Shocking Report: ಆ ರಾಜ್ಯದಲ್ಲಿ ಮಹಿಳೆಯರ ಮೇಲಿನ ಕ್ರೈಂ ಹೆಚ್ಚಂತೆ, ಇಲ್ಲಿ ಸೂಸೈಡ್ ಮಾಡಿಕೊಳ್ಳುವವರು ಜಾಸ್ತಿಯಂತೆ!

ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯಗಳು ನಡೆದಿದ್ದರೆ, ಮಹಾರಾಷ್ಟ್ರದಲ್ಲಿ (Maharashtra) ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ ಅಂತ ವರದಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಇಡೀ ದೇಶ ಗೌರಿ ಗಣೇಶ ಹಬ್ಬದ (Gowri Ganesh Festival) ಸಂಭ್ರಮದಲ್ಲಿ ತೇಲಾಡುತ್ತಿರುವ ಈ ಹೊತ್ತಿನಲ್ಲಿ ಆಘಾತಕಾರಿ  ವರದಿಯೊಂದು (Shocking Report) ಬಹಿರಂಗವಾಗಿದೆ. ಮಹಿಳೆಯರ ಮೇಲಿನ ಅಪರಾಧ (Crime against woman) ಸೇರಿದಂತೆ ವಿವಿಧ ಅಪರಾಧ ಹಾಗೂ ಆತ್ಮಹತ್ಯೆ (Suicide) ಮಾಡಿಕೊಳ್ಳುವ ಅತೀ ಹೆಚ್ಚು ಪ್ರಕರಣ (Case) ದಾಖಲಾಗಿರುವ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ. ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲೆ ಅತೀ ಹೆಚ್ಚು ದೌರ್ಜನ್ಯಗಳು ನಡೆದಿದ್ದರೆ, ಮಹಾರಾಷ್ಟ್ರದಲ್ಲಿ (Maharashtra) ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿದೆ ಅಂತ ವರದಿ ತಿಳಿಸಿದೆ.

ಉತ್ತರ ಪ್ರದೇಶದಲ್ಲೇ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ

ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ದಾಖಲಾದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 56,083. ಇದು ದೇಶದಲ್ಲೇ ಅತಿ ಹೆಚ್ಚು ಎನಿಸಿಕೊಂಡಿದೆ.  ಉತ್ತರ ಪ್ರದೇಶದ ನಂತರ ರಾಜಸ್ಥಾನದಲ್ಲಿ 40,738 ಪ್ರಕರಣಗಳು ದಾಖಲಾಗಿವೆ. 39,526 ಕರಣಗಳೊಂದಿಗೆ  ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಪಶ್ಚಿಮ ಬಂಗಾಳ (35,884) ಮತ್ತು ಒಡಿಶಾ (31,352) ನಂತರದ ಸ್ಥಾನದಲ್ಲಿವೆ ಅಂತ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ (ಎನ್‌ಸಿಆರ್‌ಬಿ) ಅಂಕಿ ಅಂಶಗಳು ಹೇಳಿವೆ.

ಕರ್ನಾಟಕದಲ್ಲಿ 14,468 ಕೇಸ್ ದಾಖಲು

ಇನ್ನು 2021ರಲ್ಲಿ ಕರ್ನಾಟಕದಲ್ಲಿ 14,468 ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲವಾಗಿವೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ನಗರ ಎನಿಸಿಕೊಂಡಿರುವ ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷ ಪ್ರತಿದಿನ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ಎನ್‌ಸಿಆರ್‌ಬಿ ವರದಿಯಲ್ಲಿ ಬಹಿರಂಗಗೊಂಡಿದೆ. ಇನ್ನು ದೆಹಲಿಯಲ್ಲಿ 14,277 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: POCSO Act: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?

ಪೋಕ್ಸೋ ಪ್ರಕರಣಗಳ ಸಂಖ್ಯೆಯೂ ಹೆಚ್ಚಳ

ಇನ್ನು 2020ರಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದಾಖಲಾಗಿರುವ ಅಪರಾಧ ಪ್ರಕರಣಗಳ ಪೈಕಿ ಶೇ 99 ಕ್ಕಿಂತ ಹೆಚ್ಚು ಪ್ರಕರಣಗಳು ಹೆಣ್ಣುಮಕ್ಕಳಿಗೆ ಸಂಬಂಧಿಸಿದ್ದಾಗಿದೆ ಅಂತ  ಎಂದು ಮಾಹಿತಿ ನೀಡಿವೆ

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಕೇಸ್

ದೇಶದ ಎಲ್ಲಾ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಆತ್ಮಹತ್ಯೆಗಳು ದಾಖಲಾಗಿವೆ. ತಮಿಳುನಾಡು ಮತ್ತು ಮಧ್ಯಪ್ರದೇಶವು 2021 ರಲ್ಲಿ ಭಾರತದಾದ್ಯಂತ ಇಂತಹ 1,64,033 ಪ್ರಕರಣಗಳನ್ನು ಕಂಡಿದೆ . ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ ) ಯ ಇತ್ತೀಚಿನ ವರದಿಯ ಪ್ರಕಾರ , ವೃತ್ತಿಪರ ಅಥವಾ ವೃತ್ತಿ-ಸಂಬಂಧಿತ ಸಮಸ್ಯೆಗಳು, ಪ್ರತ್ಯೇಕತೆಯ ಭಾವನೆ, ನಿಂದನೆ, ಹಿಂಸೆ, ಕೌಟುಂಬಿಕ ಸಮಸ್ಯೆಗಳು, ಮಾನಸಿಕ ಅಸ್ವಸ್ಥತೆಗಳು, ಮದ್ಯದ ಚಟ, ಆರ್ಥಿಕ ನಷ್ಟ ಮತ್ತು ದೀರ್ಘಕಾಲದ ನೋವು ಪ್ರಮುಖ ಕಾರಣಗಳಾಗಿವೆ.

ಈ ಬಾರಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳ

2021 ರಲ್ಲಿ ಭಾರತದಲ್ಲಿ ಒಟ್ಟು 1,64,033 ಆತ್ಮಹತ್ಯೆಗಳು ವರದಿಯಾಗಿವೆ 2020 ಕ್ಕೆ ಹೋಲಿಸಿದರೆ 1,53,052 ಕೇಸ್ ದಾಖಲಾಗಿದ್ದು, ಶೇಕಡಾ 7.2 ರಷ್ಟು ಹೆಚ್ಚಳವಾಗಿದೆ. 2021ರಲ್ಲಿ ಆತ್ಮಹತ್ಯೆಗಳ ಪ್ರಮಾಣ ಶೇ. 6.2ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Fake Swamiji: 16ರ ಬಾಲಕಿ ಮದುವೆಯಾದ 62ರ ನಕಲಿ ಸ್ವಾಮೀಜಿ! ಮಾಟಮಂತ್ರದ ಹೆಸರಲ್ಲಿ ನೀಚಕೃತ್ಯ

ಈ ರಾಜ್ಯಗಳಲ್ಲಿ ಅತೀ ಹೆಚ್ಚು ಸೂಸೈಡ್

ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ 22,207 ಕೇಸ್, ನಂತರ ತಮಿಳುನಾಡಿನಲ್ಲಿ 18,925 ಆತ್ಮಹತ್ಯೆ ಕೇಸ್, ಮಧ್ಯಪ್ರದೇಶದಲ್ಲಿ 14,965 ಆತ್ಮಹತ್ಯೆ ಕೇಸ್,  ಪಶ್ಚಿಮ ಬಂಗಾಳದಲ್ಲಿ 13,500 ಆತ್ಮಹತ್ಯೆ ಕೇಸ್‌ ಮತ್ತು ಕರ್ನಾಟಕದಲ್ಲಿ 13,056 ಆತ್ಮಹತ್ಯೆ ಕೇಸ್‌ಗಳು ದಾಖಲಾಗಿವೆ. ಆತ್ಮಹತ್ಯೆ ಪ್ರಮಾಣ ಕ್ರಮವಾಗಿ ಶೇ. 13.5, ಶೇ. 11.5, ಶೇ. 9.1, ಶೇ. 8.2 ಮತ್ತು ಶೇ. 8ರಷ್ಟಿವೆ ಎಂದು ವರದಿ ಹೇಳಿದೆ.
Published by:Annappa Achari
First published: