• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Yogi Adityanath Interview: ಪಠಾಣ್ ಸಿನಿಮಾ ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು? ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ

Yogi Adityanath Interview: ಪಠಾಣ್ ಸಿನಿಮಾ ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು? ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ

ಸಿಎಂ ಯೋಗಿ ಆದಿತ್ಯ ನಾಥ್

ಸಿಎಂ ಯೋಗಿ ಆದಿತ್ಯ ನಾಥ್

ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಸಿನಿಮಾ ನಿರ್ದೇಶಕರು (Film Director) ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ನೀಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಅಭಿಪ್ರಾಯಪಟ್ಟಿದ್ದಾರೆ.

ಮುಂದೆ ಓದಿ ...
  • Share this:

ಉತ್ತರ ಪ್ರದೇಶ ಸಿಎಂ (Uttar Pradesh CM) ಯೋಗಿ ಆದಿತ್ಯನಾಥ್ (Yogi Adityanath) ಅವರು ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾದ (Pathaan Cinema) ಬೇಷರಮ್ ರಂಗ್ ಹಾಡಿನ ವಿವಾದದ (Besharam Rang song controversy) ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ (News18 Exclusive Interview) ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಸಿನಿಮಾ ನಿರ್ದೇಶಕರು (Film Director) ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ನೀಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಅಭಿಪ್ರಾಯಪಟ್ಟಿದ್ದಾರೆ.


‘ಪಠಾಣ್’ ವಿವಾದದ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು?


ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡಿನ ವಿವಾದದ ಕುರಿತಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನೆಟ್‌ವರ್ಕ್ 18ನ ಗ್ರೂಪ್ ಎಡಿಟರ್-ಇನ್-ಚೀಫ್ ರಾಹುಲ್ ಜೋಶಿ ಅವರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, ಯಾವುದೇ ನಟ, ನಿರ್ದೇಶಕ ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಅಥವಾ ಸಾರ್ವಜನಿಕರಿಗೆ ನೋವುಂಟು ಮಾಡುವ ದೃಶ್ಯಗಳ ಬಗ್ಗೆ ಜಾಗ್ರತನಾಗಿರಬೇಕು. ಅಂತಹ ಸೀನ್, ಕಥೆ, ಹಾಡುಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಳ್ಳಬಾರದು ಅಂತ ಹೇಳಿದ್ರು.
“ಎಲ್ಲಾ ಕಲಾವಿದರನ್ನು ಗೌರವಿಸಬೇಕು”


ಎಲ್ಲಾ ಕಲಾವಿದರನ್ನು ಗೌರವಿಸಬೇಕು ಎಂದ ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶವು ಚಲನಚಿತ್ರಗಳಿಗೆ ನೀತಿಯನ್ನು ಮಾಡಿದೆ ಮತ್ತು ರಾಜ್ಯದಲ್ಲಿ ಅನೇಕ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದಾರೆ. ಸಿನಿಮಾ ನಿರ್ದೇಶಕರು ಸಿನಿಮಾ ಮಾಡುವಾಗ ವಿವಾದಕ್ಕೆ ಕಾರಣವಾಗುವ ಯಾವುದೇ ದೃಶ್ಯಗಳನ್ನು ನೀಡಬಾರದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಅಂತ ಅವರು ನಿರ್ದೇಶಕರಿಗೆ ಕಿವಿಮಾತು ಹೇಳಿದ್ದಾರೆ.


ಇದನ್ನೂ ಓದಿ: Yogi Adityanath Interview: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ಇತಿಹಾಸದ ಪುಟ ಸೇರಲಿದೆ: ಯೋಗಿ ಆದಿತ್ಯನಾಥ್


ಚಲನಚಿತ್ರಗಳಿಗೆ ಉತ್ತರ ಪ್ರದೇಶದಲ್ಲಿ ನಿಯಮ


ಉತ್ತರ ಪ್ರದೇಶ ರಾಜ್ಯದಲ್ಲಿ ಸಿನಿಮಾ ಸೇರಿದಂತೆ ಎಲ್ಲಾ ರೀತಿಯ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಉತ್ತರ ಪ್ರದೇಶವು ಈಗ ಚಲನಚಿತ್ರಗಳಿಗೆ ಒಂದು ಕಾನೂನು ನೀತಿಯನ್ನು ಹೊಂದಿದೆ. ಅದನ್ನು ಎಲ್ಲರೂ ಅನುಸರಿಸಲೇಬೇಕು ಅಂತ ಹೇಳಿದ್ದಾರೆ. ಇನ್ನು ಉತ್ತರ ಪ್ರದೇಶದಲ್ಲಿ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಸಿನಿಮಾಗಳಿಗೆ ಒಳ್ಳೆಯ ಪ್ರೋತ್ಸಾಹ ಮತ್ತು ವಾತಾವರಣ ಇದೆ. ಇದರಿಂದಾಗಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಚಿತ್ರಗಳ ಚಿತ್ರೀಕರಣ ಹೆಚ್ಚಾಗಿದೆ. ಎಂದು ಅವರು ಹೇಳಿಕೊಂಡಿದ್ದಾರೆ.


ಜಾಗತಿಕ ಹೂಡಿಕೆದಾರರ ಶೃಂಗಸಭೆ ಇತಿಹಾಸದ ಪುಟ ಸೇರಲಿದೆ


ಇನ್ನು ಮುಂದಿನ ವಾರ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಗೂ ಮುನ್ನವೇ ನಮ್ಮ ರಾಜ್ಯ ಸರ್ಕಾರವು ಗುರುತಿಸಿರುವ ಎಲ್ಲಾ 25 ವಲಯಗಳಲ್ಲಿ ಹೂಡಿಕೆದಾರರಿಂದ ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದ ಯೋಗಿ ಆದಿತ್ಯನಾಥ್, ಈ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆ ಐತಿಹಾಸಿಕವಾಗಲಿದೆ ಎಂದು ಹೇಳಿದರು.
ಮೋದಿ ಬಗ್ಗೆ ಯೋಗಿ ಆದಿತ್ಯನಾಥ್ ಹೇಳಿದ್ದೇನು?


ಉತ್ತರ ಪ್ರದೇಶದ ಅಭಿವೃದ್ಧಿಯ ವಿಚಾರವಾಗಿ ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ರಾಜ್ಯದಲ್ಲಿ ಅಭಿವೃದ್ಧಿಯ ಯಾತ್ರೆ ಮುಂದುವರಿಯುತ್ತಿದೆ. ಕೋವಿಡ್ ಕಾಲದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸಿದೆವು. ಆದರೆ ಪ್ರಸ್ತುತ ಉತ್ತರ ಪ್ರದೇಶದ ಜಿಡಿಪಿ ಮತ್ತು ತಲಾದಾಯ ದ್ವಿಗುಣಗೊಂಡಿದೆ. ಈಗ ಉತ್ತರ ಪ್ರದೇಶದ ಬೆಳವಣಿಗೆಯ ದರ 13ರಿಂದ 14%ನ ನಡುವೆ ಇದೆ. ಹೀಗಾಗಿ ಭಾರತದ ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್‌ ಆಗಿ ಪರಿವರ್ತಿಸಲು ಉತ್ತರ ಪ್ರದೇಶದ ಪಾತ್ರ ತುಂಬಾ ದೊಡ್ಡದಾಗಿದೆ ಎಂದು ಅಭಿಪ್ರಾಯ ಪಟ್ಟರು.

Published by:Annappa Achari
First published: