HOME » NEWS » National-international » UTTAR PRADESH BJP MLAS SEDITION CHARGE WORRY IF HE SPEAKS TOO MUCH MAK

ಹೆಚ್ಚು ಮಾತನಾಡಿದರೇ ಯೋಗಿ ಸರ್ಕಾರ ನನ್ನ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸುತ್ತದೆ: ಬಿಜೆಪಿ ಶಾಸಕನ ಆತಂಕ!

ಲಖನೌದಿಂದ 80 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

news18-kannada
Updated:May 17, 2021, 7:34 PM IST
ಹೆಚ್ಚು ಮಾತನಾಡಿದರೇ ಯೋಗಿ ಸರ್ಕಾರ ನನ್ನ ವಿರುದ್ಧವೂ ದೇಶದ್ರೋಹ ಪ್ರಕರಣ ದಾಖಲಿಸುತ್ತದೆ: ಬಿಜೆಪಿ ಶಾಸಕನ ಆತಂಕ!
ಉತ್ತರಪ್ರದೇಶದ ಬಿಜೆಪಿ ಶಾಸಕ ರಾಕೇಶ್ ರಾಥೋಡ್.
  • Share this:
ಉತ್ತರಪ್ರದೇಶ (ಮೇ 17); ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಉತ್ತರ ಪ್ರದೇಶದಲ್ಲಿ ತಮ್ಮ ಬಿಜೆಪಿ ಪಕ್ಷದ ಶಾಸಕರ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ ಎಂಬ ವಿಚಾರ ಈ ಹಿಂದೆ ಅನೇಕ ಬಾರಿ ಅನಾವರಣವಾಗಿತ್ತು. ಆದರೆ, ಅವರು ಎಷ್ಟರ ಮಟ್ಟಿಗೆ ತಮ್ಮ ಶಾಸಕರ ಮೇಲೆ ಹಿಡಿತ ಸಾಧಿಸಿದ್ದಾರೆ ಎಂಬುದು ಊಹಾತೀತವಾಗಿತ್ತು. ಆದರೆ, ಅದಕ್ಕೂ ಇಂದು ಉತ್ತರ ಸಿಕ್ಕಿದೆ. ಉತ್ತರ ಪ್ರದೇಶದ ಬಿಜೆಪಿ ಶಾಸಕರು ಯಾವ ಮಟ್ಟಿಗೆ ಯೋಗಿ ಆದಿತ್ಯನಾಥ್ ಬಗ್ಗೆ ಭಯ ಹೊಂದಿದ್ದಾರೆ ಎಂದರೆ, " ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ. ನಾವು ಮಾಧ್ಯಮಗಳಿಗೆ ಹೆಚ್ಚಿನ ಹೇಳಿಕೆ ನೀಡಿದರೇ, ಮಾತನಾಡಿದರೇ ನಮ್ಮ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಬಹುದು" ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು ತಮ್ಮದೇ ಸರ್ಕಾರದ ವಿರುದ್ಧ ಆರೋಪಿಸುವ ಮಟ್ಟಕ್ಕೆ ಯೋಗಿ ಆದಿತ್ಯನಾಥ್​ ಸರ್ಕಾರ ಶಾಸಕರಲ್ಲಿ ಭಯ ಹುಟ್ಟಿಸಿದೆ ಎಂಬುದು ಇದೀಗ ಬಯಲಾಗಿದೆ.

ಲಖನೌದಿಂದ 80 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಬಿಜೆಪಿ ಶಾಸಕ ರಾಕೇಶ್ ರಾಥೋಡ್ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. "ನಮ್ಮಂತಹ ಶಾಸಕರಿಗೆ ಪಕ್ಷದಲ್ಲಿ ಯಾವುದೇ ಸ್ಥಾನಮಾನವಿಲ್ಲ, ನಾವು ಮಾಧ್ಯಮಗಳಿಗೆ ನೀಡುವ ಹೆಚ್ಚಿನ ಹೇಳಿಕೆಗಳು, ನಮ್ಮ ಮಾತುಗಳೂ ದೇಶದ್ರೋಹ ಆರೋಪಕ್ಕೆ ಕಾರಣವಾಗಬಹುದು" ಎಂದು ಹೇಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ರಾಜಕಾರಣದ ಅಸಲಿ ಮುಖವನ್ನು ಸಮಾಜದೆದುರು ತೆರೆದಿಟ್ಟಿದ್ದಾರೆ ಎನ್ನಲಾಗಿದೆ.

ಸೀತಾಪುರದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರವನ್ನು ಮತ್ತೆ ಕಾರ್ಯಗತಗೊಳಿಸುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಶಾಸಕ ರಾಕೇಶ್ ರಾಥೋಡ್, "ನಾನು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇನೆ, ಆದರೆ ಶಾಸಕರಿಗೆ ಯಾವ ಸ್ಥಾನಮಾನವಿದೆ?. ನಾನು ಹೆಚ್ಚು ಮಾತನಾಡಿದರೆ, ನನ್ನ ವಿರುದ್ಧ ದೇಶದ್ರೋಹ ಆರೋಪ ಹೊರಿಸಬಹುದು" ಎಂದು ತಮ್ಮದೇ ಪಕ್ಷದ ವಿರುದ್ಧ ಆರೋಪ ಮಾಡಿದ್ದಾರೆ.

ತಮ್ಮದೆ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿರುವಾಗ ಶಾಸಕರಾಗಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, "ಇಲ್ಲಿ ಶಾಸಕರು ತಮ್ಮ ಮನಸ್ಸನ್ನು ಬಿಚ್ಚಿ ಮಾತನಾಡಬಲ್ಲರು ಎಂದು ನಿಮಗೆ ಅನ್ನಿಸುತ್ತಿದೆಯೇ? ನಾನು ಈ ಕುರಿತು ಹಿಂದೆಯೂ ಪ್ರಶ್ನೆ ಮಾಡಿದ್ದೇನೆಂದು ನಿಮಗೆ ತಿಳಿದಿಲ್ಲವೇ" ಎಂದಿದ್ದಾರೆ.

ಮೊದಲ ಬಾರಿಗೆ ಶಾಸಕರಾಗಿರುವ ರಾಕೇಶ್ ರಾಥೋಡ್ 2017 ರ ವಿಧಾನಸಭಾ ಚುನಾವಣೆಗೆ ಮೊದಲು ಬಿಜೆಪಿಗೆ ಸೇರಿದ್ದರು. ಮಾಯಾವತಿಯವರ ಬಹುಜನ ಸಮಾಜ ಪಕ್ಷದೊಂದಿಗೆ ನಂಟು ಹೊಂದಿದ್ದ ಇವರು, ಈ ಹಿಂದೆ ಸ್ವತಂತ್ರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ, ಆ ಚುನಾವಣೆಯಲ್ಲಿ ಸೋಲನುಭವಿಸಿದ್ದ ಕಾರಣ ನಂತರ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಅಲ್ಲದೆ, ವೈಚಾರಿಕ ಚಿಂತನೆ ಉಳ್ಳವರು ಎಂದು ಹೆಸರಾಗಿದ್ದವರು.

ಇದನ್ನೂ ಓದಿ : ಟ್ವಿಟ್ಟರ್​ನಲ್ಲಿ ಕೊರೋನಾ ಔಷಧ ಕೇಳಿದ ನಟಿ ಮಲ್ಲಿಕಾ ದುವಾಗೆ ಸಚಿವರ ನೆರವು: ವಿಐಪಿ ಸಂಸ್ಕೃತಿಗೆ ನೆಟ್ಟಿಗರು ಕಿಡಿ

ಕಳೆದ ವರ್ಷ, ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಚಪ್ಪಾಳೆ ತಟ್ಟಲು ಮತ್ತು ಗಂಟೆ ಬಾರಿಸಲು ಕರೆ ನೀಡಿದ್ದನ್ನು ಟೀಕಿಸಿದ್ದರು. ಮೋದಿಯವರನ್ನು ರಾಥೋಡ್ ಟೀಕಿಸಿದ್ದ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆದರೆ, ಈ ವೇಳೆ ಬಿಜೆಪಿ ರಾಜ್ಯ ಘಟಕ ಈ ಕುರಿತು ಸ್ಪಷ್ಟನೆ ನೀಡುವಂತೆ ರಾಕೇಶ್ ರಾಥೋಡ್ ಅವರನ್ನು ಕೇಳಿತ್ತು. ಆಗಿನಿಂದ ರಾಕೇಶ್​ ರಾಥೋಡ್​ ಪಕ್ಷದಲ್ಲಿ ಬಾಯಿ ಬಿಡಲು ಸಹ ಹಿಂದೇಟು ಹಾಕುತ್ತಿದ್ದರು ಎಂದು ತಿಳಿದುಬಂದಿದೆ.
Youtube Video

ಈ ನಡುವೆ ಉತ್ತರ ಪ್ರದೇಶದಲ್ಲಿ ಕೊರೋನಾ ಪ್ರಕರಣಗಳು ಹಾಗೂ ಸಾವುಗಳು ಅಧಿಕವಾಗುತ್ತಿದ್ದರೂ ಕೂಡ ಸರಿಯಾದ ಮಾಹಿತಿಯನ್ನು ರಾಜ್ಯ ಸರ್ಕಾರ ಮುಚ್ಚಿಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಆಕ್ಸಿಜನ್ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟವರಿಗೆ ಬೆದರಿಕೆ ಒಡ್ಡಲಾಗಿದ್ದ ಪ್ರಕರಣಗಳೂ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು.
Published by: MAshok Kumar
First published: May 17, 2021, 7:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories