Pedicure: ಪೆಡಿಕ್ಯೂರ್‌ ಮಾಡಿಸಿಕೊಳ್ಳುವ ಮುನ್ನ ಎಚ್ಚರ..! ಈ ಮಹಿಳೆ ತನ್ನ ಕಾಲನ್ನೇ ಕಳೆದುಕೊಂಡಿದ್ದಾಳೆ ನೋಡಿ

ಆ ಸಲೂನ್‌ ಗ್ರಾಹಕರಿಗೆ ಗಂಭೀರ ಅಪಾಯವನ್ನುಂಟುಮಾಡುವ ಕೊಳಕು ಉಪಕರಣಗಳು ಮತ್ತು ಸಲಕರಣೆಗಳನ್ನು ಬಳಸುತ್ತಿದೆ ಎಂದು ಮೇ 2020ರಲ್ಲಿ ದಾಖಲಾದ ಮೊಕದ್ದಮೆಯು ಆರೋಪಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಿನ ಕಾಲದ ಮಹಿಳೆಯರು ಸಲೂನ್‌, ಪಾರ್ಲರ್‌ಗೆ (Salon and Parlor) ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಬರೀ ಕೂದಲು ಕಟ್‌ (Haircuts) ಮಾಡಿಸಿಕೊಳ್ಳಲು ಮಾಥ್ರವಲ್ಲ, ಮೇಕಪ್‌,(Makeup) ಹೇರ್‌ ಕಲರ್, ಇನ್ನೂ ಮುಂತಾದ ಕಾರಣಗಳಿಗೆ ಹೋಗುತ್ತಾರೆ. ನಿಮ್ಮ ಕಾಲು ಬೆರಳುಗಳ ಉಗುರುಗಳಿಗೆ ಪೆಡಿಕ್ಯೂರ್‌ ಮಾಡಿಸಿಕೊಳ್ಳುವುದನ್ನು ಹಲವರು ಮಾಡುತ್ತಾರೆ. ಆದರೆ, ಈ ರೀತಿ ಪೆಡಿಕ್ಯೂರ್‌ನಿಂದ(Pedicure) ಮಹಿಳೆಯೊಬ್ಬರು ತಮ್ಮ ಕಾಲುಗಳನ್ನೇ (Woman Loses) ಕಳೆದುಕೊಳ್ಳಬೇಕಾಯ್ತು (Loses) ಅಂದ್ರೆ ನೀವು ನಂಬ್ತೀರಾ..? ನಂಬಲು ಕಷ್ಟ ಎನಿಸಿದರೂ, ಇದು ನಿಜ. ಹೌದು, ನೈಲ್‌ ಸಲೂನ್‌ಗೆ ಹೋಗುವುದುತನ್ನ ಜೀವನದ ಕೆಟ್ಟ ದಿನವಾಗಿ ಹೊರಹೊಮ್ಮುತ್ತದೆ ಎಂದು ಕ್ಲಾರಾ ಶೆಲ್‌ಮನ್ ತನ್ನ ಕನಸಿನಲ್ಲಿ ಎಂದಿಗೂ ಯೋಚಿಸಿರಲಿಲ್ಲ.

ಕ್ಲಾರಾ ಶೆಲ್‌ಮನ್ ಮೊಕದ್ದಮೆ
ಕ್ಲಾರಾ ಸಲೂನ್‌ವೊಂದರಲ್ಲಿ ಪೆಡಿಕ್ಯೂರ್‌ ಮಾಡಿಸುತ್ತಿದ್ದರು. ಆದರೆ, ಕೊನೆಗೆ ಕಾಲನ್ನೇ ಕಳೆದುಕೊಳ್ಳಬೇಕಾಯಿತು ಎಂದು ಟ್ಯಾಂಪಾ ಬೇ ಟೈಮ್ಸ್ ವರದಿ ಮಾಡಿದೆ. ಪೆಡಿಕ್ಯೂರ್‌ ಮಾಡುವ ಸಲೂನ್‌ ಉದ್ಯೋಗಿಯೊಬ್ಬರು ಆಕೆಯ ಪಾದವನ್ನು ಕತ್ತರಿಸಿದ್ದಾರೆ ಎಂದು ಕ್ಲಾರಾ ಶೆಲ್‌ಮನ್ ಮೊಕದ್ದಮೆ ಸಲ್ಲಿಸಿದ್ದಾರೆ. ಅದರಿಂದ ಸೋಂಕು ತಗುಲಿತು ಮತ್ತು ಅದು ವೇಗವಾಗಿ ಹರಡಲು ಪ್ರಾರಂಭಿಸಿತು.

ಇದನ್ನೂ ಓದಿ: ಫ್ರಿಡ್ಜ್‌ನಲ್ಲಿ ಕೊಳೆತ ಆಹಾರ: ಪರಿಹಾರ ಧನ ನೀಡುವಂತೆ MESCOMಗೆ ಆದೇಶ

ಕ್ಲಾರಾ ಪೆರಿಫೆರಲ್‌ ಆರ್ಟಿರಿಯಲ್‌ ಕಾಯಿಲೆಯಿಂದ ಬಳಲುತ್ತಿದ್ದರಿಂದ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತು. ಸೋಂಕು ಮತ್ತು ತನ್ನ ಸಮಸ್ಯೆಯಿಂದ ಚಿಂತಿತಳಾದ ಕ್ಲಾರಾಗೆ ತನ್ನ ಕಾಲನ್ನು ಕತ್ತರಿಸುವುದನ್ನು ಬಿಟ್ಟು ಬೇರೆ ಯಾವುದೇ ಪರ್ಯಾಯ ಆಯ್ಕೆ ಕಾಣಲಿಲ್ಲ. ಪೆರಿಫೆರಲ್‌ ಆರ್ಟಿರಿಯಲ್‌ ಕಾಯಿಲೆಯು ಅಪಧಮನಿಗಳು ಕಿರಿದಾಗುವಂತೆ ಮಾಡುತ್ತದೆ, ಹೀಗಾಗಿ ಅಂಗಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಸಮಸ್ಯೆಯು ಹೆಚ್ಚಾಗಿ ಕಾಲುಗಳಿಗೆ ಹಾನಿಯನ್ನುಂಟುಮಾಡುತ್ತದೆ.

1.75 ಮಿಲಿಯನ್ ಡಾಲರ್‌ ಪರಿಹಾರ
ಸೆಪ್ಟೆಂಬರ್ 2018ರಲ್ಲಿ ಅಮೆರಿಕದ ಫ್ಲೋರಿಡಾದಲ್ಲಿ ಈ ದುರದೃಷ್ಟಕರ ಘಟನೆ ಸಂಭವಿಸಿದೆ. ಈಗ 3 ವರ್ಷಗಳ ಸುದೀರ್ಘ ನ್ಯಾಯಾಲಯದ ಪ್ರಕರಣದ ನಂತರ, ಕ್ಲಾರಾ ಸಲೂನ್‌ನೊಂದಿಗೆ ಇತ್ಯರ್ಥಕ್ಕೆ ಬಂದಿದ್ದಾರೆ. ಡಿಸೆಂಬರ್ 16ರಂದು ಸಲ್ಲಿಸಿದ ನ್ಯಾಯಾಲಯದ ದಾಖಲೆಗಳಲ್ಲಿ ಈ ಪರಿಹಾರವನ್ನು ನಿರ್ದಿಷ್ಟಪಡಿಸಲಾಗಿದೆ. ವರದಿಯ ಪ್ರಕಾರ, ಆಕೆಯ ವಕೀಲರಾದ ಪಾಲ್ ಫುಲ್ಮರ್, ಪರಿಹಾರ ಮೊತ್ತವು 1.75 ಮಿಲಿಯನ್ ಡಾಲರ್‌ ಎಂದು ಹೇಳಿದರು.

ಉದ್ಯೋಗಿಗಳಿಗೆ ತರಬೇತಿ ನೀಡಲು ವಿಫಲ
ಆ ಸಲೂನ್‌ ಗ್ರಾಹಕರಿಗೆ ಗಂಭೀರ ಅಪಾಯವನ್ನುಂಟುಮಾಡುವ ಕೊಳಕು ಉಪಕರಣಗಳು ಮತ್ತು ಸಲಕರಣೆಗಳನ್ನು ಬಳಸುತ್ತಿದೆ ಎಂದು ಮೇ 2020ರಲ್ಲಿ ದಾಖಲಾದ ಮೊಕದ್ದಮೆಯು ಆರೋಪಿಸಿದೆ. ಕಂಪನಿಯು ಪ್ರಮಾಣಿತ ನೀತಿಗಳನ್ನು ಅನುಸರಿಸಲು ಮತ್ತು ತನ್ನ ಉದ್ಯೋಗಿಗಳಿಗೆ ತರಬೇತಿ ನೀಡಲು ವಿಫಲವಾಗಿದೆ ಎಂದೂ ಮೊಕದ್ದಮೆಯಲ್ಲಿ ವಿವರಿಸಿದೆ. ಇನ್ನು, ಸಲೂನ್‌ ಆರಂಭದಲ್ಲಿ ತನ್ನ ಎಲ್ಲಾ ಆರೋಪಗಳನ್ನು ತಳ್ಳಿಹಾಕಿತ್ತು. ಹಾಗೂ, ಸೋಂಕಿನ ಹರಡುವಿಕೆಯನ್ನು ತಡೆಯಲು ಅವರು ಸಾಕಷ್ಟು ಪ್ರಯತ್ನಗಳನ್ನು ತೆಗೆದುಕೊಳ್ಳದ ಕಾರಣ ಕ್ಲಾರಾರದ್ದೇ ತಪ್ಪಾಗಿದೆ ಎಂದು ಸಲೂನ್‌ ಆರೋಪಿಸಿತ್ತು. ಅಲ್ಲದೆ, ತಮ್ಮ ಟೂಲ್ಸ್‌ಗಳು ಮತ್ತು ಉಪಕರಣಗಳು ಕೊಳಕು ಎಂಬ ಕ್ಲಾರಾ ಹೇಳಿಕೆಯನ್ನು ಸಲೂನ್ ನಿರಾಕರಿಸಿತ್ತು.

 ಇದನ್ನೂ ಓದಿ: Compensation: ಕಳ್ಳತನ ಆರೋಪದಿಂದ ನೊಂದ ಬಾಲಕಿಗೆ ಪರಿಹಾರ ನೀಡುವಂತೆ ಆದೇಶಿಸಿದ ಕೇರಳ ಹೈಕೋರ್ಟ್

ಪೆಡಿಕ್ಯೂರ್‌ ಬಗ್ಗೆ ಎಚ್ಚರ
ಆದರೆ, ಇತ್ಯರ್ಥದಲ್ಲಿ ನಮೂದಿಸಲಾದ ಸಂಪೂರ್ಣ ಮೊತ್ತಕ್ಕೆ ಕ್ಲಾರಾ ಅರ್ಹರು ಎಂದು ಆಕೆಯ ಪರ ವಕೀಲ ಪಾಲ್ ಫುಲ್ಮರ್ ವಿಚಾರಣೆಯ ಸಮಯದಲ್ಲಿ ಹೇಳಿದ್ದರು. ಇನ್ನು, ಸಲೂನ್‌ ಸಹ ಆರಂಭದಲ್ಲಿ ತನ್ನ ಎಲ್ಲಾ ಆರೋಪಗಳನ್ನು ನಿರಾಕರಿಸಿದರೂ, ಬಳಿಕ ಕ್ಲಾರಾ ಶೆಲ್‌ಮನ್ ಸ್ಥಿತಿಯನ್ನು ನೋಡಿ ಸಲೂನ್ 1.75 ಮಿಲಿಯನ್ ಡಾಲರ್‌ ಪಾವತಿಸಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ. ನಿಮಗೂ ಪದೇ ಪದೇ ಸಲೂನ್‌, ಪಾರ್ಲರ್‌ಗೆ ಹೋಗುವ ಅಭ್ಯಾಸವಿದ್ಯಾ..? ಹಾಗಾದ್ರೆ, ಈ ಬಗ್ಗೆ ಎಚ್ಚರವಿರಲಿ. ನಿಮಗೂ ಪೆಡಿಕ್ಯೂರ್‌ ಮಾಡುವಾಗ ಅವರು ಬಳಸುವ ಉಪಕರಣಗಳು ಹೇಗಿವೆ ಎನ್ನುವುದು ಗಮನಿಸಿ. ಇಲ್ಲದಿದ್ರೆ ನಿಮಗೂ ಇದೇ ಪರಿಸ್ಥಿತಿ ಬರಬಹುದು. ಅಲ್ಲದೆ, ಬಳಿಕ ಕ್ಲಾರಾನಂತೆ ಕೋರ್ಟ್‌ಗೂ ಅಲೆದಾಡಬೇಕಾಗುತ್ತದೆ.
Published by:vanithasanjevani vanithasanjevani
First published: