• Home
  • »
  • News
  • »
  • national-international
  • »
  • Viral Video: ಉತ್ತರ ಪ್ರದೇಶದಲ್ಲಿ ಶಾಲೆ ಬಿಸಿಯೂಟಕ್ಕೆ ಕೇವಲ ಅನ್ನ ಉಪ್ಪು?

Viral Video: ಉತ್ತರ ಪ್ರದೇಶದಲ್ಲಿ ಶಾಲೆ ಬಿಸಿಯೂಟಕ್ಕೆ ಕೇವಲ ಅನ್ನ ಉಪ್ಪು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈರಲ್ ಆಗಿರುವ ಶಾಲೆಯ ವಿಡಿಯೋದಲ್ಲಿ ಮಧ್ಯಾಹ್ನದ ಊಟ ಮಾಡುವ ಮಕ್ಕಳು ಬೇಯಿಸಿದ ಅನ್ನ ಮತ್ತು ಉಪ್ಪನ್ನು ತಿನ್ನುತ್ತಿರುವುದನ್ನು ಕಾಣಬಹುದು. 

  • Share this:

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯ (Ayodhya) ಪ್ರಾಥಮಿಕ ಶಾಲೆಯೊಂದರಲ್ಲಿ ಅಕ್ಕಿ-ಉಪ್ಪನ್ನಷ್ಟೇ ವಿದ್ಯಾರ್ಥಿಗಳು ಸೇವಿಸಿದ್ದಾರೆ. ಈ ಊಟದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆಲವೇ ಗಂಟೆಗಳ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿ ಗ್ರಾಮದ ಮುಖ್ಯಸ್ಥರಿಗೆ ನೊಟೀಸ್ ಕಳುಹಿಸಿದ್ದಾರೆ. ವೈರಲ್ ಆಗಿರುವ ಶಾಲೆಯ ವಿಡಿಯೋದಲ್ಲಿ (Viral Video) ಮಧ್ಯಾಹ್ನದ ಊಟ ಮಾಡುವ ಮಕ್ಕಳು ಬೇಯಿಸಿದ ಅನ್ನ ಮತ್ತು ಉಪ್ಪನ್ನು (Salt And Rice Mid Day Meal)  ತಿನ್ನುತ್ತಿರುವುದನ್ನು ಕಾಣಬಹುದು. 


ವೀಡಿಯೊಗ್ರಾಫರ್ ದಿನದ ಮೆನುವನ್ನು ಸಹ ತೋರಿಸುತ್ತಾರೆ. ಜೊತೆಗೆ ಅಂದು ಮಕ್ಕಳಿಗೆ ಕೊಡಲಾದ ಊಟವನ್ನು ಸಹ ವಿಡಿಯೋದಲ್ಲಿ ಕಾಣಿಸುತ್ತಾರೆ.


ಇಲ್ಲಿದೆ ನೋಡಿ ವೈರಲ್ ಆಗುತ್ತಿರೋ ವಿಡಿಯೋ


ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಅಮಾನತು
ಈ ವಿಷಯವನ್ನು ಕುರಿತು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಅವರು ಅಯೋಧ್ಯೆಯ ಚೌರೆಬಜಾರ್ ಪ್ರದೇಶದಲ್ಲಿರುವ ದಿಹ್ವಾ ಪಾಂಡೆ ಅವರ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಏಕ್ತಾ ಯಾದವ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಗ್ರಾಮದ ಮುಖ್ಯಸ್ಥರಿಗೆ ನೊಟೀಸ್ ಕಳುಹಿಸಿದ್ದಾರೆ.


ಭಾರತ (India) ದೇಶವೇ ಒಂದು ವೈವಿಧ್ಯತೆಗಳ ತವರು. ಇಲ್ಲಿ ಎಷ್ಟೆಲ್ಲ ವೈವಿಧ್ಯತೆ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಹಾಗೆಯೇ ಭಾರತವು ಶ್ರೀಮಂತ ಜೀವ ವೈವಿಧ್ಯತೆಯನ್ನು ಸಹ ಹೊಂದಿದೆ. ಈ ಜೀವ ವೈವಿಧ್ಯತೆ ಎಂದರೆ ಮರ, ಗಿಡ, ಪ್ರಾಣಿ, ಪಕ್ಷಿಗಳು ಇರುವ ಒಂದು ಗುಂಪು. ಈ ಜೀವ ವೈವಿಧ್ಯತೆಯಲ್ಲಿ ಪ್ರಮುಖವಾದ ಮರ ಗಿಡಗಳು ವಿವಿಧ ಋತುಗಳಲ್ಲಿ ಹಲವು ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡುತ್ತಿರುತ್ತದೆ. ಇದೆಲ್ಲವನ್ನು ಗಮನಿಸಿದಾಗ ನಮಗೆ ನಿಜಕ್ಕೂ ಬಹಳ ಆಶ್ಚರ್ಯವೆನಿಸುತ್ತದೆ. ಏನಪ್ಪ ಇವರು ಮರ ಗಿಡಗಳ ಬಗ್ಗೆ ಮಾತನಾಡ್ತಿದಾರೆ, ಅಂದರೆ ಇವತ್ತು ಪರಿಸರ ದಿನಾಚರಣೆ ಇರಬೇಕು ಅಂದ್ಕೊಬೇಡಿ ಮತ್ತೆ. ನಾವಿಲ್ಲಿ ನಿಮಗೆ ಹೇಳಹೊರಟಿರುವುದು ಹೇಗೆ ಒಂದು ಮರ ಸಾಮಾಜಿಕ ಜಾಲತಾಣದಲ್ಲಿ (Social Media) ಸಿಕ್ಕಾಪಟ್ಟೆ ಫೇಮಸ್‌ ಆಗಿದೆ ಎಂಬುದನ್ನು.


ಇದನ್ನೂ ಓದಿ: Congress Presidential Election: ಕಾಂಗ್ರೆಸ್​ ಅಧ್ಯಕ್ಷೀಯ ಚುನಾವಣೆ, ಮಲ್ಲಿಕಾರ್ಜುನ ಖರ್ಗೆ ಕಣಕ್ಕೆ!


ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಆ ಮರ ಯಾವುದು?ಸಾಮಾಜಿಕ ಜಾಲತಾಣದಲ್ಲಿ ಫೇಮಸ್‌ ಆಗಿರುವ ಈ ಮರವು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಕಂಡುಬಂದಿದೆ. ಇದು ಅತಿ ಪುರಾತನವಾದ ಹಲಸಿನ ಮರವಾಗಿದ್ದು, ಇದನ್ನು ತೋರಿಸುವ ಒಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆಯುತ್ತಿದೆ. ನೆಟ್ಟಿಗರು ಈ ಮರವನ್ನು ನೋಡಿ ಪುಲ್‌ ಫೀದಾ ಆಗಿದ್ದಾರೆ. ಅದೇನು ವಿಶೇಷ ಎಂಬುದನ್ನು ಮುಂದೆ ನೋಡೋಣ ಬನ್ನಿ.


ಇದನ್ನೂ ಓದಿ: Congress President Election: ತನ್ನ ಕಾಲ ಮೇಲೆ ತಾನೇ ಕೊಡಲಿ ಪೆಟ್ಟು ಕೊಡುತ್ತಿದೆಯೇ ಕಾಂಗ್ರೆಸ್?


ಮೂರು ದಿನಗಳ ಹಿಂದೆ ಅಪರ್ಣಾ ಕಾರ್ತಿಕೇಯನ್ ಎಂಬ ಟ್ವಿಟ್ಟರ್‌ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊಗೆ ಒಂದು ವಿಶೇಷ ಶೀರ್ಷಿಕೆ ನೀಡಿದ್ದರು.

Published by:ಗುರುಗಣೇಶ ಡಬ್ಗುಳಿ
First published: