ಲಖನೌ: ಆಗ್ರಾ ಆಸ್ಪತ್ರೆಯಲ್ಲಿ ಅಣುಕು ಕಾರ್ಯಾಚರಣೆ ವಿಡಿಯೋ ವೈರಲ್ ಆದ ಬಳಿಕ ಆಸ್ಪತ್ರೆಯ ಅಧಿಕಾರಿಗಳ ವಿರುದ್ದ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. ಕೊರೊನಾ ರೋಗಿಗಳಿಗೆ ಆಮ್ಲಜನಕವನ್ನು ಆಫ್ ಮಾಡುವುದರಿಂದ ಯಾರು ಬದುಕುಳಿಯುತ್ತಾರೆ ಮತ್ತು ಆಮ್ಲಜನಕದ ಬಿಕ್ಕಟ್ಟಿನ ಮಧ್ಯೆ ಯಾರು ಸಾವನ್ನಪ್ಪುತ್ತಾರೆ ಎಂದು ತಿಳಿಯಲು ಈ ಕಾರ್ಯಾಚರಭೆ ನಡೆಸಲಾಗಿತ್ತು. ಅಲ್ಲದೇ ಈ ಅಮಾನವೀಯ ಘಟನೆಯಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಏಪ್ರಿಲ್ 26 ಮತ್ತು 27 ರಂದು ಸಂಭವಿಸಿದ ಆಮ್ಲಜನಕದ ಕೊರತೆಯ ಬಗ್ಗೆ ವರದಿಯಾಗಿದೆ. ವಿಡಿಯೋ ಕ್ಲಿಪ್ನಲ್ಲಿ ವ್ಯಕ್ತಿಯೊಬ್ಬ ಆಸ್ಪತ್ರೆಯ ವ್ಯವಸ್ಥಾಪಕರ ಮುಂದೆ ಮಾತನಾಡುತ್ತಾ, 22 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿರುವುದು ದಾಖಲಾಗಿದೆ.
ಆಸ್ಪತ್ರೆಯ ವ್ಯವಸ್ಥಾಪಕರು ಮತ್ತು ಮಾಲೀಕರಾದ ಅರಿಂಜಯ್ ಜೈನ್ ಅವರ ಮಾತುಗಳನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ. ಆಮ್ಲಜನಕದ ಪೂರೈಕೆಯಿರುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ, ಅಲ್ಲದೇ ಮೋದಿ ನಗರವೂ ಶುಷ್ಕವಾಗಿದೆ. ನಾವು ಇದನ್ನು ಕುಟುಂಬಗಳಿಗೆ ತಿಳಿಸಿದೆವು. ಕೆಲವು ಜನರು ನಮ್ಮ ಮಾತು ಕೇಳಿಸಿಕೊಂಡರು. ಇನ್ನೂ ಕೆಲವರು ಹೊರಡಲು ನಿರಾಕರಿಸಿದರು. ಅಣಕು ಡ್ರಿಲ್ ಮಾಡಿದ ನಂತರ ಯಾರು ಸಾಯುತ್ತಾರೆ ಮತ್ತು ಯಾರು ಬದುಕುಳಿಯುತ್ತಾರೆ ಎಂಬುದನ್ನು ನಾವು ಲೆಕ್ಕಾಚಾರ ಮಾಡೋಣ ಎನ್ನುವ ಮಾತುಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ : Bangalore Unlock: ಜೂ.14ರ ಬಳಿಕ ಹಂತ ಹಂತವಾಗಿ ಬೆಂಗಳೂರು ಅನ್ಲಾಕ್- ಬಿಬಿಎಂಪಿ ಕಮಿಷನರ್
ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಿದ್ದು ಅಣಕು ಪ್ರದರ್ಶನ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ. ಐದು ನಿಮಿಷಗಳಲ್ಲಿ 22 ರೋಗಿಗಳು ಸಾವನ್ನಪ್ಪಿದರು. ಕೇವಲ ಐದು ನಿಮಿಷಗಳಲ್ಲಿ ರೋಗಿಗಳು ನೀಲಿ ಬಣ್ಣಕ್ಕೆ ತಿರುಗಲು ಆರಂಭಿಸಿದ್ದರು ಎಂದು ವರದಿಯಾಗಿದೆ. ಏಪ್ರಿಲ್ 28ರ ವಿಡಿಯೋ ಇದಾಗಿದ್ದು, ಆ ಸಮಯದಲ್ಲಿ ಸುಮಾರು 96 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಡಿಯೋ ಸಂಭಾಷಣೆಯ ಪ್ರಕಾರ 96 ರೋಗಿಗಳಲ್ಲಿ 74 ರೋಗಿಗಳು ಉಳಿದುಕೊಂಡಿದ್ದಾರೆ. ಜೈನ್ ಅವರ 4 ವಿಡಿಯೋಗಳು ವೈರಲ್ ಆಗಿದ್ದು , ಅದರಲ್ಲಿ ಅವರು ಘಟನೆಯನ್ನು ವಿವರಿಸಿದ್ದಾರೆ.
ಜೈನ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ ಮತ್ತು ವೀಡಿಯೊಗಳನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಈ ಮಧ್ಯೆ, ಜಿಲ್ಲಾಧಿಕಾರಿ ಪ್ರಭು ನಾರಾಯಣ್ ಸಿಂಗ್ ವಿಡಿಯೋ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಸರ್ಕಾರದ ದಾಖಲೆಗಳ ಪ್ರಕಾರ ಏಪ್ರಿಲ್ 26 ರಂದು ಪ್ಯಾರಾಸ್ ಆಸ್ಪತ್ರೆಯಲ್ಲಿ ಕೇವಲ ನಾಲ್ಕು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಏಪ್ರಿಲ್ 26 ಮತ್ತು 27 ರಂದು ಆಮ್ಲಜನಕದ ಕೊರತೆ ಇತ್ತು. ಆದರೆ, ಆಡಳಿತ ತಂಡ ಮತ್ತು ಆರೋಗ್ಯ ಇಲಾಖೆ ರಾತ್ರಿಪೂರ್ತಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ವಿತರಿಸುತ್ತಲೇ ಇತ್ತು. ಏಪ್ರಿಲ್ 26 ರಂದು ಒಟ್ಟು 97 ಕೋವಿಡ್ ರೋಗಿಗಳು ಶ್ರೀ ಪ್ಯಾರಾಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಅವರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ವೈರಲ್ ವಿಡಿಯೋವನ್ನು ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ, ಆದರೆ ಈ ಬಗ್ಗೆ ತನಿಖೆ ಮಾಡಲಾಗುತ್ತದೆ ಎಂದು ನಾರಾಯಣ್ ಸಿಂಗ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ