Weight Gain Talaq: ಹೆಂಡತಿ ದಪ್ಪ ಆಗಿದ್ದಕ್ಕೆ ತಲಾಖ್! ಡಿವೋರ್ಸ್​ಗೆ ಕಾರಣ ಹೀಗೂ ಇರುತ್ತಾ?

ನನ್ನ ಗಂಡ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ನಜ್ಮಾ ಗೋಳು ತೋಡಿಕೊಂಡಿದ್ದಾಳೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

    ಮೀರತ್: ಮದುವೆಯ ನಂತರ ಹೆಂಡತಿಯ ತೂಕ ಹೆಚ್ಚಾಗಿದೆ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಮಾನವೀಯ ದುಷ್ಕೃತ್ಯ ನಡೆದಿದೆ. ತನ್ನ ಪತಿ ಸಲ್ಮಾನ್ ನಾನು ದಪ್ಪ ಇರುವುದನ್ನು (Gains Weight) ಹಂಗಿಸುತ್ತಿದ್ದ. ಆಗಾಗ ಅವಮಾನ ಮಾಡುತ್ತಿದ್ದ. ಬೇಕಾಬಿಟ್ಟಿ ಹೊಡೆಯುತ್ತಿದ್ದ ಎಂದು ಪತ್ನಿ ನಜ್ಮಾ ಆರೋಪಿಸಿದ್ದಾಳೆ. ಅಲ್ಲದೇ ತಾನು ದಪ್ಪ ಆಗಿರುವ ಕಾರಣಕ್ಕೆ ಒಂದು ತಿಂಗಳ ಹಿಂದೆ ತನ್ನ ಗಂಡ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹಾಕಿದ್ದಲ್ಲದೇ ವಿಚ್ಛೇದನ ಪತ್ರವನ್ನು(Divorce) ಕಳುಹಿಸಿದ್ದಾಗಿ ಆಕೆ ಹೇಳಿದ್ದಾಳೆ.  ಮದುವೆ ಆದಮೇಲೆ ತಾನು ದಪ್ಪ ಆಗಿದ್ದಕ್ಕೆ ಗಂಡ ತಲಾಖ್ (Weight Gain Talaq) ನೀಡುವ ಕುರಿತು ನಜ್ಮಾ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.


    ಮೀರತ್ ಝಾಕಿರ್ ಕಾಲೋನಿಯ ನಿವಾಸಿ ನಜ್ಮಾ ಎಂಟು ವರ್ಷಗಳ ಹಿಂದೆ ಫತೇಪುರ್ನಲ್ಲಿ ವಾಸಿಸುವ ಸಲ್ಮಾನ್ನನ್ನು ಮದುವೆಯಾಗಿದ್ದಳು. ಈ ದಂಪತಿಗೆ 7 ವರ್ಷದ ಮಗನೂ ಇದ್ದಾನೆ.


    ನನಗೆ ವಿಚ್ಚೇದನ ಬೇಡ
    ನನ್ನ ತೂಕ ಹೆಚ್ಚಿದ್ದರಿಂದ ನನ್ನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ನನ್ನ ಗಂಡ ಸಲ್ಮಾನ್ ಹೇಳಿದ್ದಾಗಿ ನಜ್ಮಾ ಆರೋಪ ಮಾಡಿದ್ದಾರೆ. ಅಲ್ಲದೇ ನನ್ನ ಗಂಡ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ನಜ್ಮಾ ಗೋಳು ತೋಡಿಕೊಂಡಿದ್ದಾಳೆ.

    ಗಂಡನ ವಿರುದ್ಧ ಪೊಲೀಸ್ ಕೇಸ್
    ಆಕೆ ತನ್ನ ಗಂಡನ ವಿರುದ್ಶ ಈ ಕುರಿತು ದೂರು ನೀಡಿದ ನಂತರ ಪೊಲೀಸರು ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಇದನ್ನೂ ಓದಿ: Sheikh Hasina: ದೆಹಲಿಯಲ್ಲಿ ಗುರುತು ಮರೆಮಾಚಿಕೊಂಡು ರಹಸ್ಯವಾಗಿ ಬದುಕಿದ್ದ ಬಾಂಗ್ಲಾ ಪ್ರಧಾನಿ!

    ಮನೆಗೆ ಹೋಗಿ ಹೆಂಡತಿಗೆ ಥಳಿಸಿದ ಗಂಡ
    ಆಗಸ್ಟ್ 28 ರಂದು ಸಲ್ಮಾನ್ ಇತರ ಐದು ಮಂದಿಯೊಂದಿಗೆ ತನ್ನ ಪೋಷಕರ ಮನೆಗೆ ಹೋಗಿ ತನಗೆ ಥಳಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ತ್ರಿವಳಿ ತಲಾಖ್‌ ಹೇಳಿ ಅಲ್ಲಿಂದ ತೆರಳಿದ್ದ ಎಂದು ಸಹ ನಜ್ಮಾ ತನ್ನ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಇದನ್ನೂ ಓದಿ: Elephant Retirement: ಮನುಷ್ಯರಂತೆ ಆನೆಗಳಿಗೂ ನಿವೃತ್ತಿ; ವಿದಾಯ ಸಭೆಯ ಭಾವನಾತ್ಮಕ ವಿಡಿಯೋ ವೈರಲ್

    ಶೀಘ್ರವೇ ಸೂಕ್ತ ತನಿಖೆ ಮಾಡುತ್ತೇವೆ
    ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಯುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು ಎಂದು ಕೊತ್ವಾಲಿ ಮೀರತ್ ವೃತ್ತದ ಅಧಿಕಾರಿ ಅರವಿಂದ್ ಕುಮಾರ್ ಚೌರಾಸಿಯಾ ತಿಳಿಸಿದ್ದಾರೆ.

    ತ್ರಿವಳಿ ತಲಾಖ್​ ಬ್ಯಾನ್
    ತ್ರಿವಳಿ ತಲಾಖ್ ಪದ್ಧತಿಯನ್ನು ಭಾರತೀಯ ಸಂಸತ್ತು ಜುಲೈ 2019 ರಲ್ಲಿ ನಿಷೇಧಿಸಿದೆ. ಈ ಅಭ್ಯಾಸದಲ್ಲಿ ತೊಡಗಿಸಿಕೊಂಡರೆ ಈಗ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.

    ಶಾಸಕಿಯ ಕೆನ್ನೆಗೆ ಬಾರಿಸಿದ ಪತಿ
    ಪಂಜಾಬ್‌ನ ತಾಲ್ವಂಡಿ ಸಬೋ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕಿ ಬಲ್ಜಿಂದರ್ ಕೌರ್ ಅವರಿಗೆ ಅವರ ಪತಿ ಸುಖರಾಜ್ ಸಿಂಗ್ ಅವರು ಥಳಿಸಿದ್ದಾರೆ. ಎಎಪಿ ಮುಖಂಡರಾಗಿರುವ ಅವರ ಪತಿ ಸುಖರಾಜ್ ಸಿಂಗ್ ಹಾಗೂ ಶಾಸಕಿ ಬಲ್ಜಿಂದರ್ ಕೌರ್ ಮಧ್ಯೆ ಜಗಳವಾಗಿದೆ. ಇದು ತಾರಕಕ್ಕೆ ಹೋಗಿ, ಕೊನೆಗೆ ಜನರ ಎದುರೇ ಶಾಸಕಿಗೆ ಅವರ ಪತಿ ಕೆನ್ನೆ ಮೇಲೆ ಬಾರಿಸಿದ್ದಾರೆ.
    Published by:guruganesh bhat
    First published: