HOME » NEWS » National-international » US SENATE APPROVES RULES GOVERNING IMPEACHMENT TRIAL OF DONALD TRUMP REJECTS WITNESSES RMD

ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದ ಅಮೆರಿಕಾ ಮೇಲ್ಮನೆ​: ಶೀಘ್ರದಲ್ಲೇ ಸಾಕ್ಷಿಗಳ ವಿಚಾರಣೆ

ಅಧಿಕಾರ ದುರುಪಯೋಗ ಮತ್ತು ಸಂಸತ್​ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸಿತ್ತು. ಹೀಗಾಗಿ, ಈ ವಿಚಾರ ಸೆನೆಟ್​ನಲ್ಲಿ ವಿಚಾರಣೆಗೆ ಬಂದಿತ್ತು. 

news18-kannada
Updated:January 22, 2020, 1:25 PM IST
ಟ್ರಂಪ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದ ಅಮೆರಿಕಾ ಮೇಲ್ಮನೆ​: ಶೀಘ್ರದಲ್ಲೇ ಸಾಕ್ಷಿಗಳ ವಿಚಾರಣೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್
  • Share this:
ವಾಷಿಂಗ್ಟನ್ (ಜ.22): ಅಮೆರಿಕದ ಸೆನೆಟ್ (ಮೇಲ್ಮನೆ) ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಚಾರಣೆಯನ್ನು ಸತತ 13 ಗಂಟೆಗಳಿಂದ ಆಲಿಸಿತ್ತು. ಡೆಮಾಕ್ರಟಿಕ್​ ಪಕ್ಷ, ರಿಪಬ್ಲಿಕನ್​ ಪಕ್ಷ ಮತ್ತು ಅಧ್ಯಕ್ಷರ ಪರ ವೈಟ್​ಹೌಸ್​ ಕೌನ್ಸೆಲ್​ಗಳ ತಂಡದ ವಾದ - ಪ್ರತಿವಾದ ಆಲಿಸಿದ ಸೆನೆಟ್​ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿದೆ. ಜತೆಗೆ ಸಾಕ್ಷಿಗಳ ವಿಚಾರಣೆಯನ್ನು ಶೀಘ್ರದಲ್ಲೇ ನಡೆಸಲಿದೆ. ಅಧಿಕಾರ ದುರುಪಯೋಗ ಆರೋಪಕ್ಕೆ ಗುರಿಯಾಗಿರುವ ಟ್ರಂಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷ ಆಗ್ರಹಿಸಿ, ವಾಗ್ದಂಡನೆ ಮಂಡಿಸಿತ್ತು.

ಅಧಿಕಾರ ದುರುಪಯೋಗ ಮತ್ತು ಸಂಸತ್​ ತನಿಖೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಡೆಮಾಕ್ರಟಿಕ್ ಪಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ವಿಧಿಸಿತ್ತು. ಹೀಗಾಗಿ, ಈ ವಿಚಾರ ಸೆನೆಟ್​ನಲ್ಲಿ ವಿಚಾರಣೆಗೆ ಬಂದಿತ್ತು.  ಅಧ್ಯಕ್ಷ ಟ್ರಂಪ್ ಅವರ ಕಾನೂನು ತಂಡವು ಅಧ್ಯಕ್ಷರು ತಪ್ಪೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಜೊತೆಗೆ ಡೆಮಾಕ್ರಟಿಕ್ ಪಕ್ಷದ ವಾಗ್ದಂಡನೆ ದುರ್ಬಲ ಮತ್ತು ಸಂವಿಧಾನದ ಅಪಾಯಕಾರಿ ಕೃತ್ಯ ಎಂದು ಪ್ರತಿಪಾದಿಸಿ, ಈ ವಾಗ್ದಂಡನೆ ತಿರಸ್ಕರಿಸುವಂತೆ ಒತ್ತಾಯಿಸಿತ್ತು. ಅಲ್ಲದೇ, ಡೆಮಾಕ್ರಟಿಕ್​ಗಳು ಒತ್ತಾಯಿಸುತ್ತಿರುವ ಸಾಕ್ಷ್ಯ ಅಥವಾ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಟ್ರಂಪ್ ಕಾನೂನು ತಂಡ ಸೋಮವಾರ ಸೆನೆಟ್​ ಮುಂದೆ ವಾದಿಸಿತ್ತು.

ಸತತ 13 ಗಂಟೆಗಳ ಕಾಲ ಸೆನೆಟ್​ನಲ್ಲಿ ವಾದ-ಪ್ರತಿವಾದ ನಡೆದವು. ಈ ವೇಳೆ ಟ್ರಂಪ್​ ವಿರುದ್ಧದ ವಾಗ್ದಂಡನೆ ವಿಚಾರಣೆಗೆ ನಿಯಮ ರೂಪಿಸಿ ಮೇಲ್ಮನೆ ಆದೇಶಿಸಿದೆ. ಅಲ್ಲದೆ, ಡೆಮಾಕ್ರಟಿಕ್​ಗಳು ಒತ್ತಾಯಿಸುತ್ತಿರುವ ಸಾಕ್ಷ್ಯ ಅಥವಾ ಹೆಚ್ಚುವರಿ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ. ಸತತ 13 ಗಂಟೆಗಳ ವಿಚಾರಣೆಯಲ್ಲಿ ಎರಡೂ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದವು ಜತೆಗೆ ಕೆಲವೊಮ್ಮೆ ವೈಯಕ್ತಿಕ ಮಟ್ಟದಲ್ಲೂ ಟೀಕೆಗಳು ಕೇಳಿ ಬಂದವು. ಇದಕ್ಕೆ ಸಿಟ್ಟಾದ ಮೇಲ್ಮನೆ ಮುಖ್ಯ ನ್ಯಾಯಮೂರ್ತಿ ಜಾನ್​ ರಾಬರ್ಟ್ಸ್​, ನೀವು ಎಲ್ಲಿ ನಿಂತು ಮಾತನಾಡುತ್ತಿದ್ದೀರಿ ಎಂಬುದನ್ನು ಅರಿತು ವರ್ತಿಸಿ ಎಂದು ವಾರ್ನಿಂಗ್​ ನೀಡಿದರು.
First published: January 22, 2020, 1:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories