Love Jihad; ಮತಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ವ್ಯಕ್ತಿ ಬಂಧನ!

ಲವ್ ಜಿಹಾದ್ ಅನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಉತ್ತರಪ್ರದೇಶ ಜಾರಿಗೊಳಿಸಿದ್ದ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇದು ಮೊದಲನೆ ಪ್ರಕರಣ ಎಂಬುದು ಉಲ್ಲೇಖಾರ್ಹ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಉತ್ತರಪ್ರದೇಶ (ನವೆಂಬರ್​ 03); ಲವ್​ ಜಿಹಾದ್​ ಆರೋಪದ ಮೇಲೆ ಭಾರತದಲ್ಲೇ ಮೊದಲ ಪ್ರಕರಣ ಉತ್ತರಪ್ರದೇಶದಲ್ಲಿ ಇಂದು ದಾಖಲಾಗಿದ್ದು ಓರ್ವ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲವ್​ ಜಿಹಾದ್​ ವಿವಾದದ ಕುರಿತಂತೆ ಇತ್ತೀಚೆಗೆ ತೀರ್ಪು ನೀಡಿದ್ದ ಅಲಹಾಬಾದ್​ ಹೈಕೋರ್ಟ್​ "ಮದುವೆ ಪ್ರತಿಯೊಬ್ಬರ ವ್ಯಯಕ್ತಿಕ ಇಚ್ಚೆ" ಎಂದು ತೀರ್ಪು ನೀಡಿತ್ತು. ಇನ್ನೂ ಲವ್​ ಜಿಹಾದ್​ ಕಾನೂನಿನ ಬಗ್ಗೆ ಇಡೀ ದೇಶವೇ ವಿರೋಧ ವ್ಯಕ್ತಪಡಿಸಿತ್ತು. ಆದರೂ ಕ್ಯಾರೇ ಎನ್ನದ ಉತ್ತರಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮೂಲಕ ಈ ಕಾನೂನನ್ನು ಜಾರಿಗೆ ತಂದಿದ್ದು, ಇದರ ಆಧಾರದಲ್ಲಿ ಹಿಂದೂ ಮಹಿಳೆಯನ್ನು ಇಸ್ಲಾಂಗೆ ಪರಿವರ್ತಿಸಲು ಯತ್ನಿಸಿದ ಆರೋಪದ ಮೇಲೆ ಓರ್ವ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಲಾಗಿದೆ.

  “ಲವ್ ಜಿಹಾದ್” ಅನ್ನು ಗುರಿಯಾಗಿಸಿಕೊಂಡು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಉತ್ತರಪ್ರದೇಶ ಜಾರಿಗೊಳಿಸಿದ್ದ ಹೊಸ ಮತಾಂತರ ವಿರೋಧಿ ಕಾನೂನಿನಡಿಯಲ್ಲಿ ಇದು ಮೊದಲನೆ ಪ್ರಕರಣ ಎಂಬುದು ಉಲ್ಲೇಖಾರ್ಹ.

  "ಈ ಕಾನೂನಿನ ಅನ್ವಯ ಮಹಿಳೆಗೆ ಮತಾಂತರಗೊಳ್ಳಲು ಒತ್ತಡ ಹೇರಿದ ಆರೋಪ ಹಿನ್ನಲೆ ಒವೈಸ್‌ ಅಹ್ಮದ್ ಎಂಬ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ" ಎಂದು ಬರೇಲಿ ಜಿಲ್ಲಾ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ದೃಢಪಡಿಸಿದ್ದಾರೆ.  21 ವರ್ಷದ ಮುಸ್ಲಿಂ ಯುವಕ ನನ್ನ ಮಗಳನ್ನು ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾನೆ ಎಂದು ಶರೀಫ್‌ನಗರ ಗ್ರಾಮದ ಟೀಕಾರಾಮ್‌ ಎಂಬುವವರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಒವೈಸ್‌ ಅಹ್ಮದ್‌ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಐಜಿ ರಾಜೇಶ್‌ ಕುಮಾರ್‌ ಪಾಂಡೆ ಗುರುವಾರ ತಿಳಿಸಿದ್ದಾರೆ.

  ಇದನ್ನೂ ಓದಿ : ಬಾಲಿವುಡ್​ ಡ್ರಗ್ಸ್​ ತನಿಖೆ; ಆರೋಪಿಗಳ ಜಾಮೀನಿಗೆ ಸಹಕರಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಅಮಾನತು

  ಬಂಧಿತ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನನಗೆ ಹಿಂದೂ ಮಹಿಳೆಯೊಂದಿಗೆ ಯಾವುದೇ ಸಂಬಂಧವಿಲ್ಲ, ಆಕೆ ಒಂದು ವರ್ಷದ ಹಿಂದೆಯೇ ಮದುವೆಯಾಗಿದ್ದಾರೆ. ನಾನು ನಿರಪರಾಧಿ” ಎಂದು ಆರೋಪಿ ತಿಳಿಸಿದ್ದಾರೆ ಎಂದು ದಿ ಪ್ರಿಂಟ್ ಉಲ್ಲೇಖಿಸಿದೆ.

  ಬಂಧಿತ ವ್ಯಕ್ತಿ ಮತ್ತು ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾಗಿನಿಂದ ಪರಿಚಿತರು. ಆಕೆಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದರು ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರೂ ಓಡಿಹೋಗಿ ಮದುವೆಯಾಗಲು ಯೋಚಿಸಿದ್ದರು. ಆದರೆ, ಸಾಧ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  Published by:MAshok Kumar
  First published: