• Home
 • »
 • News
 • »
 • national-international
 • »
 • HIV: ಏಡ್ಸ್​​ನಿಂದ ಗುಣಮುಖಳಾದ ವಿಶ್ವದ ಮೊದಲ ಮಹಿಳೆ.. ಇದು ಸಾಧ್ಯವಾಗಿದ್ದು ಹೇಗೆ?

HIV: ಏಡ್ಸ್​​ನಿಂದ ಗುಣಮುಖಳಾದ ವಿಶ್ವದ ಮೊದಲ ಮಹಿಳೆ.. ಇದು ಸಾಧ್ಯವಾಗಿದ್ದು ಹೇಗೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

AIDS: ವಿಜ್ಞಾನಿಗಳು ಲ್ಯುಕೇಮಿಯಾ ಹೊಂದಿರುವ ಮಹಿಳೆಯಲ್ಲಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಾಗಿ ದಾನಿಯೊಬ್ಬರಿಂದ ಹೊಕ್ಕಳಬಳ್ಳಿಯ ರಕ್ತವನ್ನು ಬಳಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಆ ಮಹಿಳೆ ಎಚ್ಐವಿಯಿಂದ ಗುಣಮುಖಳಾಗಿದ್ದಾರೆ

 • Share this:

  ಶತಶತಮಾನಗಳಿಂದ ಮನುಕುಲವನ್ನು ಅನೇಕ ಸಾಂಕ್ರಾಮಿಕ ರೋಗ(Epidemic) ರುಜಿನಗಳು ಕಾಡುತ್ತಿವೆ. ಪ್ಲೇಗ್, (Plague,)ಸಿಡುಬು, ಕಾಲರಾ,( cholera) ಕ್ಷಯ, ಕ್ಯಾನ್ಸರ್,( cancer,) ಗೊನೆರಿಯಾ, ಸಿಪಿಲಿಸ್, ಮಲೇರಿಯಾ (Malaria)ಡೆಂಘಿ (Dengue)ಇತ್ತೀಚೆಗೆ ಭಯ ಹುಟ್ಟಿಸುತ್ತಿರುವ ಕೊರೋನಾ ಮಹಾಮಾರಿ ಸೇರಿ ಇತ್ಯಾದಿ ಕಾಯಿಲೆಗಳು ನಮ್ಮನ್ನ ಬೆಚ್ಚಿ ಬೀಳಿಸಿವೆ. ಈ ಕಾಯಿಲೆಗಳು ಮಾನವನ ಅಸ್ವಿತ್ವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದವು. ಇವುಗಳಲ್ಲಿ ತುಂಬಾ ಹೃದಯ ವಿದ್ರಾವಕ ಮತ್ತು ಮಾರಕ ರೋಗವೆಂದರೆ ಏಡ್ಸ್(AIDS)..ಹೌದು ಹೆಸರು ಕೇಳಿದರೇ ಬೆಚ್ಚಿ ಬೀಳುವ ಏಡ್ಸ್ ಗುಣವಾಗದ, ಮಾರಣಾಂತಿಕ ಕಾಯಿಲೆ ಎಂಬ ಕುಖ್ಯಾತಿ ಇದರದ್ದು. ಎನ್ನುವಂತೆ ಸಮಾಜ ಕಾಣುತ್ತದೆ. ಮನಸೋಇಚ್ಚೆಯ ಜೀವನಶೈಲಿ ಮತ್ತು ಸ್ವೇಚ್ಛಾಚಾರದ ಮಂದಿಗೆ ಈ ಭಯಾನಕ ರೋಗ ಅಮರಿಕೊಳ್ಳುತ್ತದೆ.


  ಏಡ್ಸ್ ಪಾಪದ ರೋಗ ಎಂದೂ ಸಹ ಪರಿಗಣಿಸಲಾಗಿದೆ. ಈ ರೋಗದ ಪ್ರಭಾವದಿಂದ ರೋಗಿಗಳು ತಾರತಮ್ಯ, ತಾತ್ಸಾರ ಮತ್ತು ನಿರಾಕರಣೆಗೆ ಒಳಗಾಗುತ್ತಾರೆ. ಏಡ್ಸ್ ಕಾಯಿಲೆ ಹೊಂದಿರುವವರನ್ನು ಸಮಾಜ ಕಡೆಗಣ್ಣಿನಿಂದ ನೋಡುತ್ತದೆ.. ಇಂತಹ ಭಯಾನಕ ಕಾಯಿಲೆ ಇದುವರೆಗೂ ಔಷಧಿ ಇಲ್ಲ ಎಂದು ನಂಬಲಾಗಿದೆ.. ಅಲ್ಲದೆ ಈ ರೋಗ ಕಾಣಿಸಿಕೊಂಡವರಲ್ಲಿ ಪ್ರಪಂಚದಲ್ಲಿ ಗುಣಮುಖರಾಗಿ ಇರುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಆ ಬೆರಳೆಣಿಕೆಯಲ್ಲಿ ಇತ್ತೀಚಿಗೆ ಗುಣಮುಖರಾಗಿರುವ ಮಹಿಳೆ ಕೂಡ ಸೇರ್ಪಡೆಯಾಗಿದ್ದಾರೆ


  ಏಡ್ಸ್ ರೋಗದಿಂದ ಗುಣವಾದ ಮಹಿಳೆ..


  ಅಮೆರಿಕದಲ್ಲಿ ನಡೆದ ರೆಟ್ರೋವೈರಸ್‌ ಮತ್ತು ಅವಕಾಶವಾದಿ ಸೋಂಕು (CROI) ಸಮ್ಮೇಳನದಲ್ಲಿ ಮಹತ್ತರವಾದ ವಿಷಯವೊಂದನ್ನು ಬಹಿರಂಗಪಡಿಸಿರುವ ಸಂಶೋಧಕರು, ಅಮೆರಿಕದಲ್ಲಿ ಲ್ಯುಕೇಮಿಯಾದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಸ್ಟೆಮ್​ ಸೆಲ್​ ಕಸಿ ನಂತರ ಎಚ್​ಐವಿ ಅಥವಾ ಏಡ್ಸ್​ ರೋಗದಿಂದ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ.. ಈ ಮೂಲಕ ಏಡ್ಸ್​​ ರೋಗದಿಂದ ಗುಣಮುಖರಾದ ಮೊದಲನೆ ಮಹಿಳೆ ಮತ್ತು ಮೂರನೇ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.


  ಇದನ್ನೂ ಓದಿ: ಭದ್ರತಾ ಪಡೆ ಮೇಲೆ ಗ್ರೆನೇಡ್ ದಾಳಿ ನಡೆಸಿದ ಭಯೋತ್ಪಾದಕರು; ಎರಡು ಅಂಗಡಿಗಳಿಗೆ ಹಾನಿ


  ವಿಜ್ಞಾನಿಗಳು ಲ್ಯುಕೇಮಿಯಾ ಹೊಂದಿರುವ ಮಹಿಳೆಯಲ್ಲಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗಾಗಿ ದಾನಿಯೊಬ್ಬರಿಂದ ಹೊಕ್ಕಳಬಳ್ಳಿಯ ರಕ್ತವನ್ನು ಬಳಸಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಆ ಮಹಿಳೆ ಎಚ್ಐವಿಯಿಂದ ಗುಣಮುಖಳಾಗಿದ್ದಾರೆ. ಏಕೆಂದರೆ ದಾನಿಯ ಹೊಕ್ಕಳಬಳ್ಳಿಯ ರಕ್ತವು ಮೇಲೆ ತಿಳಿಸಿದ ರೂಪಾಂತರವನ್ನು ಹೊಂದಿತ್ತು. ಇದು ಕಸಿ ಮಾಡಿದ ನಂತರ ಮಹಿಳೆಯ HIV ಸೋಂಕನ್ನು ಗುಣಪಡಿಸಲು ಸಹಾಯಕವಾಯಿತು.


  ಆ್ಯಂಟಿರೆಟ್ರೋವೈರಲ್‌ ಥೆರಪಿ ಸ್ಥಗಿತಗೊಂಡ ಬಳಿಕ ವೈರಸ್ ನಾಪತ್ತೆ


  ಇನ್ನು ಸೋಂಕಿನಿಂದ ಗುಣ ವಾಗಿರುವ ಮಹಿಳೆಗೆ , ಆ್ಯಂಟಿರೆಟ್ರೋವೈರಲ್‌ ಥೆರಪಿ ಸ್ಥಗಿತ ಮಾಡಲಾಗಿತ್ತು. ಇದಾದ 14 ತಿಂಗಳ ನಂತರವೂ ಮಹಿಳೆಯಲ್ಲಿ ಎಚ್‌ಐವಿ ವೈರಸ್‌ ಪತ್ತೆಯಾಗಿಲ್ಲ. ಸ್ಟೆಮ್‌ ಸೆಲ್‌ ಕಸಿ ಮೂಲಕ ಏಡ್ಸ್‌ನಿಂದ ಗುಣಮುಖವಾದ ಮೂರನೇ ಪ್ರಕರಣ ಇದಾಗಿದೆ. ಈ ಮಹಿಳೆ ಲ್ಯುಕೇಮಿಯಾಗೆ ಚಿಕಿತ್ಸೆ ಪಡೆಯುತ್ತಿರುವಾಗಲೇ ಕಳೆದ ನಾಲ್ಕು ವರ್ಷಗಳಿಂದ ಎಚ್‌ಐವಿ ಸೋಂಕಿಗೆ ತುತ್ತಾಗಿದ್ದರು ಎಂದು ಸಂಶೋಧಕರು ತಿಳಿಸಿದ್ದಾರೆ.


  ಸ್ಟೆಮ್‌ ಕಸಿ ಮೂಲಕ ಎಚ್‌ಐವಿ ಸೋಂಕು ಗುಣ


  ಇನ್ನು ಸ್ಟೆಮ್‌ ಕಸಿ ಮೂಲಕ ಈ ಹಿಂದೆ ‘ಬರ್ಲಿನ್‌ ರೋಗಿ’ ಎಂದೇ ಕರೆಯಲಾಗುತ್ತಿದ್ದ ವ್ಯಕ್ತಿ ಸತತ 12 ವರ್ಷಗಳ ಕಾಲ ಎಚ್‌ಐವಿ ವೈರಸ್‌ನಿಂದ ಮುಕ್ತರಾಗಿದ್ದರು. ಆದರೆ 2020ರ ಸೆಪ್ಟೆಂಬರ್‌ನಲ್ಲಿ ಲ್ಯುಕೇಮಿಯಾದಿಂದ ಸಾವನ್ನಪ್ಪಿದ್ದರು. ಇನ್ನೊಬ್ಬ ರೋಗಿ 30 ತಿಂಗಳಿನಿಂದ ಎಚ್‌ಐವಿ ಸೋಂಕಿನಿಂದ ಗುಣಮುಖರಾಗಿದ್ದಾರೆ. HIV ಸೋಂಕನ್ನು ತಡೆಯುವ ರೂಪಾಂತರವನ್ನು ಹೊಂದಿರುವ ದಾನಿಗಳಿಂದ ಇಬ್ಬರೂ ಮೂಳೆ ಮಜ್ಜೆಯ ಕಸಿ ಪಡೆದರು. ಸುಮಾರು 20,000 ದಾನಿಗಳಲ್ಲಿ ಮಾತ್ರ ರೂಪಾಂತರವನ್ನು ಗುರುತಿಸಲಾಗಿದೆ, ಅವರಲ್ಲಿ ಹೆಚ್ಚಿನವರು ಉತ್ತರ ಯುರೋಪಿಯನ್ ಮೂಲದವರು.


  ಇದನ್ನೂ ಓದಿ: Vote ಕೊಡಿ" ಅಂತ ಕೇಳುವಾಗಲೇ ಕೈಕೊಟ್ಟ Heart! ಹೃದಯಾಘಾತಕ್ಕೆ ಚುನಾವಣೆ ಅಭ್ಯರ್ಥಿ ಸಾವು


  ಸ್ಟೆಮ್​ ಸೆಲ್ ಚಿಕಿತ್ಸೆ ಹೇಗೆ ಮಾಡುವುದು..?


  ಮೊದಲು ರೋಗಿಗಳಿಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಕಿಮೋಥೆರಫಿ ಮಾಡಲಾಗುತ್ತದೆ. ನಂತರ ಅವರ ಸ್ಟೆಮ್​ ಸೆಲ್​ಗಳನ್ನು ಮೂಳೆ ಅಥವಾ ಹೊಕ್ಕಳ ಬಳ್ಳಿಯ ರಕ್ತದಿಂದ ಪಡೆದು, ಅವುಗಳನ್ನು ದಾನಿಗಳು ನೀಡಿದ ಆರೋಗ್ಯಕರ ಮತ್ತು ರೋಗ ನಿರೋಧಕ ಶಕ್ತಿ ಹೊಂದಿದ ಸ್ಟೆಮ್ ಸೆಲ್​ಗಳನ್ನು ಕಸಿ ಮಾಡುತ್ತಾರೆ. ನಂತರ ರೋಗಿಯ ದೇಹಕ್ಕೆ ಕಸಿ ಮಾಡಿದ ಸೆಲ್​ಗಳನ್ನು ನೀಡುತ್ತಾರೆ. ಈ ಸ್ಟೆಮ್ ಸೆಲ್​ಗಳು ರೋಗಿಯ ವೈರಸ್​ಗಳ ವಿರುದ್ಧ ಹೋರಾಡಿ ರೋಗದಿಂದ ಮುಕ್ತಗೊಳಿಸುತ್ತವೆ.

  Published by:ranjumbkgowda1 ranjumbkgowda1
  First published: