Photo Viral: ಪ್ಲಾಸ್ಟಿಕ್ ಚೇರ್, ಬಿದಿರಿನ ಬುಟ್ಟಿಯಿಂದ ಸಸ್ಪೆಂಡ್ ಆದ ಪೋಲೀಸ್ !

Cops suspended: ಎಲ್ಲಾ ಜಿಲ್ಲೆಗಳಲ್ಲಿ ಗಲಭೆ ನಡೆಯದಂತೆ ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿತ್ತು. ಉನ್ನಾವೋದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿತ್ತು. ಆದ ಕಾರಣ ಸಾಕಷ್ಟು ಪೊಲೀಸರನ್ನು ಅಲ್ಲಿಗೆ ನಿಯೋಜಿಸಲಾಗಿತ್ತು.

ಉನ್ನಾವ್ ಪೊಲೀಸರು,

ಉನ್ನಾವ್ ಪೊಲೀಸರು,

  • Share this:

ಜನ ಸಮೂಹದ ಗಲಭೆಯನ್ನು ತಡೆಯಲು ಪ್ಲಾಸ್ಟಿಕ್ ಕುರ್ಚಿ ಮತ್ತು ವಿಕರ್ ಬುಟ್ಟಿಯನ್ನು ರಕ್ಷಣಾತ್ಮಕ ಸಾಧನವಾಗಿ ಬಳಸಿದ ಮೂವರು ಉತ್ತರಪ್ರದೇಶದ ಉನ್ನಾವ್ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.ರಸ್ತೆಯಲ್ಲಿ ಪೊಲೀಸರೊಬ್ಬರು ತಲೆಯ ಮೇಲೆ ಪ್ಲಾಸ್ಟಿಕ್ ಕುರ್ಚಿ ಮತ್ತು ಮತ್ತೊರ್ವ ಪೊಲೀಸ್ ವಿಕರ್ ಬುಟ್ಟಿಯನ್ನು ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ವೈರಲ್ ಆಗುತ್ತಿದ್ದಂತೆ ಉನ್ನಾವ್‍ನ ಎಸ್‍ಎಚ್‍ಒ ಮತ್ತು ಇತರ ಮೂವರು ಪೊಲೀಸರನ್ನು ಅಮಾನತುಗೊಳಿಸಿದ್ದಾರೆ.


ಈ ಫೋಟೋ ಗಮನಿಸಿದ ಲಕ್ನೋದ ಐಜಿ ಲಕ್ಷ್ಮೀ ಸಿಂಗ್ ಎಂಬುವವರು ಎಸ್‍ಎಚ್‍ಒ ದಿನೇಶ್ ಚಂದ್ರ ಮಿಶ್ರಾ ಹಾಗೂ ಮೂವರು ಪೊಲೀಸರನ್ನು ಅಜಾಗರೂಕತೆ, ಅಸಮರ್ಥತೆ ಮತ್ತು ವೃತ್ತಿಪರ ರಹಿತತೆ ಆಧಾರದ ಮೇಲೆ ಅಮಾನತಿನ ಆದೇಶ ಹೊರಡಿಸಿದ್ದಾರೆ.


ಎಲ್ಲಾ ಜಿಲ್ಲೆಗಳಲ್ಲಿ ಗಲಭೆ ನಡೆಯದಂತೆ ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳಿಗೆ ಆದೇಶ ಹೊರಡಿಸಲಾಗಿತ್ತು. ಉನ್ನಾವೋದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿತ್ತು. ಆದ ಕಾರಣ ಸಾಕಷ್ಟು ಪೊಲೀಸರನ್ನು ಅಲ್ಲಿಗೆ ನಿಯೋಜಿಸಲಾಗಿತ್ತು. ಆದರೆ ಗಲಭೆ ನಿಯಂತ್ರಣ ವೇಳೆ ಪೊಲೀಸರು ತಲೆಯ ಮೇಲೆ ಪ್ಲಾಸ್ಟಿಕ್ ಕುರ್ಚಿ ಮತ್ತು ವಿಕರ್ ಬುಟ್ಟಿ ಇಟ್ಟುಕೊಂಡು ಕರ್ತವ್ಯ ನಿರ್ವಹಿಸಿರುವುದು ಕಂಡು ಬಂದಿತ್ತು. ಈ ಬಗ್ಗೆ ಡಿಜಿಪಿ ಅವರು ಎಸ್‍ಪಿಯಿಂದ ಸಂಪೂರ್ಣ ಮಾಹಿತಿ ಪಡೆದು ಅವರನ್ನು ಅಧಿಕಾರದಿಂದ ಅಮಾನತುಗೊಳಿಸಿದ್ದಾರೆ ಎಂದು ಯುಪಿ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.


ವೈರಲ್ ಫೋಟೋ


ಉತ್ತರ ಪ್ರದೇಶದ ಉನ್ನಾವ್‍ನಲ್ಲಿ ಗಲಭೆ ಉಂಟಾಗಿತ್ತು. ಆಗ ಪೊಲೀಸರ ಮೇಲೆ ಕಲ್ಲು ತೂರಾಟವೂ ನಡೆಯಿತು. ಇದರಿಂದ ರಕ್ಷಣೆ ಪಡೆಯಲು ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಪ್ಲಾಸ್ಟಿಕ್ ಕುರ್ಚಿ ಬಳಸಿದ್ದಾರೆ. ಆದರೆ ಇದೀಗ ಉತ್ತರ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಲಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ.



ಏನಿದು ಘಟನೆ?


ದೇವಿ ಖೇಡಾ ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರು. ಆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ತದ ನಂತರ ಶವಗಳನ್ನು ದಹನಕ್ಕಾಗಿ ಕೊಂಡೊಯ್ಯುವ ನೆಪದಲ್ಲಿ, ಮೃತದೇಹ ಪಡೆದ ಕೆಲವರು ಅಪಘಾತದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ರಸ್ತೆಯಲ್ಲಿ ಇಟ್ಟುಕೊಂಡಿದ್ದರು. ಗ್ರಾಮಸ್ಥರು ಶೀಘ್ರದಲ್ಲೇ ಅಪಘಾತ ಸ್ಥಳದಲ್ಲೇ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಎಸ್‍ಡಿಎಂ ಮತ್ತು ಸರ್ಕಲ್ ಅಧಿಕಾರಿ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಕೆಲವರು ಮನೆಗೆ ಹೋಗಲು ನಿರಾಕರಿಸಿದರು. ಇನ್ನು ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲು ಪ್ರಯತ್ನಿಸಿದರು. ಆಗ ಪೊಲೀಸರು ಜನ ಸಮೂಹವನ್ನು ಚದುರಿಸಲು ಹರಸಾಹಸವೇ ಪಡಬೇಕಾಯಿತು.





ಈ ವೇಳೆ 40ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಇವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನಾವ್ ಎಸ್‍ಪಿ ಆನಂದ್ ಕುಲಕರ್ಣಿ ಘಟನೆಯ ವಿವರ ನೀಡಿದರು.


First published: