Women Safety: ಮಹಿಳೆಯರು ಸಂಜೆ 7ರ ನಂತರ ಕೆಲಸ ಮಾಡಲೇಬೇಕಂತಿಲ್ಲ, ಕ್ಯಾಬ್ ಒದಗಿಸಲೇಬೇಕು; ಯೋಗಿ ಸರ್ಕಾರದ ಖಡಕ್ ಆದೇಶ

Yogi Adityanath Government: ಉದ್ಯೋಗಿ ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಉಚಿತ ಕ್ಯಾಬ್ ಸೌಲಭ್ಯವನ್ನು ಒದಗಿಸಬೇಕು. ಒಂದು ವೇಳೆ ಈ ಆದೇಶಗಳನ್ನು ಪಾಲಿಸದಿದ್ದಲ್ಲಿ ಅದು ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ.

ಸಿಎಂ ಯೋಗಿ ಆದಿತ್ಯನಾಥ್

ಸಿಎಂ ಯೋಗಿ ಆದಿತ್ಯನಾಥ್

  • Share this:
    ಉತ್ತರ ಪ್ರದೇಶ ಸರ್ಕಾರವು (Uttar Pradesh Government) ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗೆ (Women Employed)  ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವ (Women Security)  ಅಂಗವಾಗಿ ವಿಶೇಷವಾಗಿ ಕೆಲಸ ಮಾಡುವ ಮಹಿಳೆಯರನ್ನು ಖಾತ್ರಿಪಡಿಸುವ ಸಲುವಾಗಿ  ಯೋಗಿ ಆದಿತ್ಯನಾಥ್ ನೇತೃತ್ವದ (Yogi Adityanath) ಉತ್ತರ ಪ್ರದೇಶ ಸರ್ಕಾರವು ಈಗ ಮಹಿಳೆಯರನ್ನು ಸಂಜೆ 7 ರಿಂದ ಬೆಳಿಗ್ಗೆ 6 ರ ನಡುವೆ ಕೆಲಸ ಮಾಡಲು ಒತ್ತಾಯಿಸುವಂತಿಲ್ಲ ಎಂದು ಆದೇಶ ಪ್ರಕಟಿಸಿದೆ.

    ಯೋಗಿ ಆದಿತ್ಯನಾಥ್ ಸರ್ಕಾರ ಮಾಡಿರುವ ಈ ನಿಯಮ ಸರ್ಕಾರಿ ಮತ್ತು ಖಾಸಗಿ ವಲಯ ಎರಡಕ್ಕೂ ಅನ್ವಯಿಸುತ್ತದೆ. ಮಹಿಳೆಯರು ಸಂಜೆ 7 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆಲಸ ಅಥವಾ ಕರ್ತವ್ಯದಲ್ಲಿ ತೊಡಗಿದ್ದರೆ, ಕಂಪನಿ ಅಥವಾ ಸಂಸ್ಥೆಯು ಅದಕ್ಕೆ ಅವರ ಒಪ್ಪಿಗೆಯನ್ನು ಹೊಂದಿರಬೇಕು ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ.

    ಕೆಲಸದಿಂದ ತೆಗೆಯುವಂತಿಲ್ಲ!
    ಸೂಚನೆಗಳನ್ನು ಉಲ್ಲಂಘಿಸಿಯೂ ವ್ಯಕ್ತಿಯ ಮೇಲೆ ಕರ್ತವ್ಯವನ್ನು ವಿಧಿಸಿದ್ದರೆ ಸಂಸ್ಥೆಯು ಸರ್ಕಾರದಿಂದ ನೇರ ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳನ್ನು ಎದುರಿಸಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಹೆಚ್ಚುವರಿಯಾಗಿ, ಮಹಿಳೆಯರು ಸಂಜೆ 7 ಗಂಟೆಯ ನಂತರ ಕೆಲಸ ಮಾಡಲು ನಿರಾಕರಿಸಿದರೆ ಆಕೆಯನ್ನು ಕೆಲಸದಿಂದ ತೆಗೆದುಹಾಕಬಾರದು. ಈ ಹೊಸ ನಿಯಮದ ಉಲ್ಲಂಘನೆಯು ಸಂಸ್ಥೆ ಅಥವಾ ಕಂಪನಿಗೆ ದೊಡ್ಡ ಮೊತ್ತದ ದಂಡ ಅಥವಾ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ಸಹ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸೂಚನೆಯಲ್ಲಿ ತಿಳಿಸಿದೆ.

    ಮಹಿಳಾ ಉದ್ಯೋಗಿಗೆ ಉಚಿತ ಕ್ಯಾಬ್ ಸೌಲಭ್ಯ ಕಡ್ಡಾಯ
    ಉತ್ತರ ಪ್ರದೇಶ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುರೇಶ್ ಚಂದ್ರ ಅವರು "ಲಿಖಿತ ಒಪ್ಪಿಗೆಯ ನಂತರ, ಮಹಿಳೆಯರು ಸಂಜೆ 7 ಮತ್ತು   ಬೆಳಗ್ಗೆ 6 ವರೆಗೆ ಕೆಲಸ ಮಾಡಬಹುದು, ಅದು ಮನೆಯಿಂದ ಮಾಡುವ ಕೆಲಸ ಅಥವಾ ಕಚೇರಿಯಿಂದ ಮಾಡುವ ಕೆಲಸ ಆಗಿರಬಹುದು. ಉದ್ಯೋಗಿ ಕೆಲಸ ಮಾಡುತ್ತಿದ್ದರೆ ಕಚೇರಿಯಲ್ಲಿ ಮಹಿಳಾ ಉದ್ಯೋಗಿಗೆ ಉಚಿತ ಕ್ಯಾಬ್ ಸೌಲಭ್ಯವನ್ನು ಒದಗಿಸಬೇಕು. ಒಂದು ವೇಳೆ ಈ ಆದೇಶಗಳನ್ನು ಪಾಲಿಸದಿದ್ದಲ್ಲಿ ಅದು ಕಾರ್ಮಿಕ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದ್ದಾರೆ.

    ಈ ಹೊಸ ಕೆಲಸದ ನಿಯಮದ ಜೊತೆಗೆ ಉತ್ತರ ಪ್ರದೇಶ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಕೂಡ ಸೂಚಿಸಿದೆ

    ರಾತ್ರಿ ಕರ್ತವ್ಯದ ವೇಳೆ ಮಹಿಳಾ ಉದ್ಯೋಗಿಗಳಿಗೆ ಊಟದ ವ್ಯವಸ್ಥೆ ಮಾಡಬೇಕು. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.

    ಇದನ್ನೂ ಓದಿ: PM Narendra Modi: 3500 ರೂ. ಬೆಲೆಯ 50 ಕೆಜಿ ಯೂರಿಯಾ ಚೀಲಕ್ಕೆ ರೈತರು 300 ರೂ. ಪಾವತಿಸಿ ಸಾಕು: ಪ್ರಧಾನಿ ಮೋದಿ ಘೋಷಣೆ

    ಕನಿಷ್ಠ 4 ಅಥವಾ ಅದಕ್ಕಿಂತ ಹೆಚ್ಚು ಮಹಿಳಾ ಉದ್ಯೋಗಿಗಳು ಕರ್ತವ್ಯದಲ್ಲಿದ್ದಾಗ ಮಾತ್ರ ಮಹಿಳಾ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡುತ್ತಾರೆ.

    ಮಹಿಳೆಯರ ಮೇಲೆ ದೌರ್ಜನ್ಯ ನಡೆಯದಂತೆ ನೋಡಿಕೊಳ್ಳಲು ಕಂಪನಿಗಳು ಮತ್ತು ಸಂಸ್ಥೆಗಳು ಸಮಿತಿ ರಚಿಸಬೇಕು.

    ಕಚೇರಿಯಲ್ಲಿ ಮಹಿಳೆಯರಿಗೆ ಸ್ನಾನಗೃಹಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಲಭ್ಯವಾಗುವಂತೆ ಮಾಡಬೇಕು.

    ಇದನ್ನೂ ಓದಿ: Sankarsh Chand: 100 ಕೋಟಿಯ ಒಡೆಯ ಈ 23ರ ಯುವಕ! ಕಾಲೇಜು ಓದಿದ್ದು ಎರಡೇ ವರ್ಷ!

    ಉತ್ತರ ಪ್ರದೇಶ ಸರ್ಕಾರವು 2022 ರಿಂದ 2023 ರವರೆಗೆ ತನ್ನ ರಾಜ್ಯ ಬಜೆಟ್ ಅನ್ನು ಅನಾವರಣಗೊಳಿಸಿದ ಕೆಲವೇ ದಿನಗಳಲ್ಲಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇದು ಮೂಲಸೌಕರ್ಯ, ಉದ್ಯೋಗಗಳ ಸೃಷ್ಟಿ, ಆರೋಗ್ಯ ಮತ್ತು ಸುರಕ್ಷತೆ ಮತ್ತು ಮಹಿಳೆಯರ ಸಬಲೀಕರಣದ ಮೇಲೆ ಪ್ರಮುಖ ಗಮನ ಸೆಳೆಯುವ ಉದ್ದೇಶ ಹೊಂದಿದೆ ಎಮದು ಹೇಳಲಾಗಿದೆ.
    Published by:guruganesh bhat
    First published: