Yogi Adityanath Budget 2022: ಯೋಗಿ ಉತ್ತರ ಪ್ರದೇಶ ಬಜೆಟ್ ಗಾತ್ರ 6.15 ಲಕ್ಷ ಕೋಟಿ; ಧಾರ್ಮಿಕ, ಐತಿಹಾಸಿಕ ಕ್ಷೇತ್ರ ರಕ್ಷಣೆಗೆ ವಿಶೇಷ ಪಡೆ
Uttar Pradesh Budget 2022: ಯುವಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು, ಹೊಸ ಯುಪಿ ಸ್ಟಾರ್ಟ್ಅಪ್ ನೀತಿ-2020 ರ ಅಡಿಯಲ್ಲಿ, 5 ವರ್ಷಗಳಲ್ಲಿ ಒಟ್ಟು 100 ಇನ್ಕ್ಯುಬೇಟರ್ಗಳು ಮತ್ತು 10,000 ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ 2ನೇ ಅವಧಿಯ ಸರ್ಕಾರ (Uttar Pradesh Budget 2022) ಮೊದಲ ಬಜೆಟ್ನ್ನು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿತು. ಯೋಗಿ 2.0 ಕ್ಯಾಬಿನೆಟ್ನ (Yogi Budget 2022) ಮೊದಲ ಬಜೆಟ್ ಆಗಿರುವ ಉತ್ತರ ಪ್ರದೇಶ ಬಜೆಟ್ 2022-23 6 ಲಕ್ಷ ಕೋಟಿ ರೂಪಾಯಿಗಳ ಕಾಗದರಹಿತ ಬಜೆಟ್ ಆಗಿದೆ. ಬಜೆಟ್ ಮಂಡಿಸಿದ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಆರ್ಥಿಕತೆಯು ವೇಗವಾಗಿ ಸುಧಾರಿಸುತ್ತಿದೆ. ರಾಜ್ಯದ ಆರ್ಥಿಕತೆಯನ್ನು USD 1 ಟ್ರಿಲಿಯನ್ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತೇವೆ. ರಾಜ್ಯವು 2021-2022ರಲ್ಲಿ ₹ 6.15 ಲಕ್ಷ ಕೋಟಿಯ ವಾರ್ಷಿಕ ಬಜೆಟ್ ಮಂಡಿಸಿದೆ.
ಉತ್ತರ ಪ್ರದೇಶದ ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ಈ ಬಜೆಟ್ ಮುಂದಿನ ಐದು ವರ್ಷಗಳನ್ನು ಎದುರು ನೋಡುತ್ತಿದೆ. ಬಡವರಿಗೆ ಗರೀಬ್ ಕಲ್ಯಾಣ್ ಕಾರ್ಡ್ ನೀಡಲು ಮುಂದಾಗಿದ್ದೇವೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಜೆಟ್ನ್ನು ಬಣ್ಣಿಸಿದ್ದಾರೆ.
130 ಸಂಕಲ್ಪಗಳು 2022 ರ ಚುನಾವಣೆಗೆ ಮುಂಚಿತವಾಗಿ ನಾವು ಲೋಕ ಕಲ್ಯಾಣ ಸಂಕಲ್ಪ್ನಲ್ಲಿ 130 ಘೋಷಣೆಗಳನ್ನು ಮಾಡಿದ್ದೇವೆ. ಆ 130 ಸಂಕಲ್ಪಗಳಲ್ಲಿ, ಈ ಬಜೆಟ್ 97 ಅನ್ನು ಒಳಗೊಂಡಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದರು.
ಉದ್ಯೋಗ ಪ್ರಮಾಣ ಹೆಚ್ಚಳ ಉತ್ತರ ಪ್ರದೇಶದಲ್ಲಿ ಖಾಸಗಿ ಹೂಡಿಕೆಯ ಮೂಲಕ 1.81 ಕೋಟಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಒದಗಿಸಲಾಗಿದೆ. 60 ಲಕ್ಷಕ್ಕೂ ಹೆಚ್ಚು ಯುವಕರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗಿದೆ. ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ಕಳೆದ ಐದು ವರ್ಷಗಳಲ್ಲಿ 4.50 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗಿದೆ.
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ₹100.45 ಕೋಟಿ ಉತ್ತರ ಪ್ರದೇಶದಲ್ಲಿ ನಿರುದ್ಯೋಗ ದರವು ಜೂನ್, 2016 ರಲ್ಲಿ ಶೇಕಡಾ 18 ರಷ್ಟಿತ್ತು, ಇದು ಏಪ್ರಿಲ್, 2022 ರಲ್ಲಿ ಶೇಕಡಾ 2.9 ಕ್ಕೆ ಇಳಿದಿದೆ ಎಂದು ಹಣಕಾಸು ಸಚಿವರು ಹೇಳಿದರು. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ವಿಶ್ವವಿದ್ಯಾಲಯಕ್ಕೆ ₹100.45 ಕೋಟಿ ಮೀಸಲಿಡಲಾಗಿದೆ.
ವೃದ್ಧಾಪ್ಯ ವೇತನ ಹೆಚ್ಚಳ ಯುಪಿಯಲ್ಲಿ ವೃದ್ಧಾಪ್ಯ ವೇತನವನ್ನು ₹500 ರಿಂದ ₹1000ಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವ ಸುರೇಶ್ ಖನ್ನಾ ಹೇಳಿದ್ದಾರೆ. ಅಲ್ಲದೇ ವಿಶೇಷ ಚೇತನರ ಸಹಾಯಧನವನ್ನು 300 ರೂ.ಗಳಿಂದ 1000 ರೂ.ಗಳಿಗೆ ಹೆಚ್ಚಿಸಲಾಗಿದೆ.
ದೇಗುಲ ರಕ್ಷಣೆಗೆ ವಿಶೇಷ ಮೀಸಲು ಪಡೆ ರಚನೆ! ದೇಗುಲ ಪಟ್ಟಣಗಳಾದ ಅಯೋಧ್ಯೆ, ಕಾಶಿ ಮತ್ತು ಮಥುರಾ ಸೇರಿದಂತೆ ನ್ಯಾಯಾಲಯಗಳು ಮತ್ತು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳ ಭದ್ರತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಉತ್ತರ ಪ್ರದೇಶದ ವಿಶೇಷ ಪಡೆಗಳಿಗೆ ₹276.66 ಕೋಟಿ ಮೀಸಲಿಡಲಾಗಿದೆ.
ಸ್ಟಾರ್ಟ್ಅಪ್ಗಳಿಗೆ ಪ್ರೋತ್ಸಾಹ ಯುವಜನರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉದ್ಯಮಶೀಲತೆ ಮತ್ತು ಆವಿಷ್ಕಾರವನ್ನು ಉತ್ತೇಜಿಸಲು, ಹೊಸ ಯುಪಿ ಸ್ಟಾರ್ಟ್ಅಪ್ ನೀತಿ-2020 ರ ಅಡಿಯಲ್ಲಿ, 5 ವರ್ಷಗಳಲ್ಲಿ ಒಟ್ಟು 100 ಇನ್ಕ್ಯುಬೇಟರ್ಗಳು ಮತ್ತು 10,000 ಸ್ಟಾರ್ಟ್ಅಪ್ಗಳನ್ನು ಸ್ಥಾಪಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
ಮಹಿಳೆಯರಿಗೆ ಏನೇನು? ಮಹಿಳೆಯರಿಗಾಗಿ ಜಿಲ್ಲಾ ಮಟ್ಟದಲ್ಲಿ ಸೈಬರ್ ಹೆಲ್ಪ್ ಡೆಸ್ಕ್ಗಳನ್ನು ಸ್ಥಾಪಿಸಲು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಮಹಿಳಾ ಸಬಲೀಕರಣ ಯೋಜನೆಗೆ 72.50 ಕೋಟಿ ರೂ. ಹಣವನ್ನು ಮೀಸಲು ಇರಿಸಲಾಗಿದೆ.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ವಲಯದಲ್ಲಿ ಮಿಷನ್ ಶಕ್ತಿ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ 20 ಕೋಟಿ ರೂ. ಮೀಸಲು ಅನುದಾನ ನೀಡಲಾಗಿದೆ.
ರೈತರಿಗಾಗಿ ಬಜೆಟ್ನಲ್ಲಿ ರೈತರ ಅಪಘಾತ ಯೋಜನೆಯಡಿ 650 ಕೋಟಿ ರೂ. ಯೋಜನೆಯಡಿ ಆಕಸ್ಮಿಕ ಮರಣ/ಅಂಗವೈಕಲ್ಯ ಉಂಟಾದರೆ ಗರಿಷ್ಠ 5 ಲಕ್ಷ ರೂ ಸಹಾಯಹಸ್ತ ನೀಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ