• Home
 • »
 • News
 • »
 • national-international
 • »
 • Crime News: ಗೌನ್ ಧರಿಸುವಾಗ ಕೆಳಗೆ ಬಿದ್ದು ಫೈರ್ ಆದ ಗನ್, ಗುಂಡು ತಗುಲಿ ಆಸ್ಪತ್ರೆ ಸೇರಿದ ನ್ಯಾಯಾಧೀಶರು!

Crime News: ಗೌನ್ ಧರಿಸುವಾಗ ಕೆಳಗೆ ಬಿದ್ದು ಫೈರ್ ಆದ ಗನ್, ಗುಂಡು ತಗುಲಿ ಆಸ್ಪತ್ರೆ ಸೇರಿದ ನ್ಯಾಯಾಧೀಶರು!

ಗಾಯಗೊಂಡ ನ್ಯಾಯಾಧೀಶರು

ಗಾಯಗೊಂಡ ನ್ಯಾಯಾಧೀಶರು

ನ್ಯಾಯಾಧೀಶರೊಬ್ಬರು ಗೌನ್ ಧರಿಸುವ ವೇಳೆ ತಮ್ಮದೇ ಗನ್ ಕೆಳಗೆ ಬಿದ್ದು ಫೈರ್ ಆಗಿದೆ. ನಂತರ ನ್ಯಾಯಾಧೀಶರ ಕಾಲಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಸದ್ಯ ಜಡ್ಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ!

 • Share this:

  ಉತ್ತರ ಪ್ರದೇಶ: ಕೆಲವೊಮ್ಮೆ ಆಕಸ್ಮಿಕವಾಗಿ (Accidently) ಕೆಲವು ಘಟನೆಗಳು (Incident) ನಡೆದು ಹೋಗುತ್ತವೆ. ಎಷ್ಟೋ ಬಾರಿ ಮನೆಯಿಂದ ಹೊರಡುವಾಗ ಯಾರೂ ಸಹ ಇಂದು ತಾವು ಇಂತಹ ಸನ್ನಿವೇಶ ಅಥವಾ ಘಟನೆ ಎದುರಿಸುತ್ತೇವೆ ಎಂದು ಯೋಚನೆ ಮಾಡಿರಲ್ಲ. ಖುಷಿಯಿಂದ ಕಚೇರಿ (Office) ಹಾಗೂ ಕೆಲಸಕ್ಕೆ (Work) ತೆರಳುತ್ತಾರೆ. ಆದರೆ ಅಲ್ಲಿ ಆಕಸ್ಮಿಕವಾಗಿ ಬಂದೆರಗುವ ಸನ್ನಿವೇಶದಿಂದ ವ್ಯಕ್ತಿ ಅಲ್ಲೋಲಕಲ್ಲೋಲವಾಗುತ್ತಾನೆ. ಇದನ್ಯಾಕೆ ಹೇಳ್ತಿದ್ದೀವಿ ಅಂದ್ಕೊಂಡ್ರಾ ಇದಕ್ಕೆ ಉದಾಹರಣೆ ಎಂಬಂತೆ ಘಟನೆಯೊಂದು ನಡೆದಿದೆ. ಜಡ್ಜ್ ಒಬ್ಬರು ಇರಿಸಿಕೊಂಡಿದ್ದ ಗನ್ (Gun) ಆಕಸ್ಮಿಕವಾಗಿ ಕೆಳಗೆ ಬಿದ್ದು, ಫೈರ್ (Fire) ಆಗಿದೆ. ನಂತರ ಜಡ್ಜ್ (Judge) ಅವರ ಕಾಲಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.


  ಆಕಸ್ಮಿಕವಾಗಿ ತಮ್ಮದೇ ಗನ್ ಫೈರ್ ಆಗಿ ಆಸ್ಪತ್ರೆ ಸೇರಿದ ನ್ಯಾಯಾಧೀಶರು!


  ಹೌದು.. ಉತ್ತರ ಪ್ರದೇಶದಲ್ಲಿ ನ್ಯಾಯಾಧೀಶರೊಬ್ಬರು ಗೌನ್ ಧರಿಸುವ ವೇಳೆ ತಮ್ಮದೇ ಗನ್ ಕೆಳಗೆ ಬಿದ್ದು ಫೈರ್ ಆಗಿದೆ. ನಂತರ ನ್ಯಾಯಾಧೀಶರ ಕಾಲಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.


  ಶನಿವಾರ ಉತ್ತರ ಪ್ರದೇಶದ ಮಿರ್ಜಾಪುರ ಕೋರ್ಟ್ ಕಾಂಪ್ಲೆಕ್ಸ್‌ ನಲ್ಲಿ ಈ ಘಟನೆ ನಡೆದಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು, ಉತ್ತರ ಪ್ರದೇಶದ ಮಿರ್ಜಾಪುರ ಕೋರ್ಟ್ ಕಾಂಪ್ಲೆಕ್ಸ್‌ ನಲ್ಲಿರುವ ತಮ್ಮದೇ  ಚೇಂಬರ್‌ ನಲ್ಲಿ ಗೌನ್ ಧರಿಸಿಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಗನ್ ಜಾರಿ ಕೆಳಗೆ ಬಿದ್ದಿದೆ.
  ನಂತರ ಗನ್ ನಿಂದ ಗುಂಡು ಫೈರ್ ಆಗಿದೆ. ಗುಂಡು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರ ಕಾಲಿಗೆ ತಾಗಿದೆ. ಇದರಿಂದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.


  ಗುಂಡಿನ ಸದ್ದು ಕೇಳಿ ಕೋಣೆಗೆ ಬಂದ ಜನರು ಗಾಯಗೊಂಡಿದ್ದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರನ್ನು ತಕ್ಷಣ ಮಿರ್ಜಾಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಿರ್ಜಾಪುರದ ಸ್ಥಳೀಯ ಆಸ್ಪತ್ರೆಯಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರ ಕಾಲಿನಿಂದ ಬುಲೆಟ್ ಅನ್ನು ಹೊರಗೆ ತೆಗೆದು ಹಾಕಲಾಗಿದೆ.


  ಆಕಸ್ಮಿಕವಾಗಿ ನಡೆದ ಘಟನೆ


  ಇನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರಿಗೆ ಗುಂಡು ತಗುಲಿದ ವಿಷಯ ಸಂಬಂಧ ಪೊಲೀಸರು ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು ತಮ್ಮ ಚೇಂಬರ್‌ ನಲ್ಲಿ ಇದ್ದರು. ಈ ವೇಳೆ ಅವರು ತಮ್ಮ ಕೋರ್ಟ್ ಗೌನ್ ಧರಿಸಿದ್ದರು. ಆಗ ಆಕಸ್ಮಿಕವಾಗಿ ಅವರದ್ದೇ ಗನ್ ಜಾರಿ ಕೆಳಗೆ ಬಿದ್ದು ಪೈರ್ ಆಗಿದೆ. ಇದರಿಂದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು ಗಾಯಗೊಂಡಿದ್ದರು ಎಂದು ಹೇಳಿದ್ದಾರೆ.


  ಸಾಂದರ್ಭಿಕ ಚಿತ್ರ


  ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು ಪರವಾನಗಿ ಪಡೆದು ಇಟ್ಟುಕೊಂಡಿದ್ದ ಗನ್ ಇದಾಗಿದೆ. ಗನ್ ಆಕಸ್ಮಿಕವಾಗಿ ಕೆಳಗೆ ಬಿದ್ದು ಫೈರ್ ಆಗಿದೆ. ಸದ್ಯ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ತಲೇವಾರ್ ಸಿಂಗ್ ಅವರಿಗೆ ಯಾವುದೇ ಅಪಾಯ ಆಗಿಲ್ಲ.


  ಕಾಲಿಗೆ ತಗುಲಿದ್ದ ಗುಂಡು ಹೊರಗೆ ತೆಗೆಯಲಾಗಿದೆ ಎಂದು ಮಿರ್ಜಾಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಘಟನೆ ನಡೆಯುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲಿ ನಿಂತಿದ್ದ ವಕೀಲರು, ನ್ಯಾಯಾಧೀಶ ತಲೇವಾರ್ ಸಿಂಗ್ ಅವರ ನೆರವಿಗೆ ಧಾವಿಸಿ ಬಂದಿದ್ದರು.


  ಇದನ್ನೂ ಓದಿ: ಕೋಲ್ಕತ್ತಾದಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ, ಪೊಲೀಸರ ಮೇಲೆಯೇ ಕಲ್ಲು ತೂರಾಟ


  ಅಪಾಯದಿಂದ ನ್ಯಾಯಾಧೀಶ ತಲೇವಾರ್ ಸಿಂಗ್ ಪಾರು


  ಗಾಯಾಳು ನ್ಯಾಯಾಧೀಶ ತಲೇವಾರ್ ಸಿಂಗ್ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ನಂತರ ಅವರನ್ನು ವಿಭಾಗೀಯ ಆಸ್ಪತ್ರೆಗೆ ಕರೆ ತಂದು ಗುಂಡು ಹೊರಕ್ಕೆ ತೆಗೆದು ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯ ನಂತರ ನ್ಯಾಯಾಧೀಶ ತಲೇವಾರ್ ಸಿಂಗ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  Published by:renukadariyannavar
  First published: