• Home
  • »
  • News
  • »
  • national-international
  • »
  • BBC Documentary: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಅಮೆರಿಕಾ ಸರ್ಕಾರದ ವಕ್ತಾರ!

BBC Documentary: ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದ ಅಮೆರಿಕಾ ಸರ್ಕಾರದ ವಕ್ತಾರ!

ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್‌ ಪ್ರೈಸ್‌

ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್‌ ಪ್ರೈಸ್‌

ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್‌ ಪ್ರೈಸ್‌, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿಯು ತಯಾರಿಸಿರುವ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಅಮೆರಿಕಾ ಮತ್ತು ಭಾರತ ಎರಡು ಅಭಿವೃದ್ಧಿಶೀಲ ಮತ್ತು ಚಲನಶೀಲ ಪ್ರಜಾಪ್ರಭುತ್ವಗಳಾಗಿ ಹಂಚಿಕೊಳ್ಳುವ ಮೌಲ್ಯಗಳ ಬಗ್ಗೆ ನನಗೆ ತಿಳಿದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ: ಕಳೆದೊಂದು ವಾರದಿಂದ 2002ರಲ್ಲಿ ನಡೆದ ಗುಜರಾತ್ ಗಲಭೆ (Gujarat Riots) ಮತ್ತು ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿಯವರು (BBC) ತಯಾರಿಸಿದ್ದ ಸಾಕ್ಷ್ಯಚಿತ್ರದ (Documentary) ಕುರಿತು ರಾಷ್ಟ್ರ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ಅಷ್ಟೇನೂ ಸದ್ದು ಮಾಡದ ಈ ವಿಡಿಯೋ ಏಕಾಏಕಿ ಯೂಟ್ಯೂಬ್, ಟ್ವಿಟ್ಟರ್ (Youtube and Twitter) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಲಭ್ಯವಾಗಿದೆ. ಲಕ್ಷಾಂತರ ಜನ ವೀಕ್ಷಣೆ ಮಾಡುತ್ತಿದ್ದಂತೆ ಈ ವಿಡಿಯೋವನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್‌ಗೆ ಕೇಂದ್ರ ಸರ್ಕಾರ (Central Govt) ಆದೇಶಿಸಿತ್ತು. ಆ ಬಳಿಕವೇ ಗುಜರಾತ್ ಗಲಭೆ ಕುರಿತ ಡಾಕ್ಯುಮೆಂಟರಿ ವಿಡಿಯೋ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಈ ವಿಚಾರದ ಕುರಿತು ಅಮೆರಿಕಾದ ಪ್ರತಿನಿಧಿ ಪ್ರತಿಕ್ರಿಯೆ ನೀಡಿದ್ದಾರೆ.


'ಬಿಬಿಸಿ ವಿಡಿಯೋ ಬಗ್ಗೆ ಗೊತ್ತಿಲ್ಲ'


ಈ ಬಗ್ಗೆ ಮಾತನಾಡಿರುವ ಅಮೆರಿಕಾದ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್‌ ಪ್ರೈಸ್‌, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿಯು ತಯಾರಿಸಿರುವ ಸಾಕ್ಷ್ಯ ಚಿತ್ರದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಅಮೆರಿಕಾ ಮತ್ತು ಭಾರತ ಎರಡು ಅಭಿವೃದ್ಧಿಶೀಲ ಮತ್ತು ಚಲನಶೀಲ ಪ್ರಜಾಪ್ರಭುತ್ವಗಳಾಗಿ ಹಂಚಿಕೊಳ್ಳುವ ಮೌಲ್ಯಗಳ ಬಗ್ಗೆ ನನಗೆ ತಿಳಿದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಇದನ್ನೂ ಓದಿ: Siddaramaiah: ಮೋದಿ ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ! ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ


'ಭಾರತ ಮತ್ತು ಅಮೆರಿಕಾಗೆ ನೇರ ಸಂಬಂಧವಿದೆ'


2002ರಲ್ಲಿ ನಡೆದ ಗುಜರಾತ್ ಗಲಭೆ ಮತ್ತು ನರೇಂದ್ರ ಮೋದಿ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನೆಡ್ ಪ್ರೈಸ್‌, ನೀವು ಹೇಳುವ ಸಾಕ್ಷ್ಯಚಿತ್ರದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಭಾರತದೊಂದಿಗೆ ಅಮೆರಿಕಾ ಹೊಂದಿರುವ ಪ್ರಮುಖ ಪಾಲುದಾರಿಕೆಯ ಹಿಂದೆ ಹತ್ತಾರು ಕಾರಣಗಳಿವೆ. ನಿಕಟವಾದ ರಾಜಕೀಯ ಸಂಬಂಧಗಳಿವೆ. ಆರ್ಥಿಕ ಸಂಬಂಧವೂ ಇದೆ. ವಿಶೇಷವಾಗಿ ಭಾರತ ಮತ್ತು ಅಮೆರಿಕಾ ನಡುವೆ ಆಳವಾದ ನೇರ ಸಂಬಂಧಗಳಿವೆ. ಇವುಗಳ ಹೊರತಾಗಿಯೂ ನಾವು ಹಂಚಿಕೊಳ್ಳುವ ಮೌಲ್ಯಗಳಿವೆ. ಅವು ಅಮೆರಿಕಾ ಮತ್ತು ಭಾರತದ ಪ್ರಜಾಪ್ರಭುತ್ವಗಳಿಗೆ ಒಂದೇ ಆಗಿರುವ ಮೌಲ್ಯಗಳು’ ಎಂದು ನೆಡ್‌ ಪ್ರೈಸ್ ಹೇಳಿದ್ದಾರೆ.


ಇದನ್ನೂ ಓದಿ: BBC Documentary: ಪ್ರಧಾನಿ ಟೀಕಿಸುವ ಬಿಬಿಸಿ ಸಾಕ್ಷ್ಯಚಿತ್ರದ ವಿಡಿಯೋಗೆ ತುರ್ತು ಅಧಿಕಾರ ಬಳಸಿ ನಿರ್ಬಂಧ ವಿಧಿಸಿದ ಕೇಂದ್ರ!


2002ರಲ್ಲಿ ಗುಜರಾತ್‌ನಲ್ಲಿ ಗಲಭೆ ಭುಗಿಲೆದ್ದ ಸಮಯದಲ್ಲಿ ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಿರ್ಲಕ್ಷ್ಯ ಮತ್ತು ಒಟ್ಟು ಗಲಭೆಯ ಕುರಿತು ಯುಕೆಯ ರಾಷ್ಟ್ರೀಯ ವಾಹಿನಿ ಬಿಬಿಸಿ ಎರಡು ಭಾಗಗಳ ಸಾಕ್ಷ್ಯಚಿತ್ರಗಳ ಸರಣಿಯನ್ನು ಪ್ರಸಾರ ಮಾಡಿತ್ತು. ಸದ್ಯ ಈ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರದ ಆದೇಶದಂತೆ ಭಾರತದಲ್ಲಿ ಜನರ ಕೈಗೆ ಸಿಗದಂತೆ ತೆಗೆದು ಹಾಕಲಾಗಿದೆ.
ತುರ್ತು ಅಧಿಕಾರ ಬಳಸಿದ ಕೇಂದ್ರ!


ಗುಜರಾತ್ ಗಲಭೆಯ ಸಾಕ್ಷ್ಯಚಿತ್ರದ ಕುರಿತು ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ ಸಂಸ್ಥೆ ಬಿಬಿಸಿ ಮಾಡಿರುವ 50ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಅಳಿಸಿ ಹಾಕುವಂತೆ ಟ್ವಿಟ್ಟರ್‌ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸೂಚಿಸಿದ್ದು, ಈ ಡಾಕ್ಯುಮೆಂಟರಿ ಕುರಿತು ಸಂಸದ ಡೆರೆಕ್ ಓಬ್ರಿಯಾನ್ ಸೇರಿದಂತೆ ಕೆಲವು ವಿರೋಧ ಪಕ್ಷದ ನಾಯಕರು ಮಾಡಿದ್ದ ಟ್ವೀಟ್‌ಗಳನ್ನು ಕೂಡ ಅಳಿಸಲಾಗಿದೆ. 2021ರ ಮಾಹಿತಿ ತಂತ್ರಜ್ಞಾನ ನಿಯಮದ ಅಡಿಯಲ್ಲಿನ ತುರ್ತು ಅಧಿಕಾರವನ್ನು ಬಳಸಿಕೊಂಡು ಸಚಿವಾಲಯ ಈ ಆದೇಶ ನೀಡಿದ್ದು, ಟ್ವಿಟ್ಟರ್ ಮತ್ತು ಯೂಟ್ಯೂಬ್ ಎರಡೂ ಈ ಆದೇಶ ಪಾಲನೆಗೆ ಒಪ್ಪಿಕೊಂಡಿವೆ ಎಂದು ಬಲ್ಲ ತಿಳಿದು ಬಂದಿದೆ.

Published by:Avinash K
First published: