Shocking News: ಬಿಜೆಪಿ ಮುಖಂಡನ ಮಗನ ಕಳ್ಳ-ಪೋಲಿಸ್ ಆಟಕ್ಕೆ ಬಲಿಯಾಯ್ತು ಪಕ್ಕದ ಮನೆ ಮಗು!

ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಕರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸ್ಥಳೀಯ ಭಾರತೀಯ ಜನತಾ ಪಾರ್ಟಿ ಮುಖಂಡರೊಬ್ಬರ ಮನೆಯಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮಗ ಲೈಸೆನ್ಸ್‌ ಇರುವ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದು ಅದರಿಂದಾಗಿ ಪಕ್ಕದ ಮನೆ ಮಗು ಸಾವನ್ನಪ್ಪಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶದ (Uttar Pradesh) ಕೌಶಂಬಿ (Kaushambi) ಜಿಲ್ಲೆಯ ಕರಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸ್ಥಳೀಯ (Local) ಭಾರತೀಯ ಜನತಾ ಪಕ್ಷದ (BJP) ನಾಯಕರೊಬ್ಬರ ಮಗ ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಟದ ನಡುವೆ ಪರವಾನಗಿ (License) ಪಡೆದ ಪಿಸ್ತೂಲ್ (Pistol) ನಿಂದ ಗುಂಡು ಹಾರಿಸಿದ್ದಾನೆ. ಈ ಗುಂಡು (Bullet) ಅವನ ಜೊತೆ ಆಟವಾಡುತ್ತಿದ್ದ ಪಕ್ಕದ ಮನೆಯ (Neighbors) ಮಗುವಿಗೆ ತಾಗಿದೆ ಮತ್ತು ಮಗು ಸಾವನ್ನಪ್ಪಿದ (Died) ದುರ್ಘಟನೆ ನಡೆದಿದೆ. ಇದನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಈ ರೀತಿಯಾಗಿ ಮಕ್ಕಳ ಕೈಗೆ ರಿವಾಲ್ವರ್ ಸಿಗುವಂತೆ ಇಟ್ಟಿರುವುದು ಏಕೆ ಎಂದು ಜನ ಪ್ರಶ್ನಿಸುತ್ತಿದ್ಧಾರೆ. ಆಕಷ್ಮಿಕವಾಗಿ ನಡೆದ ದುರ್ಘಟನೆ ಒಂದು ಸಣ್ಣ ಬಾಲಕನ ಸಾವಿಗೆ ಕಾರಣವಾಯಿತು.

ಬಿಜೆಪಿ ಮುಖಂಡನ ಮನೆಯಲ್ಲಿ ನಡೆದ ದುರ್ಘಟನೆ
ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಕರಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಸ್ಥಳೀಯ ಭಾರತೀಯ ಜನತಾ ಪಾರ್ಟಿ ಮುಖಂಡರೊಬ್ಬರ ಮನೆಯಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಮನೆಯಲ್ಲಿ ಆಟವಾಡುತ್ತಿದ್ದ ಮಗ ಲೈಸೆನ್ಸ್‌ ಇರುವ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದು ಅದರಿಂದಾಗಿ ಪಕ್ಕದ ಮನೆಯ ಮಗು ಸಾವನ್ನಪ್ಪಿದೆ.

ಇದನ್ನೂ ಓದಿ: Mann Ki Baat: ಭಾರತದ ತ್ರಿವರ್ಣ ಧ್ವಜವನ್ನು ಡಿಪಿಯಾಗಿ ಬಳಸಿ! ದೇಶದ ಜನರ ಮುಂದೆ ಮೋದಿ ಮನದ ಮಾತು

ಶವವನ್ನು ಮರಣೋತ್ತರ ಪರೀಕ್ಷೆಗೆ  ಕಳುಹಿಸಲಾಗಿದೆ
ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಪೋಲಿಸರು ಪರಿಶೀಲನೆ ನಡೆಸಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ದೂರು ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಕಳ್ಳ-ಸೈನಿಕ ಆಟ ಆಡುತ್ತಿದ್ದ ಮಕ್ಕಳು
ಘಟನೆಯ ಕುರಿತು ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಸಿಂಗ್, ಕರಾರಿ ಪಟ್ಟಣದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈಸ್ವಾಲ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಸಂಜೆ 6:30 ರ ಸುಮಾರಿಗೆ ಅವರ 10 ವರ್ಷದ ಮಗ ನೆರೆಹೊರೆಯ ಇತರ ಮಕ್ಕಳೊಂದಿಗೆ ಕಳ್ಳ ಪೋಲೀಸ್ ಆಟವನ್ನು ಆಡುತ್ತಿದ್ದನು.

ಆಟದ ನಡುವೆ ಮಗು ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್ ಅನ್ನು ತಂದಿದೆ ಮತ್ತು ಆಡವಾಡುತ್ತಿರುವಾಗ ಗುಂಡು ಹಾರಿಸಿದ್ದಾನೆ ಇದರಿಂದಾಗಿ ಅವರ ನೆರೆಹೊರೆಯಲ್ಲಿ ವಾಸವಿದ್ದ ರಾಮೇಶ್ವರ ಪ್ರಸಾದ್ ವರ್ಮಾ ಅವರ 11 ವರ್ಷದ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಸಿಂಗ್ ಹೇಳಿದ್ದಾರೆ. ಈ ಬಗ್ಗೆ ದೂರು ಬಂದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು.

ಕಾನೂನು ಕ್ರಮ ಕೈಗೊಳ್ಳಲಾಗುವುದು
ಇದೀಗ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಮುಂದೆ ಈ ಬಗ್ಗೆ ದೂರು ಬಂದ ಕೂಡಲೇ ಘಟನೆಯ ಕುರಿತಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಈ ಘಟನೆಯಲ್ಲಿ ಮನೆಯವರ ಬೇಜಾವಬ್ದಾರಿತನ ಎದ್ದು ಕಾಣುತ್ತದೆ ಸಣ್ಣ ಮಕ್ಕಳ ಕೈಗೆ ಎಟಕುವಂತೆ ರಿವಾಲ್ವರ್ ಅನ್ನು ಇಡುವುದೇ ತಪ್ಪು ಅಲ್ಲದೆ ಮಗು ತೆಗೆದಾಗಲಾದರೂ ಎತ್ತಿ ಇಡಬೇಕಿತ್ತು.

ಇದನ್ನೂ ಓದಿ: Assam Drugs: 1,920 ಕೋಟಿ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಿದ ಅಸ್ಸಾಂ ಪೋಲಿಸರು!

ಯಾವುದೇ ಅಪಾಯಕಾರಿ ವಸ್ತುವನ್ನು ಮನೆಯಲ್ಲಿ ಇಡುವಾಗ ಅತಿಯಾದ ಜಾಗರೂಕತೆ ಅಗತ್ಯವಾಗಿ  ವಹಿಸಬೇಕು ಅದರಲ್ಲೂ ಸಣ್ಣ ಮಕ್ಕಳು ಇರುವ ಸ್ಥಳದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಇಲ್ಲದಿದ್ದರೆ ಉತ್ತರ ಪ್ರದೇಶದಲ್ಲಿ ನಡೆದಂತೆ ಘಟನೆಗಳು ಸಂಭವಿಸಲು ಸಾಧ್ಯವಿದೆ.
Published by:Nalini Suvarna
First published: