Queen Elizabeth II: ಬ್ರಿಟನ್ ರಾಣಿ ಜೊತೆ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ ಈ ಮಹಿಳೆ!

ಅಮೆರಿಕದ ಮಹಿಳೆಯೊಬ್ಬರು ಬ್ರಿಟನ್‌ ರಾಣಿ ಎಲಿಜಬೆತ್‌ ಜೊತೆಗೆ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ರಾಣಿ ಎಲಿಜಬೆತ್ II ಮತ್ತು ಮಿಸ್‌ ಹ್ಯಾಂಕಿ ಅವರು ಕಳೆದ 70 ವರ್ಷಗಳಿಂದ ಲೇಖನಿಯ ಸ್ನೇಹಿತರಾಗಿದ್ದರು ಎಂದು ಸ್ವತಃ ಹ್ಯಾಂಕಿ ಬಹಿರಂಗಪಡಿಸಿದ್ದಾರೆ.

ರಾಣಿ ಎಲಿಜಬೆತ್‌

ರಾಣಿ ಎಲಿಜಬೆತ್‌

  • Share this:
ಬ್ರಿಟನ್‌ ರಾಣಿ ಎಲಿಜಬೆತ್‌ (Queen Elizabeth) ಸಾವಿನ ನಂತರ ಅವರ ಬಗೆಗಿನ ಅನೇಕ ಕುತೂಹಲಕಾರಿ ವಿಷಯಗಳು ಹೊರಬರುತ್ತಲೇ ಇವೆ. ರಾಣಿಯ ಉಡುಗೆ ತೊಡುಗೆ ಯಿಂದ ಹಿಡಿದು, ಅವರ ಆಡಳಿತಾತ್ಮಕ ವಿಷಯ, ಅವರ ದಿನಚರಿ ಹಾಗೂ ಅವರ ಕೆಲ ರಹಸ್ಯ ಟ್ರಿಕ್ಸ್‌ ಗಳೂ ಬೆಳಕಿಗೆ ಬರುತ್ತಿವೆ. ರಾಣಿಯ ನಿಧನದ ಬಳಿಕ ಇದೀಗ ರಾಣಿಗಿದ್ದ ಪತ್ರ (Letter) ವ್ಯವಹಾರ ಪ್ರಸಂಗ ಬೆಳಕಿಗೆ ಬಂದಿದೆ. ಹೌದು, ಅಮೆರಿಕದ ಮಹಿಳೆಯೊಬ್ಬರು (American Women) ಬ್ರಿಟನ್‌ ರಾಣಿ ಎಲಿಜಬೆತ್‌ ಜೊತೆಗೆ ಪತ್ರ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ. ರಾಣಿ ಎಲಿಜಬೆತ್ II ಮತ್ತು ಮಿಸ್‌ ಹ್ಯಾಂಕಿ ಅವರು ಕಳೆದ 70 ವರ್ಷಗಳಿಂದ ಲೇಖನಿಯ ಸ್ನೇಹಿತರಾಗಿದ್ದರು (Friends) ಎಂದು ಸ್ವತಃ ಹ್ಯಾಂಕಿ ಬಹಿರಂಗಪಡಿಸಿದ್ದಾರೆ.

ಅಂದಹಾಗೆ ಹ್ಯಾಂಕಿ ಹಾಗೂ ರಾಣಿ ಎಲಿಜಬೆತ್‌ ಇಬ್ಬರ ಜನ್ಮದಿನವೂ ಒಂದೇ ದಿನ. ಉತ್ತರ ಡಕೋಟಾದ 96 ವರ್ಷದ ಅಡೆಲೆ ಹ್ಯಾಂಕಿ ಕೂಡ ಏಪ್ರಿಲ್ 21, 1926 ರಂದು ಜನಿಸಿದವರು. ಅವರಿಬ್ಬರೂ ಒಂದೇ ದಿನ ಹುಟ್ಟಿದವರಾದ್ದರಿಂದ ಪತ್ರದ ಮೂಲಕ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರಂತೆ.

ರಾಣಿಯೊಂದಿಗೆ ಪತ್ರವಿನಿಮಯ ಆರಂಭವಾಗಿದ್ದು ಹೇಗೆ?
ಅಂದಹಾಗೆ KFYR, NBC ಮತ್ತು ಫಾಕ್ಸ್-ಅಂಗಸಂಸ್ಥೆ ಮಾಧ್ಯಮದ ಪ್ರಕಾರ, ಹಾಂಕಿ ಅವರು ಮೊಟ್ಟ ಮೊದಲು ಬರ್ತ್‌ ಡೇ ಕಾರ್ಡ್‌ ಅನ್ನು 1953 ರಲ್ಲಿ ಪಟ್ಟಾಭಿಷೇಕಗೊಂಡ ಸ್ವಲ್ಪ ಸಮಯದ ನಂತರ ಬ್ರಿಟನ್‌ ರಾಜನಿಗೆ ಕಳುಹಿಸಿದ್ದರಂತೆ. ಆ ಬಳಿಕ ಬರ್ತ್‌ ಡೇ ಕಾರ್ಡ್‌ ಅನ್ನು ರಾಣಿ ಎಲಿಜಬೆತ್‌ ಹಿಂದಿರುಗಿಸಿದರಂತೆ. ಇದಾದ ಬಳಿಕ ಪ್ರತಿ ಜನ್ಮದಿನದಂದೂ ಈ ಪತ್ರ ವ್ಯವಹಾರವು ಆರಂಭವಾಯಿತು ಎನ್ನಲಾಗಿದೆ.

ಇದನ್ನೂ ಓದಿ: Diamond: 500 ಕ್ಯಾರೆಟ್ ವಜ್ರ ಮರಳಿಸಿ! ಬ್ರಿಟನ್​ಗೆ ದಕ್ಷಿಣ ಆಫ್ರಿಕಾದಿಂದ ಒತ್ತಾಯ

ಹೀಗೆ ಆರಂಭವಾದ ಅವರ ಸಂಬಂಧವು ಪ್ರತಿ ಜನ್ಮದಿನದಂದೂ ಕಾರ್ಡ್‌ ಕಳುಹಿಸುವುದರೊಂದಿಗೆ ಮುಂದುವರಿಯಿತು. ಅವರು ಪ್ರತಿ ವರ್ಷ ಕೈಬರಹದ ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸಿದಾಗಿನಿಂದ ಈ ಬಂಧವು ಆರಂಭವಾಯಿತಂತೆ.

ರಾಣಿಯೂ ಪತ್ರ ಕಳುಹಿಸುತ್ತಿದ್ದರಂತೆ
ಹ್ಯಾಂಕಿ ಅವರು ಯಾವಾಗಲೂ ಪತ್ರಗಳನ್ನು ಬರೆಯುತ್ತಿದ್ದರು ಮತ್ತು ರಾಣಿ ಎಲಿಜಬೆತ್‌ ಯಾವಾಗಲೂ ಅದಕ್ಕೆ ಟಿಪ್ಪಣಿ ರೂಪದಲ್ಲಿ ವಾಪಸ್‌ ಬರೆದು ಕಳುಹಿಸುತ್ತಿದ್ದರು. ಆದರೆ 96 ವರ್ಷ ವಯಸ್ಸಿನ ಹ್ಯಾಂಕಿ ಹೇಳುವುದೆಂದರೆ ಅವರು ರಾಣಿಯನ್ನು ಎಂದಿಗೂ ಭೇಟಿಯಾಗಲೇ ಇಲ್ಲವಂತೆ.

ಇಷ್ಟಲ್ಲದೇ ಮಿಸ್‌ ಹ್ಯಾಂಕಿ ಅವರು ಒಮ್ಮೆ ರಾಣಿಯ ಟ್ರೇಡ್‌ಮಾರ್ಕ್ ಎಕ್ಸಸರೀಸ್‌ ಗಳಲ್ಲಿ ಒಂದನ್ನು ಪಡೆಯಲು ಪ್ರಯತ್ನಿಸಿದರಂತೆ. ಅಲ್ಲದೇ ರಾಣಿ ತನಗೆ ಒಂದನ್ನು ಕಳುಹಿಸುತ್ತಾಳೆಂದು ಕೂಡ ಆಶಿಸಿದ್ದರಂತೆ. ಆದರೆ ರಾಣಿ ಎಲಿಜಬೆತ್‌ ತನ್ನ ಹುಟ್ಟುಹಬ್ಬದಂದು ಸುಂದರವಾದ ಚಿತ್ರವನ್ನು ಕಳುಹಿಸಿದ್ದರು ಎಂದು ಅವರು ಹೇಳಿದ್ದಾರೆ.

ರಾಣಿ ಬಗೆಗಿನ ವಿಚಾರಗಳನ್ನು ಹಂಚಿಕೊಂಡ ಹ್ಯಾಂಕಿ
ಇನ್ನು ಮಿಸ್‌ ಹ್ಯಾಂಕಿ ಅವರು ಮತ್ತೊಂದಿಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ. ರಾಣಿಯ ಜೊತೆ ಹಂಚಿಕೊಂಡ ಜನ್ಮದಿನದ ವಿಚಾರಗಳ ಹೊರತಾಗಿಯೂ ಅವರು ಅಡುಗೆಯ ಬಗ್ಗೆ ಸಮಾನವಾಗಿ ಉತ್ಸುಕರಾಗಿದ್ದಾಗಿ ತಿಳಿಸಿದ್ದಾರೆ. ರಾಣಿ ತಾವು ಇಷ್ಟಪಟ್ಟ ಪಾಕವಿಧಾನಗಳನ್ನು ತಿಳಿಸುತ್ತಿದ್ದರು ಎಂಬುದಾಗಿ ಹ್ಯಾಂಕಿ ತಿಳಿಸಿದ್ದಾರೆ.

ಇನ್ನು ಮಿಸ್‌ ಹ್ಯಾಂಕಿ ಅವರು ಹೇಳೋ ಪ್ರಕಾರ ಅವರು ರಾಣಿಗೆ ಎಷ್ಟು ಪತ್ರಗಳನ್ನು ಬರೆದಿದ್ದಾರೆ ಎಂಬುದು ತನಗೆ ನೆನಪಿಲ್ಲ. ಆದರೆ ತಾವು ರಾಣಿಯೊಂದಿಗಿನ ಪತ್ರ ವ್ಯವಹಾರವನ್ನು ತುಂಬಾನೇ ಮಿಸ್‌ ಮಾಡಿಕೊಳ್ಳುವುದಾಗಿ ಅವರು ಹೇಳುತ್ತಾರೆ.

ಇದನ್ನೂ ಓದಿ:  Queen Elizabeth and Prince Philip: ರಾಣಿ ಎಲಿಜಬೆತ್ ಮತ್ತು ಪ್ರಿನ್ಸ್ ಫಿಲಿಪ್ ಅವರ ಬದುಕಿನ ಅಪರೂಪದ ಚಿತ್ರಗಳು

ರಾಣಿ ಎಲಿಜಬೆತ್‌ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದು ಇಡೀ ಜಗತ್ತು ಅಪ್ರತಿಮ ಆಡಳಿತಗಾರ್ತಿ ಸಾವಿಗೆ ಸಂತಾಪ ಸೂಚಿಸಿತ್ತು. 10 ದಿನಗಳ ಶೋಕಾಚರಣೆ ಬಳಿಕ ನಿನ್ನೆ ಲಂಡನ್‌ ನ ವೆಸ್ಟ್‌ ಮಿನಿಸ್ಟರ್‌ ಅಬ್ಬೆಯಲ್ಲಿ ರಾಣಿ ಎಲಿಜಬೆತ್‌ ಅವರ ಅಂತಿಮ ಸಂಸ್ಕಾರ ನಡೆಯಿತು. ಇದಕ್ಕೆ ಪ್ರಪಂಚದ ಗಣ್ಯರು, ರಾಜಮನೆತನದವರು ಹಾಗೂ ಜಾಗತಿಕ ನಾಯಕರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದ್ದರು.
Published by:Ashwini Prabhu
First published: