USA: ನ್ಯೂಯಾರ್ಕ್‌ನ ಮೊದಲ ಮಹಿಳಾ ಗವರ್ನರ್ ಆದ ಕ್ಯಾತಿ ಹೊಚುಲ್

ಆಗಸ್ಟ್ 10 ರಂದು, ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರು ರಾಜ್ಯ ಅಸೆಂಬ್ಲಿಯಲ್ಲಿ ಮಂಡಿಸಲಿರುವ ದೋಷಾರೋಪಣೆಯನ್ನು ತಪ್ಪಿಸುವ ಸಲುವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು, ರಾಜ್ಯದ ಅಟಾರ್ನಿ ಜನರಲ್ ವರದಿಯಲ್ಲಿ ಕ್ಯುಮೊ ಅವರು 11 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಕ್ಯಾತಿ ಹೊಚುಲ್​

ಕ್ಯಾತಿ ಹೊಚುಲ್​

 • Share this:

  ನ್ಯೂಯಾರ್ಕ್‌ನ 233 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ (62) ಆಯ್ಕೆಯಾಗಿದ್ದಾರೆ. ಹಿಂದಿನ ಗವರ್ನರ್ ಆಂಡ್ರ್ಯೂ ಕ್ಯುಮೊ ಕಚೇರಿಯ ಹನ್ನೊಂದು ಮಹಿಳಾ ಸಿಬ್ಬಂದಿಗಳೊಡನೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರಿಂದ ಲೆಫ್ಟಿನೆಂಟ್ ಗವರ್ನರ್ ಕ್ಯಾತಿಯನ್ನು ಸ್ಥಾನಕ್ಕೆ ಆಯ್ಕೆಮಾಡಲಾಗಿದೆ. ಕ್ಯಾತಿಯ ಅಧಿಕಾರಾವಧಿ 2022 ರ ಡಿಸೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ಸರಕಾರದ ಎಲ್ಲಾ ಹಂತಹ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಪಡೆದಿರುವ ಕ್ಯಾತಿ 57 ನೇ ಗವರ್ನರ್ ಆಗಿ ಸೇವೆ ಸಲ್ಲಿಸಲು ಸಿದ್ಧಳಿರುವೆ ಎಂದು ತಿಳಿಸಿದ್ದಾರೆ.


  ಕ್ಯಾತಿ ಹೊಚುಲ್ ಬಗ್ಗೆ ಇನ್ನಷ್ಟು ಮಾಹಿತಿ


  ಕ್ಯುಮೊ ಹಾಗೂ ಹೊಚುಲ್ 2014 ರಿಂದಲೇ ಈ ರೇಸ್​ನಲ್ಲಿ ಇದ್ದರು. ಗವರ್ನರ್ ಹುದ್ದೆಗೆ ಏರಲು ಕ್ಯುಮೊ ಕ್ಯಾತಿಯನ್ನು ಕೇಳಿಕೊಂಡಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಇವರಿಬ್ಬರೂ 2014 ಹಾಗೂ 2018 ರ ಚುನಾವಣೆಯಲ್ಲಿ ಗೆದ್ದರು. ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಹೊಚುಲ್ ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹೆರಾಯಿನ್ ಹಾಗೂ ಒಪಿಯಾಡ್ ನಿಂದನೆಯನ್ನು ಎದುರಿಸುವ ಕಾರ್ಯಪಡೆಯ ಸಹ-ಅಧ್ಯಕ್ಷರು ಆಗಿದ್ದು 2015 ರಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿನ ದೌರ್ಜನ್ಯವನ್ನು ಎದುರಿಸಲು “ಇನಫ್ ಈಸ್ ಇನಫ್” ಎಂಬ ಅಭಿಯಾನವನ್ನು ಮುನ್ನಡೆಸಿದ ಕೀರ್ತಿಯನ್ನು ಹೊಂದಿದ್ದಾರೆ. ಹೊಚುಲ್ ನ್ಯೂಯಾರ್ಕ್‌ನ ಕಾಂಗ್ರೆಸ್ ಸದಸ್ಯರಾದ ಜಾನ್ ಲಾಫಾಲ್ಸಗೆ ಕಾನೂನು ಮತ್ತು ಶಾಸಕಾಂಗ ಸಹಾಯಕರಾಗಿ ಮತ್ತು ನಂತರ ರಾಜ್ಯದ ಉನ್ನತ ರಾಜಕೀಯ ವ್ಯಕ್ತಿ ಸೆನೆಟರ್ ಡೇನಿಯಲ್ ಪ್ಯಾಟ್ರಿಕ್ ಮೊಯ್ನಿಹಾನ್ ಅವರ ಜೊತೆ ಕೆಲಸ ಮಾಡಿದ ಅನುಭವ ಕೂಡ ಕ್ಯಾತಿಗಿದೆ.


  ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ರಾಜೀನಾಮೆ


  ಆಗಸ್ಟ್ 10 ರಂದು, ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರು ರಾಜ್ಯ ಅಸೆಂಬ್ಲಿಯಲ್ಲಿ ಮಂಡಿಸಲಿರುವ ದೋಷಾರೋಪಣೆಯನ್ನು ತಪ್ಪಿಸುವ ಸಲುವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದರು, ರಾಜ್ಯದ ಅಟಾರ್ನಿ ಜನರಲ್ ವರದಿಯಲ್ಲಿ ಕ್ಯುಮೊ ಅವರು 11 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.


  ಈ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆಯನ್ನು ನೀಡಿದ್ದ ಆಂಡ್ರ್ಯೂ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಾನು ಅಧಿಕಾರದಿಂದ ಪಕ್ಕಕ್ಕೆ ಸರಿಯುವುದೇ ಉತ್ತಮ ವಿಧಾನ ಎಂಬುದಾಗಿ ತೋರುತ್ತಿದೆ. ಸರಕಾರವೇ ಇದಕ್ಕೆ ಉತ್ತಮ ಪರಿಹಾರವನ್ನು ಕಂಡುಕೊಳ್ಳಲಿ ನನ್ನ ರಾಜೀನಾಮೆ 14 ದಿನಗಳಲ್ಲಿ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. ಈ ಮೊದಲು ಉದ್ಯೋಗಿಗಳೊಂದಿಗಿನ ಸ್ನೇಹವನ್ನು ತಪ್ಪಾಗಿ ಅರ್ಥೈಸಲಾಗಿದ್ದರಿಂದ ಕ್ಯುಮೊ ಆಪಾದನೆಯನ್ನು ನಿರಾಕರಿಸಿದ್ದರು. ವೀಡಿಯೊ ಹೇಳಿಕೆಯಲ್ಲಿ, ಕ್ಯುಮೊ ತನ್ನ ನಡವಳಿಕೆ ಮತ್ತು ಉದ್ದೇಶಗಳನ್ನು ಬೇಕಂತಲೇ ತನ್ನ ಮೇಲೆ ಆರೋಪ ಮಾಡಿದವರು ತಪ್ಪಾಗಿ ನಿರೂಪಿಸಿದ್ದಾರೆ ಮತ್ತು ತಮಗೆ ರಾಜೀನಾಮೆ ನೀಡುವ ಆಲೋಚನೆಯಿಲ್ಲ ಎಂದು ಅವರು ಹೇಳಿದ್ದಾರೆ.


  ಅವರು ಹೇಳಿರುವಂತೆ, "ಚಿತ್ರಿಸಿರುವ ಸಂಗತಿಗಳಿಗಿಂತ ಸತ್ಯಗಳು ತುಂಬಾ ಭಿನ್ನವಾಗಿವೆ, ನಾನು ಯಾರನ್ನೂ ಅನುಚಿತವಾಗಿ ಮುಟ್ಟಲಿಲ್ಲ, ಲೈಂಗಿಕವಾಗಿ ನಡೆಸಿಕೊಳ್ಳಲಿಲ್ಲ ಎಂದು ಮಾಜಿ ಗವರ್ನರ್ ಸಮರ್ಥನೆ ಮಾಡಿಕೊಂಡಿದ್ದರು.


  ಇದನ್ನೂ ಓದಿ: ಮುಕ್ಕಾಲು ಭಾಗ ದೇಶವನ್ನು ವಶಕ್ಕೆ ಪಡೆದ ತಾಲಿಬಾನ್​: ಅಧಿಕಾರ ಹಂಚಿಕೆ ಬೇಡಿಕೆ ಇಟ್ಟ ಅಫ್ಘನ್​ ಸರ್ಕಾರ

  ಜೋ ಬಿಡೆನ್ ಆಂಡ್ರ್ಯೂ ಕ್ಯುಮೊ ರಾಜೀನಾಮೆಗೆ ಒತ್ತಾಯಿಸಿದರು


  ಹಿಂದಿನ ಗವರ್ನರ್ ಆಂಡ್ರ್ಯೂ ಕ್ಯುಮೊ ತನ್ನ ರಾಜ್ಯ ಕಚೇರಿಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ನ್ಯೂಯಾರ್ಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಅವರು ಆಪಾದಿಸಿದ ನಂತರ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಕ್ಯುಮೊಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: