Gayatri Mantra: ಇನ್ನು ಮುಂದೆ ಜೈಲಿನಲ್ಲಿ ಕೇಳಿ ಬರಲಿದೆ ಗಾಯತ್ರಿ ಮಂತ್ರ! ಕೈದಿಗಳ ಮನ ಪರಿವರ್ತನೆಗೆ ನಿತ್ಯ ಪಠಣ

ಶೀಘ್ರದಲ್ಲೇ ಕಾರಾಗೃಹಗಳು ಆಧ್ಯಾತ್ಮಿಕ ಕೇಂದ್ರಗಳಂತೆ ಆಗಲಿವೆ. ಕೈದಿಗಳನ್ನು ಕೆಟ್ಟ ಆಲೋಚನೆಗಳಿಂದ ಕಾಪಾಡಲು ಹಾಗೂ ಅವರ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

ಹಿಂದೂಗಳಿಗೆ ಪವಿತ್ರವಾದ ಓಂ

ಹಿಂದೂಗಳಿಗೆ ಪವಿತ್ರವಾದ ಓಂ

  • Share this:
ಉತ್ತರ ಪ್ರದೇಶ: ಇನ್ನು ಮುಂದೆ ಜೈಲುಗಳಲ್ಲಿ (Jail) ನಿತ್ಯವೂ ಕೇಳಿ ಬರಲಿದೆ “ಓಂ ಭೂರ್ಭುವಃ ಸ್ವಃ.. ತತ್ಸವಿತುರ್ವರೇಣ್ಯಂ .. ಭರ್ಗೋ ದೇವಸ್ಯ ಧೀಮಹಿಃ.. ಧಿಯೋಯೋನಃ ಪ್ರಚೋದಯಾತ್..” ಮತ್ತೊಂದೆಡೆ ಕೈದಿಗಳು (Prisoners) ಪಠಿಸಲಿದ್ದಾರೆ ''ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ.. ಊರ್ವರೂಕಮಿವ ಬಂಧನಾನ್‌ ಮೃತ್ಯೋರ್ಮುಕ್ಷೀಯ ಮಾಮೃತಾತ್‌” ಮಂತ್ರ (Mantra). ಅಂದರೆ ಜೈಲುಗಳಲ್ಲಿ ಇನ್ನು ಮುಂದೆ ಗಾಯತ್ರಿ ಮಂತ್ರ (Gayatri Mantra) ಹಾಗೂ ಮಹಾ ಮೃತ್ಯುಂಜಯ ಮಂತ್ರ (Mahamrityunjaya mantra) ಕೇಳಿ ಬರಲಿದೆ. ಕೈದಿಗಳ ಮನಪರಿವರ್ತನೆ, ಅವರ ಮಾನಸಿಕ ಆರೋಗ್ಯಕ್ಕಾಗಿ (Mental Health) ಈ ಎರಡು ಮಂತ್ರಗಳನ್ನು ಜೈಲಿನಲ್ಲಿ ಪಠಿಸುವ ವ್ಯವಸ್ಥೆ ಮಾಡಲು ಉತ್ತರ ಪ್ರದೇಶ (Uttar Pradesh) ಸರ್ಕಾರ (Government) ಚಿಂತನೆ ನಡೆಸಿದೆ.

ಜೈಲುಗಳಲ್ಲಿ ಗಾಯತ್ರಿ ಮಂತ್ರ, ಮಹಾ ಮೃತ್ಯುಂಜಯ ಮಂತ್ರ

'ಬುಲ್ಡೋಜರ್‌ನಿಂದ ಶಿಕ್ಷೆ ಮತ್ತು ಆಧ್ಯಾತ್ಮಿಕ ಮಂತ್ರಗಳಿಂದ ರೋಗ ಗುಣಪಡಿಸುವುದು' ಯೋಗಿ ಸರ್ಕಾರದ 2.0 ಮಂತ್ರದಂತೆ ತೋರುತ್ತದೆ. ಉತ್ತರ ಪ್ರದೇಶದ ಜೈಲು ಸಚಿವ ಧರ್ಮವೀರ್ ಪ್ರಜಾಪತಿ  ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ರಾಜ್ಯದ ವಿವಿಧ ಜೈಲುಗಳಲ್ಲಿ ಇರುವ ಕೈದಿಗಳಿಗೆ ಈಗ 'ಮಹಾಮೃತ್ಯುಂಜಯ್ ಜಪ' ಮತ್ತು 'ಗಾಯತ್ರಿ ಮಂತ್ರ' ಕೇಳುವಂತೆ ಮಾಡಲಾಗುತ್ತದೆ ಅಂತ ಹೇಳಿದ್ದಾರೆ.

ಕೈದಿಗಳ ಮನ ಪರಿವರ್ತನೆಗಾಗಿ ಮಂತ್ರ

ಶೀಘ್ರದಲ್ಲೇ, ಉತ್ತರ ಪ್ರದೇಶದ ಕಾರಾಗೃಹಗಳು ಆಧ್ಯಾತ್ಮಿಕ ಕೇಂದ್ರಗಳಂತೆ ಆಗಲಿವೆ. ಕೈದಿಗಳನ್ನು ಕೆಟ್ಟ ಆಲೋಚನೆಗಳಿಂದ ಕಾಪಾಡಲು ಹಾಗೂ ಅವರ ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: Mumbai Attack ಮಾಸ್ಟರ್‌ಮೈಂಡ್‌ಗೆ 31 ವರ್ಷ ಜೈಲು ಶಿಕ್ಷೆ! ಹಫೀಜ್ ಸಯೀದ್ ಆಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ

 ಈ ಬಗ್ಗೆ ಸಚಿವರು ಹೇಳಿದ್ದೇನು?

ಈ ನಿರ್ಧಾರದ ಹಿಂದಿನ ಉದ್ದೇಶ ರಾಜ್ಯದ ಕೈದಿಗಳ 'ಆಧ್ಯಾತ್ಮಿಕ ಚಿಕಿತ್ಸೆ' ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಧರ್ಮವೀರ್ ಪ್ರಜಾಪತಿ, ಮಂತ್ರಗಳು ಕೈದಿಗಳು ಏಕಾಂತ ಮತ್ತು ಪ್ರತ್ಯೇಕತೆಯ ಹೊರತಾಗಿಯೂ ಮಾನಸಿಕ ಶಾಂತಿಯನ್ನು ಪಡೆಯಲು ಮತ್ತು ಜೀವನದ ಸಕಾರಾತ್ಮಕ ದೃಷ್ಟಿಕೋನವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಜೈಲು ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ

ಇನ್ನು ಉತ್ತರ ಪ್ರದೇಶ ರಾಜ್ಯ ಸರ್ಕಾರವು ಜೈಲುಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಪರಿಕರಗಳ ಬಳಕೆಯನ್ನು ಸಹ ನಿಷೇಧಿಸಿದೆ. ಇದು ಪ್ಲಾಸ್ಟಿಕ್ ವಸ್ತುಗಳಿಂದ ಮುಕ್ತವಾಗಿಸಿ, ಜೈಲು ಆವರಣವನ್ನು ಸ್ವಚ್ಛಗೊಳಿಸುವುದಲ್ಲದೆ, ಹಸಿರು ಸಂರಕ್ಷಣೆಗಾಗಿ ಪ್ಲಾಸ್ಟಿಕ್‌ಗಳನ್ನು ದೂರವಿಡುವ ಅಗತ್ಯತೆಯ ಬಗ್ಗೆ ಕೈದಿಗಳಲ್ಲಿ ಜಾಗೃತಿ ಮೂಡಿಸುತ್ತದೆ.

ಜೈಲುಗಳಲ್ಲಿ ಕೈದಿಗಳಿಗೆ ಕೌಶಲ್ಯ ತರಬೇತಿ

ಕೈದಿಗಳು ತಮ್ಮ ಜೀವನವನ್ನು ಬದಲಾಯಿಸುವ ಕೌಶಲ್ಯಗಳನ್ನು ಕಲಿಯಲು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಉತ್ತಮ ವೃತ್ತಿಪರ ತರಬೇತಿಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಜೈಲುಗಳಿಗೆ ತಿಳಿಸಲಾಗಿದೆ. ಈ ರೀತಿಯಾಗಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವುದಲ್ಲದೆ ಜೈಲಿನಲ್ಲಿ ತಯಾರಿಸಿದ ಉತ್ಪನ್ನಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಕಾರಾಗೃಹ ಇಲಾಖೆಯಲ್ಲಿ ಮಡಿಕೆ ಬಳಕೆಯನ್ನು ಉತ್ತೇಜಿಸಲು ಜೈಲು ಅಧಿಕಾರಿಗಳಿಗೆ ತಿಳಿಸಲಾಗಿದೆ.

ಇದನ್ನೂ ಓದಿ: HDK, ಸಿದ್ದರಾಮಯ್ಯ ಸೇರಿ 61 ಮಂದಿಗೆ ಜೀವ ಬೆದರಿಕೆ ಪತ್ರ! ಅಪರಿಚಿತರು ಬರೆದ ಲೆಟರ್‌ನಲ್ಲಿ ಏನಿದೆ ಗೊತ್ತಾ?

 ಉತ್ತರ ಪ್ರದೇಶ ಸಿಎಂಒ ಟ್ವಿಟರ್ ಖಾತೆ ಹ್ಯಾಕ್,

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆಯನ್ನು ಶನಿವಾರ ಹ್ಯಾಕ್ ಮಾಡಲಾಗಿದೆ. UP CMO (@CMOfficeUP) Twitter ಖಾತೆಯು ಪ್ರಸ್ತುತ ನಾಲ್ಕು ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದೆ. ಸುಮಾರು 4 ಗಂಟೆಗಳ ನಂತರ, ಖಾತೆಯನ್ನು ಭಾಗಶಃ ಮರುಸ್ಥಾಪಿಸಲಾಗಿದೆ ಮತ್ತು ಖಾತೆಯನ್ನು ತೆಗೆದುಕೊಂಡ ನಂತರ ಹ್ಯಾಕರ್‌ಗಳು ಪೋಸ್ಟ್ ಮಾಡಿದ ಟ್ವೀಟ್‌ಗಳನ್ನು ತೆಗೆದುಹಾಕಲಾಗಿದೆ. ಸೈಬರ್ ತಜ್ಞರಿಂದ ಪ್ರಕರಣದ ತನಿಖೆಯ ನಂತರ, ಹೊಣೆಗಾರರ ​​ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯುಪಿ ಸರ್ಕಾರ ಟ್ವೀಟ್‌ನಲ್ಲಿ ತಿಳಿಸಿದೆ.
Published by:Annappa Achari
First published: