ಉತ್ತರ ಪ್ರದೇಶ: ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ಹಾಗೂ ಚಿಕ್ಕ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ (Sexual Harassment) ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಎಷ್ಟೇ ಕಠಿಣ ಕಾನೂನು (Law) ಇದ್ದರೂ ಸಹ ಕಾಮುಕರು ಎಗ್ಗಿಲ್ಲದೇ ಓಡಾಡುತ್ತಿದ್ದಾರೆ. ಹದಿನಾಲ್ಕು ವರ್ಷದೊಳಗಿನ ಮಕ್ಕಳ (Children’s) ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. ಗ್ಯಾಂಗ್ ರೇಪ್, ಕೊಲೆ ಪ್ರಕರಣಗಳಿಗೂ ಕಡಿವಾಣ ಇಲ್ಲದಂತಾಗಿದೆ. ಅಷ್ಟೇ ಅಲ್ಲದೇ ಕಾಮುಕ ಕ್ರಿಮಿಗಳು ಹಸು ಮತ್ತು ಪ್ರಾಣಿಗಳ ಮೇಲೂ ಅತ್ಯಾಚಾರ ಎಸಗಿದ ಘಟನೆಗಳು ಸಾಕಷ್ಟು ಬೆಳಕಿಗೆ ಬಂದಿವೆ. ಇಲ್ಲೊಬ್ಬ ಕಾಮುಕ ಹದಿನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಹದಿನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರ
ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಪಿಪ್ರಿ ಜಿಲ್ಲೆಯಲ್ಲಿ ನಡೆದಿದೆ. ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಗೆ ಚಿಕಿತ್ಸೆ ಕೊಡಿಸುತ್ತೇನೆ ಎಂದು ಸುಳ್ಳು ಹೇಳಿ ಕರೆದೊಯ್ದು ಲೈಂಗಿಕ ದೌರ್ಜನ್ಯದ ನೀಚ ಕೃತ್ಯವೆಸಗಿದ್ದಾನೆ.
ದುಷ್ಟ ಶಕ್ತಿ ಓಡಿಸುವುದಾಗಿ ಹೇಳಿ ಅತ್ಯಾಚಾರದ ನೀಚ ಕೃತ್ಯ
ಉತ್ತರ ಪ್ರದೇಶದ ಪಿಪ್ರಿ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಪಸ್ಮಾರ ಅಂದರೆ ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಹದಿನಾಲ್ಕು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ್ದಾನೆ.
ಬಾಲಕಿಗೆ ಅಂಟಿಕೊಂಡಿರುವ ದುಷ್ಟ ಶಕ್ತಿಗಳನ್ನು ಓಡಿಸುತ್ತೇನೆ. ನನ್ನ ಜೊತೆ ಕಳುಹಿಸಿ ಎಂದು ಹೇಳಿ ಅತ್ಯಾಚಾರವೆಸಗಿದ್ದಾನೆ. ದುಷ್ಟ ಶಕ್ತಿಯನ್ನು ಓಡಿಸುವ ನೆಪದಲ್ಲಿ ಈ ರೀತಿಯ ನೀಚ ಬುದ್ಧಿ ತೋರಿಸಿದ್ದಾನೆ.
ಈ ಕುರಿತು ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಕಾಮುಕನನ್ನು ಬಂಧನ ಮಾಡಲಾಗಿದೆ. ಈ ಕುರಿತು ಪಿಪ್ರಿ ಪೊಲೀಸ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ಕೊಡಿಸುವ ನೆಪದಲ್ಲಿ ವ್ಯಕ್ತಿಯೊಬ್ಬ ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಇನ್ನು ಈ ಘಟನೆ ಬಗ್ಗೆ ಪಿಪ್ರಿ ಪೊಲೀಸ್ ಠಾಣೆಯ ಎಸ್ ಎಚ್ ಒ ಶ್ರವಣ್ ಕುಮಾರ್ ಸಿಂಗ್ ಮಾತನಾಡಿದ್ದಾರೆ. ಬಾಲಕಿಯು ಕಳೆದ ಮೂರು ವರ್ಷಗಳಿಂದ ಮೂರ್ಛೆ ರೋಗದಿಂದ ಬಳಲುತ್ತಿದ್ದಾಳೆ. ಹೀಗಾಗಿ ಆಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದರೆ ಬಾಲಕಿಯ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಹಾಗೂ ಚೇತರಿಕೆ ಕಂಡು ಬಂದಿಲ್ಲ ಎಂದಿದ್ದಾರೆ.
ಡಿ.24 ರಂದು ಬಾಲಕಿಯ ತಂದೆ ಮನೆಯಲ್ಲಿ ಇಲ್ಲದೇ ಇದ್ದಾಗ ಭೂತ ಬಿಡಿಸುವ ಅಶೋಕ್ ಕುಮಾರ್ ಎಂಬ ನಲವತ್ತೈದು ವರ್ಷದ ವ್ಯಕ್ತಿ ಬಾಲಕಿಯ ಮನೆಗೆ ಹೋಗಿದ್ದಾನೆ. ಅಲ್ಲಿ ಬಾಲಕಿಯ ತಾಯಿಯ ಬಳಿ ತಾನು ಬಾಲಕಿಗೆ ಅಂಟಿಕೊಂಡಿರುವ ದುಷ್ಟ ಶಕ್ತಿಗಳನ್ನು ಹೋಗಲಾಡಿಸುತ್ತೇನೆ ತನ್ನೊಂದಿಗೆ ಆಕೆಯನ್ನು ಕಳುಹಿಸಿ ಕೊಡುವಂತೆ ಬಾಲಕಿಯ ತಾಯಿ ಮನವೊಲಿಕೆ ಮಾಡಿದ್ದಾನೆ.
ಇದಾದ ಬಳಿಕ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸಿಂಗ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಶನಿವಾರ ಬಾಲಕಿಯ ತಂದೆ ದೂರು ನೀಡಿದ್ದಾರೆ.
ಇದನ್ನೂ ಓದಿ: 2022ರಲ್ಲಿ ಮಹಿಳೆಯರ ವಿರುದ್ದ 31,000 ಅಪರಾಧ ಪ್ರಕರಣಗಳು ದಾಖಲು; ರಾಷ್ಟ್ರೀಯ ಮಹಿಳಾ ಆಯೋಗ
ಈ ದೂರಿನ ಮೇರೆಗೆ ಆರೋಪಿಯ ವಿರುದ್ಧ ಸಂಬಂಧಿತ ಐಪಿಸಿ ಮತ್ತು ಪೋಕ್ಸೊ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಭಾನುವಾರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ