ಲಕ್ನೋ(ಜು.05): ಉತ್ತರ ಪ್ರದೇಶದಲ್ಲಿ ಅಕ್ರಮ ಗೋ ಸಾಗಣೆಯಂತ (Cattle transport) ಬಹಳಷ್ಟು ಪ್ರಕರಣಗಳು ವರದಿಯಾಗುತ್ತಲೇ ಇರುತ್ತದೆ. ಇದೇ ವಿಚಾರವಾಗಿ ಪರಸ್ಪರ ಹಲ್ಲೆ ಪ್ರಕರಣ, ಕೊಲೆ (Murder), ವಂಚನೆ ಘಟನೆಗಳೂ ವರದಿಯಾಗುತ್ತಿರುತ್ತವೆ. ಇದೀಗ ಮಾಂಸದಂಗಡಿ (Meat Shop) ಇಟ್ಟುಕೊಂಡು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನೆಲೆ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಆಘಾತಕಾರಿ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬರು ಹಿಂದೂ ದೇವರು (God) ಮತ್ತು ದೇವಿಯ (Goddess) ಚಿತ್ರಗಳಿರುವ ಕಾಗದದ ಕವರ್ನಲ್ಲಿ ಕೋಳಿ ಮಾರುತ್ತಿರುವುದು ಕಂಡುಬಂದಿದೆ. ಕ್ಷಿಪ್ರ ಕ್ರಮ ಕೈಗೊಂಡು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಪೊಲೀಸರು (
Police) ತಾಲಿಬ್ ಹುಸೇನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಜುಲೈ 3 ರಂದು ಹಿಂದೂ ದೇವತೆಗಳ ಚಿತ್ರಗಳನ್ನು ಹೊಂದಿರುವ ಕಾಗದದ ತುಂಡಿನಲ್ಲಿ ಹುಸೇನ್ ತನ್ನ ರೆಸ್ಟೋರೆಂಟ್‌ನಿಂದ ಚಿಕನ್ ಮಾರಾಟ ಮಾಡುತ್ತಿದ್ದಾನೆ ಎಂದು ಕೆಲವರು ದೂರಿದಾಗ ಘಟನೆ ಬೆಳಕಿಗೆ ಬಂದಿದೆ. ಸಂಭಾಲ್ ಪೊಲೀಸರ ಪ್ರಕಾರ, ಹುಸೇನ್ ಅವರ ಕ್ರಮದಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಜನರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆಗೆ ಯತ್ನ
ಹುಸೇನ್ ಅವರನ್ನು ಬಂಧಿಸಲು ಪೊಲೀಸರು ಸ್ಥಳಕ್ಕೆ ಬಂದಾಗ, ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಭಾಲ್ ಪೊಲೀಸರು ತಿಳಿಸಿದ್ದಾರೆ.
ಯೋಗಿ ಸರ್ಕಾರಕ್ಕೆ 100 ದಿನ
2022ರ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಬಾರದು ಎಂದು ನಿರ್ದೇಶನ ನೀಡಿದ್ದರು. ಯೋಗಿ ಸರ್ಕಾರದ 100 ದಿನಗಳು ಹಣದುಬ್ಬರ ನಿರುದ್ಯೋಗದಿಂದ ಯುಪಿಯಲ್ಲಿ ಜನರು ಭಯಭೀತರಾಗಿದ್ದಾರೆ ಎಂದು ಸಿಎಂ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು.
ಯೋಗಿ ಆದಿತ್ಯನಾಥ್ ಅವರ ಎರಡನೇ ಅವಧಿಯ ಆಡಳಿತದಲ್ಲಿ 100 ದಿನಗಳನ್ನು ಪೂರೈಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯವರು 100 ದಿನಗಳನ್ನು ಪೂರೈಸಿದ ತಮ್ಮ ಸರ್ಕಾರದ ವರದಿ ಕಾರ್ಡ್ ಅನ್ನು ಪ್ರಸ್ತುತಪಡಿಸಿದರು.
ಅಕ್ರಮ ಆಸ್ತಿ ಮುಟ್ಟುಗೋಲು
844 ಕೋಟಿ ರೂಪಾಯಿ ಮೌಲ್ಯದ ಕ್ರಿಮಿನಲ್‌ಗಳ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಅಥವಾ ನೆಲಸಮ ಮಾಡಲಾಗಿದೆ. ಅವರ ಸರ್ಕಾರದ ಮೊದಲ 100 ದಿನಗಳಲ್ಲಿ 10,000 ಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳನ್ನು ನೀಡಲಾಗಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.
74,000 ಕ್ಕೂ ಹೆಚ್ಚು ಧ್ವನಿವರ್ಧಕ ತೆಗೆದ ಸರ್ಕಾರ
"100 ದಿನಗಳಲ್ಲಿ, 844 ಕೋಟಿ ರೂಪಾಯಿ ಮೌಲ್ಯದ ಕ್ರಿಮಿನಲ್‌ಗಳ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಅಥವಾ ನೆಲಸಮ ಮಾಡಲಾಗಿದೆ. 68,874 ಅತಿಕ್ರಮಣಗಳು ಮತ್ತು 76,196 ಅಕ್ರಮ ಪಾರ್ಕಿಂಗ್ ಸ್ಥಳಗಳನ್ನು ತೆಗೆದುಹಾಕಲಾಗಿದೆ. 74,000 ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನು ಯಾವುದೇ ಪ್ರತಿರೋಧವಿಲ್ಲದೆ ತೆಗೆದುಹಾಕಲಾಗಿದೆ" ಎಂದು ಉತ್ತರ ಪ್ರದೇಶ ಸಿಎಂ ಹೇಳಿದರು.
ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರೊಂದಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: Pakistan: 50 ವರ್ಷ ಬಳಸಿರುವ ಯುದ್ಧ ವಿಮಾನಗಳನ್ನು ಖರೀದಿಸಿ ಬಲ ಹೆಚ್ಚಿಸಿಕೊಳ್ತಿದೆಯಂತೆ ಪಾಕ್! ಇದೆಂಥಾ ಹುಚ್ಚಾಟ?
ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಮಾಂಸ ಮಾರಾಟ ಸಂಬಂಧ ಹಲ್ಲೆಗಳು ನಡೆಯುತ್ತಿವೆ. ಕೆಲವು ಕಡೆ ಕೋಳಿ ಮಾಂಸದ ಜೊತೆ ಗೋಮಾಂಸ ಮಿಶ್ರ ಮಾಡಿಕೊಡುತ್ತಾರೆ ಎನ್ನುವ ಆರೋಪವೂ ಈ ಹಿಂದೆ ಕೇಳಿ ಬಂದಿತ್ತು. ದಕ್ಷಿಣ ಕನ್ನಡದಲ್ಲಿ ಈ ಹಿಂದೆ ಇಂತಹ ಪ್ರಕರಣಗಳು ವರದಿಯಾಗಿದ್ದಲ್ಲದೆ ಈ ವಿಚಾರವಾಗಿ ಪರಷ್ಪರ ಹಲ್ಲೆ ನಡೆಯುವಂತಹ ಘಟನೆಗಳೂ ವ ರದಿಯಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ