Cow Bone in Idly Dosa Batter: ಇಡ್ಲಿ-ದೋಸೆ ಹಿಟ್ಟು ತಯಾರಿಕೆಯಲ್ಲಿ ಹಸುವಿನ ಮೂಳೆ ಬಳಕೆ.. ನಿಜನಾ?

iD Fresh Food On Cow Bone Row: ಚೆನ್ನೈನ ಎಲ್ಲಾ ಸ್ಟೋರ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟವಾಗುತ್ತಿರುವ ಐಡಿ ಕಂಪೆನಿಯ ದೋಸೆ ಇಡ್ಲಿ ಹಿಟ್ಟುಗಳಲ್ಲಿ ಹಸುವಿನ ಮೂಳೆಯನ್ನು ಬೆರೆಸಲಾಗಿದೆ ಎಂಬ ಸಂದೇಶವನ್ನು ಟ್ವೀಟ್ ಮೂಲಕ ತಿಳಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    iD ಫ್ರೆಶ್ ಫುಡ್ ಸಂಸ್ಥೆಯು ತನ್ನ ಆಹಾರ ಉತ್ಪನ್ನಗಳಲ್ಲಿ ಹಸುವಿನ ಮೂಳೆಯನ್ನು ಬಳಸುತ್ತಿದೆ ಎಂಬ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸಂಸ್ಥೆಯ ಆಹಾರ ಉತ್ಪನ್ನಗಳನ್ನು ಬಳಸುತ್ತಿರುವ ಹಲವಾರು ನಿಷ್ಠಾವಂತ ಗ್ರಾಹಕರು ಇದೀಗ ಕಂಪನಿಯ ಬೆಂಬಲಕ್ಕೆ ನಿಂತಿದ್ದಾರೆ. ಕಂಪನಿಯ ಪರವಾಗಿ ಒಕ್ಕೊರಲಿನಿಂದ ತಮ್ಮ ಧ್ವನಿ ಎತ್ತಿದ್ದಾರೆ. ಕಂಪನಿಯ ಇಡ್ಲಿ, ದೋಸೆ, ಕಾಫಿ ಫಿಲ್ಟರ್, ವಡಾ ಹಿಟ್ಟು ಮನೆಮನೆಗಳಲ್ಲಿ ಜನಪ್ರಿಯವಾಗಿದ್ದು ಲಕ್ಷಾಂತರ ಗ್ರಾಹಕರು ಐಡಿ ಫ್ರೆಶ್ ಫುಡ್‌ನ ಅಭಿಮಾನಿಗಳಾಗಿದ್ದಾರೆ.

    ಚೆನ್ನೈ ಗ್ರಾಹಕರಲ್ಲಿ ಆತಂಕ 

    ಟ್ವಿಟ್ಟರ್‌ನಲ್ಲಿ ಕಂಪನಿಯ ವಿರುದ್ಧವಾಗಿ ಕೆಲವೊಂದು ಪೋಸ್ಟ್‌ಗಳು ಹರಿದಾಡುತ್ತಿದ್ದು ಐಡಿ ಕಂಪನಿಯು ಹಸುವಿನ ಮೂಳೆಗಳನ್ನು ತನ್ನ ಇಡ್ಲಿ ದೋಸೆ ಹಿಟ್ಟುಗಳಲ್ಲಿ ಬಳಸುತ್ತಿದ್ದು ಗ್ರಾಹಕರು ಈ ಬಗ್ಗೆ ಎಚ್ಚರವಾಗಿರಬೇಕು ಎಂಬ ಒಕ್ಕಣೆಯನ್ನು ಈ ಮೆಸೇಜ್ ಒಳಗೊಂಡಿದೆ. ಚೆನ್ನೈನ ಎಲ್ಲಾ ಸ್ಟೋರ್ ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟವಾಗುತ್ತಿರುವ ಐಡಿ ಕಂಪೆನಿಯ ದೋಸೆ ಇಡ್ಲಿ ಹಿಟ್ಟುಗಳಲ್ಲಿ ಹಸುವಿನ ಮೂಳೆಯನ್ನು ಬೆರೆಸಲಾಗಿದೆ ಎಂಬ ಸಂದೇಶವನ್ನು ಟ್ವೀಟ್ ಮೂಲಕ ತಿಳಿಸಲಾಗಿದೆ.

    ಬೆಂಬಲಕ್ಕೆ ನಿಂತ ಗ್ರಾಹಕರು 

    ಹೆಚ್ಚಿನ ಚೆನ್ನೈ ಸ್ಟೋರ್‌ಗಳು ಅಥವಾ ಸೂಪರ್ ಮಾರ್ಕೆಟ್‌ಗಳು ಐಡಿ ಫುಡ್‌ಗಳ ಹಿಟ್ಟನ್ನು ಮಾರಾಟ ಮಾಡುತ್ತಿರಬಹುದು ಈ ಕಂಪನಿ ಮುಸ್ಲೀಮರಿಗೆ ಮಾತ್ರ ಉದ್ಯೋಗ ನೀಡುತ್ತದೆ ಹಾಗೂ ಇದು ಹಲಾಲ್ ಪ್ರಮಾಣೀಕೃತ ಎಂಬುದು ಎಷ್ಟು ಜನರಿಗೆ ಗೊತ್ತು? ಐಡಿ ಫ್ರೆಶ್ ಫುಡ್ ಖಾಸಗಿ ಕಂಪನಿಯಾಗಿದ್ದು ಇದನ್ನು 2005 ರಲ್ಲಿ ಪಿಸಿ ಮುಸ್ತಾಫ ಹುಟ್ಟುಹಾಕಿದ್ದಾರೆ ಎಂಬುದಾಗಿ ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.

    ಐಡಿ ಫ್ರೆಶ್​ ಫುಡ್​ ಕಂಪನಿಯಿಂದ ಸ್ಪಷ್ಟನೆ 

    ಈ ಎಲ್ಲಾ ವಿವಾದಗಳಿಗೆ ತೆರೆ ಎಳೆಯುವ ಸಲುವಾಗಿ ಕಂಪನಿಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು ತಮ್ಮ ಪ್ರಾಡಕ್ಟ್‌ಗಳಲ್ಲಿ ಕೇವಲ ಸಸ್ಯಾಹಾರಿ ಅಂಶಗಳನ್ನೇ ಬಳಸುತ್ತಿದೆ ಎಂಬುದಾಗಿ ತಿಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಐಡಿ ಕಂಪೆನಿ ತಮ್ಮ ಆಹಾರ ಉತ್ಪನ್ನಗಳ ಕುರಿತು ಸುಳ್ಳು ಹಾಗೂ ವಿವಾದಾತ್ಮಕ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈ ಕುರಿತು ಸಾಕಷ್ಟು ವಿವಾದಾತ್ಮಕ ಟೀಕೆಗಳು ಸಾಮಾಜಿಕ ವಲಯದಲ್ಲಿ ಮೂಡಿ ಬರುತ್ತಿರುವುದರಿಂದ ನಾವು ಅಧಿಕೃತ ಸ್ಪಷ್ಟನೆ ನೀಡಲು ಮುಂದಾಗಿದ್ದೇವೆ. ಐಡಿ ಕೇವಲ ತನ್ನ ಉತ್ಪನ್ನಗಳಲ್ಲಿ ಸಸ್ಯಾಹಾರಿ ಉತ್ಪನ್ನಗಳನ್ನು ಮಾತ್ರ ಬಳಸುತ್ತದೆ. ಐಡಿ ಇಡ್ಲಿ ದೋಸೆ ಹಿಟ್ಟನ್ನು ಅಕ್ಕಿ, ಉದ್ದಿನ ಬೇಳೆ, ಮೆಂತ್ಯ ಹಾಗೂ ಶುದ್ಧ ನೀರಿನಿಂದ ತಯಾರಿಸಲಾಗುತ್ತದೆ. ಈ ಎಲ್ಲಾ ವಸ್ತುಗಳು 100% ನೈಸರ್ಗಿಕವಾಗಿದ್ದು ಸಸ್ಯಾಹಾರಿ ಉತ್ಪನ್ನಗಳಾಗಿವೆ. ನಮ್ಮ ಯಾವುದೇ ಉತ್ಪನ್ನಗಳಲ್ಲಿ ಪ್ರಾಣಿಗಳ ದೇಹದ ಭಾಗಗಳನ್ನು ಇಲ್ಲವೇ ಪ್ರಾಣಿ ಉತ್ಪನ್ನಗಳನ್ನು ಮಿಶ್ರಗೊಳಿಸಿಲ್ಲ ಎಂದು ತಿಳಿಸಿದೆ. 

    ಇದನ್ನೂ ಓದಿ: ಆಹಾರ ತುರ್ತು ಪರಿಸ್ಥಿತಿ, ವಿದೇಶಿ ವಿನಿಮಯ ಬಿಕ್ಕಟ್ಟಿನಿಂದ ತತ್ತರಿಸಿದ ಶ್ರೀಲಂಕಾ; ಮತ್ತೆ ಪುಟಿದೇಳುವ ಭರವಸೆಯಲ್ಲಿ ದ್ವೀಪ ರಾಷ್ಟ್ರ

    ಅನುಮಾನ ಬಿಡಿ, ನಂಬಿಕೆಯಿಂದ ಸೇವಿಸಿ

    ಆದರೆ ದೋಸೆ ಹಿಟ್ಟು ಹಾಗೂ ಇಡ್ಲಿ ಹಿಟ್ಟನ್ನು ಬಳಸಿರುವ ಹೆಚ್ಚಿನ ಗ್ರಾಹಕರು ಇದೀಗ ಟ್ವಿಟ್ಟರ್‌ನಲ್ಲಿ ಕಂಪನಿಯ ಪರವಾಗಿ ವಾದಿಸುತ್ತಿದ್ದು ನಾವು ಇನ್ನು ಹೆಚ್ಚು ದೃಢನಿಶ್ಚಯದಿಂದ ಉತ್ಪನ್ನಗಳನ್ನು ಬಳಸುತ್ತೇವೆ ಹಾಗೂ ಇತರರಿಗೆ ಬಳಸಲು ಸಲಹೆ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಗ್ರಾಹಕರು ಟ್ವಿಟ್ಟರ್‌ನಲ್ಲಿ ಕಂಪನಿಯ ಹಿಟ್ಟಿನ ಕುರಿತು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ನಾವು ನಿತ್ಯವೂ ಈ ಕಂಪನಿಯ ಇಡ್ಲಿ ದೋಸೆ ಹಿಟ್ಟುಗಳನ್ನೇ ಬಳಸುತ್ತಿದ್ದು ಇದು ಮನೆಯಲ್ಲೇ ತಯಾರಿಸಿದ ಅದೇ ರುಚಿಯನ್ನು ತಿಂಡಿಗಳಿಗೆ ನೀಡುತ್ತಿದೆ. ದಕ್ಷಿಣ ಭಾರತದ ತಿನಿಸು ನಮಗೆ ತುಂಬಾ ಇಷ್ಟವಾಗಿದ್ದು ಹಿಟ್ಟಿನ ಕುರಿತು ನಮಗೆ ಯಾವುದೇ ಅನುಮಾನಗಳಿಲ್ಲ ಎಂದು ತಿಳಿಸಿದ್ದಾರೆ. ತಾವು ಬಳಸುವ ಉತ್ಪದ ಪರ ಗ್ರಾಹಕರೇ ನಿಂತಿರುವುದು ಆಹಾರ ಸಂಸ್ಥೆಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ 
    First published: