HOME » NEWS » National-international » US WOMAN RECEIVES 150 PACKAGES FROM AMAZON WITH OUT PLACING THE ORDERS STG AE

ಆರ್ಡರ್ ಮಾಡದಿದ್ರೂ ಮನೆಗೆ ಬಂತು 150 ಅಮೆಜಾನ್ ಪಾರ್ಸಲ್: ಮಹಿಳೆ ಕಕ್ಕಾಬಿಕ್ಕಿ

ನೀವು ಆನ್​ಲೈನ್​ ಶಾಪಿಂಗ್​ ಮಾಡದೆ ಹೋದರೂ ನಿಮ್ಮ ಮನೆಗೆ 150 ಪಾರ್ಸೆಲ್​ಗಳು ಒಂದರ ಹಿಂದೆ ಒಂದರಂತೆ ಬಂದರೆ ನಿಮಗೆ ಹೇಗಾಗಬೇಡ. ಇಂತಹ ಒಂದು ಘಟನೆ ಮಹಿಳೆಯೊಬ್ಬರ ಜೊತೆ ನಡೆದಿದೆ. ಆರ್ಡರ್ ಮಾಡದಿದ್ದರೂ 150 ಪಾರ್ಸೆಲ್​ಗಳು ಅವರ ಮನೆ ಸೇರಿವೆ.

Anitha E | news18-kannada
Updated:June 24, 2021, 5:08 PM IST
ಆರ್ಡರ್ ಮಾಡದಿದ್ರೂ ಮನೆಗೆ ಬಂತು 150 ಅಮೆಜಾನ್ ಪಾರ್ಸಲ್: ಮಹಿಳೆ ಕಕ್ಕಾಬಿಕ್ಕಿ
ಪ್ರಾತಿನಿಧಿಕ ಚಿತ್ರ
  • Share this:
ಅಮೆರಿಕದಲ್ಲಿ ಅಪರೂಪದ ಹಾಗೂ ನಂಬಲಸಾಧ್ಯವಾದ ಘಟನೆ ಒಂದು ನಡೆದಿದೆ. ಉದಾಹರಣೆಗೆ ನೀವು ಆನ್‍ಲೈನ್‍ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿರುವುದಿಲ್ಲ. ಆದರೆ ಸಾಲು ಸಾಲು ಪಾರ್ಸಲ್‍ಗಳು ನಿಮ್ಮ ಮನೆಯ ವಿಳಾಸಕ್ಕೆ ತಲುಪಿದರೆ ಹೇಗಾಗುತ್ತದೆ. ಆಶ್ಚರ್ಯ ಪಡಬೇಕೋ ಅಥವಾ ಆತಂಕಕ್ಕೆ ಒಳಗಾಗುತ್ತೇವೋ ತಿಳಿಯುವುದಿಲ್ಲ. ಈ ಬಗ್ಗೆ ಎಲ್ಲೆಡೆ ವಿಚಾರಿಸಿದಾಗ ಮಾಹಿತಿ ಸಿಗಲಿಲ್ಲ ಎಂದರೆ ಪರಿಸ್ಥಿತಿ ಹೇಗಿರಬೇಡ ಹೇಳಿ. ಹೌದು ಇದೇ ರೀತಿಯ ಅನುಭವವನ್ನು ನ್ಯೂಯಾರ್ಕ್‍ನ ಮಹಿಳೆಯೊಬ್ಬರು ಎದುರಿಸಿ ಕಂಗಾಲಾಗಿದ್ದಾರೆ. ಇವರು ಅಮೆಜಾನ್‍ನಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡಿಲ್ಲ ಹಾಗೂ ಖರೀದಿಯೂ ಮಾಡಿಲ್ಲ. ಆದರೆ ಅವರ ಹೆಸರಿಗೆ  150 ಪಾರ್ಸಲ್‍ಗಳು ನಿರಂತರವಾಗಿ ಬಂದಿದೆ. ಈ ಎಲ್ಲ ಪಾರ್ಸಲ್‍ಗಳಲ್ಲಿ ಮಾಸ್ಕ್ ಬ್ರಾಕೆಟ್‍ಗಳಿದ್ದು, ತಾನು ಆರ್ಡರ್ ಮಾಡದ ವಸ್ತುಗಳನ್ನು ಯಾರಿಗಾದರೂ ನೀಡಲು ಮಹಿಳೆ ನಿರ್ಧರಿಸಿದ್ದಾರೆ.

ಏಕಾಏಕಿ ಬಂದ ಪಾರ್ಸಲ್ ಬಗ್ಗೆ ತಲೆಕೆಡಿಸಿಕೊಂಡ ಮಹಿಳೆ ಅಮೆಜಾನ್‍ಗೆ ಕರೆ ಮಾಡಿ ಮಾತನಾಡಿದ ಮಹಿಳೆಯು ತನಗೆ ಎದುರಾದ ಪರಿಸ್ಥಿತಿ, ಆರ್ಡರ್ ಮಾಡದಿದ್ದರೂ ತಲುಪಿದ ಪಾರ್ಸಲ್‍ಗಳ ಬಗ್ಗೆ ವಿವರಿಸಿದ್ದಾರೆ. ಆಗ ಅವರು ಈ ಎಲ್ಲ ಪ್ಯಾಕೇಜ್‍ಗಳನ್ನು ನಿಮ್ಮ ಬಳಿಯೇ ಇರಿಸಿಕೊಂಡು ಇದರ ಬಗ್ಗೆ ದೂರು ದಾಖಲಿಸುವಂತೆ ಮಾಹಿತಿ ನೀಡಿದ್ದಾರಂತೆ.

amazon
ಅಮೆಜಾನ್​


ಸಿಎನ್‍ಎನ್ ವರದಿಯ ಪ್ರಕಾರ, ನ್ಯೂಯಾರ್ಕಿನ ಜಿಲ್ಲಿಯನ್ ಕ್ಯಾನನ್, ತನ್ನ ವ್ಯವಹಾರದ ಪಾಲುದಾರರು ಕಳುಹಿಸಿದ್ದಾರೆಂದು  ಅವರು ಆರಂಭದಲ್ಲಿ ಭಾವಿಸಿದ್ದರು. ಆದರೆ ಅವರು ಸಹ ಕಳುಹಿಸಿರಲಿಲ್ಲ. ಆದರೂ ತನ್ನ ನಿವಾಸಕ್ಕೆ ಬರುವ ಪ್ಯಾಕೇಜ್‍ಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇತ್ತು. ಈ ನಡುವೆಯೂ ಕೂಡಲೇ ಪಾರ್ಸೆಲ್‍ನಲ್ಲಿ ಬರೆದ ವಿಳಾಸವನ್ನು ಪರಿಶೀಲಿಸಿದಾಗ ವಿಳಾಸವೂ ಸರಿಯಾಗಿಯೇ ಇತ್ತು. ಆದರೆ ಅದರಲ್ಲಿ ಉಲ್ಲೇಖಿಸಲಾದ ಹೆಸರು ಬೇರೊಬ್ಬರದಾಗಿತ್ತು. ಆದರೂ ಅವರ ಮನೆಗೆ ಹಲವಾರು ಪಾರ್ಸೆಲ್‍ಗಳು ಬರುತ್ತಲೇ ಇದ್ದವು.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​: ಹೇಗಿದ್ದ ನಟ ಚಂದನ್​ ಕುಮಾರ್ ಹೀಗಾಗಿದ್ದಾರೆ ನೋಡಿ..!

ಜಿಲ್ಲಿಯನ್ ಕ್ಯಾನನ್ ಮತ್ತೆ ಅಮೆಜಾನ್ ಅನ್ನು ಸಂಪರ್ಕಿಸಿ ಏನು ತಪ್ಪಾಗಿದೆ ಎಂದು ವಿಚಾರಿಸಿದರು. ಇದು ಯಾವುದಾದರೂ ಪ್ರಕರಣವೇ ಅಥವಾ ಬ್ರ್ಯಾಂಡ್ ಕಡೆಯಿಂದ ಏನಾದರೂ ಪ್ರಮಾದವಾಗಿದೆಯಾ ಎಂದು ಎಲ್ಲರೂ ಗೊಂದಲಕ್ಕೀಡಾಗಿದ್ದರು. ಅದೆಲ್ಲದರ ನಡುವೆಯೂ ಅಮೆಜಾನ್‍ನ ತಪ್ಪು ಎಂದು ಕಂಡು ಹಿಡಿಯಲು ಸಾಧ್ಯವಾಯಿತು.
ಈ ಎಲ್ಲ ಪ್ರಕ್ರಿಯೆ ಮುಂದುವರೆಯುತ್ತಿರುವಾಗಲೇ ಜಿಲಿಯನ್ ಪಾರ್ಸಲ್ ಬಂದ ಈ ಮಾಸ್ಕ್‌ಗಳನ್ನು ಬಳಸಬಹುದಾದ ವಿಧಾನಗಳ ಬಗ್ಗೆಯೂ ಯೋಚಿಸಿದರು. ಅವರು ಮತ್ತು ಅವರ ಸಂಗಾತಿ ಡಿಐವೈ ಮತ್ತು ಸೃಜನಾತ್ಮಕ ಸ್ಟುಡಿಯೋವನ್ನು ಹೊಂದಿದ್ದರು. ಅವರು ಈ ಸ್ಟುಡಿಯೋ ಮೂಲಕ ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮಾಸ್ಕ್ ಕಿಟ್‍ಗಳನ್ನು ತಯಾರಿಸಲು ಮಾಸ್ಕ್‌ಗಳನ್ನು ಬಳಸಲು ಇಬ್ಬರೂ ನಿರ್ಧರಿಸಿದರು. ಇದಲ್ಲದೆ ಉಳಿದ ಮಾಸ್ಕ್‌ಗಳನ್ನು ದಾನ ಮಾಡುವಂತೆ ಜಿಲಿಯನ್ ಅಮೆಜಾನ್‍ನನ್ನು ಕೇಳಿಕೊಂಡರು.ಇದನ್ನೂ ಓದಿ: Milana-Krishna: ಲಡಾಖ್​ನಲ್ಲಿ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​..!

ಬಹುರಾಷ್ಟ್ರೀಯ ಬ್ರಾಂಡ್ ಅವರ ಬೇಡಿಕೆಗೆ ಸಮ್ಮತಿಸಿತು ಮತ್ತು ಮಾಸ್ಕ್‌ಗಳನ್ನು ದಾನ ಮಾಡಿತು. ನಂತರ ಆಕೆ ಮತ್ತು ಆಕೆಯ ಸಂಗಾತಿ ಹಲವು ಆಸ್ಪತ್ರೆಗಳನ್ನು ವಿಚಾರಿಸಿ ಅವಶ್ಯಕತೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಶೀಘ್ರದಲ್ಲೇ ಈ ಎಲ್ಲ ಕಿಟ್‍ಗಳನ್ನು ತಲುಪಿಸಲು ಯೋಚಿಸಿದ್ದಾರೆ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Anitha E
First published: June 24, 2021, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories