ಅಮೆರಿಕ ಅಧ್ಯಕ್ಷೀಯ ಚುನಾವಣೆ: ಬಹುಮತದತ್ತ ಬೈಡನ್; ವಿಸ್ಕಾನ್ಸಿನ್​ನಲ್ಲಿ ಮರುಎಣಿಕೆಗೆ ಟ್ರಂಪ್ ಒತ್ತಾಯ

ಅಮೆರಿಕದ 50 ರಾಜ್ಯಗಳಿಂದ 538 ಎಲ್ಟೋರಲ್ ವೋಟರ್ಗಳ ಆಯ್ಕೆಗೆ ಚುನಾವಣೆ ನಡೆದಿದೆ. ಇದರಲ್ಲಿ 270 ವೋಟರ್ಗಳನ್ನ ಪಡೆದವರು ಅಮೆರಿಕದ ಅಧ್ಯಕ್ಷರಾಗುತ್ತಾರೆ. ಈ ರೇಸ್​ನಲ್ಲಿ ಬೈಡನ್ 227, ಟ್ರಂಪ್ 213 ವೋಟರ್ಸ್ ಹೊಂದಿದ್ದಾರೆ. ಇನ್ನೂ 98 ವೋಟರ್ಗಳ ಆಯ್ಕೆಯಾಗಬೇಕಿದೆ.

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

 • News18
 • Last Updated :
 • Share this:
  ವಾಷಿಂಗ್ಟನ್(ನ. 05): ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮುಗಿದು ಹೆಚ್ಚೂಕಡಿಮೆ 20 ಗಂಟೆ ಗತಿಸಿದರೂ ಪೂರ್ಣ ಫಲಿತಾಂಶ ಪ್ರಕಟವಾಗಿಲ್ಲ. ಅಮೆರಿಕದ 50 ರಾಜ್ಯಗಳ ಪೈಕಿ ಇನ್ನೂ ಏಳೆಂಟು ರಾಜ್ಯಗಳಲ್ಲಿ ಮತ ಎಣಿಕೆ ಕಾರ್ಯ ಮುಗಿದಿಲ್ಲ. ಈ ಐವತ್ತು ರಾಜ್ಯಗಳಿಂದ ಒಟ್ಟು 538 ಎಲೆಕ್ಟೋರೇಟ್​ಗಳ ಆಯ್ಕೆ ಆಗಬೇಕಿದೆ. ಇದರಲ್ಲಿ ಒಂದು ಪಕ್ಷ ಬಹುಮತ ಪಡೆಯಲು 270 ಎಲೆಕ್ಟೋರೇಟ್​ಗಳ ಆಯ್ಕೆ ಆಗಬೇಕು. ಕೆಲ ಗಂಟೆಗಳ ಹಿಂದಿನ ಫಲಿತಾಂಶದಂತೆ ಬೈಡನ್ ಅವರ ಡೆಮಾಕ್ರಾಟಿಕ್ ಪಕ್ಷ 227 ಹಾಗೂ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ 213 ಎಲೆಕ್ಟೋರಲ್ ವೋಟ್​ಗಳನ್ನ ಪಡೆದಿದೆ. ಇನ್ನೂ 98 ಎಲೆಕ್ಟೋರಲ್ ವೋಟ್​ಗಳ ಆಯ್ಕೆ ಆಗಬೇಕಿದೆ. ಈ ಮೂಲಕ ಟ್ರಂಪ್​ಗಿಂತ ಬೈಡನ್ ತುಸು ಮೇಲುಗೈ ಹೊಂದಿದ್ದಾರೆ.

  ಅಲಾಸ್ಕಾ, ಆರಿಜೋನಾ, ಜಾರ್ಜಿಯಾ, ಮೈನೆ, ಮಿಷಿಗನ್, ನೆವಾಡ, ನಾರ್ತ್ ಕರೋಲಿನಾ, ಪೆನ್​ಸಿಲ್ವೇನಿಯಾ, ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಫಲಿತಾಂಶ ಇನ್ನೂ ಪೂರ್ಣ ಪ್ರಕಟವಾಗಿಲ್ಲ. ಈ ಒಂಬತ್ತು ರಾಜ್ಯಗಳಲ್ಲಿ ಟ್ರಂಪ್ ಐದು ರಾಜ್ಯಗಳಲ್ಲಿ ಮುನ್ನಡೆ ಹೊಂದಿದ್ಧಾರೆ. ಬೈಡನ್ ಅವರು ಅರಿಜೋನಾದಲ್ಲಿ ದೊಡ್ಡ ಮೇಲುಗೈ ಸಾಧಿಸಿದ್ದಾರೆ.

  ಇದನ್ನೂ ಓದಿ: H1N2: ಕೆನಡಾದಲ್ಲಿ ಮೊದಲ ಹೆಚ್​1ಎನ್​2 ಸೋಂಕು ಪತ್ತೆ; ಅಪರೂಪದ ಈ ಹಂದಿಜ್ವರದ ಬಗ್ಗೆ ಇಲ್ಲಿದೆ ಮಾಹಿತಿ

  ಆದರೆ, ಎಲ್ಲರ ಕಣ್ಣುಕುಕ್ಕಿರುವುದು ವಿಸ್ಕಾನ್ಸಿನ್ ಮತ್ತು ಮಿಷಿಗನ್ ರಾಜ್ಯಗಳ ಮತ ಎಣಿಕೆ ಕಾರ್ಯ. ಇವೆರಡು ರಾಜ್ಯಗಳು ಹಾಗೂ ಪೆನ್​ಸಿಲ್ವೇನಿಯಾದಲ್ಲಿ ಚುನಾವಣಾ ಆಕ್ರಮಗಳು ನಡೆದಿವೆ ಎಂದು ಟ್ರಂಪ್ ದೂರಿದ್ದಾರೆ. ಮಿಷಿಗನ್ ಮತ್ತು ಪೆನ್​ಸಿಲ್ವೇನಿಯಾ ರಾಜ್ಯಗಳ ಚುನಾವಣೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಲು ಟ್ರಂಪ್ ನಿರ್ಧರಿಸುವ ಸಾಧ್ಯತೆ ಇದೆ. ಹಾಗೆಯೇ, ವಿಸ್ಕಾನ್ಸಿನ್ ರಾಜ್ಯದ ಚುನಾವಣೆಯ ಮರು ಮತ ಎಣಿಕೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ.
  Published by:Vijayasarthy SN
  First published: