Old Man: ಸರ್ಕಾರಿ ದಾಖಲೆಗಳಲ್ಲಿ ಮೃತಪಟ್ಟ ಈ ಅಜ್ಜನಿಗೆ ಬದುಕಿರುವುದನ್ನು ಸಾಬೀತುಪಡಿಸುವುದೇ ಸವಾಲು!

ನಾನು ಬದುಕಿರುವುದನ್ನು ಸಾಬೀತುಪಡಿಸಲು ಕಳೆದ ಒಂದು ವರ್ಷದಿಂದ ಸರ್ಕಾರಿ ಕಚೇರಿಗಳಿಗೆ ಓಡಾಡುತ್ತಿದ್ದೇನೆ ಎಂದು ಈ 70 ವರ್ಷದ ಅಜ್ಜ ಗೋಳು ತೋಡಿಕೊಂಡಿದ್ದಾರೆ.

ಸರ್ಕಾರಿ ಕಚೇರಿ (ಸಾಂದರ್ಭಿಕ ಚಿತ್ರ)

ಸರ್ಕಾರಿ ಕಚೇರಿ (ಸಾಂದರ್ಭಿಕ ಚಿತ್ರ)

 • Share this:
  ಲಕ್ನೊ: ಸರ್ಕಾರಿ ದಾಖಲೆಗಳಲ್ಲಿ “ಮೃತ” ಎಂದು ಘೋಷಿಸಲಾದ 70 ವರ್ಷದ ಅಜ್ಜನೋರ್ವ ತಾನು ನಿಜವಾಗಿಯೂ ಜೀವಂತವಾಗಿದ್ದೇನೆ ಎಂದು ಅಧಿಕಾರಿಗಳಿಗೆ ಸಾಬೀತುಪಡಿಸಲು ಹೆಣಗಾಡುತ್ತಿರುವ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಉತ್ತರ ಪ್ರದೇಶದ (Uttar Pradesh) ಶಹಜಾನ್​ಪುರದ ತಿಲ್ಹಾರ್‌ನ ಫತೇಪುರ್ ಗ್ರಾಮದ ನಿವಾಸಿ ಓಂ ಪ್ರಕಾಶ್ ಎಂಬುವವರೇ ಈ ಸಮಸ್ಯೆಯನ್ನು ಅನುಭವಿಸುತ್ತಿರುವ ಹಿರಿಯ ನಾಗರಿಕರು. ತಾನು ಸತ್ತೇ ಹೋಗಿರುವುದಾಗಿ ಸರ್ಕಾರಿ ದಾಖಲೆಗಳಲ್ಲಿ (Government Records) ದಾಖಲಿಸಲಾಗಿದೆ. ಹೀಗಾಗಿ ವೃದ್ಧಾಪ್ಯ ಪಿಂಚಣಿಯನ್ನೂ (Old Age Pension) ಕೊಡಲು ನಿರಾಕರಿಸಲಾಗಿದೆ. ನಾನು ಬದುಕಿರುವುದನ್ನು ಸಾಬೀತುಪಡಿಸಲು ಕಳೆದ ಒಂದು ವರ್ಷದಿಂದ ಸರ್ಕಾರಿ ಕಚೇರಿಗಳಿಗೆ ಓಡಾಡುತ್ತಿದ್ದೇನೆ ಎಂದು ಈ 70 ವರ್ಷದ ಅಜ್ಜ ಗೋಳು ತೋಡಿಕೊಂಡಿದ್ದಾರೆ.

  ಸರ್ಕಾರಿ ದಾಖಲೆಗಳಲ್ಲಿ ನಾನು ಸತ್ತಿರುವುದರಿಂದ ಬ್ಯಾಂಕ್‌ನಿಂದ ಹಣ ತೆಗೆಯಲೂ ಸಾಧ್ಯವಾಗುತ್ತಿಲ್ಲ. ಹಣದ ಕೊರತೆಯಿಂದ ನೀರುಣಿಸಲು ಸಾಧ್ಯವಾಗದೆ ಕಬ್ಬಿನ ಬೆಳೆಗೆ ಹಾನಿಯಾಗಿದೆ. ಈಗ ಯಾರೂ ನನಗೆ ಸಹಾಯ ಮಾಡುತ್ತಿಲ್ಲ ಎಂದು ಪ್ರಕಾಶ್ ಶನಿವಾರ ಇಲ್ಲಿ ಹಿರಿಯ ಅಧಿಕಾರಿಗಳ ಮುಂದೆ ಹೇಳಿದ್ದಾರೆ.

  1 ವರ್ಷದ ಹಿಂದೆಯೇ ನಾನು ಸತ್ತುಹೋಗಿದ್ದೇನಂತೆ
  ಸುಮಾರು ಒಂದು ವರ್ಷದ ಹಿಂದೆ ಅವರು "ಸತ್ತಿದ್ದಾರೆ" ಎಂದು ದಾಖಲೆಗಳಲ್ಲಿ ಘೋಷಿಸಲಾಯಿತಂತೆ.  ಅವರು ವೃದ್ಧರಿಗೆ ಮೀಸಲಾದ ಪಿಂಚಣಿ ಹಿಂಪಡೆಯಲು ಹೋದಾಗ, ಅವರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹೇಳಿದ್ದರು ಎಂದು ಈ 70 ವರ್ಷದ ಅಜ್ಜ ಹೇಳಿದ್ದಾರೆ.

  ಕಬ್ಬು ಮಾರಾಟ ಮಾಡಿದ ಹಣವೂ ಬರಲಿಲ್ಲ
  ಬರೀ ವೃದ್ಧಾಪ್ಯ ವೇತನ ಒಂದೇ ಅಲ್ಲ. ನಾನು ಸಕ್ಕರೆ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಿದ್ದೆ. ಆದರೆ ಸರ್ಕಾರಿ ಕಾಗದ ಪತ್ರಗಳಲ್ಲಿ ನಾನು ಈಗಾಗಲೇ ಸತ್ತಿರುವುದರಿಂದ ನಾನು ಮಾರಾಟ ಮಾಡಿದ ಕಬ್ಬಿನ ಹಣವನ್ನು ಸಹ ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ ಎಂದು ಅವರು ತಾವು ಅನುಭವಿಸಿದ ಗೋಳನ್ನು ಅಲವತ್ತುಕೊಂಡಿದ್ದಾರೆ.

  ತನಿಖೆ ನಡೆಸುತ್ತೇವೆ, ಸೂಕ್ತ ಕ್ರಮ ತಕೊಳ್ತೇವೆ
  ಈ ಕುರಿತು ಸುದ್ದಿಸಂಸ್ಥೆ ಪಿಟಿಐಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಕಂದಾಯ ಅಧಿಕಾರಿ ಜ್ಞಾನೇಂದ್ರ ಸಿಂಗ್, ಈ  ವಿಷಯವು ತನ್ನ ಗಮನಕ್ಕೆ ಬಂದಿದೆ.  ತನಿಖೆಗಾಗಿ ಓಂ ಪ್ರಕಾಶ್ ಅವರ ಗ್ರಾಮಕ್ಕೆ ತಂಡವನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ವ್ಯಕ್ತಿ ಬದುಕಿದ್ದೂ ಕೇವಲ ದಾಖಲೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಿರುವುದನ್ನು ಸರಿಪಡಿಸಲಾಗುವುದು. ತಪ್ಪಿತಸ್ಥರ ವಿರುದ್ಧಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಕಂದಾಯ ಅಧಿಕಾರಿ ಜ್ಞಾನೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.

  ಇದನ್ನೂ ಓದಿ: Cyrus Mistry Died: ಮರ್ಸಿಡಿಸ್ ಕಾರಿನಲ್ಲಿ ಭೀಕರ ಅಪಘಾತ; ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ

  ಹೆಂಡತಿ ತೂಕ ಹೆಚ್ಚಾಯ್ತು ಎಂದು ತಲಾಕ್
  ಮದುವೆಯ ನಂತರ ಹೆಂಡತಿಯ ತೂಕ ಹೆಚ್ಚಾಗಿದೆ ಎಂದು ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಅಮಾನವೀಯ ದುಷ್ಕೃತ್ಯ ನಡೆದಿದೆ. ತನ್ನ ಪತಿ ಸಲ್ಮಾನ್ ನಾನು ದಪ್ಪ ಇರುವುದನ್ನು  ಹಂಗಿಸುತ್ತಿದ್ದ. ಆಗಾಗ ಅವಮಾನ ಮಾಡುತ್ತಿದ್ದ. ಬೇಕಾಬಿಟ್ಟಿ ಹೊಡೆಯುತ್ತಿದ್ದ ಎಂದು ಪತ್ನಿ ನಜ್ಮಾ ಆರೋಪಿಸಿದ್ದಾಳೆ. ಅಲ್ಲದೇ ತಾನು ದಪ್ಪ ಆಗಿರುವ ಕಾರಣಕ್ಕೆ ಒಂದು ತಿಂಗಳ ಹಿಂದೆ ತನ್ನ ಗಂಡ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹಾಕಿದ್ದಲ್ಲದೇ ವಿಚ್ಛೇದನ ಪತ್ರವನ್ನು ಕಳುಹಿಸಿದ್ದಾಗಿ ಆಕೆ ಹೇಳಿದ್ದಾಳೆ. ಮದುವೆ ಆದಮೇಲೆ ತಾನು ದಪ್ಪ ಆಗಿದ್ದಕ್ಕೆ ಗಂಡ ತಲಾಖ್ ನೀಡುವ ಕುರಿತು ನಜ್ಮಾ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ.

  ಇದನ್ನೂ ಓದಿ: Baby Name: ಪಕೋಡಾ ಎಂದು ಮಗುವಿಗೆ ಹೆಸರಿಟ್ಟ ಬ್ರಿಟನ್ ದಂಪತಿ! ಭಾರತೀಯ ತಿಂಡಿ ಅಂದ್ರೆ ಅಷ್ಟೆಲ್ಲ ಇಷ್ಟವಂತೆ!

  ಮೀರತ್‌ನ ಝಾಕಿರ್ ಕಾಲೋನಿಯ ನಿವಾಸಿ ನಜ್ಮಾ ಎಂಟು ವರ್ಷಗಳ ಹಿಂದೆ ಫತೇಪುರ್‌ನಲ್ಲಿ ವಾಸಿಸುವ ಸಲ್ಮಾನ್‌ನನ್ನು ಮದುವೆಯಾಗಿದ್ದಳು. ಈ ದಂಪತಿಗೆ 7 ವರ್ಷದ ಮಗನೂ ಇದ್ದಾನೆ.

  ನನಗೆ ವಿಚ್ಚೇದನ ಬೇಡ
  ನನ್ನ ತೂಕ ಹೆಚ್ಚಿದ್ದರಿಂದ ನನ್ನೊಂದಿಗೆ ಬದುಕಲು ಬಯಸುವುದಿಲ್ಲ ಎಂದು ನನ್ನ ಗಂಡ ಸಲ್ಮಾನ್ ಹೇಳಿದ್ದಾಗಿ ನಜ್ಮಾ ಆರೋಪ ಮಾಡಿದ್ದಾರೆ. ಅಲ್ಲದೇ ನನ್ನ ಗಂಡ ಈಗಾಗಲೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ. ಆದರೆ ನನಗೆ ವಿಚ್ಛೇದನ ನೀಡಲು ಇಷ್ಟವಿಲ್ಲ ಎಂದು ನಜ್ಮಾ ಗೋಳು ತೋಡಿಕೊಂಡಿದ್ದಾಳೆ.

  ಗಂಡನ ವಿರುದ್ಧ ಪೊಲೀಸ್ ಕೇಸ್
  ಆಕೆ ತನ್ನ ಗಂಡನ ವಿರುದ್ಶ ಈ ಕುರಿತು ದೂರು ನೀಡಿದ ನಂತರ ಪೊಲೀಸರು ಸಲ್ಮಾನ್ ವಿರುದ್ಧ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸೆಕ್ಷನ್ 3/4 ಮತ್ತು ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
  Published by:guruganesh bhat
  First published: