• Home
  • »
  • News
  • »
  • national-international
  • »
  • Selfie Death: ಸೆಲ್ಫಿ ಆಸೆಗೆ ಜ್ವಾಲಾಮುಖಿಯೊಳಗೆ ಬಿದ್ದ ಪ್ರವಾಸಿಗ! ಕೊನೆಗೂ ಬಚಾವಾದ್ನಾ ಇಲ್ವಾ?

Selfie Death: ಸೆಲ್ಫಿ ಆಸೆಗೆ ಜ್ವಾಲಾಮುಖಿಯೊಳಗೆ ಬಿದ್ದ ಪ್ರವಾಸಿಗ! ಕೊನೆಗೂ ಬಚಾವಾದ್ನಾ ಇಲ್ವಾ?

ಮೌಂಟ್ ವೆಸುವಿಯಸ್ ಕುಳಿ

ಮೌಂಟ್ ವೆಸುವಿಯಸ್ ಕುಳಿ

ವೆಸುವಿಯಸ್ ಪರ್ವತವು ಅತ್ಯಂತ ದುರಂತದ ಸ್ಪೋಟದ ಸ್ಥಳವಾಗಿದ್ದು, ಕ್ರಿಸ್ತ ಶಕ 79ರಲ್ಲಿ ರೋಮನ್ ಮಹಾನಗರಗಳಾದ ಪೊಂಪೈ ಮತ್ತು ಹರ್ಕುಲೇನಿಯಮ್ ಗಳನ್ನು ಮುಳುಗಿಸಿತ್ತು. ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು.  ಮೌಂಟ್ ವೆಸುವಿಯಸ್ ಕೊನೆಯದಾಗಿ 1944ರಲ್ಲಿ ಸ್ಪೋಟಗೊಂಡಿತು.

  • Share this:

ಎಲ್ಲರೂ ತಮ್ಮ ಅದ್ಭುತವಾದ ನೆನಪುಗಳನ್ನು, ಅವಿಸ್ಮರಣೀಯ ಘಟನೆಗಳನ್ನು, ಆನಂದಿಸಿದ ಕ್ಷಣಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಸುಲಭವಾದ ಮಾರ್ಗ ಸೆಲ್ಫಿ (Selfie) ತೆಗೆದು ಇಟ್ಟುಕೊಳ್ಳುವುದು. ಇತ್ತೀಚಿನ ದಿನಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಫ್ಯಾಷನ್ ಆಗಿದೆ. ಆದರೆ ಸೆಲ್ಫಿ ತೆಗೆದುಕೊಳ್ಳುವಾಗ ಕೆಲವು ಜನ ಪ್ರಪಂಚವನ್ನೇ ಮರೆತು ಬಿಡುತ್ತಾರೆ. ತಮ್ಮ ಸುತ್ತಮುತ್ತಲಿನಲ್ಲಿ ಏನಿದೆ, ಯಾರಿದ್ದಾರೆ, ಏನು ನಡೆಯುತ್ತಿದೆ ಎಂಬುದರ ಅರಿವೆ ಇರುವುದಿಲ್ಲ. ಇದರಿಂದ ತಮ್ಮ ಜೀವಕ್ಕೆ ಅಪಾಯ ತಂದುಕೊಂಡವರು ಅನೇಕ ಮಂದಿ ಇದ್ದಾರೆ. ಇದೀಗ ಅಂತಹದೇ ಒಂದು ಘಟನೆ ಅಮೇರಿಕನ್ (American Tourist) ಪ್ರವಾಸಿಗನಿಗೆ ಸಂಭವಿಸಿದೆ. ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೌಂಟ್ ವೆಸುವಿಯಸ್ ಜ್ವಾಲಾಮುಖಿಯ ಕುಳಿಯೊಳಗೆ (Mount Vesuvius Crater)  ಬಿದ್ದಿದ್ದಾನೆ.


ಇಟಲಿಗೆ ಪ್ರವಾಸಕ್ಕೆ ಬಂದ ಅಮೇರಿಕನ್ ಪ್ರವಾಸಿಗ
23 ವರ್ಷದ ಯುವಕ ತನ್ನ ಕುಟುಂಬದೊಂದಿಗೆ ಇಟಲಿಗೆ ಪ್ರವಾಸ ಬಂದಿದ್ದನು. ಇಟಾಲಿಯ ಕ್ಯಾಂಪನಿಯಾದಲ್ಲಿರುವ ಪ್ರಸಿದ್ಧ ವೆಸುವಿಯಸ್ ಜ್ವಾಲಾಮುಖಿ ಶಿಖರವನ್ನು ಶನಿವಾರ ತಲುಪಿದ್ದಾರೆ. ಜ್ವಾಲಾಮುಖಿಯ ತುದಿಯನ್ನು ತಲುಪಿದ ನಂತರ ಅಲ್ಲಿ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಮೊಬೈಲ್ ಫೋನ್ ಕೈ ಜಾರಿ ಕೆಳಕ್ಕೆ ಕುಳಿಯೊಳಗೆ ಬೀಳುತ್ತದೆ. ಫೋನ್ ಹಿಂಪಡೆಯಲು ಮುಂದಾಗುವಾಗ ವ್ಯಕ್ತಿ  ವೆಸುವಿಯಸ್ ಪರ್ವತದ ಕುಳಿಯೊಳಗೆ ಬಿದ್ದಿದ್ದಾನೆ.


ಅನಧಿಕೃತ ಮಾರ್ಗದಲ್ಲಿ ಶಿಖರವೇರಿದ ವ್ಯಕ್ತಿ
ಸ್ಥಳೀಯ ವರದಿಯ ಪ್ರಕಾರ ವ್ಯಕ್ತಿಯು ಅನಧಿಕೃತ ಮಾರ್ಗದ ಮೂಲಕ ವೆಸುವಿಯಸ್ ಶಿಖರವನ್ನು ತಲುಪಿದ್ದಾನೆ. ಟಿಕೆಟ್​ ವೆಚ್ಚ ಅಧಿಕವಿರುವ ಕಾರಣದಿಂದ ವ್ಯಕ್ತಿ ಅನಧಿಕೃತ ಹಾದಿಯಲ್ಲಿ ಸಾಗಿದ್ದಾನೆ ಎಂದು ವಕ್ತಾರರು ಹೇಳಿದ್ದಾರೆ.


ರಕ್ಷಣೆಗೆ ಬಂದ ಮಾರ್ಗದರ್ಶಕರು
ವ್ಯಕ್ತಿಯು ಕುಳಿಯೊಳಗೆ ಬಿದ್ದಿರುವ ಮೊಬೈಲ್ ಫೋನ್ ಅನ್ನು ತೆಗೆದುಕೊಳ್ಳುಲು ಪ್ರಯತ್ನಿಸುತ್ತುದ್ದಾಗ ಕುಳಿಯೊಳಗೆ ಬೀಳುವುದನ್ನು ಗಮನಿಸಿದ ಮಾರ್ಗದರ್ಶಕರು ಅವನನ್ನು ಹೊರಕ್ಕೆ ಬರಲು ಸಹಾಯ ಮಾಡಿದರು. ನಂತರದಲ್ಲಿ ಸ್ಥಳಕ್ಕೆ ಪೋಲಿಸರು ಬಂದು ಘಟನೆಯ ಕುರಿತಾಗಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕಳುಹಿಸಲಾಗಿದೆ.


ತೋಳುಗಳಿಗೆ ಮತ್ತು ಬೆನ್ನಿಗೆ ಗಾಯ 
ವ್ಯಕ್ತಿಯ ತೋಳುಗಳಿಗೆ , ಬೆನ್ನಿಗೆ ಮತ್ತು ಮೂಗಿಗೆ ಗಾಯಗಳಾಗಿದೆ. ಸ್ಥಳದಲ್ಲಿಯೇ ಆತನಿಗೆ ಪ್ರಥಮ ಚಿಕಿತ್ಸೆ ಮಾಡಲಾಗಿದೆ. ನಂತರದಲ್ಲಿ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕೊಂಡೊಯ್ಯೊಲು ಆ್ಯಂಬುಲೆನ್ಸ್ ಕರೆಸಲಾಗಿದೆ ಆದರೆ ವ್ಯಕ್ತಿ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾನೆ. ಪ್ರವೇಶವಿಲ್ಲದ ದಾರಿಯ ಮೂಲಕ ಸಾಗಿದ ಕಾರಣದಿಂದ ಮುಂದೆ ಅವನನ್ನು ಪೋಲಿಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.


ನಿಷೇಧಿತ ದಾರಿಯಲ್ಲಿ ಸಾಗಿದ ಆರೋಪ
ಈ ಮಾರ್ಗವು ಅಪಾಯದ ಎಚ್ಚರಿಕೆಯ ಸೂಚನೆಗಳನ್ನು ಹೊಂದಿದ್ದು ಇಲ್ಲಿ ಸಾರ್ವಜನಿಕರಿಗೆ ಪ್ರವೆಶವನ್ನು ನಿರ್ಬಂಧಿಸಿದೆ. ಸಾರ್ವಜನಿಕರಿಗೆ ಪ್ರವೇಶಿಸಲು ಅವಕಾಶವಿಲ್ಲದ ದಾರಿಯಲ್ಲಿ ಸಾಗಿದ ಕಾರಣ ಮತ್ತು ಟಿಕೆಟ್ ಇಲ್ಲದೆ ಶಿಖರ ಹತ್ತಿದ ಕಾರಣವಾಗಿ ಕುಟುಂಬವು ಆರೋಪವನ್ನು ಎದುರಿಸುತ್ತಿದೆ.


ಇದನ್ನೂ ಓದಿ: Sri Lanka Declares Emergency: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ


ವೆಸುವಿಯಸ್ ಪರ್ವತವು ಅತ್ಯಂತ ದುರಂತದ ಸ್ಪೋಟದ ಸ್ಥಳವಾಗಿದ್ದು, ಕ್ರಿಸ್ತ ಶಕ 79ರಲ್ಲಿ ರೋಮನ್ ಮಹಾನಗರಗಳಾದ ಪೊಂಪೈ ಮತ್ತು ಹರ್ಕುಲೇನಿಯಮ್ ಗಳನ್ನು ಮುಳುಗಿಸಿತ್ತು. ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು.  ಮೌಂಟ್ ವೆಸುವಿಯಸ್ ಕೊನೆಯದಾಗಿ 1944ರಲ್ಲಿ ಸ್ಪೋಟಗೊಂಡಿತು.


ಇದನ್ನೂ ಓದಿ: Mumbai Rains: ವಿಪರೀತ ಮಳೆಗೆ ರಸ್ತೆಯಲ್ಲೂ ನೀರು! ಕಾರು ಸೀದಾ ಕೆರೆಗೆ ನುಗ್ಗಿಸಿದ ಚಾಲಕ


ಮೌಂಟ್ ವೆಸುವಿಯಸ್​ನಲ್ಲಿ ಪ್ರವಾಸಿಗರಿಗೆ ಭೇಟಿ ನೀಡಲು ರಾಷ್ಟ್ರೀಯ ಉದ್ಯಾನವನವನ್ನು ತೆರೆಯಲಾಗಿದೆ. ಅಲ್ಲದೆ ಇದು ಪುರಾತತ್ವ ಅಧ್ಯಯನದ ಕೇಂದ್ರವಾಗಿದೆ.

Published by:Nalini Nalini
First published: