ಭಾರತ ಕೊಳಕು, ಗಲೀಜು ದೇಶ; ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದಲ್ಲಿ ಡೊನಾಲ್ಡ್​ ಟ್ರಂಪ್ ಟೀಕೆ

ಇಂದು ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಇಬ್ಬರೂ ತಮ್ಮ ಕೊನೆಯ ಮುಖಾಮುಖಿ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಅಮೆರಿಕದಲ್ಲಿ ನ. 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

ಡೊನಾಲ್ಡ್​ ಟ್ರಂಪ್- ಜೋ ಬಿಡೆನ್

 • Share this:
  ವಾಷಿಂಗ್ಟನ್ (ಅ. 23): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಚುನಾವಣೆಗೆ ಕೇವಲ 12 ದಿನಗಳು ಬಾಕಿ ಉಳಿದಿದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಭರದಿಂದ ಪ್ರಚಾರ ಕಾರ್ಯ ನಡೆಸಿದ್ದಾರೆ. ಕೊರೋನಾದಿಂದಾಗಿ ಬೇರೆಲ್ಲ ದೇಶಗಳಿಗಿಂತಲೂ ಅಮೆರಿಕದಲ್ಲಿ ಅತಿಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಿಶ್ವದ್ಲಲೇ ಕೊರೋನಾ ಸೋಂಕಿತ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನ ಪಡೆದಿದೆ. ಹೀಗಿದ್ದರೂ ಡೊನಾಲ್ಡ್​ ಟ್ರಂಪ್ ಆಗಲಿ, ಜೋ ಬಿಡೆನ್ ಆಗಲಿ ಅಮೆರಿಕದಲ್ಲಿ ಕೊರೋನಾ ನಿಯಂತ್ರಣದ ಬಗ್ಗೆ ಯಾವ ಭರವಸೆಯನ್ನೂ ಪ್ರಚಾರದ ವೇಳೆ ಘೋಷಿಸಿಲ್ಲ. ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ಅವರನ್ನು ಸೋಲಿಸಿ, ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಏರಲು ಡೊನಾಲ್ಡ್​ ಟ್ರಂಪ್ ಸಕಲ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಭಾರತದಲ್ಲಿ ಅತಿ ಕೆಟ್ಟ ಹವಾಮಾನವಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.

  ಇಂದು ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಇಬ್ಬರೂ ತಮ್ಮ ಕೊನೆಯ ಮುಖಾಮುಖಿ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಅಮೆರಿಕದಲ್ಲಿ ನ. 3ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಅಮೆರಿಕದ ಹವಾಮಾನ ಬದಲಾವಣೆಯ ಬಗ್ಗೆ ಮಾತನಾಡುವಾಗ ಬೇರೆ ದೇಶಗಳ ಜೊತೆ ಹೋಲಿಕೆ ಮಾಡಿರುವ ಡೊನಾಲ್ಡ್​ ಟ್ರಂಪ್, ಚೀನಾ, ರಷ್ಯಾ, ಭಾರತ ದೇಶಗಳನ್ನೇ ಗಮನಿಸಿ. ಆ ದೇಶಗಳ ಗಾಳಿ ಬಹಳ ಕಲುಷಿತವಾಗಿದೆ. ಭಾರತ, ರಷ್ಯಾಗಳ ವಾಯು ಮಾಲಿನ್ಯಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಅತಿ ಶುದ್ಧವಾದ ಗಾಳಿಯಿದೆ, ಸ್ವಚ್ಛವಾದ ನೀರಿದೆ ಎಂದು ಹೇಳಿದ್ದಾರೆ.

  ಇದನ್ನೂ ಓದಿ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ; ಆರೋಪಿ ಮನೆಯಲ್ಲಿ ಅರೆಬರೆ ಸುಟ್ಟ ಶವ ಪತ್ತೆ

  ಕಪ್ಪು ಜನಾಂಗದವರಿಗೆ ಅಮೆರಿಕದಲ್ಲಿ ಲಿಂಕನ್ ಹೊರತುಪಡಿಸಿ ಬೇರೆ ಯಾವ ಅಧ್ಯಕ್ಷರೂ ಮಾಡದಷ್ಟು ಕೆಲಸವನ್ನು ನಾನು ಮಾಡಿದ್ದೇನೆ. ಅವರಿಗಾಗಿ ಹಲವಾರು ಯೋಜನೆಗಳನ್ನು ಘೋಷಿಸಿದ್ದೇನೆ ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಜೋ ಬಿಡೆನ್ ಅಮೆರಿಕದ ಇದುವರೆಗಿನ ಎಲ್ಲ ಅಧ್ಯಕ್ಷರಿಗಿಂತಲೂ ಅಬ್ರಾಹಾಂ ಲಿಂಕನ್ ಅತಿ ಹೆಚ್ಚು ವರ್ಣಭೇದವಿದ್ದ ಅಧ್ಯಕ್ಷರಾಗಿದ್ದರು. ಅವರನ್ನು ಟ್ರಂಪ್ ವಿನಾಕಾರಣ ಹೊಗಳುತ್ತಿದ್ದಾರೆ ಎಂದಿದ್ದಾರೆ.

  ಇಂದು ನಡೆಯುವ ಮುಖಾಮುಖಿ ಸಂದರ್ಶನದಲ್ಲಿ ಡೊನಾಲ್ಡ್​ ಟ್ರಂಪ್ ಮತ್ತು ಜೋ ಬಿಡೆನ್ ಯಾವ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ಮುಖಾಮುಖಿ ಚರ್ಚೆ ವೇಳೆ ಟ್ರಂಪ್ ಅವರು ಜೋ ಬಿಡೆನ್​ಗೆ ಪ್ರತಿಕ್ರಿಯೆ ನೀಡಲು ಕೂಡ ಟ್ರಂಪ್ ಅವಕಾಶ ನೀಡಿರಲಿಲ್ಲ. ಆ ಚರ್ಚೆಯಲ್ಲಿ ಟ್ರಂಪ್ ಒಬ್ಬರೇ ವಿಜೃಂಭಿಸಿದ್ದರು. ಇಂದಿನ ಚರ್ಚೆಯಲ್ಲಿ ಬಿಡೆನ್ ಯಾವ ರೀತಿ ಟ್ರಂಪ್ ವಿರುದ್ಧ ಟೀಕಾಪ್ರಹಾರ ನಡೆಸಲಿದ್ದಾರೆ ಎಂಬುದನ್ನು ನೊಡಬೇಕಿದೆ.
  Published by:Sushma Chakre
  First published: