Operation Bulldozer: ಗಲಭೆ ಕೋರರಿಗೆ ಮತ್ತೆ ಶಾಕ್ ಕೊಟ್ಟ ಯೋಗಿ ಸರ್ಕಾರ! ಆರೋಪಿಗಳ ವಿರುದ್ಧ ಆಪರೇಷನ್ ಬುಲ್ಡೋಜರ್ ಸ್ಟಾರ್ಟ್

ಕಳೆದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶದ ಹಲೆವೆಡೆ ಹಿಂಸಾಚಾರ ನಡೆದಿತ್ತು. ಗಲಭೆಕೋರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಹಲವರನ್ನು ಗಾಯಗೊಳಿಸಿದ್ದರು. ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡಿದ್ದರು. ಇದೀಗ ಇಂತಹ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಮತ್ತೆ ಆಪರೇಷನ್ ಬುಲ್ಡೋಜರ್ ಕೈಗೊಂಡಿದೆ.

ಉತ್ತರ ಪ್ರದೇಶದಲ್ಲಿ'ಆಪರೇಷನ್ ಬುಲ್ಡೋಜರ್'

ಉತ್ತರ ಪ್ರದೇಶದಲ್ಲಿ'ಆಪರೇಷನ್ ಬುಲ್ಡೋಜರ್'

  • Share this:
ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ (Yogi Adityanath) ಆಡಳಿತವಿರುವ ಉತ್ತರ ಪ್ರದೇಶದಲ್ಲಿ (Uttar Pradesh) ಮತ್ತೆ ಬುಲ್ಡೋಜರ್‌ಗಳು (Bulldozer) ಸದ್ದು ಮಾಡಿವೆ. ಹಿಂದೆ ಅಕ್ರಮವಾಗಿ ಕಟ್ಟಡ (Buildings) ಕಟ್ಟಿಕೊಂಡವರ ವಿರುದ್ಧ ‘ಬುಲ್ಡೋಜರ್ ಬಾಬಾ’ (Bulldozer Baba) ಆಪರೇಷನ್ ನಡೆಸಿತ್ತು. ಇದೀಗ ಗಲಭೆಯ ಆರೋಪಿಗಳ (riot accused) ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರ (Government) ಮತ್ತೆ ‘ಆಪರೇಷನ್ ಬುಲ್ಡೋಜರ್’ (Operation Bulldozer) ಪ್ರಯೋಗಿಸಿದೆ. ಪ್ರವಾದಿ ಮಹಮ್ಮದ್ ಪೈಗಂಬರ್ (Prophet Muhammad Paigambar) ಅವರನ್ನು ಅವಹೇಳನ ಮಾಡಿದ್ದಾರೆ ಅಂತ ಆರೋಪಿಸಿ ಬಿಜೆಪಿ (BJP) ಮಾಜಿ ವಕ್ತಾರೆ (Spoke Person) ನೂಪುರ್ ಶರ್ಮಾ (Nupur Sharma) ವಿರುದ್ಧ ಕಳೆದ ಶುಕ್ರವಾರ (Friday) ದೇಶಾದ್ಯಂತ ಮುಸ್ಲಿಮರು (Muslim) ಪ್ರತಿಭಟನೆ (Protest) ನಡೆಸಿದ್ದರು. ಈ ವೇಳೆ ಉತ್ತರ ಪ್ರದೇಶದ ಹಲೆವೆಡೆ ಹಿಂಸಾಚಾರ ನಡೆದಿತ್ತು. ಗಲಭೆಕೋರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿ, ಹಲವರನ್ನು ಗಾಯಗೊಳಿಸಿದ್ದರು. ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡಿದ್ದರು. ಇದೀಗ ಇಂತಹ ಆರೋಪಿಗಳ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಮತ್ತೆ ಆಪರೇಷನ್ ಬುಲ್ಡೋಜರ್ ಕೈಗೊಂಡಿದೆ.

ಉತ್ತರ ಪ್ರದೇಶದಲ್ಲಿ ಮತ್ತೆ ಆಪರೇಷನ್ ಬುಲ್ಡೋಜರ್

ಉತ್ತರ ಪ್ರದೇಶದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರ ಶಹರಾನ್‌ಪುರದಲ್ಲಿ ಬುಲ್ಡೋಜರ್‌ಗಳನ್ನು ಫೀಲ್ಡಿಗಿಳಿಸಿದೆ. ನಮಾಜ್ ಬಳಿಕ ಉಂಟಾದ ಗಲಭೆಯ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, ಅಶಾಂತಿ ಸೃಷ್ಟಿಗೆ ಕಾರಣರಾದ ಇಬ್ಬರು ಮಾಸ್ಟರ್‌ ಮೈಂಡ್‌ಗಳ ಮನೆಗಳನ್ನು ಅಧಿಕಾರಿಗಳು ಕೆಡವಿದ್ದಾರೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಮನೆಗಳನ್ನು ತೆರವುಗೊಳಿಸಿದ್ದಾರೆ.



ಗಲಭೆಯ ಮಾಸ್ಟರ್‌ ಮೈಂಡ್ ಅರೆಸ್ಟ್

ಪ್ರವಾದಿ ವಿರುದ್ಧ ಹೇಳಿಕೆಗೆ ಶಹರಾನ್‌ಪುರದಲ್ಲಿ ಕಳೆದ ಶುಕ್ರವಾರ ಹಿಂಸಾಚಾರ ಭುಗಿಲೆದ್ದಿತ್ತು. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಅಶಾಂತಿ ವಾತಾವರಣ ಸೃಷ್ಟಿ ಮಾಡಿದ್ದರು.  ಕಲ್ಲು ತೂರಾಟದ ಮಾಸ್ಟರ್ ಮೈಂಡ್ ಜಾವೇದ್ ಅಹ್ಮದ್ ಅಲಿಯಾಸ್ ಪಂಪ್ ಸೇರಿ 68 ಮಂದಿಯನ್ನು ಪೊಲೀಸರು ಬಂಧಿಸಿಲಾಗಿದೆ. ಸದ್ಯ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ. ಬಂಧಿತ ಎಲ್ಲ ವ್ಯಕ್ತಿಗಳ ಮೇಲೆ ಎನ್‌ಎಸ್‌ಎ ವಿಧಿಸಲಾಗುವುದು ಎಂದು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?

ವಿವಿಧೆಡೆ 227ಕ್ಕೂ ಹೆಚ್ಚು ಆರೋಪಿಗಳು ಅರೆಸ್ಟ್

ಗಲಭೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಾದ್ಯಂತ 227 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ 68 ಜನರನ್ನು ಪ್ರಯಾಗ್‌ರಾಜ್‌ನಲ್ಲಿ ಮತ್ತು 50 ಜನರನ್ನು ಹತ್ರಾಸ್‌ನಲ್ಲಿ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಸಹರಾನ್‌ಪುರದಲ್ಲಿ 55, ಅಂಬೇಡ್ಕರ್‌ನಗರದಲ್ಲಿ 28, ಮೊರಾದಾಬಾದ್‌ನಲ್ಲಿ 25, ಫಿರೋಜಾಬಾದ್‌ನಲ್ಲಿ ಎಂಟು, ಅಲಿಗಢದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Nupur Sharma: ನೂಪುರ್ ಶರ್ಮಾಗೆ ಹೊಸ ಸಮನ್ಸ್ ಜಾರಿಗೊಳಿಸಿ ಮುಂಬೈ ಪೊಲೀಸರು

ಗಲಭೆಕೋರರಿಗೆ ಯೋಗಿ ಆದಿತ್ಯನಾಥ್ ವಾರ್ನಿಂಗ್

ಇನ್ನು ಗಲಭೆಕೋರರಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಕಳೆದ ಕೆಲವು ದಿನಗಳಿಂದ ವಿವಿಧ ನಗರಗಳಲ್ಲಿ ವಾತಾವರಣ ಹಾಳು ಮಾಡುವ ಅವ್ಯವಸ್ಥೆಯ ಯತ್ನದಲ್ಲಿ ತೊಡಗಿರುವ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಸುಸಂಸ್ಕೃತ ಸಮಾಜದಲ್ಲಿ ಇಂತಹ ಸಮಾಜವಿರೋಧಿಗಳಿಗೆ ಜಾಗವಿಲ್ಲ, ಯಾವುದೇ ಅಮಾಯಕರಿಗೆ ಕಿರುಕುಳ ನೀಡಬಾರದು, ಆದರೆ ಒಬ್ಬ ತಪ್ಪಿತಸ್ಥನನ್ನು ಬಿಡಬಾರದು,'' ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ,
Published by:Annappa Achari
First published: