US Supports Pak: ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಅಮೆರಿಕಾ; ಭಾರತಕ್ಕೆ ದ್ರೋಹ?

ಪಾಕಿಸ್ತಾನದ F-16 ಫೈಟರ್ ಬೆಂಬಲಕ್ಕೆ ಬೈಡನ್ ಆಡಳಿತದ USD 450 ಬಿಲಿಯನ್ ನೆರವಿಗೆ ಭಾರತ ತನ್ನ ಬೆಂಬಲವನ್ನು ಸೂಚಿಸಿಲ್ಲ ಅಂತೆಯೇ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್

ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್

  • Share this:
ಪಾಕ್‌ನ F-16 ಫೈಟರ್ ಜೆಟ್‌ಗಳಿಗಾಗಿ ಅಮೆರಿಕಾದ (America) USD 450 ಬಿಲಿಯನ್ ಆರ್ಥಿಕ ಬೆಂಬಲವು ಇಸ್ಲಾಮಾಬಾದ್ ಅನ್ನು FATF ನ ಗ್ರೇ ಲಿಸ್ಟ್‌ನಿಂದ (ಹಣ ವರ್ಗಾವಣೆ ಮತ್ತು ಭಯೋತ್ಪಾದನೆ (Terrorism) ಹಣಕಾಸು ವಿರುದ್ಧದ ಕ್ರಮಗಳ ಪ್ರಗತಿ ಪರಿಶೀಲಿಸಲು ದೇಶವನ್ನು ಮೇಲ್ವಿಚಾರಣೆಯಲ್ಲಿ ಇರಿಸುವುದು) ಇಸ್ಲಾಮಾಬಾದ್ ಅನ್ನು ತೆಗೆದುಹಾಕಲು ಮತ್ತು ಉಕ್ರೇನ್‌ಗೆ (Ukraine) ಮದ್ದುಗುಂಡುಗಳನ್ನು ಪೂರೈಸಿದ ರಾವಲ್ಪಿಂಡಿಗೆ ಪ್ರತಿಫಲವಾಗಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಪಾಕಿಸ್ತಾನಿ ಭಯೋತ್ಪಾದಕ ಮಸೂದ್ ಅಜರ್‌ನನ್ನು (Pakistani terrorist Masood Azhar) ಪತ್ತೆ ಮಾಡಿ ಬಂಧಿಸುವಂತೆ ತಾಲಿಬಾನ್ ಆಡಳಿತಕ್ಕೆ ಆದೇಶಿಸಿರುವ ಇಸ್ಲಾಮಾಬಾದ್‌ನ (Islamabad) ಕ್ರಮವು FATF ಪರಿಹಾರ ಕ್ರಮದ ಭಾಗವಾಗಿದೆ.

ಅಸಮಾಧಾನ ಹೊರಹಾಕಿದ ಭಾರತ:
ಅಮೆರಿಕಾವು Quad (ಅಮೇರಿಕನ್ ವಾಣಿಜ್ಯ ಮುದ್ರಣ ಕಂಪನಿ) ಪಾಲುದಾರ ಹಾಗೂ ನಿಕಟ ಮಿತ್ರನಾಗಿದ್ದರೂ, ಪಾಕಿಸ್ತಾನದ F-16 ಫೈಟರ್ ಬೆಂಬಲಕ್ಕೆ ಬೈಡನ್ ಆಡಳಿತದ USD 450 ಬಿಲಿಯನ್ ನೆರವಿಗೆ ಭಾರತ ತನ್ನ ಬೆಂಬಲವನ್ನು ಸೂಚಿಸಿಲ್ಲ ಅಂತೆಯೇ ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಇದನ್ನೂ ಓದಿ: 9/11 Terror Attack: 9/11 ಭಯೋತ್ಪಾದಕ ದಾಳಿಯ ಉಪಗ್ರಹ ಚಿತ್ರಗಳನ್ನು ಹಂಚಿಕೊಂಡ ನಾಸಾ

ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಹಾಗೂ ಪಾಕಿಸ್ತಾನದೊಂದಿಗಿನ ಜೀವಮಾನದ F-16 ಫೈಟರ್ ಬೆಂಬಲದ ಒಪ್ಪಂದಕ್ಕೆ ಅನುಗುಣವಾಗಿ ಅಮೆರಿಕಾ ಸಹಕಾರವನ್ನು ವ್ಯಕ್ತಪಡಿಸಿದ್ದರೂ, ಈ ನೆರವಿನ ಹಿಂದಿನ ರಾವಲ್ಪಿಂಡಿ ಪ್ರಧಾನ ಕಚೇರಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರ ಕೈವಾಡವಿದೆ. ಅಮೆರಿಕಾದ ಬಹು ಮಿಲಿಯನ್ ಬೆಂಬಲದಿಂದ ಭಾರತಕ್ಕೆ ಯಾವುದೇ ರೀತಿಯ ಹಾನಿಯುಂಟಾಗುವುದಿಲ್ಲ ಇಲ್ಲವೇ ಭಾರತೀಯ ಉಪಖಂಡದಲ್ಲಿ ಮಿಲಿಟರಿ ಸಮತೋಲನವನ್ನು ಬದಲಾಯಿಸುವುದಿಲ್ಲ ಎಂದು ವಾಷಿಂಗ್ಟನ್ ವಾಗ್ದಾನ ನೀಡಿದೆ.

ಮೋದಿ ಸರಕಾರವು ಈ ಬೆಳವಣಿಗೆಯಿಂದ ಸಂತುಷ್ಟವಾಗಿಲ್ಲ.  ಫೆಬ್ರವರಿ 27, 2019 ರಂದು ಒಂದು ದಿನ ಮುಂಚಿತವಾಗಿ ಜೈಶ್ ಇ-ಮೊಹಮ್ಮದ್ ಭಯೋತ್ಪಾದಕ ಶಿಬಿರದ ಮೇಲೆ ಭಾರತದ ಬಾಲಾಕೋಟ್ ದಾಳಿಗೆ ಪ್ರತೀಕಾರವಾಗಿ ಫೈಟರ್‌ಗಳನ್ನು ಭಾರತದ ವಿರುದ್ಧ ಬಳಸಲಾಗುವುದು ಎಂಬ ಸಂಪೂರ್ಣ ಸಮಸ್ಯೆಯ ಕುರಿತು ಬೈಡನ್ ಸರಕಾರಕ್ಕೆ ಭಾರತ ತಿಳಿಸಿದೆ.

ಏನೆಲ್ಲ ಕೆಳಗಿನ ಕಾರಣಗಳಿವೆ?

  • ಬ್ರಿಟಿಷ್ ವಿಮಾನಗಳನ್ನು ಬಳಸಿಕೊಂಡು ಪಾಕಿಸ್ತಾನದ ಹೊಸ ಮಿತ್ರ ರಷ್ಯಾ ವಿರುದ್ಧವಾಗಿ ಉಕ್ರೇನ್‌ನ ಯುದ್ಧಕ್ಕೆ ಬೆಂಬಲವಾಗಿ ಮದ್ದುಗುಂಡುಗಳನ್ನು ಪೂರೈಸುವಲ್ಲಿ ಜನರಲ್ ಬಾಜ್ವಾ ಪ್ರಮುಖ ಪಾತ್ರ ವಹಿಸಿದ್ದಾರೆ.

  • ಗಡಿಗಳಲ್ಲಿ ಬಂದೂಕುಗಳ ಸದ್ದು ಕಡಿಮೆಯಾಗುವುದರೊಂದಿಗೆ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಂದಿಗೆ ಶತ್ರುತ್ವನ್ನು ಕಡಿಮೆ ಮಾಡಿಕೊಳ್ಳುವ ಜನರಲ್ ಬಾಜ್ವಾ ಅವರ ಪ್ರಯತ್ನಗಳಿಗೆ ಈ ಸಹಕಾರ ಯುಎಸ್ ನೀಡಿರುವ ಮನ್ನಣೆಯಾಗಿದೆ.

  • ಪಾಕಿಸ್ತಾನದೊಂದಿಗೆ F-16 ಫೈಟರ್‌ಗಳನ್ನು ನಿರ್ವಹಿಸಲು ಮಾತ್ರ ಯುಎಸ್‌ನ ಬೆಂಬಲವಿದೆಯೇ ಹೊರತು, ಮಿಲಿಟರಿ ಸಾಮರ್ಥ್ಯಗಳ ಉನ್ನತೀಕರಣ ಅಥವಾ ಏರ್ ಕ್ಷಿಪಣಿಗಳಿಗೆ ಯುಎಸ್ ಬೆಂಬಲ ನೀಡಿಲ್ಲ.


ಇದನ್ನೂ ಓದಿ: Queen Elizabeth II: ರಾಣಿಯ ಆತ್ಮಶಾಂತಿಗೆ ಮೆಕ್ಕಾ ತೀರ್ಥಯಾತ್ರೆ ಕೈಗೊಂಡ ವ್ಯಕ್ತಿ ಅರೆಸ್ಟ್!

  • ಫೆಬ್ರವರಿ 27, 2019 ರ ದಾಳಿಯ ಸಮಯದಲ್ಲಿ, ಪಾಕಿಸ್ತಾನದ F-16, ಪ್ರತಿದಾಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸದ JF-17 ಯುದ್ಧವಿಮಾನಗಳೊಂದಿಗೆ ಭಾರತೀಯ ಯೋಧರನ್ನು ಪ್ರತಿಬಂಧಿಸಲು ಕ್ಷಿಪಣಿಗಳನ್ನು ಹಾರಿಸಿತು.

  • ಇಸ್ಲಾಮಾಬಾದ್ ಅನ್ನು FATF ಗ್ರೇ ಲಿಸ್ಟ್‌ನಿಂದ ಹೊರಗಿಡಲು ಆಧಾರಗಳನ್ನು ಸಿದ್ಧಪಡಿಸಲಾಗುತ್ತಿರುವುದರಿಂದ ಎಫ್-16 ಕಾರ್ಯಕ್ರಮಕ್ಕೆ ಯುಎಸ್ ಬೆಂಬಲವು ರಾವಲ್ಪಿಂಡಿಗೆ ದೊಡ್ಡ ಪ್ರಮಾಣದ ನೆರವಾಗಿರುವುದಿಲ್ಲವೆಂದು ಪಾಕ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣ ಅಫ್ಘಾನಿಸ್ತಾನದಲ್ಲಿ ಜೆಎಂನ ಸೂಪರ್ ಭಯೋತ್ಪಾದಕ ಮಸೂದ್ ಅಜರ್‌ನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ತಾಲಿಬಾನ್ ಆಡಳಿತಕ್ಕೆ ನಿರ್ದೇಶನ ನೀಡಿರುವ ಪಾಕ್ ಕುತಂತ್ರದಿಂದ ಇದು ಸಾಕಷ್ಟು ಸ್ಪಷ್ಟವಾಗಿದೆ.


ಪಂಜಾಬ್‌ನ ಬಹವಾಲ್‌ಪುರದಲ್ಲಿ ನೆಲೆಸಿರುವ ಅಜರ್ ಮತ್ತು ಆತನ ಭಯೋತ್ಪಾದನಾ ಕಾರ್ಯಾಚರಣೆಯ ವಿರುದ್ಧ ಪಾಕಿಸ್ತಾನ ಕ್ರಮಕೈಗೊಳ್ಳಬೇಕು ಎಂಬ ಎಫ್‌ಎಟಿಎಫ್ (FATF) ಬೇಡಿಕೆಗಳಿಗೆ ಸಮ್ಮತಿಸಲು ಈ ಕ್ರಮವಾಗಿದೆ. ಆಗಸ್ಟ್ 15, 2021 ರಂದು ತಾಲಿಬಾನ್ ಕಾಬೂಲ್ ಅನ್ನು ಆಕ್ರಮಿಸಿಕೊಂಡ ನಂತರ ಅಜರ್ ಅಫ್ಘಾನಿಸ್ತಾನದ ಕುನಾರ್ ಪ್ರಾಂತ್ಯಕ್ಕೆ ಸ್ಥಳಾಂತರಗೊಂಡಿದ್ದಾನೆ ಎಂದು ತೋರಿಸಲು ಹೊಸ ನಿರೂಪಣೆಯನ್ನು ಉದ್ದೇಶಪೂರ್ವಕವಾಗಿ ಆಯೋಜಿಸಲಾಗಿದೆ.
Published by:Ashwini Prabhu
First published: