UP BJP: ಲಖಿಂಪುರ ಖೇರಿಯ ಬಿಜೆಪಿ ಶಾಸಕ ಹೃದಯಾಘಾತಕ್ಕೆ ಬಲಿ, ಯೋಗಿ ಸಂತಾಪ

ಶಾಸಕ ಅರವಿಂದ ಗಿರಿ

ಶಾಸಕ ಅರವಿಂದ ಗಿರಿ

BJP MLA Arvind Giri Death: ಶಾಸಕ ಅರವಿಂದ ಗಿರಿ ಅವರ ಹಠಾತ್ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿಗಳು, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

  • Share this:

ಲಕ್ನೋ(ಸೆ.06): ಗೋಲ ಗೋಕರ್ಣನಾಥ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಗಿರಿ (BJP MLA Arvind Giri) ಅವರು ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ. ಮಾಹಿತಿ ಪ್ರಕಾರ, ಸೋಮವಾರ ತಡರಾತ್ರಿ ಹೃದಯಾಘಾತಕ್ಕೀಡಾದ ಶಾಸಕ ಅರವಿಂದ್ ಗಿರಿಯವರನ್ನು ಲಕ್ನೋ (Lucknow) ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸೀತಾಪುರದ ಸಿಧೌಲಿ ಬಳಿ ಅವರು ಸಾವನ್ನಪ್ಪಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಇಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅರವಿಂದ ಗಿರಿ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಜನತಾ ಪಕ್ಷದಿಂದ ಎರಡು ಬಾರಿ ಮತ್ತು ಸಮಾಜವಾದಿ ಪಕ್ಷದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು.


ಶಾಸಕ ಅರವಿಂದ ಗಿರಿ ಅವರ ಹಠಾತ್ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರಿದ ಮುಖ್ಯಮಂತ್ರಿಗಳು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.


ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಲೇಟೆಸ್ಟ್ ಬೆಳವಣಿಗೆಗಳು ಇಲ್ಲಿವೆ!


ಇದೇ ವೇಳೆ ಸಮಾಜವಾದಿ ಪಕ್ಷದ ಮಾಜಿ ಎಂಎಲ್​​ಸಿ ಶಶಾಂಕ್​ ಯಾದವ್ ಟ್ವೀಟ್ ಮಾಡಿ, ಅರವಿಂದ್​ ಗಿರಿ ಓರ್ವ ತಳಮಟ್ಟದ ನಾಯಕ. ಪಕ್ಷದಲ್ಲಿ ಅವರಂತಹ ನಾಯಕರನ್ನು ಕಂಡು ಹಿಡಿಯುವುದು ತುಂಬಾ ಕಷ್ಟ ಎಂದು ಸಂತಾಪ ಸೂಚಿದ್ದಾರೆ.


ಅರವಿಂದ ಗಿರಿ ಅವರ ನಿಧನದ ಸುದ್ದಿಯನ್ನು ಅವರ ಹಿರಿಯ ಸಹೋದರ ಮಧುಸೂದನ್​ ಗಿರಿ ಖಚಿತಪಡಿಸಿದ್ದಾರೆ. ಇಂದು ಬೆಳಗ್ಗೆ ಆರೋಗ್ಯವಾಗಿದ್ದ ಅವರು ಲಖನೌಗೆ ತೆರಳುತ್ತಿದ್ದರು. ಈ ವೇಳೆ ದಾರಿಮಧ್ಯೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಇದನ್ನೂ ಓದಿ: ಮೊದಲು ಪ್ರವೇಶ ನಿರಾಕರಿಸಿ ಈಗ ಲಖಿಂಪುರ್​ಗೆ ವಿರೋಧ ಪಕ್ಷದ ನಾಯಕರು ತೆರಳಲು ಯುಪಿ ಸರ್ಕಾರ ಅನುಮತಿ ನೀಡಿದ್ದು ಏಕೆ?


ಅರವಿಂದ್ ಅವರ ರಾಜಕೀಯ ಪಯಣ


1993: ವಿದ್ಯಾರ್ಥಿ ಜೀವನದಿಂದ ರಾಜಕೀಯ ಪ್ರವೇಶ
1994: ಎಸ್‌ಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ
1995: ಚುನಾವಣೆಯಲ್ಲಿ ದಾಖಲೆಯ ಮತಗಳಿಂದ ಗೆಲ್ಲುವ ಮೂಲಕ ಗೋಳ ಪುರಸಭೆ ಅಧ್ಯಕ್ಷರಾದರು.
1996: 13 ನೇ ವಿಧಾನಸಭೆಯಲ್ಲಿ 49 ಸಾವಿರ ಮತಗಳನ್ನು ಪಡೆದು ಎಸ್‌ಪಿ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಶಾಸಕರಾದರು.
1998-1999 ಸದಸ್ಯರು, ಸಾರ್ವಜನಿಕ ಲೆಕ್ಕಪತ್ರ ಸಮಿತಿ
2000 : ಮತ್ತೊಮ್ಮೆ ಪಾಲಿಕೆ ಪರಿಷತ್​ ಗೋಲಾದ ಅಧ್ಯಕ್ಷ
2002: ಎಸ್‌ಪಿ ಟಿಕೆಟ್‌ನಲ್ಲಿ 14ನೇ ವಿಧಾನಸಭೆಯ ಎರಡನೇ ಬಾರಿಗೆ ಶಾಸಕರಾದರು
2002 : 2003 ಸದಸ್ಯ, ಅಂದಾಜು ಸಮಿತಿ
2005: ಎಸ್ಪಿ ಆಡಳಿತಾವಧಿಯಲ್ಲಿ ಅನಿತಾ ಗಿರಿ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದರು.
2007: ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಸ್ಥಾನವನ್ನು ಗೆದ್ದರು, ಗೋಳಾ ಪತ್ನಿ ಸುಧಾ ಗಿರಿ
2007: 15ನೇ ವಿಧಾನಸಭೆಯಲ್ಲಿ 58 ಸಾವಿರ ಮತ ಪಡೆದು ಮೂರನೇ ಬಾರಿಗೆ ಶಾಸಕರಾದರು.
2007 : 2009 ಸದಸ್ಯ, ಡೀನ್ ಮಂಡಳಿ
2008 : ಸದಸ್ಯ, ನಿಯೋಜಿತ ಶಾಸಕಾಂಗ ಸಮಿತಿ
2007 : 2009 ಸದಸ್ಯರು, ರಾಜ್ಯದ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನಾ ವರದಿಗಳು
ವಿಚಾರಣಾ ಸಮಿತಿ
ಮಾರ್ಚ್, 2022: 18ನೇ ವಿಧಾನಸಭೆಗೆ ಭಾರತೀಯ ಜನತಾ ಪಕ್ಷದ ಟಿಕೆಟ್‌ನಲ್ಲಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು.

First published: