗಳನ್ನು (Employees Layoff) ಕೆಲಸದಿಂದ ವಜಾ ಮಾಡಿರುವ ಸುದ್ದಿಯಿಂದ ಅಂತ ಹೇಳಬಹುದು. ಅಷ್ಟೇ ಅಲ್ಲದೆ ಮಸ್ಕ್ ಅವರು ತಮ್ಮ ಕೆಲಸಗಳಿಂದ ಮತ್ತು ಕೆಲವೊಮ್ಮೆ ಅವರು ಮಾಡುವ ಟ್ವೀಟ್ ಗಳಿಂದಲೂ (Elon Musk Tweet) ಸಹ ಸುದ್ದಿಯಲ್ಲಿರುತ್ತಾರೆ ಅಂತ ಹೇಳಬಹುದು.
ಕೆಲವೊಮ್ಮೆ ಅವರು ತಮ್ಮ ಕೆಲಸದ ಬಗ್ಗೆ ಟ್ವೀಟ್ ಮಾಡಿದರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಅವರು ಹಾಗೆಯೇ ಸುಮ್ಮನೆ ಎಂಬಂತೆ ಅವರ ಸ್ನೇಹಿತರ ಟ್ವೀಟ್ ಗೆ ವಿಭಿನ್ನವಾಗಿ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿರುತ್ತಾರೆ. ಟೆಸ್ಲಾ ಸಿಇಒ ತನ್ನ ಕೆಲಸಕ್ಕೆ ಮೊದಲ ಪ್ರಾಧ್ಯಾನತೆ ನೀಡುತ್ತಾರೆ ಅಂತ ಬಹುತೇಕರಿಗೆ ಗೊತ್ತು.
ಟ್ವಿಟ್ಟರ್ ನ ಉಸ್ತುವಾರಿಯನ್ನ ವಹಿಸಿಕೊಂಡ ಮಸ್ಕ್ ಈಗ ಟ್ವಿಟ್ಟರ್ ಅನ್ನು ಇನ್ನಷ್ಟು ಸುಧಾರಿಸಬೇಕು ಅನ್ನೋ ಯೋಚನೆಯಲ್ಲಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ ಮತ್ತು ಕಂಪನಿಯ ಉದ್ಯೋಗಿಗಳಿಂದಲೂ ಅದೇ ರೀತಿಯ ಕಠಿಣವಾದ ಕೆಲಸವನ್ನು ಪಡೆಯುತ್ತಿದ್ದಾರೆ.
ಎಲಾನ್ ಮಸ್ಕ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಪೊಲೀಸರು
ಈಗ ಎಲಾನ್ ಮಸ್ಕ್ ಅವರು ಸುದ್ದಿಯಲ್ಲಿರುವುದು ಅವರು ಮಾಡಿದ ಟ್ವೀಟ್ ಗೆ ಭಾರತದ ಉತ್ತರ ಪ್ರದೇಶ ರಾಜ್ಯದ ಪೊಲೀಸರು ನೀಡಿದ ಪ್ರತಿಕ್ರಿಯೆಯಿಂದ ಅಂತ ಹೇಳಬಹುದು.
ಎಲೋನ್ ಮಸ್ಕ್ ಅವರು ಇತ್ತೀಚೆಗೆ ‘ಕೇಳಿ, ನಾನು ಏನಾದರೂ ಟ್ವೀಟ್ ಮಾಡಿದರೆ, ಅದು ಕೆಲಸ ಮಾಡಿದ ಹಾಗೆನಾ?’ ಅಂತ ಟ್ವೀಟ್ ಮಾಡಿದ್ದರು. ಮಸ್ಕ್ ಅವರು ಮಾಡಿದ್ದ ಈ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಹಲವಾರು ಬಳಕೆದಾರರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದು ಅದರಲ್ಲಿ ಭಾರತದ ಉತ್ತರಪ್ರದೇಶದ ಪೊಲೀಸರು ಪ್ರತಿಕ್ರಯಿಸಿ ಮಾಡಿದ ಟ್ವಿಟ್ ವೈರಲ್ ಆಗಿದೆ.
ಇದಕ್ಕೆ ಸ್ಪಂದಿಸಿ ಯುಪಿ ಪೊಲೀಸರು ಮಾಡಿದ್ದ ಟ್ವಿಟ್ ಹೀಗಿದೆ, "ಕೇಳಿ.... ಉತ್ತರ ಪ್ರದೇಶದ ಪೊಲೀಸರು ಟ್ವೀಟ್ ಮೂಲಕ ನಿಮ್ಮ ಸಮಸ್ಯೆಯನ್ನು ಬಗೆಹರಿಸಿದರೆ ಅದನ್ನು ಕೆಲಸವೆಂದು ಪರಿಗಣಿಸಲಾಗುತ್ತದೆಯೇ" ಅಂತ ಕೇಳಿದ್ದಾರೆ.
ಇದನ್ನೂ ಓದಿ: Elon Musk Bedroom: ಎಲಾನ್ ಮಸ್ಕ್ ಮಲಗುವ ಬೆಡ್ ಪಕ್ಕದಲ್ಲಿ ಏನೆಲ್ಲಾ ಇರುತ್ತೆ? ಫೋಟೋ ವೈರಲ್
ಮಸ್ಕ್ ಟ್ವೀಟ್ಗೆ ತಮಾಷೆ ಪ್ರತಿಕ್ರಿಯೆ
ಅಷ್ಟೇ ಅಲ್ಲದೆ ಮಸ್ಕ್ ಅವರ ಈ ಟ್ವೀಟ್ ಗೆ ಅನೇಕ ಜನ ನೆಟ್ಟಿಗರು ತಮ್ಮದೇ ಆದ ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದೆ ಅಂತ ಹೇಳಬಹುದು. ಉತ್ತರ ಪ್ರದೇಶದ ಪೊಲೀಸರು ಅವರು ಹಾಕಿದ ಪ್ರಶ್ನೆಗೆ ಅವರೇ ಉತ್ತರಿಸುತ್ತಾ "ಹೌದು, ಇದು ಕೆಲಸ ಮಾಡಿದಂತೆಯೇ” ಎಂದು ಹೇಳಿದ್ದಾರೆ.
ಮಸ್ಕ್ ಅವರ ಟ್ವೀಟ್ ಗೆ ಡೇವಿಡ್ ಪರೇಜಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು “ಕೇಳಿ.. ನೀವು ಕಚೇರಿಯಲ್ಲಿ ಮಲಗಿದರೆ, ಅದು ಕೆಲಸ ಮಾಡಿದಂತಾಗುತ್ತದೆಯೇ’ ಅಂತ ಪ್ರಶ್ನೆ ಕೇಳಿದ್ದಾರೆ. ಮಸ್ಕ್ ಅವರ ಟ್ವೀಟ್ ಗೆ ಜೊಮ್ಯಾಟೊ ಅವರು ಸಹ ಪ್ರತಿಕ್ರಿಯಿಸಿ ‘ನೀವು ಟ್ವೀಟ್ ಮಾಡಿದರೆ ಅದು ನಮಗೆ ಕೆಲಸ ಕೊಟ್ಟ ಹಾಗೆ ಬ್ರೋ’ ಅಂತ ಬರೆದಿದ್ದಾರೆ.
ಟ್ವಿಟರ್ ಖಾತೆಗಳನ್ನು ಗುರುತಿಸಲು ವಿಭಿನ್ನ ಬಣ್ಣದ ಬ್ಯಾಡ್ಜ್ ಗಳನ್ನು ಬಿಡುಗಡೆ ಮಾಡಲಿದೆಯಂತೆ!
ಏತನ್ಮಧ್ಯೆ, ಟ್ವಿಟ್ಟರ್ ಖಾತೆಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ಟ್ವಿಟರ್ ವಿಭಿನ್ನ ಬಣ್ಣದ ಬ್ಯಾಡ್ಜ್ ಗಳನ್ನು ಸಹ ಬಿಡುಗಡೆ ಮಾಡಲಿದೆ ಎಂದು ಎಲಾನ್ ಮಸ್ಕ್ ಅವರು ಘೋಷಿಸಿದರು.
"ವಿಳಂಬಕ್ಕೆ ಕ್ಷಮಿಸಿ, ನಾವು ಮುಂದಿನ ವಾರ ಶುಕ್ರವಾರ ಪ್ರಾಯೋಗಿಕವಾಗಿ ಈ ಪರಿಶೀಲನೆಯನ್ನು ಪ್ರಾರಂಭಿಸುತ್ತಿದ್ದೇವೆ" ಎಂದು ಎಲಾನ್ ಮಸ್ಕ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Twitter - Elon Musk: RIP ಅಂತ ಟ್ವೀಟ್ ಮಾಡಿದ ಎಲಾನ್ ಮಸ್ಕ್! ಮುಗಿದೇ ಹೋಯ್ತಾ ಟ್ವಿಟರ್ ಕಥೆ?
ಕಂಪನಿಗಳಿಗೆ ಚಿನ್ನದ ಬಣ್ಣದ ಚೆಕ್ ಗುರುತು, ಸರ್ಕಾರಕ್ಕೆ ಬೂದು ಬಣ್ಣದ ಚೆಕ್ ಗುರುತು, ವ್ಯಕ್ತಿಗಳಿಗೆ ನೀಲಿ ಮತ್ತು ಎಲ್ಲಾ ಪರಿಶೀಲಿಸಿದ ಖಾತೆಗಳಿಗೆ ಚೆಕ್ ಗುರುತನ್ನು ಸಕ್ರಿಯಗೊಳಿಸುವ ಮೊದಲು ಹಸ್ತಚಾಲಿತವಾಗಿ ದೃಢೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ