ಆತ್ಮಹತ್ಯೆಗೆ ಮುನ್ನ ಸಾಯುವುದು ಹೇಗೆ? ಎಂದು ಗೂಗಲ್​ ಮಾಡಿದ್ದ ಐಪಿಎಸ್​​: ಸಾವು-ಬದುಕಿನ ನಡುವೆ ಹೋರಾಟ


Updated:September 8, 2018, 5:00 PM IST
ಆತ್ಮಹತ್ಯೆಗೆ ಮುನ್ನ ಸಾಯುವುದು ಹೇಗೆ? ಎಂದು ಗೂಗಲ್​ ಮಾಡಿದ್ದ ಐಪಿಎಸ್​​: ಸಾವು-ಬದುಕಿನ ನಡುವೆ ಹೋರಾಟ

Updated: September 8, 2018, 5:00 PM IST
ನ್ಯೂಸ್​-18 ಕನ್ನಡ

ಕಾನ್ಪುರ(ಸೆಪ್ಟೆಂಬರ್​.09): ಕಳೆದ ಬುಧವಾರ(ಸೆ.7) ರಂದು ಕೌಂಟುಬಿಕ ಸಮಸ್ಯೆಯಿಂದಾಗಿ ಖಿನ್ನತೆಗೊಳಗಾಗಿದ್ದ ಐಪಿಎಸ್​ ಅಧಿಕಾರಿಯೊಬ್ಬರು ಆತ್ಮ ಹತ್ಯೆಗೆ ಯತ್ನಿಸುವ ಮುನ್ನಾ ಸಾಯುವುದು ಹೇಗೆ? ಎಂದು ಗೂಗಲ್​ನಲ್ಲಿ​​ ಹುಡುಕಾಡಿದ ಘಟನೆ ಕಾನ್ಪುರ್​ನಲ್ಲಿ ನಡೆದಿದೆ. ಸೆಲ್ಫೋಸ್ ವಿಷ ಸೇವಿಸಿ ಸದ್ಯ ಆಸ್ಪತ್ರೆಗೆ ಸೇರಿರುವ ಅಧಿಕಾರಿ ಸುರೇಂದ್ರ ಕುಮಾರ್ ದಾಸ್ ಎಂಬವರು ಸಾಯುವ ಬಗ್ಗೆ ಗೂಗಲ್ ಸರ್ಚ್ ಮಾಡಿದ್ದಾರೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಐಪಿಎಸ್​ ಅಧಿಕಾರಿ ಸುರೇಂದ್ರ ಕುಮಾರ್​ ದಾಸ್​​ ಮತ್ತು ತನ್ನ ಹೆಂಡತಿ ನಡುವೇ ಸಹಜವಾಗಿ ಎದಿನಂತೆ ಭಿನ್ನಭಿಪ್ರಾಯ ಕಾರಣದಿಂದಾಗಿ ಜಗಳವಾಗಿತ್ತು ಎನ್ನಲಾಗಿದೆ. ಬಳಿಕ ನೋವಿನಿಂದ ಮನನೊಂದ ಅಧಿಕಾರಿ ಗೂಗಲ್​ ಸರ್ಚ್​​ ಮಾಡಿ, ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ಧಾರೆ. ಈ ವಿಚಾರ ಅವರ ಲ್ಯಾಪ್ ಟಾಪ್ ಮತ್ತು ಮೊಬೈಲ್​ನಲ್ಲಿನ ಬ್ರೌಸಿಂಗ್ ಹಿಸ್ಟರಿ ಪರಿಶೀಲಿಸಿದಾಗ ಸೈಬರ್ ತಜ್ಞರಿಗೆ ತಿಳಿದು ಬಂದಿದೆ.

ಕೌಟುಂಬಿಕ ಸಮಸ್ಯೆಯಿಂದಾಗಿ ಸುರೇಂದ್ರ ಕುಮಾರ್​​ ದಾಸ್​ ಖಿನ್ನತೆಗೆ ಒಳಗಾಗಿದ್ದರು. ಜೀವನಕ್ಕೆ ಅಂತ್ಯ ಹಾಡಲು ವಿಷ ಅಥವಾ ರೇಝರ್ ಬಳಸುವ ವಿಧಾನದ ಬಗ್ಗೆ ಹಲವು ವೀಡಿಯೋಗಳನ್ನು ವೀಕ್ಷಿಸಿದ್ದಾರೆ ಎಂದು ಕಾನ್ಪುರದ ಹಿರಿಯ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಅನಂತ್ ದಿಯೊ ಹೇಳಿದ್ದಾರೆ.

ಇನ್ನು ಐಪಿಎಸ್​​ ಅಧಿಕಾರಿ ದಾಸ್​ ಅವರು ಕಾನ್ಪುರ್ ಪೂರ್ವ ಜಿಲ್ಲೆಯ ಎಸ್ಪಿಯಾಗಿ ಕಳೆದ ಆಗಸ್ಟ್ 9ರಂದು ಅಧಿಕಾರ ಸ್ವೀಕರಿಸಿದ್ದರು ಎನ್ನಲಾಗಿದೆ. ದಾಸ್ ಹೆಂಡತಿ ಹಾಗೂ ನಗರದ ಜಿಎಸ್‍ವಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಎಸ್ ಮಾಡುತ್ತಿರುವ ರವೀನಾ ಸಿಂಗ್ ಎಂಬಾಕೆಯ ನಡುವೆ ಆಹಾರ ವಿಚಾರ ಸಂಬಂಧ ಜಗಳವಾಗಿತ್ತು ಎನ್ನುತ್ತಾರೆ ಸಿಬ್ಬಂದಿಗಳು.

ಕೃಷ್ಣಾ ಜನ್ಮಾಷ್ಟಮಿಯ ದಿನ ರವೀನಾ ಸಿಂಗ್​​ ಅವರು, ನಾನ್-ವೆಜ್ ಪಿಝಾ ಆರ್ಡರ್ ಮಾಡಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಕೊನೆಗೂ ದಾಸ್​ ಅವರ ಅತ್ತೆ ಮಾವ ಜಗಳ ಬಿಡಿಸಬೇಕಾಗಿ ಬಂದಿತ್ತು. ಈ ಜಗಳವನ್ನು ಮನಸ್ಸಿಗೆ ಹಚ್ಚಿಕೊಂಡ ದಾಸ್​​ ಆತ್ಮಹತ್ಯೆಗೆ ಯತ್ನಿಸಿದ್ಧಾರೆ. ಅವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ದಾಸ್​ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ಧಾರೆ ಎನ್ನುತ್ತಿವೆ ಆಸ್ಪತ್ರೆ ಮೂಲಗಳು.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...