'ಆಟೋಗಿಂತ ವಿಮಾನ ಪ್ರಯಾಣ ಅಗ್ಗ' ಎಂದ ಕೇಂದ್ರ ಸಚಿವ: ಇಲ್ಲಿದೆ ಲೆಕ್ಕಾಚಾರ


Updated:September 4, 2018, 5:48 PM IST
'ಆಟೋಗಿಂತ ವಿಮಾನ ಪ್ರಯಾಣ ಅಗ್ಗ' ಎಂದ ಕೇಂದ್ರ ಸಚಿವ: ಇಲ್ಲಿದೆ ಲೆಕ್ಕಾಚಾರ

Updated: September 4, 2018, 5:48 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಸೆ.04): ಕೇಂದ್ರ ಸಚಿವ ಜಯಂತ್​ ಸಿನ್ಹಾ ಆಟೋ ಪ್ರಯಾಣಕ್ಕೆ ಹೋಲಿಸಿದರೆ ವಿಮಾನ ಪ್ರಯಾಣದ ವೆಚ್ಚ ಕಡಿಮೆ ಎಂಬುವುದು ಕೇಂದ್ರ ಸಚಿವ ಜಯಂತ್​ ಸಿನ್ಹಾ ಅಭಿಪ್ರಾಯವಾಗಿದೆ. ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಈ ಹೇಳಿಕೆಯ ಬಳಿಕ ಲೆಕ್ಕಾಚಾರವನ್ನೂ ನೀಡಿದ್ದಾರೆ.

ಈ ಕುರಿತಾಗಿ ಮಾತನಾಡಿದ ಜಯಂತ್​ ಸಿನ್ಹಾ 'ಇಂದು ವಿಮಾನದ ಬಾಡಿಗೆ ಆಟೋಗಿಂತಲೂ ಕಡಿಮೆ ಇದೆ. ಆದರೆ ಇದು ಹೇಗೆ ಸಾಧ್ಯ ಎಂದು ನೀವು ಕೇಳಬಹುದು? ನೋಡಿ ಈಗ ಇಬ್ಬರು ಆಟೋದಲ್ಲಿ ಹೋಗುತ್ತಾರೆಂದರೆ ಅವರು ಒಂದು ಕಿ. ಮೀಟರ್​ಗೆ 10 ರೂಪಾಯಿ ಬಾಡಿಗೆ ನೀಡುತ್ತಾರೆ. ಅಂದರೆ ಒಬ್ಬ ವ್ಯಕ್ತಿಯು ತನ್ನ ಪ್ರಯಾಣಕ್ಕಾಗಿ 5 ರೂಪಾಯಿ ವ್ಯಯಿಸುತ್ತಾನೆ. ಆದರೆ ವಿಮಾನದ ಬಾಡಿಗೆಯನ್ನು ಗಮನಿಸಿದರೆ ಇಲ್ಲಿ ಪ್ರತಿ ಕಿಲೋ ಮೀಟರ್​ಗೆ ಕೇವಲ 4 ರೂಪಾಯಿ ಆಗುತ್ತದೆ" ಎಂದಿದ್ದಾರೆ.

ಇನ್ನು ಸಂಜಯ್​ ಸಿನ್ಹಾ ಇಂತಹ ಹೆಲಿಕೆ ನೀಡಿದ್ದು ಇದೇ ಮೊದಲಲ್ಲ. ಇದಕ್ಕೂ ಮೊದಲು ಈ ವರ್ಷದ ಆರಮಭದಲ್ಲಿ ಅಂದರೆ ಫೆಬ್ರವರಿಯಲ್ಲಿ ಇಂದೋರ್​ನ ಒಂದು ಮ್ಯಾನೇಜ್ಮೇಂಟ್​ ಕಾನ್ಫರೆನ್ಸ್​ನಲ್ಲಿ ಇಂತಹುದೇ ಒಂದು ತರ್ಕವನ್ನು ಮುಂದಿಟ್ಟಿದ್ದರು. ಅಂದು ಅವರು 'ಇಂದು ಭಾರತದಲ್ಲಿ ವಿಮಾನದ ಬಾಡಿಗೆ ಆಟೋಗಿಂತಲೂ ಕಡಿಮೆ. ಕೆಲವರು ನಾನು ಅಸಂಬದ್ಧವಾಗಿ ಮಾತನಾಡುತ್ತೇನೆ ಅಂತಂದುಕೊಂಡಿರಬಹುದು ಆದರೆ ಇದು ನಿಜ' ಎಂದಿದ್ದರು.

ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರು ಇಂದು ಹೆಚ್ಚು ಮಂದಿ ವಿಮಾನ ಯಾನಕ್ಕೆ ಕೈಗೊಳ್ಳುತ್ತಿದ್ದಾರೆ, ಯಾಕೆಂದರೆ ನಮ್ಮ ದೇಶದಲ್ಲಿ ವಿಮಾನದ ಟಿಕೆಟ್​ಗೆ ಅತ್ಯಂತ ಕಡಿಮೆ ವೆಚ್ಚ ತಗುಲುತ್ತದೆ. 4 ವರ್ಷಗಳ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ 11 ಕೋಟಿ ಇತ್ತು, ಆದರೆ ಇಂದು ಅದು 20 ಕೋಟಿ ತಲುಪುವ ಹಂತದಲ್ಲಿದೆ ಎಂದಿದ್ದರು.

ಇನ್ನು ವಿಮಾನಯಾನ ಇಲಾಖೆಯ ಅಂಕಿ ಅಂಶಗಳ ಅನ್ವಯ ರೈಲಿನ ಎಸಿ ಕೋಚ್​ನಲ್ಲಿ ಪ್ರಯಾಣಿಸುವವರಿಗಿಂತ ಹೆಚ್ಚಿದೆ ಎಂದು ತಿಳಿದು ಬಂದಿದೆ. ಇತ್ತ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಅನ್ವಯ ಕಳೆದ 4 ವರ್ಷಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ತಿಳಿದು ಬಂದಿದೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ