ಅಪ್ಪನ ಕೊನೆಯ ಆಸೆ ಈಡೇರಿಸಲು ಮರದ ಗೊಂಬೆಯ ಜೊತೆ ಮಗನ ಮದುವೆ!

90 ವರ್ಷದ ಅಪ್ಪನ ಕೊನೆಯ ಆಸೆಯನ್ನು ಈಡೇರಿಸಲು ಪ್ರಯಾಗರಾಜ್​ನ ಶಿವಮೋಹನ್ ಅವರ ಕೊನೆಯ ಮಗ ಮರದ ಗೊಂಬೆಯ ಜೊತೆ ಮದುವೆಯಾಗಿದ್ದಾನೆ.

Sushma Chakre | news18-kannada
Updated:June 20, 2020, 4:29 PM IST
ಅಪ್ಪನ ಕೊನೆಯ ಆಸೆ ಈಡೇರಿಸಲು ಮರದ ಗೊಂಬೆಯ ಜೊತೆ ಮಗನ ಮದುವೆ!
ಸಾಂದರ್ಭಿಕ ಚಿತ್ರ
  • Share this:
ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದವರನ್ನು ಮದುವೆ ಎಂಬ ಬಂಧ ಬೆಸೆದುಬಿಡುತ್ತದೆ. ಆದರೆ, ಉತ್ತರ ಪ್ರದೇಶದ ಯುವಕನೊಬ್ಬ ತನ್ನ ಅಪ್ಪನ ಕೊನೆಯ ಆಸೆ ಈಡೇರಿಸಲು ಮರದ ಪ್ರತಿಮೆಯೊಂದಿಗೆ ಮದುವೆಯಾಗಿದ್ದಾನೆ!

ಅಚ್ಚರಿಯಾದರೂ ಇದು ಸತ್ಯ. ಉತ್ತರ ಪ್ರದೇಶದ 90 ವರ್ಷದ ಶಿವ ಮೋಹನ್ ಅವರಿಗೆ 9 ಗಂಡುಮಕ್ಕಳು. ಅವರಲ್ಲಿ 8 ಜನರಿಗೆ ಮದುವೆಯಾಗಿತ್ತು. ಅವರ ಕೊನೆಯ ಮಗ ಹೆಚ್ಚೇನೂ ಓದಿರಲಿಲ್ಲ, ಆತನ ಹೆಸರಿನಲ್ಲಿ ಆಸ್ತಿಯೂ ಇರಲಿಲ್ಲ. ಹೀಗಾಗಿ, ಯಾರೂ ಆತನಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿರಲಿಲ್ಲ. ಆದರೆ, ಶಿವಮೋಹನ್​ಗೆ ತಾನು ಸಾಯುವ ಮೊದಲು ಕೊನೆಯ ಮಗನ ಮದುವೆ ನೋಡಬೇಕೆಂಬ ಆಸೆಯಿತ್ತು.90 ವರ್ಷದ ಅಪ್ಪನ ಕೊನೆಯ ಆಸೆಯನ್ನು ಈಡೇರಿಸಲು ಪ್ರಯಾಗರಾಜ್​ನ ಶಿವಮೋಹನ್ ಅವರ ಕೊನೆಯ ಮಗ ಮರದ ಗೊಂಬೆಯ ಜೊತೆ ಮದುವೆಯಾಗಿದ್ದಾನೆ. ಮರದಲ್ಲಿ ಮಾಡಿದ್ದ ಹೆಣ್ಣಿನ ಗೊಂಬೆಗೆ ಕೆಂಪು ರೇಷ್ಮೆ ಸೀರೆ ಉಡಿಸಿ, ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಮದುವೆಯಲ್ಲಿ ನಡೆಯುವ ಎಲ್ಲಾ ಶಾಸ್ತ್ರಗಳನ್ನೂ ಮಾಡುವ ಮೂಲಕ ಆತನಿಗೆ ಗೊಂಬೆ ಜೊತೆ ಮದುವೆ ಮಾಡಲಾಗಿದೆ. ಲಾಕ್​ಡೌನ್ ನಡುವೆ ನಡೆದ ಈ ವಿಭಿನ್ನ ಮತ್ತು ವಿಚಿತ್ರವಾದ ಮದುವೆಯಲ್ಲಿ ವರನ ಸಂಬಂಧಿಕರು, ಸ್ನೇಹಿತರು ಕೂಡ ಸೇರಿದ್ದರು.
First published:June 20, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading