• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Shocking News: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಪಾರಾಗಲು ರಸ್ತೆಯಲ್ಲಿ ಬೆತ್ತಲೆ ಓಡಿದ ವಿಡಿಯೋ ವೈರಲ್

Shocking News: 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಪಾರಾಗಲು ರಸ್ತೆಯಲ್ಲಿ ಬೆತ್ತಲೆ ಓಡಿದ ವಿಡಿಯೋ ವೈರಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಬಾಲಕಿ ನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್ ನಡೆದಿದ್ದಾಳೆ.

  • Share this:

ಲಕ್ನೋ: ದೇಶವೇ ಬೆಚ್ಚಿ ಬೀಳುವಂತಹ ಅತ್ಯಂತ ಆಘಾತಕಾರಿ ದುರ್ಘಟನೆಯೊಂದು (Shocking News) ನಡೆದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 15 ವರ್ಷದ ಬಾಲಕಿಯ ಮೇಲೆ ಐವರು ಸಾಮೂಹಿಕ (Gang Rape In Uttar Pradesh) ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಸಂತೃಸ್ತ ಬಾಲಕಿ ರಸ್ತೆಯಲ್ಲಿ ನಗ್ನವಾಗಿ ನಡೆಯುವಂತೆ ಮಾಡಿದ್ದಾರೆ. ಈ ಘಟನೆ ನಡೆದ 15 ದಿನಗಳ ನಂತರ ವಿಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಡಿಯೋದಿಂದ ಶಾಕ್​ಗೆ ಒಳಗಾಗುವಂತಾಗಿದೆ. 30 ಸೆಕೆಂಡುಗಳ ವಿಡಿಯೋದಲ್ಲಿ, ಹುಡುಗಿ ರಸ್ತೆಯಲ್ಲಿ ನಗ್ನವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಬಾಲಕಿ ನಗ್ನ ಸ್ಥಿತಿಯಲ್ಲಿ ದುರುಳರಿಂದ ತಪ್ಪಿಸಿಕೊಳ್ಳಲು ರಸ್ತೆಯಲ್ಲಿ ಸುಮಾರು 2 ಕಿಲೋಮೀಟರ್ ಓಡಿದ್ದಾಳೆ.


ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿದ್ದು, ಘಟನೆ ಸೆಪ್ಟೆಂಬರ್ 1 ರಂದು ನಡೆದಿದೆ ಎಂದು ಹೇಳಲಾಗುತ್ತಿದೆ.



ಪೊಲೀಸರ ಪ್ರಕಾರ ಸೆಪ್ಟೆಂಬರ್ 1 ರಂದು ಭೋಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ತೆಯ ಕುಟುಂಬದ ಸದಸ್ಯರು ಸೆಪ್ಟೆಂಬರ್ 7 ರಂದು ನೀಡಿದ ದೂರಿನ ಆಧಾರದ ಮೇಲೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ.


ಹಳ್ಳಿಯ ಜಾತ್ರೆಗೆ ಹೋಗಿದ್ದಾಗ ಆಕೆಯನ್ನು ಐದು ಮಂದಿ ಸರದಿಯಲ್ಲಿ ಅತ್ಯಾಚಾರ ಮಾಡಲು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಗ್ರಾಮಸ್ಥರು ಧಾವಿಸುವ ವೇಳೆ ಪರಾರಿ
ಸಂತೃಸ್ತೆಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಿ ಐವರು ಆರೋಪಿಗಳು ಆಕೆಯ ಬಟ್ಟೆ ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದರು ಎಂದು ವರದಿಯಾಗಿದೆ.


ಇದನ್ನೂ ಓದಿ: Lumpy Disease: ಹಿಮಾಚಲದಲ್ಲಿ ಲಂಪಿ ಅಟ್ಟಹಾಸ, ಈವರೆಗೆ 4,567 ಹಸುಗಳ ಮಾರಣಹೋಮ, 83,790 ಪಶುಗಳಿಗೆ ಸೋಂಕು!


ನಂತರ ಸಂತೃಸ್ತ ಬಾಲಕಿ ಮನೆಗೆ ತಲುಪಲು ಮೊರಾದಾಬಾದ್-ಠಾಕುರ್ದ್ವಾರ ರಸ್ತೆಯಲ್ಲಿ ಸುಮಾರು 2 ಕಿ.ಮೀ ನಡೆದುಕೊಂಡು ಹೋಗಿದ್ದಾಳೆ ಎಂದು ವರದಿಯಾಗಿದೆ.


ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ಕಂಡುಬಂದಿಲ್ಲ
ಸೆಕ್ಷನ್ 376ಡಿ (ಗ್ಯಾಂಗ್ರೇಪ್) ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

top videos


    ಸಂತೃಸ್ತೆಯಿಂದ ಅತ್ಯಾಚಾರ ನಿರಾಕರಣೆ?
    ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ, ಸಂತ್ರಸ್ತೆ ಮತ್ತು ಆಕೆಯ ಪೋಷಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಿರಾಕರಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸಂದೀಪ್ ಕುಮಾರ್ ಮೀನಾ ತಿಳಿಸಿದ್ದಾರೆ.

    First published: