ಹೆಣ್ಣು ಮಗುವಿನ ರಕ್ಷಣೆ ಇತ್ತೀಚಿನ ದಿನಗಳಲ್ಲಿ ಸವಾಲು ಎಂದೆನಿಸುತ್ತಿದೆ. ಹೆಣ್ಣು ಮಕ್ಕಳಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಗುವಿನ ಜನನ ಖರ್ಚು,ವಿದ್ಯಾಭ್ಯಾಸ, ನೌಕರಿ ಯೋಜನೆ ಹೀಗೆ ಮೊದಲಾದ ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಬೇಕೆನ್ನುವುದು ಸಕಾರದ ಆಶಯವಾಗಿದೆ. ಅದಾಗ್ಯೂ ಹಲವಾರು ಕಡೆಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಅವಳು ಮುಂದೆ ಹೊರೆಯಾಗುತ್ತಾಳೆಂದು ಭಾವಿಸಿ ಮಗುವನ್ನು ಕೊಲ್ಲುವ ಸಂಪ್ರದಾಯ ಪ್ರಚಲಿತದಲ್ಲಿದೆ. ಇಂತಹ ಹತ್ಯೆಯನ್ನು ತಡೆಯಬೇಕೆಂದು ಸರ್ಕಾರ ಹೆಣ್ಣು ಮಗುವಿನ ರಕ್ಷಣೆಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿದೆ. ಇಂದಿಗೂ ಹೆಣ್ಣುಮಗುವಿನ ಹತ್ಯೆ ಮಾಡಿದಲ್ಲಿ ಅದನ್ನು ಅಪರಾಧವೆಂದೇ ಪರಿಗಣಿಸಿ, ಅಂತಹವನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗುತ್ತದೆ. ಇನ್ನು ಇತ್ತೀಚೆಗಷ್ಟೆ ಪುಟ್ಟ ಹೆಣ್ಣು ಗಂಗಾ ನದಿಯ್ಲಿ ತೇಲಿ ಬಿಟ್ಟಿದ್ದರು. ಆ ಮಗುವನ್ನು ರಕ್ಷಿಸಲಾಗಿದೆ.
ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಗಂಗಾ ನದಿ ತಟದಲ್ಲಿ 22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯಲ್ಲಿ ತೇಲಿ ಬಂದಿದ್ದು, ಆ ಹೆಣ್ಣು ಮಗುವನ್ನು ರಕ್ಷಿಸಲಾದ ವಿಷಯ ಗೊತ್ತೇ ಇದೆ. ಈ ಮಗುವನ್ನು ರಕ್ಷಿಸಿದ ನಾವಿಕ ಗುಲ್ಲು ಚೌಧರಿಗೆ ಉತ್ತರ ಪ್ರದೇಶ ಸರ್ಕಾರವು ಬೋಟ್ ಅನ್ನು ನೀಡಿ ಗೌರವಿಸಿದೆ. ಜೊತೆಗೆ ಸರ್ಕಾರದ ಇತರ ಸವಲತ್ತುಗಳನ್ನು ಗುಲ್ಲು ಅವರಿಗೆ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ತೇಲಿ ಬಂದ ಹೆಣ್ಣು ಮಗುವಿನ ಸಂಪೂರ್ಣ ಜವಬ್ದಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ. ಮಗುವನ್ನು ಸಂರಕ್ಷಿಸಿದ ನಾವಿಕ ಗುಲ್ಲು ಅವರನ್ನು ಸರ್ಕಾರ ಗೌರವಿಸಿದೆ.
ಇದನ್ನೂ ಓದಿ: Arjun Rampal: ಹೊಸ ಹೇರ್ಸ್ಟೈಲ್: ಧಾಕಡ್ ಸಿನಿಮಾಗಾಗಿ ಲುಕ್ ಬದಲಾಯಿಸಿಕೊಂಡ ಅರ್ಜುನ್ ರಾಮ್ ಪಾಲ್
ಜಿಲ್ಲಾ ಮ್ಯಾಜಿಸ್ಟ್ರೇಟ್ ಎಮ್ಪಿ ಸಿಂಗ್ ಮತ್ತು ಇತರ ಅಧಿಕಾರಿಗಳು ಗುಲ್ಲು ಚೌಧುರಿಯ ಮನೆಗೆ ಭೇಟಿ ನೀಡಿ ಆತನ ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಇನ್ನು ಗುಲ್ಲುಗೆ ಈಗಾಗಲೇ ಮನೆ ಇದ್ದು, ಆತನಿಗೆ ಹೌಸಿಂಗ್ ಸ್ಕೀಮ್ ಅಡಿಯಲ್ಲಿ ಯಾವುದೇ ಅನುಕೂಲತೆಗಳನ್ನು ಪಡೆಯಲು ಅರ್ಹನಲ್ಲ ಎಂಬುದು ತಿಳಿದು ಬಂದಿತು. ಇನ್ನು ಜೀವನ ನಿರ್ವಹಣೆಗೆ ಗುಲ್ಲು ಇತರರಿಂದ ಬೋಟ್ ಬಾಡಿಗೆಗೆ ಪಡೆದು ಚಲಾಯಿಸುತ್ತಾನೆ ಎಂಬ ಮಾಹಿತಿ ದೊರಕಿದ್ದುದರಿಂದ ಆಡಳಿತ ಮಂಡಳಿಯು ಆತನಿಗೆ ಬೋಟ್ ಅನ್ನು ಉಡುಗೊರೆಯಾಗಿ ನೀಡಿದೆ. ಇನ್ನು ಚೌಧುರಿ ಅಧಿಕಾರಿಗಳಲ್ಲಿ ತನ್ನ ಮನೆಯ ವರೆಗೆ ಕಾಂಕ್ರೀಟ್ ರಸ್ತೆಗೆ ಮನವಿ ಮಾಡಿದ್ದು ಅಧಿಕಾರಿಗಳು ಶೀಘ್ರದಲ್ಲೇ ರಸ್ತೆ ಕೆಲಸವನ್ನು ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೋಟ್ವಾಲಿ ಪೋಲೀಸ್ ಠಾಣೆ ಸರಹದ್ದಿನಲ್ಲಿ ಗಂಗಾನದಿಯಲ್ಲಿ ದಾದ್ರಿ ಘಾಟ್ ಸಮೀಪ ಮರದ ಪೆಟ್ಟಿಗೆಯೊಂದು ತೇಲಿ ಬರುತ್ತಿರುವುದನ್ನು ಗುಲ್ಲು ಗಮನಿಸಿದ್ದಾರೆ. ಪೆಟ್ಟಿಗೆಯನ್ನು ಗುಲ್ಲು ತೆರೆದಾಗ ಪೆಟ್ಟಿಗೆಯಲ್ಲಿ 22 ದಿನದ ಹೆಣ್ಣು ಮಗು ಇರುವುದು ತಿಳಿಯುತ್ತದೆ.ಇದರೊಂದಿಗೆ ಸಣ್ಣ ಚೀಟಿಯಲ್ಲಿ ಗಂಗಾಳ ಮಗು ಎಂದು ಬರೆದಿರುತ್ತದೆ. ಕೆಂಪು ಬಟ್ಟೆ ಹಾಗೂ ದುರ್ಗೆ ಮತ್ತು ವಿಷ್ಣುವಿನ ಫೋಟೋದೊಂದಿಗೆ ಪೆಟ್ಟಿಗೆಯಲ್ಲಿ ಮಗುವಿತ್ತು ಇನ್ನು ಮಗುವಿನ ಜನನ ಮತ್ತು ಹುಟ್ಟಿದ ದಿನಾಂಕವಿರುವ ಜನ್ಮಪತ್ರಿಕೆ ಕೂಡ ಪೆಟ್ಟಿಗೆಯಲ್ಲಿತ್ತು. ಮಗುವಿನ ಸೊಂಟಕ್ಕೆ ಕೆಂಪು ವಸ್ತ್ರವನ್ನು ಕಟ್ಟಲಾಗಿತ್ತು.
ಇದನ್ನೂ ಓದಿ: ಮಿಲ್ಕಾ ಸಿಂಗ್ ಸದಾ ಜೀವಂತವಾಗಿರುತ್ತಾರೆ: ಫರ್ಹಾನ್ ಅಖ್ತರ್..!
ಮಗುವನ್ನು ತನ್ನ ಮನೆಗೆ ಕರೆದೊಯ್ದ ಗುಲ್ಲು ಸ್ನಾನ ಮಾಡಿಸಿ ಹಾಲು ಕುಡಿಸಿದ್ದಾರೆ. ದಾದ್ರಿಘಾಟ್ಗೆ ಮಗುವನ್ನು ಕೇಳಿಕೊಂಡು ಯುವಕ ಮತ್ತು ಯುವತಿ ಬಂದಿದ್ದು ಅವರಿಗೆ ಗುಲ್ಲು ಮಗುವನ್ನು ನೀಡಿಲ್ಲ.ಮಗುವನ್ನು ತಾನೇ ಬೆಳೆಸುವುದಾಗಿ ಪೋಲೀಸರಿಗೆ ಮನವಿ ಪತ್ರ ಬರೆದಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಮಗುವಿಗೆ ಗಂಗಾ ಎಂದು ಹೆಸರಿಡಲಾಗಿದ್ದು, ಅದರ ಜನ್ಮ ಪ್ರಮಾಣ ಪತ್ರದಲ್ಲೂ ಅದೇ ಹೆಸರನ್ನೇ ಕೊಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ