ಮಾರುತಿ ವ್ಯಾಗನಾರ್ ದೇಶದಲ್ಲಿ ಜನಪ್ರಿಯ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಬಹುತೇಕ ಎಲ್ಲಾ ಮಾರುತಿ ಸುಜುಕಿ ಕಾರುಗಳಂತೆಯೇ ವ್ಯಾಗನಾರ್ ಕೂಡ ಉತ್ತಮ ಮೈಲೇಜ್ನೊಂದಿಗೆ ಕಡಿಮೆ ನಿರ್ವಹಣೆಗೆ ಹೆಸರುವಾಸಿಯಾಗಿದೆ, ಅದಲ್ಲದೆ ಉತ್ತಮ ಸೇವೆಯೊಂದಿಗೆ ಕುಟುಂಬಗಳಿಗೆ ಪ್ರಯಾಣಿಸಲು ಅನುಕೂಲಕರವಾದ ಮೆಚ್ಚಿನ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದೀಗ ಅನಿಲ್ ಪಟೇಲ್ ಎಂಬ ವ್ಯಕ್ತಿ ವ್ಯಾಗನಾರ್ ಕಾರಿಗೆ (Maruti WagonR Car)ತಮ್ಮ ಕೈಚಳಕದ ಮೂಲಕ ನವೀನ ಮಾರ್ಪಾಡುಗಳನ್ನು ಮಾಡಿ ಇನ್ನಷ್ಟು ಆಕರ್ಷಕಗೊಳಿಸಿದ್ದು, ಹೆಲಿಕಾಪ್ಟರ್ ಕಾರನ್ನೇ (Helicopter Car) ನಿರ್ಮಿಸಿದ್ದಾರೆ. ವಿವಾಹ ಸಮಾರಂಭಗಳಿಗೆ ಬಾಡಿಗೆಗೆ ನೀಡುವ ಪ್ರಮುಖ ಉದ್ದೇಶದೊಂದಿಗೆ ಅನಿಲ್ ಈ ಕಸ್ಟಮೈಸ್ ಮಾಡಿದ ಹೆಲಿಕಾಪ್ಟರ್ ಕಾರನ್ನು ನಿರ್ಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢದ ಅನಿಲ್ ಪಟೇಲ್ ಎಂಬ ವ್ಯಕ್ತಿಯೊಬ್ಬರು ಮಾರುತಿ ವ್ಯಾಗನಾರ್ -ಆಧಾರಿತ ಹೆಲಿಕಾಪ್ಟರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಬಿಹಾರದಲ್ಲಿ ಇಂತಹದ್ದೇ ಹೆಲಿಕಾಪ್ಟರ್ ನಿರ್ಮಿಸಿದ ವರದಿಯಿಂದ ಅನಿಲ್ ಪ್ರೇರಣೆಗೊಂಡಿರುವುದಾಗಿ ತಿಳಿಸಿದ್ದಾರೆ.
ಮಾರುತಿ ವ್ಯಾಗನಾರ್-ಆಧಾರಿತ ಹೆಲಿಕಾಪ್ಟರ್
ದೇಹತಿ ಕ್ರಿಯೇಟರ್ ಯೂಟ್ಯೂಬ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅನನ್ಯವಾಗಿ ಕಸ್ಟಮೈಸ್ ಮಾಡಿರುವ ವ್ಯಾಗನಾರ್ನ ವಿವರವಾದ ವಿಶ್ಲೇಷಣೆಯನ್ನು ವೀಕ್ಷಕರಿಗೆ ಯೂಟ್ಯೂಬ್ನಲ್ಲಿ ನೀಡಿದ್ದಾರೆ.
ಚಿತ್ರಗಳಲ್ಲಿ ಕಾಣುವಂತೆ, ಹ್ಯಾಚ್ಬ್ಯಾಕ್ ಮೇಲೆ ಬೃಹತ್ ರೋಟರ್ ಬ್ಲೇಡ್ಗಳು ಕಾರ್ಯನಿರ್ವಹಿಸುತ್ತವೆ. ಅಲ್ಲದೆ, ಹಿಂಭಾಗದಲ್ಲಿ ಕಾಂಪ್ಯಾಕ್ಟ್ ಫ್ಯಾನ್ ಸಹ ಕಾರ್ಯನಿರ್ವಹಿಸುತ್ತದೆ. ಸ್ಟೀರಿಂಗ್ ಚಕ್ರದ ಬಲಭಾಗದಲ್ಲಿ ನಿಯಂತ್ರಣಗಳನ್ನು ಇರಿಸಲಾಗಿದೆ ಎಂದು ಅನಿಲ್ ತೋರಿಸಿದ್ದಾರೆ. ಛಾವಣಿಯ ಮೇಲೆ ರೋಟರ್ನ ವೇಗವನ್ನು ನಿಯಂತ್ರಿಸಲು ಸ್ವಿಚ್ಗಳು ಮತ್ತು ನಿಯಂತ್ರಕಗಳಿವೆ.
ಹೆಲಿಕಾಪ್ಟರ್ನಲ್ಲಿರುವ ಸಮಸ್ಯೆ ಏನು ಗೊತ್ತೇ?
ಹೆಲಿಕಾಪ್ಟರ್ ಅನ್ನೇ ಅನಿಲ್ ತಯಾರಿಸಿದ್ದು ನಿಜವಾದರೂ ಇದು ಹಾರುವುದಿಲ್ಲ. ಹೆಲಿಕಾಪ್ಟರ್ನಂತೆ ಕಾಣಲು ಬರೇ ಅದರ ವಿನ್ಯಾಸವನ್ನು ಅನುಕರಿಸಲಾಗಿದೆ. ಕಾರೇ ಹೆಲಿಕಾಪ್ಟರ್ನಂತೆ ಹಾರುತ್ತದೆ ಎಂಬುದು ಇಲ್ಲಿ ನಿಜವಲ್ಲ ಎಂದು ಅನಿಲ್ ತಿಳಿಸಿದ್ದಾರೆ.
ಇದನ್ನೂ ಓದಿ: Jod Gumbaz: ಹರಕೆ ಈಡೇರಲು ಬೀಗ ಲಾಕ್! ಇಷ್ಟಾರ್ಥ ಈಡೇರಿದ್ರೆ ಮಾತ್ರ ಅನ್ಲಾಕ್
ನಿರ್ಮಾಣದಲ್ಲಿರುವ ಕಲಾತ್ಮಕತೆ ಹಾಗೂ ಸೊಗಸು ಹಾಗೂ ಕಲಾವಿದನ ಕೈಚಳಕ ಇಲ್ಲಿ ಸುಂದರವಾಗಿ ಕಂಡುಬಂದಿದೆ. ಕಾರಿನ ಹೆಲಿಕಾಪ್ಟರ್ ರಸ್ತೆಯಲ್ಲಿ ಓಡಾಡಿತೆಂದರೆ ಅದನ್ನು ಕಣ್ತುಂಬಿಕೊಳ್ಳಲು ಅಷ್ಟೇ ಪ್ರಮಾಣದ ಜನರು ಸೇರುತ್ತಾರೆ ಎಂಬುದು ಅನಿಲ್ ಅಭಿಪ್ರಾಯವಾಗಿದೆ.
ರಾತ್ರಿ ಪ್ರಯಾಣಕ್ಕೂ ಅನುಕೂಲಕರ
ಕಾರಿನಲ್ಲಿ ಸಂಪೂರ್ಣವಾಗಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದ್ದು ರಾತ್ರಿವೇಳೆ ಪ್ರಯಾಣವು ಅನುಕೂಲಕರವಾಗಿದೆ ಎಂಬುದು ಅನಿಲ್ ಮಾತಾಗಿದೆ. ಮುಂಭಾಗದಲ್ಲಿ ಸಂಪೂರ್ಣ ವಿನ್ಯಾಸವನ್ನು ಬದಲಾಯಿಸಲಾಗಿದ್ದು ಬಂಪರ್ ಅನ್ನು ಸ್ಟ್ರೀಮ್ಲೈನ್ ಆಕಾರದಲ್ಲಿ ಮಾರ್ಪಡಿಸಲಾಗಿದೆ. ಇದಕ್ಕೆ ತಗುಲಿದ ಸಂಪೂರ್ಣ ವೆಚ್ಚ ಸುಮಾರು 3 ಲಕ್ಷ. ಮಾರ್ಪಾಡಿಗೆ ರೂ 2 ಲಕ್ಷ ಖರ್ಚಾಗಿದ್ದು ಬಳಸಿದ ಕಾರಿಗೆ ರೂ 1 ಲಕ್ಷ ವಿನಿಯೋಗಿಸಲಾಗಿದೆ ಎಂದು ಅನಿಲ್ ತಿಳಿಸಿದ್ದಾರೆ.
ಬಾಡಿಗೆಗೆ ಲಭ್ಯವಿದೆ
ಕಾರಿನ ತಯಾರಿಯನ್ನು ಬಾಡಿಗೆಗೆ ನೀಡುವ ಗುರಿಯೊಂದಿಗೆ ಮಾಡಲಾಗಿದೆ ಎಂಬುದು ಅನಿಲ್ ಅಭಿಪ್ರಾಯವಾಗಿದೆ. ಮುಖ್ಯವಾಗಿ ವಿವಾಹ ಕಾರ್ಯಕ್ರಮಗಳಿಗೆ ಈ ಕಾರನ್ನು ಬಾಡಿಗೆಗೆ ನೀಡುವುದು ತಮ್ಮ ಉದ್ದೇಶವಾಗಿದೆ ಎಂದು ಅನಿಲ್ ಹೇಳಿದ್ದಾರೆ.
ಹೆಲಿಕಾಪ್ಟರ್ನ ಬಾನೆಟ್ ಮೇಲೆ ಬರೆದಿರುವ ಶುಭ್ ವಿವಾಹ ಎಂಬ ಶೀರ್ಷಿಕೆಯು ಭಾರತೀಯ ವಿವಾಹ ಸಮಾರಂಭಗಳಿಗೆ ಬಾಡಿಗೆಗೆ ನೀಡುವ ಮೂಲಕ ಇದನ್ನು ನಿರ್ಮಿಸಲಾಗಿದೆ ಎಂಬ ಅಂಶವನ್ನು ಖಾತ್ರಿಪಡಿಸುತ್ತದೆ.
ಇದನ್ನೂ ಓದಿ: Bagalakote: ಕಾಯಿನ್ ಬಾಕ್ಸ್ ಆದ ಹೊಟ್ಟೆ! ವೈದ್ಯರಿಂದ 187 ನಾಣ್ಯಗಳು ಹೊರಕ್ಕೆ
ನೀಲಿ ಹಾಗೂ ಕೆಂಪು ಪಟ್ಟಿಗಳು ಹೆಲಿಕಾಪ್ಟರ್ ಕಾರಿನ ಸಂಪೂರ್ಣ ಆಕರ್ಷಣೆಗೆ ಇನ್ನಷ್ಟು ವೈವಿಧ್ಯತೆಯನ್ನು ಒದಗಿಸುತ್ತದೆ. ಅರುಣ್ ಇದರ ನಿರ್ಮಾಣಕ್ಕೆ 3 ತಿಂಗಳು ತೆಗೆದುಕೊಂಡಿದ್ದು ಈಗಾಗಲೇ ವಿವಾಹ ಸಮಾರಂಭಗಳಿಗೆ 10-15 ಬುಕ್ಕಿಂಗ್ಗಳನ್ನು ಪಡೆದುಕೊಂಡಿದ್ದಾರೆ. ಬಾಡಿಗೆಗೆ ಹೆಲಿಕಾಪ್ಟರ್ ಕಾರನ್ನು ನೀಡುವ ಅರುಣ್ ರೂ 10,000 ದಿಂದ ರೂ 15,000 ಶುಲ್ಕವಿಧಿಸುತ್ತಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ