ದೇಶದಲ್ಲಿ ಕೊರೊನಾ(Coronavirus) ಹೊಸ ರೂಪಾಂತರಿ ಓಮಿಕ್ರಾನ್ (Omicron)ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹೊಸ ರೂಪಾಂತರಿ ಜನರನ್ನು ಭಯ ಬೀಳಿಸಿರುವುದಂತೂ ಸತ್ಯ, ಆದರೆ ವೈದ್ಯರೊಬ್ಬರು ಓಮಿಕ್ರಾನ್ ಎಲ್ಲರನ್ನು ಸಾಯಿಸುತ್ತದೆ ಎಂದು ಹೆದರಿ ಹೆಂಡತಿ ಮಕ್ಕಳನ್ನು ಕೊಂದು ತಾನೂ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ(Uttar Pradesh) ನಡೆದಿದೆ. ಉತ್ತರಪ್ರದೇಶದ ಕಾನ್ಪುರದ ಇಂದಿರಾ ನಗರ ಬಡಾವಣೆಯಲ್ಲಿ ಈ ರೀತಿ ವಿಲಕ್ಷಣ ಘಟನೆ ನಡೆದಿದೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೋಫೆಸರ್ ಹಾಗೂ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾಕ್ಟರ್ ಸುಶೀಲ್ ಕುಮಾರ್ ಓಮಿಕ್ರಾನ್ ನಿಂದ ತೀವ್ರ ಆತಂಕಕ್ಕೆ ಒಳಗಾಗಿ ಈ ಕೃತ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸೋಂಕು ಕುಟುಂಬದವರನ್ನು ಬಿಡುವುದಿಲ್ಲ ಎಂಬ ಭಯದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಲೆ ಮಾಡಿ ವೈದ್ಯ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಕೊಲೆ ನಡೆದ ಸ್ಥಳದಲ್ಲಿ ವೈದ್ಯರಿಗೆ ಸಂಬಂಧಪಟ್ಟ ಡೈರಿ ಸಿಕ್ಕಿದ್ದು, ಅದರಲ್ಲಿ ಓಮಿಕ್ರಾನ್ ರೂಪಾಂತರಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ನನ್ನ ನಿರ್ಲಕ್ಷ್ಯದಿಂದ ಎಲ್ಲರನ್ನು ಬಲಿ ಪಡೆದುಕೊಳ್ಳುತ್ತದೆ, ತಪ್ಪಿಕೊಳ್ಳಲು ಕಷ್ಟವಾಗಿರುವ ರೀತಿ ನಾನು ಸಿಲುಕಿಕೊಂಡಿದ್ದೇನೆ ಎಂದು ಬರೆದಿದ್ದಾರೆ. ಅಲ್ಲದೇ ತಾನೂ ಸಾಯುವ ಸೂಚನೆ ನೀಡಿದ್ದಾರೆ.
ಅಲ್ಲದೇ ವೈದ್ಯರು ಹಲವು ವರ್ಷಗಳಿಂದ ಖಿನ್ನತೆಗೆ ಜಾರಿದ್ದರು ಎಂದು ತಿಳಿದು ಬಂದಿದ್ದು, ವೈದ್ಯರ ಹೆಸರು ಸುಶೀಲ್ ಕುಮಾರ್ ಎನ್ನಲಾಗಿದೆ. ಆರೋಪಿ 48 ವರ್ಷದ ಪತ್ನಿ, 18 ವರ್ಷದ ಮಗ ಮತ್ತು 15 ವರ್ಷದ ಮಗಳನ್ನ ಕೊಲೆ ಮಾಡಿದ್ದಾರೆ, ಬಳಿಕ ಸಹೋದರಿಗೆ ಮೆಸೇಜ್ ಮಾಡಿ ಪೊಲೀಸರಿಗೆ ಕಾಲ್ ಮಾಡು ಎಂದಿದ್ದಾರೆ, ಆದರೆ ಸಹೋದರ ಮತ್ತು ಪೋಲೀಸ್ ಸ್ಥಳಕ್ಕೆ ಬರುವ ಮುನ್ನ ಸುಶೀಲ್ ಅಲ್ಲಿಂದ ಪರಾರಿಯಾಗಿದ್ದಾರೆ. ಪತ್ನಿ ಚಂದ್ರಪ್ರಭ, ಮಗಳು ಖುಷಿ ಸಿಂಗ್, ಮಗ ಶಿಖರ್ ಸಿಂಗ್ ವೈದ್ಯನ ಈ ದುಷ್ಕೃತ್ಯಕ್ಕೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಹೊಸ ರೂಪಾಂತರಿ ಸೋಂಕು ಪತ್ತೆ- ದೇಶದಲ್ಲಿ 21ಕ್ಕೆ ಏರಿಕೆಯಾದ ಪ್ರಕರಣಗಳ ಸಂಖ್ಯೆ
ಡೈರಿಯಲ್ಲಿ ಆತಂಕ ಬಿಚ್ಚಿಟ್ಟ ವೈದ್ಯ
ಅಲ್ಲದೇ ಡೈರಿಯಲ್ಲಿ ತಾನು ಗುಣಪಡಿಸಲಾಗದ ರೋಗದಿಂದ ಬಳಲುತ್ತಿದ್ದು, ತನ್ನ ಕುಟುಂಬವನ್ನು ತೊಂದರೆಯಲ್ಲಿ ಬಿಡಲು ಸಾಧ್ಯವಿಲ್ಲ, ಹಾಗಾಗಿ ಪ್ರತಿಯೊಬ್ಬರನ್ನು ವಿಮೋಚನೆಯ ಹಾದಿಯಲ್ಲಿ ಇರಿಸುವುದಾಗಿ ಡೈರಿಯಲ್ಲಿ ಬರೆದಿದ್ದಾರೆ.
ಅಲ್ಲದೇ ಡೈರಿಯಲ್ಲಿ ತಾನೂ ಸಾಯುವುದಾಗಿ ಬರೆದಿರುವುದರಿಂದ ಪೊಲೀಸರು ಪ್ರಾಥಮಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪರಿಗಣಿಸಿ ತನಿಖೆ ಮುಂದುವರೆಸಿದ್ದಾರೆ.
ವೈದ್ಯನೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಇದನ್ನೂ ಓದಿ: ಕೊರೊನಾ 3ನೇ ಅಲೆ ಬರುತ್ತೆ ಹುಷಾರು ಎಂದು ವಿಜ್ಞಾನಿಗಳು
ಕೊಲೆ ಮಾಡಿದ ನಂತರ ವೈದ್ಯ ಕೂಡ ನೀರಿನಲ್ಲಿ ಮುಳುಗಿಯೋ ಅಥವಾ ಇನ್ನಾವುದ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಗಂಗಾ ನದಿಯಲ್ಲಿ ವೈದ್ಯರ ಮೃತದೇಹಕ್ಕೆ ತಜ್ಞರು ಶೋಧ ನಡೆಸುತ್ತಿದ್ದು, ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ