ಟಿಕೆಟ್ ನಿರಾಕರಣೆ ಹಿನ್ನಲೆ ಬಿಜೆಪಿ ತೊರೆದ Utpal Parrikar ; ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ

ನನ್ನ ಮೌಲ್ಯಗಳಿಗಾಗಿ ಕೆಲವು ನಿಲುವುಗಳನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ. ಪಣಜಿಯ ಜನರು ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿ ಎಂದಿದ್ದಾರೆ. 

ಉತ್ಪಲ್​ ಪರಿಕ್ಕರ್​

ಉತ್ಪಲ್​ ಪರಿಕ್ಕರ್​

 • Share this:
   ಪಣಜಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಕೈ ತಪ್ಪಿದ ಬೆನ್ನಲ್ಲೇ ಮಾಜಿ ಕೇಂದ್ರ ಸಚಿವ ಮನೋಹರ್​ ಪರಿಕ್ಕರ್​ ಮಗ ಉತ್ಪಲ್​ ಪರಿಕ್ಕರ್​ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಪಣಜಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಉತ್ಸುಕರಾಗಿದ್ದ ಉತ್ಪಲ್ (Utpal Parikkar)​​​​ ಅವರನ್ನು ಬಿಜೆಪಿ (BJP) ಅಭ್ಯರ್ಥಿಗಳ ಪಟ್ಟಿಯಿಂದ ಕೈ ಬಿಟ್ಟಿತ್ತು. ಈ ಘಟನೆಯಿಂದ ಉತ್ಪಲ್​ ಕೂಡ ಘಾಸಿಗೊಂಡಿದ್ದರು. ಅವರ ಓಲೈಕೆಗೆ ಬಿಜೆಪಿ ಮುಂದಾಗಿತ್ತಾದರೂ ಅದು ಸಫಲವಾಗಿಲ್ಲ. ಈ ಹಿನ್ನಲೆ ಅವರು ಪಕ್ಷವನ್ನು ತೊರೆದಿದ್ದಾರೆ. ಈ ಸಂಬಂಧ ಇಂದು ಘೋಷಿಸಿರುವ ಅವರು ತಾವು ಬಿಜೆಪಿ ತೊರೆದಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ (Independent Candidate) ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಎಎಪಿ (AAP ಆಹ್ವಾನವನ್ನು ಅವರು ನಿರಾಕರಿಸಿದ್ದಾರೆ.

  ಈ ಸಂಬಂಧ ಘೋಷಣೆ ಹೊರಡಿಸಿದ ಉತ್ಪಲ್ ಪರಿಕ್ಕರ್, ನನ್ನ ಮೌಲ್ಯಗಳಿಗಾಗಿ ಕೆಲವು ನಿಲುವುಗಳನ್ನು ತೆಗೆದುಕೊಳ್ಳಬೇಕಾದ ಸಮಯ ಬಂದಿದೆ. ಪಣಜಿಯ ಜನರು ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿ ಎಂದಿದ್ದಾರೆ.

  ಬಿಜೆಪಿ ಅಗ್ರ ನಾಯಕರಾಗಿದ್ದ ಮನೋಹರ್ ಪರಿಕ್ಕರ್​​

  ಬಿಜೆಪಿಯ ಅಗ್ರ ನಾಯಕರಾಗಿದ್ದ ಮನೋಹರ್​ ಪರಿಕ್ಕರ್​ ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿ ಹಾಗೂ ಒಂದು ಬಾರಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2019ರವರೆಗೂ ಅವರು 25 ವರ್ಷಗಳ ಕಾಲ ಪಣಜಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರ ಸಾವಿನ ಬಳಿಕ ಈ ಕ್ಷೇತ್ರವನ್ನು ಪ್ರತಿನಿಧಿಸಲು ಉತ್ಪಲ್​ ಒಲವು ತೋರಿ ಕಾರ್ಯ ಆರಂಭಿಸಿದ್ದರು. ಆದರೆ, ಬಿಜೆಪಿ ಮಾತ್ರ ಈ ಕ್ಷೇತ್ರಕ್ಕೆ ಉತ್ಪಲ್​ ಪ್ರಬಲ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ವಿವಾದಾತ್ಮಕ ಶಾಸಕ ಅಟಾನಾಸಿಯೊ ಬಾಬುಷ್ ಮೊನ್ಸೆರೆಟ್​​​​ಗೆ ಟಿಕೆಟ್​ ನೀಡಿದೆ.

  ಇದನ್ನು ಓದಿ: ಸೈನಿಕರಿಗೆ ಅಪಮಾನ ಮಾಡಿದ್ದಾರೆಂದು ದೆಹಲಿಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಪ್ರತಿಕೃತಿ ದಹನ

  ಪಣಜಿ ಜನರಿಂದ ನನ್ನ ರಾಜಕೀ ಭವಿಷ್ಯ ನಿರ್ಧಾರ

  ಇಂದು ಸಂಜೆ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮತ್ತು ಈ ಚುನಾವಣೆಯಲ್ಲಿ ನಾನು ಪಕ್ಷದ ನಾಯಕರಿಗೆ ಸಾಕಷ್ಟು ಮನವರಿಕೆ ಮಾಡಲು ಪ್ರಯತ್ನಿಸಿದೆ, ನಾನು ಎಲ್ಲಾ ಪಕ್ಷದ ಸದಸ್ಯರ ಬೆಂಬಲವನ್ನು ಮಾತ್ರ ಅನುಭವಿಸಿದ್ದೇನೆ, ನಾನು ಪಣಜಿಯ ಸಾಮಾನ್ಯ ಜನರ ಬೆಂಬಲವನ್ನು ಸಹ ಆನಂದಿಸುತ್ತೇನೆ. ಇಷ್ಟಾದರೂ ಪಣಜಿ ಕ್ಷೇತ್ರದ ಉಮೇದುವಾರಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಪಕ್ಷಕ್ಕೆ ಅವಕಾಶವಾದಿಯಾಗಿ ಬಂದವರಿಗೆ ಇದನ್ನು ನೀಡಲಾಗಿದೆ ... ಅದಕ್ಕಾಗಿಯೇ ನಾನು ಮುಂದುವರಿಯಲು ಬಯಸುತ್ತೇನೆ. ನನ್ನ ರಾಜಕೀಯ ಭವಿಷ್ಯವನ್ನು ಪಣಜಿಯ ಜನರು ನಿರ್ಧರಿಸಲಿ ಎಂದಿದ್ದಾರೆ.

  ಇದನ್ನು ಓದಿ: ಉತ್ಪಲ್ ಓಲೈಕೆಗೆ ಬಿಜೆಪಿ ಕಸರತ್ತು; ಪರಿಸ್ಥಿತಿ ಲಾಭ ಪಡೆಯಲು ಮುಂದಾದ ಎಎಪಿ

  ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಆಮ್​ ಆದ್ಮಿ ಪಕ್ಷ ಇದೀಗ ಉತ್ಪಲ್​​​​ ಅವರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿತು. ಈ ಘಟನೆ ಬೆನ್ನಲ್ಲೇ ಟ್ವೀಟ್​ ಮಾಡಿರುವ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​, ಪರಿಕ್ಕರ್ ಕುಟುಂಬದ ಜೊತೆಗೆ ಬಿಜೆಪಿಯು ಬಳಸಿ ಬಿಸಾಕುವ ನೀತಿಯನ್ನು ಅಳವಡಿಸಿಕೊಂಡಿರುವುದಕ್ಕೆ ಗೋವಾ ಜನರು ತುಂಬಾ ದುಃಖಿತರಾಗಿದ್ದಾರೆ. ಮನೋಹರ್ ಪರಿಕ್ಕರ್ ಅವರನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಉತ್ಪಲ್ ಅವರು ನಮ್ಮ ಸೇರಲು ಬಯಸಿದರೆ ಅವರಿಗೆ ಸ್ವಾಗತ ಕೋರುತ್ತೇನೆ. ಎಎಪಿ ಟಿಕೆಟ್‌ನಲ್ಲಿ ಚುನಾವಣೆ ಎದುರಿಸಬಹುದು ಎಂದು ಆಹ್ವಾನಿಸಿತ್ತು. ಆದರೆ, ಇದನ್ನು ಉತ್ಪನ್ ನಿರಾಕರಿಸಿದ್ದಾರೆ

  ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ

  2019ರಲ್ಲಿ ಮನೋಹರ್ ಪರಿಕ್ಕರ್ ನಿಧನರಾದಾಗ ಪಣಜಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗ ಉತ್ಕಲ್ ಪರಿಕ್ಕರ್ ಬಿಜೆಪಿ ಟಿಕೆಟ್ ಕೇಳಿದರು. ಆದರೆ ಆಗ ಪಕ್ಷ ಸಿದ್ಧಾರ್ಥ್ ಕುನ್ಸಿಲಿಯೆಂಕರ್‌ಗೆ ಟಿಕೆಟ್ ನೀಡಿತು. ಇದಾದ ಬಳಿಕವೂ ಚುನಾವಣೆ ಸ್ಪರ್ಧೆ ಹುಮ್ಮಸು ತೊರೆಯದ ಉತ್ಪಲ್ ಕ್ಷೇತ್ರದಲ್ಲಿ ಸಾಕಷ್ಟು ಸಕ್ರಿಯವಾಗಿದ್ದು, ಜನರ ಜೊತೆ ಉತ್ತಮ ಸಂಬಂಧ ಹೊಂದಿದ್ದರೆ, ಬಿಜೆಪಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಪಲ್ ಪರಿಕ್ಕರ್ ಕಣಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಅಲ್ಲದೇ ಈಗಾಗಲೇ ಅವರರು ಮನೆ ಮನೆ ಪ್ರಚಾರ ನಡೆಸಿ ಗಮನ ಸೆಳೆದಿದ್ದರು.
  Published by:Seema R
  First published: