ಗುಜರಾತ್​ನ ಶಾಖೋತ್ಪನ್ನ ವಿದ್ಯುತ್​ ಸ್ಥಾವರ ಪ್ರಕರಣ​: ಅಮೆರಿಕಾ ಸುಪ್ರಿಂಕೋರ್ಟ್​ನಲ್ಲಿ ವಿಚಾರಣೆ


Updated:May 22, 2018, 8:28 PM IST
ಗುಜರಾತ್​ನ ಶಾಖೋತ್ಪನ್ನ ವಿದ್ಯುತ್​ ಸ್ಥಾವರ ಪ್ರಕರಣ​: ಅಮೆರಿಕಾ ಸುಪ್ರಿಂಕೋರ್ಟ್​ನಲ್ಲಿ ವಿಚಾರಣೆ

Updated: May 22, 2018, 8:28 PM IST
-ನ್ಯೂಸ್​18 ಕನ್ನಡ

ವಾಷಿಂಗ್ಟನ್​(ಮೇ.22): ಗುಜರಾತ್​ನಲ್ಲಿ ಕಲ್ಲಿದ್ದಲು ಶಾಖೋತ್ಪನ್ನ ಸ್ಥಾವರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಅಮೆರಿಕ ಮೂಲದ ಉದ್ಯಮಿಯೋರ್ವ ಗುಜರಾತ್​​ನಲ್ಲಿ ಕಲ್ಲಿದ್ದಲ್ಲು ಶಾಖೋತ್ಪನ್ನ ವಿದ್ಯುತ್​​ ಸ್ಥಾವರ ಸ್ಥಾಪಿಸಲು ಮುಂದಾಗಿದ್ದಾರೆ. ಈ ಸ್ಥಾವರದಿಂದ ಪರಿಸರಕ್ಕೆ ಹಾನಿಯಾಗಲಿದೆ. ಹೀಗಾಗಿ ಸ್ಥಾವರ ಸ್ಥಾಪನೆ ಬೇಡ ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆಗೆ ಪ್ರಪಂಚದಾದ್ಯಂತ ಬೆಂಬಲ ದೊರೆತಿದ್ದು, ಅಮೆರಿಕಾದಲ್ಲಿರುವ ಗುಜರಾತ್​ ಮೂಲದ ಅನಿವಾಸಿ ಭಾರತೀಯರು ಸ್ಥಾವರ ಸ್ಥಾಪನೆಗೆ ತಡೆ ನೀಡುವಂತೆ ಒತ್ತಾಯಿಸಿ ಅಮೆರಿಕಾ ಉದ್ಯಮಿ ವಿರುದ್ಧ ಯು.ಎಸ್​ ಸುಪ್ರೀಂಕೋರ್ಟ್​ನಲ್ಲಿ ಸೊಮವಾರ ಅರ್ಜಿ ಮನವಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್​ ಪ್ರಕರಣವನ್ನು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದೆ. ಬುದ್ದ ಇಸ್ಮೈಲ್​ ನೇತೃತ್ವದ ರೈತರನ್ನ ಒಳಗೊಂಡ ನಿಯೋಗ ಉದ್ಯಮಿ ವಿರುದ್ಧ ಅರ್ಜಿ ಸಲ್ಲಿಸಿದೆ. ಮನವಿ ಅರ್ಜಿಯಲ್ಲಿ ಸ್ಥಾವರದಿಂದ ಪರಿಸರಕ್ಕೆ ಮಲಿನ್ಯವಾಗಲಿದ್ದು, ಸ್ಥಳೀಯರಿಗೆ ಉಸಿರಾಟದ ತೊಂದರೆಯಾಗಬಹುದು ಉಲ್ಲೇಖ ಮಾಡಲಾಗಿದೆ.

ವಾಷಿಂಗ್ಟನ್​​ ಮೂಲದ ಉದ್ಯಮಿ ಕಲ್ಲಿದ್ದಲು ಶಾಕೋತ್ಪನ್ನ ಸ್ಥಾವರ ಯೋಜನೆಗೆ 450 ಮಿಲಿಯನ್​​ ಮೀಸಲಿಟ್ಟಿದ್ದಾರೆ. ಉದ್ಯಮಿ ವರ್ಲ್ಡ್​​ ಬ್ಯಾಂಕ್​ ಸಹಯೋಗದೊಂದಿಗೆ ಸ್ಥಾವರ ಸ್ಥಾಪಿಸಲು ಹೊರಟಿದ್ದು, ಗುಜರಾತ್​ ಬಿಜೆಪಿ ಸರ್ಕಾರ ಅನುವು ಮಾಡಿಕೊಟ್ಟಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು, ಉದ್ಯಮಿ ವಿರುದ್ಧ ಕೋರ್ಟ್​ ಮೊರೆ ಹೋಗಿದ್ದಾರೆ. ಇನ್ನು ಕೋರ್ಟ್​ ಮನವಿ ಅರ್ಜಿಯನ್ನು ಅಂಗೀಕರಿಸಿದ್ದು, ವಿಚಾರಣೆಯನ್ನು ನಡೆಸಲಿದ್ದೇವೆ ಎಂದು ಹೇಳಿದೆ.
First published:May 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ