ಮಗುವಿನ ಆಯಸ್ಸು ಅರ್ಧ ಗಂಟೆ ಎಂದಿದ್ದ ವೈದ್ಯರಿಗೆ ಸವಾಲೆಸೆದ ಕಂದಮ್ಮ..!

ಈ ಮಗು ಹುಟ್ಟಿದರೂ ಅರ್ಧ ಗಂಟೆ ಕೂಡ ಬದುಕುವುದಿಲ್ಲ ಎಂಬ ಆಘಾತಕಾರಿ ವಿಷಯವನ್ನು ಹೇಳಿದ್ದರು. ಅಷ್ಟೇ ಅಲ್ಲದೇ ಈಗಲೇ ಗರ್ಭಪಾತ ಮಾಡಿಸಿಕೊಂಡು ಬಿಡುವುದು ಒಳಿತು ಎಂಬ ಸಲಹೆಯನ್ನೂ ನೀಡಿದ್ದರು.

Latha CG | news18
Updated:February 9, 2019, 1:43 PM IST
ಮಗುವಿನ ಆಯಸ್ಸು ಅರ್ಧ ಗಂಟೆ ಎಂದಿದ್ದ ವೈದ್ಯರಿಗೆ ಸವಾಲೆಸೆದ ಕಂದಮ್ಮ..!
ಕ್ರಿಸ್ಟಾ ಡೇವಿಸ್​
Latha CG | news18
Updated: February 9, 2019, 1:43 PM IST
ವಾಷಿಂಗ್ಟನ್​,(ಫೆ.09): ತಾಯ್ತನ ಅನುಭವಿಸಬೇಕೆಂಬುದು ಪ್ರತಿಯೊಬ್ಬ ಹೆಣ್ಣಿನ ಮಹಾದಾಸೆ. ಗರ್ಭಿಣಿಯಾಗಿರುವ ವಿಷಯ ತಿಳಿದಾಕ್ಷಣ ದಂಪತಿಯ ಸಂತೋಷಕ್ಕೆ ಪಾರವೇ ಇರುವುದಿಲ್ಲ. ತಾಯಿಯಂತೂ ತನ್ನ ಗರ್ಭದಲ್ಲಿರುವ ಪುಟ್ಟ ಕಂದನ ಬಗ್ಗೆ ಬೆಟ್ಟದಷ್ಟು ಕನಸು ಕಟ್ಟಿಕೊಂಡಿರುತ್ತಾಳೆ. ಆದರೆ ಇಂತಹುದೇ ಕನಸು ಹೊತ್ತಿದ್ದ 18 ವಾರಗಳ ಗರ್ಭಿಣಿಗೆ ಆಘಾತ ಕಾದಿತ್ತು.

ವಾಷಿಂಗ್ಟನ್‍ ನ 23 ವರ್ಷದ ಕ್ರಿಸ್ಟಾ ಡೇವಿಸ್ 18 ವಾರಗಳ ಗರ್ಭಿಣಿಯಾಗಿದ್ದಾಗ ತಪಾಸಣೆಗಾಗಿ ವೈದ್ಯರ ಬಳಿ ಹೋಗಿದ್ದರು. ಪರೀಕ್ಷೆ ಮಾಡಿದ್ದ ವೈದ್ಯರು ಮಗುವಿನ ತಲೆಬುರುಡೆ-ಮೆದುಳಿನ ಕೆಲಭಾಗಗಳು ಸರಿಯಾಗಿ ಬೆಳೆದಿಲ್ಲ. ಈ ಮಗು ಹುಟ್ಟಿದರೂ ಅರ್ಧ ಗಂಟೆ ಕೂಡ ಬದುಕುವುದಿಲ್ಲ ಎಂಬ ಆಘಾತಕಾರಿ ವಿಷಯವನ್ನು ಹೇಳಿದ್ದರು. ಅಷ್ಟೇ ಅಲ್ಲದೇ ಈಗಲೇ ಗರ್ಭಪಾತ ಮಾಡಿಸಿಕೊಂಡು ಬಿಡುವುದು ಒಳಿತು ಎಂಬ ಸಲಹೆಯನ್ನೂ ನೀಡಿದ್ದರು.

ಬೆಂಗಳೂರು ಮೆಟ್ರೋ ಎಸ್ಕಲೇಟರ್ನಿಂದ ಕೆಳಕ್ಕೆ ಬಿದ್ದಿದ್ದ ಮಗು ಸಾವು

ಆದರೆ ಕ್ರಿಸ್ಟಾ ಡೇವಿಸ್ ಮತ್ತಾಕೆಯ ಗಂಡ ಡೆರೆಕ್ ಲವೆಟ್ ವೈದ್ಯರ ಸಲಹೆಯನ್ನು ತಿರಸ್ಕರಿಸಿದರು. ಹಠಕ್ಕೆ ಬಿದ್ದ ಅವರು ಹೆರಿಗೆಯಾಗುವವರೆಗೂ ಕಾದರು. ದಿನ ತುಂಬಿದ ಬಳಿಕ ಡೇವಿಸ್​ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ಹೆರಿಗೆ ಬಳಿಕ ದಂಪತಿ ಒಂದು ವಾರಗಳ ಕಾಲ ಮಗು ಜೊತೆ ಆಸ್ಪತ್ರೆಯಲ್ಲಿಯೇ ಇದ್ದರು. ಒಂದು ವಾರದ ಬಳಿಕ ಮಗು ಸಾವನ್ನಪ್ಪಿತ್ತು.

ಈ ಮಗು ಹುಟ್ಟಿದರೆ ಅರ್ಧ ಗಂಟೆಯೂ ಬದುಕುವುದಿಲ್ಲ ಎಂದು ಹೇಳಿದ್ದ ವೈದ್ಯ ಲೋಕಕ್ಕೆ ಸವಾಲೆಸೆದು ಆ ಮಗು ಒಂದು ವಾರ ಬದುಕಿತ್ತು. ಮಗುವಿನ ಸಾವಿನ ನೋವಿನಲ್ಲೂ ತಾಯಿ ಡೇವಿಸ್​ ತನ್ನ ಕಂದನ ಹೃದಯ ಕವಾಟಗಳನ್ನು ಇಬ್ಬರು ಮಕ್ಕಳಿಗೆ ದಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಗುವಿನ ಶ್ವಾಸಕೋಸವನ್ನು ಅಧ್ಯಯನಕ್ಕಾಗಿ ಆಸ್ಪತ್ರೆಯವರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...