Uttar Pradesh Election: ಸಮಾಜವಾದಿ & ಆಮ್ ಆದ್ಮಿ ಪಕ್ಷಗಳ ಮೈತ್ರಿ ಬಹುತೇಕ ಖಚಿತ

ಸಮಾಜವಾದಿ ಪಕ್ಷವು ಪೂರ್ವಾಂಚಲ ಉತ್ತರ ಪ್ರದೇಶದಲ್ಲಿ ಪ್ರಬಲವಾಗಿರುವ ಆರ್ ಎಲ್ ಡಿ ಮೈತ್ರಿ ಮಾಡಿಕೊಳ್ಳುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕೂಡ ಸಮಾಜವಾದಿ ಪಕ್ಷದ ಜೊತೆ ಸೇರಲು ಬಯಸಿದೆ.

ಅಖಿಲೇಶ್ ಯಾದವ್, ಸಂಜಯ್ ಸಿಂಗ್

ಅಖಿಲೇಶ್ ಯಾದವ್, ಸಂಜಯ್ ಸಿಂಗ್

  • Share this:
ನವದೆಹಲಿ: ಮುಂದಿನ‌ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections)  ಎಲ್ಲಾ ರಾಜಕೀಯ ಪಕ್ಷಗಳು ಅಣಿಯಾಗುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)‌ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಸನ್ನದ್ದವಾಗಿವೆ. ಸ್ಥಳೀಯ ಪಕ್ಷಗಳಾದ ಸಮಾಜವಾದಿ ಪಕ್ಷ (Samajavadi Party) ಹಾಗೂ ಬಹುಜನ‌ ಸಮಾಜ ಪಕ್ಷ (Bahujana Samaj Party) ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಸದ್ಯ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ (Aam Admi Party) ಮೈತ್ರಿ ಆಗುವುದು ಬಹುತೇಕ ಖಚಿತವಾಗಿದೆ.

ಎಸ್​ಪಿ-ಆಪ್​​ ಮೈತ್ರಿ : ಬುಧವಾರ ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಮತ್ತು ಆಮ್ ಆದ್ಮಿ ಪಕ್ಷದ‌ ರಾಜ್ಯಸಭಾ ಸದಸ್ಯ ಹಾಗೂ ಉತ್ತರ ಪ್ರದೇಶದ ಉಸ್ತುವಾರಿಯೂ ಆಗಿರುವ ಸಂಜಯ್ ಸಿಂಗ್ (Sanjay Sing) ಭೇಟಿಯಾಗಿ ಮೈತ್ರಿ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಂಜಯ್ ಸಿಂಗ್, ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಮೊದಲ ಆದ್ಯತೆ. ಬಿಜೆಪಿ ದುರಾಡಳಿತದಿಂದ ಉತ್ತರ ಪ್ರದೇಶವನ್ನು ಮುಕ್ತಿಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಮಾಲೋಚನೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಈ ಮೂಲಕ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಿಕೊಳ್ಳಲಿವೆ ಎಂಬ‌ ಸುಳಿವು ನೀಡಿದ್ದಾರೆ.

ಮೈತ್ರಿ ಮಾತುಕತೆಗಳು ಶುರು:  ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಸಮಾಜವಾದಿ ಪಕ್ಷವು ಪೂರ್ವಾಂಚಲ ಉತ್ತರ ಪ್ರದೇಶದಲ್ಲಿ ಪ್ರಬಲವಾಗಿರುವ ರಾಷ್ಟ್ರೀಯ ಲೋಕದಳ (Rastriya Lokadala) ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಮೂಲಗಳ ಪ್ರಕಾರ ಈಗಾಗಲೇ ರಾಷ್ಟ್ರೀಯ ಲೋಕದಳ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ (Jayanth Chowdari) ಮತ್ತು ಅಖಿಲೇಶ್ ಯಾದವ್ ಮಾತುಕತೆ ನಡೆಸಿದ್ದಾರೆ ಮತ್ತು ಪೂರ್ವಾಂಚಲ ಭಾಗದಲ್ಲಿ ರಾಷ್ಟ್ರೀಯ ಲೋಕದಳಕ್ಕೆ 36 ಸ್ಥಾನಗಳನ್ನು ಬಿಟ್ಟುಕೊಡುವ ಒಪ್ಪಂದವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಈಗ ಸಮಾಜವಾದಿ ಪಕ್ಷ ಮತ್ತು ಆಮ್ ಆದ್ಮಿ ಪಕ್ಷಗಳ ನಡುವಿವ ಮೈತ್ರಿಯ ಮಾತುಕತೆಗಳು ಶುರುವಾಗಿವೆ.

ಇದನ್ನೂ ಓದಿ: Gautam Gambhir: ಗೌತಮ್​ ಗಂಭೀರ್​ಗೆ ಐಸಿಸ್​ ಉಗ್ರರಿಂದ ಜೀವ ಬೆದರಿಕೆ

ಇದಲ್ಲದೆ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (SBSP) ಈ ಬಾರಿ ಸಮಾಜವಾದಿ ಪಕ್ಷದ ತೆಕ್ಕೆಗೆ ಬಂದಿದೆ. ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಜೊತೆಗಿದ್ದ ಭಾಗಿದರಿ ಸಂಕಲ್ಪ್ ಮೋರ್ಚಾ ಮತ್ತು ರಾಜ್‌ಭರ್ ನೇತೃತ್ವದ ಸಣ್ಣ ಪಕ್ಷಗಳ ಗುಂಪು ಎಸ್‌ಪಿ ಮೈತ್ರಿಕೂಟದೆಡೆಗೆ ಬರುತ್ತಿವೆ.

ದೆಹಲಿ ಮಾದರಿ ಯುಪಿಯಲ್ಲಿ ವರ್ಕೌಟ್​ ಆಗುತ್ತಾ? : ಈಗ ದೆಹಲಿಗೆ ಸಮೀಪ ಇರುವ ನೋಯ್ಡಾ (Noida), ಆಗ್ರಾ (Agra), ಉತ್ತರ ಪ್ರದೇಶ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಅಯೋಧ್ಯೆ (Ayodya), ರಾಜಧಾನಿ ಲಕ್ನೋ (Lakhnow) ಮತ್ತಿತರ ಪ್ರದೇಶಗಳಲ್ಲಿ ಆಮ್‌ ಆದ್ಮಿ ಪಕ್ಷ ತಿರಂಗ ಯಾತ್ರೆಗಳನ್ನು ಕೈಗೊಂಡಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೆಹಲಿ ಮಾದರಿಯಲ್ಲಿ 300 ಯೂನಿಟ್‌ವರೆಗೆ ಗೃಹ ಬಳಕೆ ವಿದ್ಯುತ್‌‌ಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಘೋಷಿಸಿದೆ. ಪ್ರಚಾರದಲ್ಲಿ ಮುಂದಿರುವ ಕಾರಣಕ್ಕೆ ಆಮ್ ಆದ್ಮಿ ಪಕ್ಷವನ್ನು ಸಮಾಜವಾದಿ ಪಕ್ಷ ಗಂಭೀರವಾಗಿ ಪರಿಗಣಿಸಿ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ಕಾಂಗ್ರೆಸ್ (Congress) ಈಗಾಗಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದಕ್ಕೂ ಸಿದ್ದತೆ ನಡೆಸಿದೆ. ಶೇಕಡಾ ‌40ರಷ್ಟು ಟಿಕೆಟ್ ಗಳನ್ನು ಮಹಿಳೆಯರಿಗೆ ನೀಡಲು ಮುಂದಾಗಿದೆ. ಅದಲ್ಲದೆ ಈಗ ಉತ್ತರ ಪ್ರದೇಶದ ಎಲ್ಲಾ 403 ಕ್ಷೇತ್ರಗಳಲ್ಲೂ ತನ್ನ ಹುರಿಯಾಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಕಾಂಗ್ರೆಸ್ ಪರವಾದ ಅಲೆ ಸೃಷ್ಟಿ ಮಾಡಲು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh In charge and AICC General Secretary Priyanka Gandhi) ರಾಜ್ಯಾದ್ಯಂತ ಪ್ರತಿಜ್ಞಾ ಯಾತ್ರೆ (Pratijna Yatra) ಹಮ್ಮಿಕೊಂಡಿದ್ದಾರೆ. ಮುಂದೆ ಕಾಂಗ್ರೆಸ್ ಕೂಡ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡರೆ ಅಚ್ಚರಿ ಪಡುವಂತಿಲ್ಲ. 2017ರಲ್ಲಿ ಕಾಂಗ್ರೆಸ್,‌ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿ ಆಗಿತ್ತು.
Published by:Kavya V
First published: