ತುಂಬು ಗರ್ಭಿಣಿಯ ಹೊಟ್ಟೆ ಬಗೆದು, ಭ್ರೂಣ ಕೈಯಲ್ಲಿಡಿದು ತನ್ನದೇ ಮಗು ಎಂದ ಕೊಲೆಗಾತಿ

ಅಲ್ಲದೇ ರಸ್ತೆ ಬದಿಯಲ್ಲಿ ನಾನು ಮಗುವಿಗೆ ಜನ್ಮ ನೀಡಿದ್ದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿತ್ತು ಎಂದೂ ಸಹ ಪಾರ್ಕರ್​ ಪೊಲೀಸರ ಬಳಿ ಹೇಳಿದ್ದಾಳೆ.

news18-kannada
Updated:October 16, 2020, 12:10 PM IST
ತುಂಬು ಗರ್ಭಿಣಿಯ ಹೊಟ್ಟೆ ಬಗೆದು, ಭ್ರೂಣ ಕೈಯಲ್ಲಿಡಿದು ತನ್ನದೇ ಮಗು ಎಂದ ಕೊಲೆಗಾತಿ
ಸಾಂದರ್ಭಿಕ ಚಿತ್ರ
  • Share this:
ಅಮೆರಿಕ(ಅ.16): ಕ್ರೂರಿ ಮಹಿಳೆಯೊಬ್ಬಳು ತುಂಬು ಗರ್ಭಿಣಿಯನ್ನು ಕೊಲೆ ಮಾಡಿ, ಆಕೆಯ ಹೊಟ್ಟೆಯಲ್ಲಿದ್ದ ಭ್ರೂಣವನ್ನು ತೆಗೆದು ಹಾಕಿರುವ ಅಮಾನುಷ ಘಟನೆ ಅಮೆರಿಕದಲ್ಲಿ ನಡೆದಿದೆ. ಇಂತಹ ಅಮಾನವೀಯ ಕೃತ್ಯ ನಡೆದಿರುವುದು ಮತ್ತೊಂದು ಹೆಣ್ಣಿನಿಂದಲೇ.  ಸದ್ಯ ಈ ದುಷ್ಕೃತ್ಯ ಎಸಗಿದ ಮಹಿಳೆಯನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿತ ಮಹಿಳೆಯನ್ನು ಟಾಯ್ಲರ್ ಪಾರ್ಕರ್ (27) ಎಂದು ಗುರುತಿಸಲಾಗಿದೆ. ಸದ್ಯ ಆಕೆಯನ್ನು ಟೆಕ್ಸಾಸ್ ಜೈಲಿನಲ್ಲಿ ಇರಿಸಲಾಗಿದೆ. ಪಾರ್ಕರ್​​ನ್ನು ಕಳೆದ ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಮಹಿಳೆ ಪಾರ್ಕರ್, ತಾನೇ ಮಗುವಿಗೆ ಜನ್ಮ ನೀಡಿದ್ದಾಗಿ   ಪೊಲೀಸರ ಬಳಿ ಹೇಳಿದ್ದಳು.  ಆದರೆ ಮಗು ಆ ಸಮಯದಲ್ಲಿ ಉಸಿರಾಡುತ್ತಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗ್ರಾಮ ಪಂಚಾಯತಿ ಚುನಾವಣೆ ನಡೆಸುವ ಬಗ್ಗೆ ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ

ಇಷ್ಟೇ ಅಲ್ಲದೇ ರಸ್ತೆ ಬದಿಯಲ್ಲಿ ನಾನು ಮಗುವಿಗೆ ಜನ್ಮ ನೀಡಿದ್ದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರೆ ಅಷ್ಟೊತ್ತಿಗಾಗಲೇ ಮಗು ಸಾವನ್ನಪ್ಪಿತ್ತು ಎಂದೂ ಸಹ ಪಾರ್ಕರ್​ ಪೊಲೀಸರ ಬಳಿ ಹೇಳಿದ್ದಾಳೆ.

ರೇಗನ್ ಸಿಮ್ಮನ್ಸ್​ -ಹಾಂಕಾಕ್ ಎಂಬ ಗರ್ಭಿಣಿ ಮಹಿಳೆ ಟೆಕ್ಸಾಸ್​ನ
ಪಕ್ಕದ ನಗರದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆದರೆ ಆಕೆಯ ಹೊಟ್ಟೆಯಲ್ಲಿ ಮಗುವಿರಲಿಲ್ಲ. ಪಾರ್ಕರ್​​​ ಸಿಕ್ಕಿ ಬಿದ್ದ ಸ್ಥಳದಿಂದ 20 ಕಿ.ಮೀ.ದೂರದಲ್ಲಿ ಗರ್ಭಿಣಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು.

ಗರ್ಭಿಣಿ ಕೊಲೆಗೆ ಕಾರಣವೇನು ಎಂಬುದು ಇನ್ನೂ ಸಹ ತಿಳಿದು ಬಂದಿಲ್ಲ. ಸದ್ಯ ಆರೋಪಿತ ಮಹಿಳೆ ಪಾರ್ಕರ್ ಕೊಲೆ ಮತ್ತು ಅಪಹರಣ ಪ್ರಕರಣದಡಿಯಲ್ಲಿ ಟೆಕ್ಸಾಸ್ ಜೈಲಿನಲ್ಲಿ ಇದ್ದಾಳೆ. ಇನ್ನು, ಈ ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published by: Latha CG
First published: October 16, 2020, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading