14 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಬ್ಲಾಕ್​ಮೇಲ್; ಮತಾಂತರವಾದರೆ ಮದುವೆಯಾಗುವುದಾಗಿ ಆಫರ್!

Rape Case: ತನ್ನ ಮಗನಿಂದ ಅತ್ಯಾಚಾರಕ್ಕೊಳಗಾದ 14 ವರ್ಷದ ಬಾಲಕಿ ಮತಾಂತರವಾದರೆ ಆಕೆಯನ್ನು ತಾನೇ ಮದುವೆಯಾಗುವುದಾಗಿ ಅತ್ಯಾಚಾರ ನಡೆಸಿದ ಹುಡುಗನ ತಂದೆ ಆಫರ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆತ ಈಗಷ್ಟೆ ಮೀಸೆ ಚಿಗುರಿದ ಯುವಕ. ಕಂಡ ಕಂಡ ಹುಡುಗಿಯರ ಮೇಲೆಲ್ಲ ಕಣ್ಣಿಡುತ್ತಿದ್ದ ಆಕೆ ಸಮಯ ಸಿಕ್ಕರೆ ಅವರನ್ನು ತನ್ನ ಕಾಮದಾಸೆಗೆ ಬಳಸಿಕೊಳ್ಳುತ್ತಿದ್ದ. ಅದೇ ರೀತಿ ತನ್ನ ಊರಿನ 14 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆತ ಅದನ್ನು ತನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದ. ಆ ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸಿ, ಆಕೆಯನ್ನು ಮತ್ತೆ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವ ಸಂಚು ರೂಪಿಸಿದ್ದ ಆತ ಹಲವು ಬಾರಿ ಆ ವಿಡಿಯೋ ಮುಂದಿಟ್ಟುಕೊಂಡು ಹೆದರಿಸಿ, ಅತ್ಯಾಚಾರವೆಸಗಿದ್ದ. ತನ್ನ ಮಗನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಮತಾಂತರವಾದರೆ ಆಕೆಯನ್ನು ತಾನೇ ಮದುವೆಯಾಗುವುದಾಗಿ ಆ ಹುಡುಗನ ತಂದೆ ಆಫರ್ ನೀಡಿರುವ  ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿಯ ಮನೆಗೆ ನುಗ್ಗಿದ್ದ ಯುವಕ ಆಕೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡಿದ್ದ. ಮಗಳ ಮೇಲೆ ಆ ಯುವಕನಿಂದ ನಿರಂತರವಾಗಿ ಅತ್ಯಾಚಾರ ನಡೆದ ವಿಷಯ ಆಕೆಯ ತಂದೆಗೆ ಗೊತ್ತಾಯಿತು. ಈ ವಿಚಾರ ಹೊರಬಿದ್ದರೆ ಮಗಳ ಭವಿಷ್ಯವೇ ಹಾಳಾಗುತ್ತದೆ. ನೀವೇ ಇದನ್ನು ಸರಿಮಾಡಬೇಕೆಂದು ಆ ಹುಡುಗನ ಅಪ್ಪನ ಬಳಿ ಅಪ್ರಾಪ್ತೆಯ ತಂದೆ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದರು. ಅದಕ್ಕೆ ಪರಿಹಾರ ಇದೆಯೆಂದ ಯುವಕನ ತಂದೆ 'ನಿಮ್ಮ ಮಗಳು ನಮ್ಮ ಧರ್ಮಕ್ಕೆ ಮತಾಂತರವಾಗುವುದಾದರೆ ಆಕೆಯನ್ನು ನಾನು ಅಥವಾ ನನ್ನ ಮಗ ಮದುವೆಯಾಗಿ ಬಾಳು ಕೊಡುತ್ತೇವೆ' ಎಂದು ಆಫರ್ ನೀಡಿದ್ದಾನೆ!

ಹೀಗೆ ತನ್ನ ಮಗ ಅತ್ಯಾಚಾರವೆಸಗಿದ 14 ವರ್ಷದ ಹುಡುಗಿಯನ್ನು ತಾನೇ ಮದುವೆಯಾಗುತ್ತೇನೆ ಎಂದು ಮುಂದೆ ಬಂದವನ ಹೆಸರು ಕಲೀಂ. ಕಲೀಂನ ಮಗ ಅಬ್ದುಲ್ ರೆಹಮಾನ್​ ಅಲಿಯಾಸ್ ಗೋಲು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ 14 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದಾತ. ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಜ. 13ರಂದು ಆಕೆ ಮನೆಯವರ ಮುಂದೆ ಹೇಳಿಕೊಂಡಿದ್ದಳು. ಆ ವಿಡಿಯೋ ಡಿಲೀಟ್ ಮಾಡಿಸಲು, ಆತನಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ಆಕೆಯ ತಂದೆ ಆ ಯುವಕನ ಮನೆಗೆ ಹೋಗಿದ್ದರು.

ಇದನ್ನೂ ಓದಿ: ಗಂಡನ ಮೊಬೈಲ್​ನಲ್ಲಿದ್ದ ತನ್ನದೇ ಹಳೆ ಫೋಟೋ ನೋಡಿ ಚಾಕುವಿನಿಂದ ಇರಿದ ಹೆಂಡತಿ!

ಆದರೆ, ವಿಷಯ ತಿಳಿದ ಮೇಲೆ ಮಗನನ್ನು ಕರೆದು ಬುದ್ಧಿ ಹೇಳಿ, ವಿಡಿಯೋ ಡಿಲೀಟ್ ಮಾಡಿಸುವ ಬದಲು 'ನಿನ್ನ ಮಗಳು ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ನಾನು ಅಥವಾ ನನ್ನ ಮಗ ಆಕೆಯನ್ನು ಮದುವೆಯಾಗುತ್ತೇವೆ' ಎಂದು ಯುವಕನ ತಂದೆ ಹೇಳಿದ್ದಾನೆ. ಇದನ್ನು ಕೇಳಿದ ಸಂತ್ರಸ್ತ ಯುವತಿಯ ತಂದೆ ಆಘಾತದಿಂದ ಮನೆಗೆ ವಾಪಾಸ್ ಬಂದಿದ್ದಾರೆ ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ತನ್ನ ಮಗಳ ವಯಸ್ಸಿನವಳನ್ನು ತಾನೇ ಮದುವೆಯಾಗುತ್ತೇನೆ ಎಂದ ಕಲೀಂನ ಮಾತಿನಿಂದ ಕೋಪಗೊಂಡ ಸಂತ್ರಸ್ತ ಯುವತಿಯ ತಂದೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಲೀಂ ಮತ್ತು ಅಬ್ದುಲ್ ರೆಹಮಾನ್ ವಿರುದ್ಧ ಕೇಸ್ ದಾಖಲಿಸಿಕೊಂಡು, ಬಂಧಿಸಿದ್ದಾರೆ.
Published by:Sushma Chakre
First published: