• Home
  • »
  • News
  • »
  • national-international
  • »
  • Dalit Family Marriage: ದಲಿತ ಜೋಡಿಯ ಅದ್ಧೂರಿ ಮದುವೆ ಮೆರವಣಿಗೆ ಮಾಡೋಕೆ ಪೊಲೀಸರೇ ಬರಬೇಕಾಯ್ತು!

Dalit Family Marriage: ದಲಿತ ಜೋಡಿಯ ಅದ್ಧೂರಿ ಮದುವೆ ಮೆರವಣಿಗೆ ಮಾಡೋಕೆ ಪೊಲೀಸರೇ ಬರಬೇಕಾಯ್ತು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕುಟುಂಬದ ವಿನಂತಿ ಮೇರೆಗೆ ಪೊಲೀಸ್‌ ಪಡೆಯೇ ಬಂದು ದಲಿತ ಜೋಡಿಯ ವಿವಾಹದ ಮೆರವಣಿಗೆಗೆ ರಕ್ಷಣೆ ನೀಡಿ ಸಾಥ್‌ ನೀಡಿದರು.

  • Share this:

ಲಕ್ನೋ: ಚಂದ್ರನ ಮೇಲೆ ಕಾಲಿಟ್ಟಿದ್ದಾಯ್ತು, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮೈಲಿಗಲ್ಲುಗಳು ಸೃಷ್ಟಿಯಾಗುತ್ತಲೇ ಇವೆ. ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಹೀಗೆ ಸಾಲು ಸಾಲು ಕ್ಷೇತ್ರದಲ್ಲಿ ಜಗತ್ತು ಮುಂದೆ ಸಾಗುತ್ತಿದ್ದರೂ ಸಹ ಈ ಜಾತಿಯನ್ನು ಮಾತ್ರ ತೆಗೆದುಹಾಕಲು ಸಾಧ್ಯವಾಗುತ್ತಿಲ್ಲ ಎನ್ನಬಹುದು. ದೇವಸ್ಥಾನಕ್ಕೆ (Temple) ಬಂದ ದಲಿತನ (Dalit Family) ಮೇಲೆ ಹಲ್ಲೆ, ನೀರು ಮುಟ್ಟಿದ ದಲಿತನಿಗೆ ಥಳಿತ ಹೀಗೆ ಜಾತಿನಿಂದನೆಯ ಹಲವಾರು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಿರುತ್ತವೆ. ದಲಿತರಿಗೆ ಏಕೆ ಈ ತಾರತಮ್ಯ, ಅವರಿಗೇಕೆ ಈ ಕೀಳರಿಮೆ ಅನ್ನೋದೆ ಒಂದು ಯಕ್ಷಪ್ರಶ್ನೆಯಾಗಿ ಇಂದಿಗೂ ಕಾಡುತ್ತಿರುವುದು ದುರದೃಷ್ಟಕರ.


ಸದ್ಯ ದಲಿತರ ಸಮಾರಂಭಗಳಿಗೆ ಅಡ್ಡಪಡಿಸಲಾಗುತ್ತದೆ ಎಂದು ಹೇಳಲಾಗುವ ಒಂದು ಊರಿನಲ್ಲಿ ದಲಿತ ಜೋಡಿಯೊಂದರ ಅದ್ಧೂರಿ ಮದುವೆ ನಡೆದಿದೆ ನೋಡಿ. ಭರ್ಜರಿ ಪೊಲೀಸ್‌ ಪ್ರೊಟೆಕ್ಷನ್‌ನೊಂದಿಗೆ ದಲಿತ ಜೋಡಿಗಳ ಮದುವೆ ಭರ್ಜರಿಯಾಗಿ ನಡೆದಿದೆ.


ದಲಿತ ಜೋಡಿಗಳ ಅದ್ಧೂರಿ ಮದುವೆ ಮೆರವಣಿಗೆ
ಉತ್ತರಪ್ರದೇಶದಲ್ಲಿ ಬರೇಲಿಯ ಗುನ್ನೌರ್ ಪ್ರದೇಶದ ಲೋಹಮಾಯಿ ಗ್ರಾಮದಲ್ಲಿ ದಲಿತರ ವಿವಾಹದ ಮೆರವಣಿಗೆಗಳ ಮೇಲೆ ಕೆಲವು ಮೇಲ್ಜಾತಿ ಪುರುಷರು ನಿರ್ಬಂಧಗಳನ್ನು ಹೇರಿದ್ದರು. ಹೀಗಾಗಿ ಆ ನವಜೋಡಿ ಒಂದಕ್ಕೆ ಮೆರವಣಿಗೆ ಹೋಗುವುದು ಒಂದು ಸವಾಲಾಗಿತ್ತು. ಇದಕ್ಕಾಗಿ ವಧು ಕುಟುಂಬ ಪೊಲೀಸರ ಮೊರೆ ಹೋಗಿತ್ತು. ಕುಟುಂಬದ ವಿನಂತಿ ಮೇರೆಗೆ ಪೊಲೀಸ್‌ ಪಡೆಯೇ ಬಂದು ದಲಿತ ಜೋಡಿಯ ವಿವಾಹದ ಮೆರವಣಿಗೆಗೆ ರಕ್ಷಣೆ ನೀಡಿ ಸಾಥ್‌ ನೀಡಿದರು.


ಮಾನವೀಯತೆ ಮೆರೆದ ಪೊಲೀಸರು
ಪೊಲೀಸರು ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆ ಮಾನವೀಯತೆಯನ್ನು ಸಹ ಪರಿಗಣಿಸುತ್ತಾರೆ ಅನ್ನೋದಕ್ಕೆ ಇದೆ ಸಾಕ್ಷಿ. ದಲಿತರಿಗೆ ಕಾನೂನು ರೀತಿಯಲ್ಲಿ ಭದ್ರತೆ ನೀಡಿದ್ದು ಅಲ್ಲದೇ ಅವರ ಸಂಭ್ರಮದಲ್ಲಿ ಇವರು ಕೂಡ ಭಾಗಿಯಾಗಿ ಸಂಭ್ರಮಿಸಿದರು. ಮತ್ತು ವಧು-ವರರಿಗೆ ಉಡುಗೊರೆ ಸಹ ನೀಡಿದ್ದಾರೆ.


44 ಕಾನ್‌ಸ್ಟೆಬಲ್‌, 14 ಸಬ್ ಇನ್‌ಸ್ಪೆಕ್ಟರ್‌, ಓರ್ವ ಇನ್ಸ್‌ಪೆಕ್ಟರ್ ಸೇರಿ ಭಾರಿ ಭದ್ರತೆ
44 ಕಾನ್‌ಸ್ಟೇಬಲ್‌ಗಳು, 14 ಸಬ್ ಇನ್‌ಸ್ಪೆಕ್ಟರ್‌ಗಳು, ಒಬ್ಬ ಇನ್ಸ್‌ಪೆಕ್ಟರ್ ಮತ್ತು ಸರ್ಕಲ್ ಆಫೀಸರ್ ಗ್ರಾಮದಲ್ಲಿ ನಡೆದ ದಲಿತರ ವಿವಾಹ ಸಮಾರಂಭದಲ್ಲಿ ವಧುವಿನ ಕುಟುಂಬದ ಆಸೆಯನ್ನು ಪೂರೈಸಿದರು. 21 ವರ್ಷದ ರವಿನಾ, ತನ್ನ ಪತಿಯಾಗಲಿರುವ ರಾಮ್ ಕಿಶನ್, ಕುದುರೆಯ ಮೇಲೆ ಸವಾರಿ ಮಾಡುವುದನ್ನು ನೋಡಲು ಬಯಸಿದ್ದಳು. ಆದರೆ ಊರಿನ ಮೆಲ್ಜಾತಿಯವರು ನಿಷೇಧ ಹೇರಿದ್ದ ಕಾರಣ ಇದು ಕಷ್ಟವಾಗಿತ್ತು. ಇದಕ್ಕಾಗಿ ರವಿನಾ ಕುಟುಂಬ ಪೊಲೀಸರಿಗೆ ವಿಷಯ ತಿಳಿಸಿ ಅವರ ಸಹಕಾರದೊಂದಿಗೆ ಮದುವೆ ಮೆರವಣಿಗೆ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ.


ಇದನ್ನೂ ಓದಿ: Uttar Pradesh: ಭೀಕರ ಅಗ್ನಿ ಅವಘಡ, ಒಂದೇ ಕುಟುಂಬದ 6 ಜನರು ಸಜೀವ ದಹನ!


ನವಜೋಡಿಗೆ 11 ಸಾವಿರ ರೂ.ಗಳ ಉಡುಗೊರೆ
ಗುನ್ನೌರ್ ಪ್ರದೇಶದ ಲೋಹಮಾಯಿ ಗ್ರಾಮದಲ್ಲಿ ನಡೆದ ವಿವಾಹಕ್ಕೆ ಯುಪಿ ಪೊಲೀಸರಿಂದ ಭಾರೀ ಭದ್ರತೆಯ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕುಟುಂಬದವರ ಮನವಿಯ ನಂತರ, ಎಸ್ಪಿ ಚಕ್ರೇಶ್ ಮಿಶ್ರಾ ಅವರು ಶುಕ್ರವಾರ ರಾತ್ರಿ ಸುಗಮ ವಿವಾಹವನ್ನು ಖಚಿತಪಡಿಸಿಕೊಳ್ಳಲು ಹತ್ತಿರದ ಪೊಲೀಸ್ ಠಾಣೆಗಳಿಂದ ಭಾರಿ ಪಡೆಯನ್ನು ಅಲ್ಲಿಗೆ ಕಳುಹಿಸಿಕೊಟ್ಟರು.


44 ಕಾನ್‌ಸ್ಟೆಬಲ್‌ಗಳು, 14 ಸಬ್ ಇನ್‌ಸ್ಪೆಕ್ಟರ್‌ಗಳು, ಒಬ್ಬ ಇನ್ಸ್‌ಪೆಕ್ಟರ್ ಮತ್ತು ಸರ್ಕಲ್ ಆಫೀಸರ್ ಗ್ರಾಮದಲ್ಲಿ ವಿವಾಹಿತ ಜೋಡಿಗೆ ಭದ್ರತೆ ನೀಡಿ ಸಮಾರಂಭವನ್ನು ಚೆಂದಗೊಳಿಸಿದರು. ಅಷ್ಟೇ ಅಲ್ಲ ನವಜೋಡಿಗೆ ಉಡುಗೊರೆಯಾಗಿ 11 ಸಾವಿರ ರೂಗಳನ್ನು ಸಹ ನೀಡಿದ್ದಾರೆ.


ಇದನ್ನೂ ಓದಿ: Helicopter Car: ಮಾರುತಿ ವ್ಯಾಗನಾರ್‌ಗೆ ಹೆಲಿಕಾಪ್ಟರ್ ಲುಕ್! ಈ ಕಾರು ನಿಜವಾಗಿಯೂ ಹಾರುತ್ತಾ?


ಇದಕ್ಕೂ ಮುನ್ನ ರವಿನಾ ಅವರ ಚಿಕ್ಕಪ್ಪ ರಾಜೇಂದ್ರ ವಾಲ್ಮೀಕಿ ಅವರು ಅಕ್ಟೋಬರ್ 31 ರಂದು ಸಂಭಾಲ್ ಡಿಎಂ ಮನೀಶ್ ಬನ್ಸಾಲ್ ಅವರಿಗೆ ಅರ್ಜಿಯನ್ನು ಸಲ್ಲಿಸಿದರು, “ನವೆಂಬರ್ 25 ರಂದು ದಲಿತ ಸಮುದಾಯದವರಿಗೆ ಡಿಜೆ ಮತ್ತು ಕುದುರೆಯೊಂದಿಗೆ ಮದುವೆ ಮೆರವಣಿಗೆ ನಡೆಸಲು ಕೆಲವು ಮೇಲ್ಜಾತಿ ಪುರುಷರು ಅನುಮತಿಸುವುದಿಲ್ಲ ಮತ್ತು ನಮಗೆ ಭದ್ರತೆ ಬೇಕು" ಎಂದು ಪತ್ರದ ಮುಖೇನ ತಿಳಿಸಿದ್ದರು.


ಖಾಕಿ ಪಡೆಗೆ ಕೃತಜ್ಞತೆ
ಯುಪಿ ಪೊಲೀಸರ ಬೆಂಬಲವನ್ನು ಶ್ಲಾಘಿಸಿದ ವಧುವಿನ ತಾಯಿ ಊರ್ಮಿಳಾ ವಾಲ್ಮೀಕಿ, “ನನ್ನ ಮಗಳು ತುಂಬಾ ಸಂತೋಷವಾಗಿದ್ದಾಳೆ. ಆಕೆಯ ಕನಸನ್ನು ಪೊಲೀಸರು ನನಸು ಮಾಡಿದ್ದಾರೆ. ಅವರಿಗೆ ನಾವು ಆಭಾರಿಯಾಗಿದ್ದೇವೆ" ಎಂದು ಖಾಕಿ ಪಡೆಗೆ ಧನ್ಯವಾದ ತಿಳಿಸಿದರು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು