Congress Leader Wedding: ನಾಮಪತ್ರ ಸಲ್ಲಿಕೆಗೆ ಎರಡು ದಿನ ಮೊದಲೇ ಮದುವೆಯಾದ ಕಾಂಗ್ರೆಸ್ ನಾಯಕ!

ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್

ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್

ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲೇ ಮದುವೆಯಾದ ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್, ಕೇವಲ 45 ಗಂಟೆಗಳಲ್ಲಿ ಜೀವನ ಸಂಗಾತಿಯನ್ನು ಹುಡುಕಿದ್ದಾರೆ. ಆಕೆಯನ್ನೇ ಮದುವೆಯಾಗಿದ್ದಾರೆ.

  • News18 Kannada
  • 5-MIN READ
  • Last Updated :
  • Uttar Pradesh, India
  • Share this:

ಉತ್ತರ ಪ್ರದೇಶದ (Uttar Pradesh) ರಾಂಪುರದಲ್ಲಿ ಮುನ್ಸಿಪಲ್ ಚುನಾವಣೆಗೆ (Civic Body Polls) ಈಗಾಗಲೇ ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಹಾತೊರೆಯುತ್ತಿದ್ದಾರೆ. ಈ ಮಧ್ಯೆ ಆಸಕ್ತಿಕರ ಬೆಳವಣಿಗೆಯೊಂದು ನಡೆದಿದೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಯೊಬ್ಬರು ತಮಗೆ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ ನಾಮಪತ್ರ ಸಲ್ಲಿಕೆಗೆ ಎರಡು ದಿನಗಳ ಮೊದಲು ಮದುವೆಯಾಗಿದ್ದಾರೆ (Marriage). ಈ ಮೂಲಕ ಪತ್ನಿಯನ್ನು ಚುನಾವಣಾ ಕಣಕ್ಕಿಳಿಸಲಿದ್ದಾರೆ. ಈ ಸುದ್ದಿ ಈಗ ಸಖತ್ ವೈರಲ್ (Viral) ಆಗಿದೆ.


ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮೊದಲೇ ಮದುವೆಯಾಗುತ್ತಿರುವ ಈ ಪ್ರಬಲ ಟಿಕೆಟ್ ಆಕಾಂಕ್ಷಿ ಯಾರು?


ಹೌದು.. ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲೇ ಮದುವೆಯಾದವರು ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್. ಇವರು ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲು ಮದುವೆ ಆಗಲಿದ್ದಾರೆ. ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್, ಕೇವಲ 45 ಗಂಟೆಗಳಲ್ಲಿ ಜೀವನ ಸಂಗಾತಿಯನ್ನು ಹುಡುಕಿದ್ದಾರೆ. ಆಕೆಯನ್ನೇ ಮದುವೆಯಾಗಿದ್ದಾರೆ.


ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಮಪತ್ರ ಸಲ್ಲಿಕೆಗೆ ಎರಡು ದಿನ ಮೊದಲು ಮದುವೆ ಯಾಕೆ?


ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲು ಮದುವೆಯಾಗಿದ್ದಾರೆ ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್. ಯಾಕಂದ್ರೆ ಅವರು ಸ್ಪರ್ಧಿಸಲು ಮುಂದಾಗಿದ್ದ ಕ್ಷೇತ್ರವು ಮಹಿಳಾ ಅಭ್ಯರ್ಥಿಗೆ ಮೀಸಲಿದೆ. ಹೀಗಾಗಿ ಕಾಂಗ್ರೆಸ್ ನಾಯಕ ಮಾಮುನ್ ಶಾ, ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲು ಮದುವೆಯಾಗುವ ಮೂಲಕ ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸುವ ತಯಾರಿಯಲ್ಲಿದ್ದಾರೆ.
ಉತ್ತರ ಪ್ರದೇಶದ ರಾಂಪುರ ಪುರಸಭೆಯ ಸ್ಥಾನವು ಮಹಿಳೆಯರಿಗೆ ಮೀಸಲಿದೆ. ಹೀಗಾಗಿ ಕಾಂಗ್ರೆಸ್ ನಾಯಕ ಮಾಮುನ್ ಶಾ, ನಾಮಪತ್ರ ಸಲ್ಲಿಕೆಯ ಎರಡು ದಿನ ಮೊದಲು ಮದುವೆಯಾಗುವ ಮೂಲಕ ಪತ್ನಿಯನ್ನು ಚುನಾವಣಾ ಕಣಕ್ಕೆ ಇಳಿಸಲಿದ್ದಾರೆ. ಇನ್ನು ಈಗಾಗಲೇ ಮದುವೆ ಕಾರ್ಡ್ ಗಳನ್ನೂ ಮುದ್ರಿಸಲಾಗಿದೆ.


ಈಗಾಗಲೇ ಮದುವೆಯ ತಯಾರಿಯೂ ನಡೆದಿದೆ. ಒಂದು ಕಡೆ ಮದುವೆಯಾಗುವ ದಂಪತಿಯು ಮಾರನೇ ದಿನವೇ ನಾಮಪತ್ರ ಸಲ್ಲಿಕೆಗೆ ತೆರಳಲಿದ್ದಾರೆ. ವಧುವು ಚುನಾವಣೆಗೆ ಧುಮುಕಲಿದ್ದಾರೆ. ಪತ್ನಿ ಪರ ಮಾಮುನ್ ಶಾ ಚುನಾವಣಾ ಪ್ರಚಾರ ಮಾಡಲಿದ್ದಾರೆ.


ರಾಂಪುರದಲ್ಲಿ ಮಾಜಿ ನಗರಾಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡರಾಗಿರುವ ಮಾಮೂನ್ ಶಾ ಖಾನ್ ಅವರು ಕಳೆದ 25 ವರ್ಷಗಳಿಂದ ಪುರಸಭೆಯ ಚುನಾವಣೆಗೆ ಸಿದ್ಧತೆ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಮಹಿಳೆಗೆ ಸ್ಥಾನ ಮೀಸಲಾಗಿದೆ. ಹೀಗಾಗಿ ಮಾಮುನ್ ಶಾ ಖಾನ್, ಕೇವಲ 45 ಗಂಟೆಗಳಲ್ಲಿ ವಧು ಹುಡುಕಿದ್ದಾರೆ.


ಲಗ್ನ ಪತ್ರಿಕೆ


45 ಗಂಟೆಗಳಲ್ಲಿ ವಧುವನ್ನು ಹುಡುಕಿದ ಮಾಮುನ್ ಶಾ ಖಾನ್


ಎಲ್ಲಕ್ಕಿಂತ ಮೊದಲು ನಾಯಕ ಮಾಮುನ್ ಶಾ ಖಾನ್, ವಧುವನ್ನು ಪುರಸಭೆಯ ಅಧ್ಯಕ್ಷರ ಅಭ್ಯರ್ಥಿಯನ್ನಾಗಿ ಮಾಡುವಂತೆ ತಯಾರಿ ನಡೆಸಿದ್ದಾರೆ. ಸಭಾಪತಿಯಾಗುವ ಹಾಗೂ ಚುನಾವಣೆಗೆ ಸ್ಪರ್ಧಿಸುವ ಕನಸನ್ನು ನನಸಾಗಿಸಲು ಕಾಂಗ್ರೆಸ್ ನಾಯಕ ಮಾಮುನ್ ಶಾ ಖಾನ್, ಮದುವೆಯಾಗುವ ಮೂಲಕ ಪತ್ನಿಗೆ ಟಿಕೆಟ್ ಕೊಡಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಂಪುರದ ಅಂಗುರಿ ಬಾಗ್ ಪ್ರದೇಶದ ನಿವಾಸಿ ಶಾನಾ ಖಾನುಮ್ ಅವರನ್ನು ಮದುವೆಯಾಗಿದ್ದಾರೆ. ಏಪ್ರಿಲ್ 15 ರಂದು ರಾತ್ರಿ 10:30 ಕ್ಕೆ ಹಸಿನ್ ಮ್ಯಾರೇಜ್ ಹಾಲ್‌ ನಲ್ಲಿ ಮದುವೆ ನಡೆದಿದೆ.


ಇದನ್ನೂ ಓದಿ: BJP ನಾಯಕನ ಮಗಳು ಮುಸ್ಲಿಮರನ್ನ ಮದ್ವೆಯಾದ್ರೆ ಲವ್, ಬೇರೆಯವರಾದ್ರೆ ಜಿಹಾದ್! ಛತ್ತೀಸ್‌ಗಢ ಸಿಎಂ ವ್ಯಂಗ್ಯ


ರಾಂಪುರದಲ್ಲಿ ಪೌರ ಸಂಸ್ಥೆಗಳ ಚುನಾವಣೆಗೆ ನಾಮನಿರ್ದೇಶನಕ್ಕೆ ಏಪ್ರಿಲ್ 17 ಕೊನೆಯ ದಿನಾಂಕ. ಕಾಂಗ್ರೆಸ್ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಮದುವೆಗೆ ಆಹ್ವಾನಿಸಿದ್ದಾರೆ. ನಾಯಕನ ಮದುವೆಯ ಕಾರ್ಡ್ ಗಳನ್ನೂ ಪ್ರಿಂಟ್ ಮಾಡಿ ಸ್ನೇಹಿತರಿಗೆ ಹಂಚಲಾಗಿದೆ.

First published: